Skip to main content

Posts

ಆಯುಷ್ಮಾನ್ ಭವ

ಇತ್ತೀಚೆಗೆ ವಿದೇಶಕ್ಕೆ ಪ್ರಯಾಣಿಸುತಿದ್ದೆ. ಮಾರ್ಗ ಮಧ್ಯೆ ಸಮಯ ಕಳೆಯಲು ನನ್ನ ಪ್ರಯಾಣದ ದಾಖಲೆಗಳನ್ನು ನೋಡಲು ಕಣ್ಣಾಡಿಸಿದೆ. ವಿಮಾನ ಟಿಕೆಟ್ ಜೊತೆಯಲ್ಲಿ ಕಂಡ ಪ್ರಯಾಣ ವಿಮೆ ಗಮನ ಸೆಳೆಯಿತು. ಈ ವಿಮಾ ಪಾಲಿಸಿಯ ವಿಶೇಷವೆಂದರೆ ನಮ್ಮ ವಿದೇಶ ಪ್ರವಾಸದಲ್ಲಿ ಆಕಸ್ಮಿಕವಾಗಿ ನಮಗೆ ವೈದ್ಯಕೀಯ ಸೌಲಭ್ಯ ಬೇಕಾದಲ್ಲಿ ಅದರ ಖರ್ಚಿಗೆ ವ್ಯವಸ್ಥೆಯಾಗುತ್ತದೆ. ಇದರ ಜೊತೆಯಲ್ಲಿ ದೊರೆಯಬಹುದಾದ ಇತರ ಸೌಲಭ್ಯಗಳೆಂದರೆ ವೈಯಕ್ತಿಕ ಅಪಘಾತ ವೆಚ್ಚ, ಆಕಸ್ಮಿಕವಾಗಿ ಮೃತಪಟ್ಟಲ್ಲಿ ಜೀವವಿಮೆ, ಪ್ರಯಾಣಿಕನ ಪಾರ್ಥಿವ ಶರೀರವನ್ನು ಹೊರಟ ಸ್ಥಳಕ್ಕೆ ರವಾನೆ ಮಾಡುವ ಖರ್ಚುಗಳು ಇದರಲ್ಲಿ ಸೇರಿರುತ್ತದೆ. ಇದಲ್ಲದೆ ಜೊತೆಯಲ್ಲಿ ಕೊಂಡೊಯ್ಧ ಬ್ಯಾಗೇಜ್ ಕಳೆದುಹೋದರೆ ಅಥವಾ ಅದು ತಡವಾಗಿ ತಲುಪಿದರೆ ಅಥವಾ ಪಾಸ್ಪೋರ್ಟ್ ಕಳೆದುಹೋದರೆ ಪರಿಹಾರ ದೊರೆಯುತ್ತದೆ. ಅಲ್ಲದೆ ಪ್ರಯಾಣದಲ್ಲಿ ಆಗಬಹುದಾದ ವಿಳಂಬ, ಸಂಕಷ್ಟದ ಸಮಯದಲ್ಲಿ ಆತನ ಸ್ವದೇಶದ ಮನೆಗೆ ಹಿಂದಿರುಗುವ ವೆಚ್ಚವನ್ನು ಒದಗಿಸುವ ವಿಶಿಷ್ಟ ಪಾಲಿಸಿ. ಪ್ರಯಾಣಿಕನಿಗೆ ಈಗಾಗಲೇ ಇರುವ ಕಾಯಿಲೆಗಳು, ಅವನಿಗೆ ಒದಗಬಹುದಾದ ಯುದ್ಧದ ಅಪಾಯಗಳು, ಅವನ ಆತ್ಮಹತ್ಯೆ ಮತ್ತು ಬುದ್ಧಿಭ್ರಮಣೆ, ಅವನಿಗೆ ಒದಗಬಹುದಾದ ಅಪಾಯದ ಕ್ರೀಡೆಗಳ ಪರಿಣಾಮಗಳು ಇದರಲ್ಲಿ ಸೇರುವುದಿಲ್ಲ. ಈ ವಿಮೆಯನ್ನು ಪ್ರಯಾಣಕ್ಕೆ ಹೊರಡುವ ಮುನ್ನ ವಿಮಾನ ಟಿಕೆಟ್ ಖರೀದಿಸುವ ಜೊತೆಗೆ ಹೆಚ್ಚುವರಿ ವಿಮಾ ಪ್ರೀಮಿಯಂ ಪಾವತಿ ಮಾಡಿ ಈ ಪಾಲಸಿ ಪಡೆಯಬಹುದು ಅಥವಾ ತಮಗಿಷ್ಟ ಬಂದ...
Recent posts

ಆರೋಗ್ಯ ಕವಚ

ಮನುಷ್ಯ ತಾನು ಸುಖವಾಗಿರಲು ದುಡಿಯುತ್ತಾನೆ. ಹಣ ಕೂಡಿಡುತ್ತಾನೆ. ಆಸ್ತಿ ಗಳಿಸುತ್ತಾನೆ. ತಾನು ಮತ್ತು ತನ್ನ ಪ್ರೀತಿಯ ಕುಟುಂಬವನ್ನು ಸುಖವಾಗಿಡುವ ಕನಸುಗಳು ಸದಾ ನಡೆಯುತ್ತಲೇ ಇರುತ್ತವೆ. ಈ ಕನಸಿನ ಮಾರ್ಗದಲ್ಲಿ ಆಕಸ್ಮಿಕವಾಗಿ ಅವನ ದೇಹಕ್ಕೆ ದೊಡ್ಡ ಅನಾರೋಗ್ಯವೇನಾದರೂ ಎದುರಾದರೆ ಬಹಳ ಕಷ್ಟವಾಗುತ್ತದೆ. ಸುಧಾರಿಸಿಕೊಳ್ಳಲು ಸಾಧ್ಯವಾಗದಂತೆ ಗಳಿಸಿದ್ದೆಲ್ಲವೂ ನೀರಿನಂತೆ ಕರಗಿ ಹೋಗುತ್ತದೆ. ಇದರಿಂದ ಜೀವನದಲ್ಲಿ ಹಾಕಿಕೊಂಡ ಗುರಿಯನ್ನು ಸಾಧಿಸಲಾಗುವುದಿಲ್ಲ. ಇಂತಹ ಪರಿಸ್ಥಿತಿಯನ್ನು ಆರ್ಥಿಕವಾಗಿ ಸಮರ್ಥವಾಗಿ ಎದುರಿಸಲು ಬೇಕಾಗಿರುವುದು ಆರೋಗ್ಯ ವಿಮೆ. ಇದನ್ನು ಹೆಲ್ತ್ ಇನ್ಶುರೆನ್ಸ್ ( Heath Insurance) ಅಥವಾ ಮೆಡಿಕಲ್ ಇನ್ಸೂರೆನ್ಸ್ (Medical Insurance) ಎಂದೂ ಹೇಳಲಾಗುತ್ತದೆ. ಇದು ಆರೋಗ್ಯ ರಕ್ಷಣೆಗಾಗಿ ಎಂದೇ ಪಡೆದರೂ ಮುಂದಿನ ನಮ್ಮ ಜೀವನಕ್ಕಾಗಿ, ಪರೋಕ್ಷವಾಗಿ ಕೂಡಿಟ್ಟಿರುವ ಆಸ್ತಿಯನ್ನು ರಕ್ಷಣೆ ಮಾಡುತ್ತದೆ. ಈ ಬಗ್ಗೆ ತಿಳಿದುಕೊಳ್ಳಬೇಕಾದ ವಿಷಯಗಳು ಬಹಳ ಅನಿವಾರ್ಯ. ಇವೆಲ್ಲವನ್ನೂ ಸವಿಸ್ತಾರವಾಗಿ ತಿಳಿಸಿ ಹೇಳುವ ಪ್ರಯತ್ನವೇ ಈ ಲೇಖನ. ಆರೋಗ್ಯ ವಿಮೆ ಎಂದರೇನು? ನಾವು ಸದಾ ಆರೋಗ್ಯದಿಂದ ಇರಬೇಕೆಂದು ಬಯಸುವೆವಾದರೂ "ಮನುಷ್ಯ ಎಂದಮೇಲೆ ಏನಾದರೂ ಕಾಯಿಲೆ ಇದ್ದೇ ಇರುತ್ತದೆ" ಎಂಬಂತೆ ಹಲವು ಸಾರಿ ತಲೆನೋವು, ಜ್ವರ, ನೆಗಡಿ ಮೈ ಕೈ ನೋವು ಎಂದು ನರಳುತ್ತೇವೆ. ಚಿಕೂನ್ ಗುನ್ಯಾ, ಡೆಂಗ್ಯೂ, ಕೊರೋನಾ ಇತ್ಯಾದಿ ಕಾಯಿಲೆಗಳ...

ಮೃತ್ಯು ಸಂಜೀವಿನಿ

ಗೆಳೆಯ ಮಾದಪ್ಪ ಕಳೆದ ಮೂರು ತಿಂಗಳ ಹಿಂದೆ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ. ತಡವಾಗಿ ಈ ವಿಷಯ ತಿಳಿದ ನಾನು ಅವರ ಮನೆಯವರನ್ನು ಕಂಡು ಸಾಂತ್ವನ ಹೇಳಲು ಹೋಗಿದ್ದೆ. ಆ ವೇಳೆಯಲ್ಲೇ ಯಾವುದೋ ಕೋಆಪರೇಟಿವ್ ಬ್ಯಾಂಕಿನ ಸಿಬ್ಬಂದಿಯವರು ಬಂದಿದ್ದಾರೆ. ಆ ಮನೆಯ ಮೇಲೆ ಪಡೆದ ಸಾಲವನ್ನು ತಕ್ಷಣ ವಾಪಸ್ ಮಾಡುವಂತೆ ಒತ್ತಾಯ ಮಾಡುತ್ತಿದ್ದಾರೆ. ಜೊತೆಯಲ್ಲಿ ಸಾಲಕ್ಕೆ ಸಹಿ ಮಾಡಿದ ಜಾಮೀನುದಾರನೂ ಇದ್ದಾನೆ. ಸುಮ್ಮನೆ ಮೈಮೇಲೆ ಬಂದ ಸಾಲದ ಸಲುವಾಗಿ ಅವನ ಗೋಳು ಹೇಳತೀರದು. ಏನಾದರೂ ಮಾಡಿ ನನ್ನನ್ನು ಬಿಡುಗಡೆ ಮಾಡಿ ಎಂದು ಮಾದಪ್ಪನ ಹೆಂಡತಿಯಲ್ಲಿ ಗೋಗರೆಯುತ್ತಿದ್ದಾ ನೆ. ಮಾದಪ್ಪ ಯಾವ ಯೋಚನೆಯಿಂದ ಅಷ್ಟು ಸಾಲ ಮಾಡಿದ್ದನೋ ತಿಳಿಯದು. ಅವನ ಸಾವೂ ಅನಿರೀಕ್ಷಿತ. ಮನೆಯಲ್ಲಿ ಅಥವಾ ಬ್ಯಾಂಕಿನ ಅವನ ಖಾತೆಯಲ್ಲಿ ಇದ್ದ ಕೆಲವೇ ಸಾವಿರ ಅವನ ಕರ್ಮಕ್ಕೇ ಮುಗಿದು ಹೋಗಿದೆ. ಮನೆಗೆ ಬಂದಿದ್ದ ಬಂಧುಗಳು ಎಲ್ಲಾ ಹೊರಟು ಹೋಗಿದ್ದಾರೆ. ಮಾದಪ್ಪನ ವಿಧವೆ ಅಸಹಾಯಕಳಾಗಿದ್ದಾಳೆ. ನಿಮಗೆ ಕೊಡುವುದಿದೆ, ತೆಗೆದುಕೊಳ್ಳಿ ಎಂದು ಹಣವನ್ನು ಕೊಡುವವರು ಯಾರೂ ಇಲ್ಲ, ಎಲ್ಲರೂ ಸಾಲ ಕೇಳುವವರೇ, ಈ ಸ್ಥಿತಿಯಲ್ಲಿ ಯಾವಾಗ ಸಾಲ ವಾಪಸು ಮಾಡುತ್ತೇನೆ ಎಂದು ಹೇಳಲು ಆಸಾಧ್ಯ. ಆದ್ದರಿಂದ ಅಲ್ಲಿನ ಎಲ್ಲಾ ಮಾತುಗಳಿಗೆ ಅವನ ಹೆಂಡತಿಯ ಒಂದೇ ಕೋರಿಕೆ. ಕೆಲವು ಸಮಯ ಕೊಡಿ, ಹೇಗೋ ಪ್ರಯತ್ನಿಸುತ್ತೇನೆ ಎಂದರೂ ವಸೂಲಿಗೆ ಬಂದವರಿಗೆ ನಂಬಿಕೆ ಇಲ್ಲ. ಏನಂದರೂ ನಿಲ್ಲದ  ಬ್ಯಾಂಕ್ ಸಿಬ್ಬಂದಿಯ ದೊಡ್...

ರಾಘಣ್ಣನ ಎಸ್ಟೇಟ್

ದುಡಿಮೆ ತಂದುಕೊಡುವ ವೃತ್ತಿಗೆ ಹೊಂದಿಕೊಳ್ಳುವವರೇ ಹೆಚ್ಚು. ಪ್ರವೃತ್ತಿಯಾಗಿ ಕೆಲವರಿಗೆ ಕೃಷಿ, ಸಂಗೀತ, ನೃತ್ಯ ಕಲೆ ಇತ್ಯಾದಿ ಹೀಗೆ ಹಲವು ಹವ್ಯಾಸ ಇರುವುದಾದರೂ ಅದರಿಂದ ಜೀವನ ನಡೆಸಲು ಸಾಕಾದಷ್ಟು ದುಡಿಯಲು ಅಸಾಧ್ಯವಾದುದರಿಂದ ಅದನ್ನು ಆರಿಸಿಕೊಳ್ಳಲು ಅವಕಾಶವಾಗಿರುವುದಿಲ್ಲ. ಕೆಲವರಿಗೆ ಅದು ಸದಾ ಕಾಡುತ್ತಿದ್ದರೆ, ಮತ್ತೆ ಕೆಲವರಿಗೆ ಅವಕಾಶ ಕಂಡಾಗ ಪ್ರವೃತ್ತಿಯ ಆಸೆ ಭುಗಿಲೇಳುತ್ತದೆ. ಅಗತ್ಯವೆನಿಸಿ ಅದನ್ನೂ ನಿಭಾಯಿಸಬಲ್ಲೆ ಎನಿಸಿದರೆ ಅದನ್ನು ಮಾಡಲು ಹಿಂಜರಿಯುವುದಿಲ್ಲ. ಹಾಗೆ ವೃತ್ತಿ ಹಾಗೂ ಪ್ರವೃತ್ತಿಗಳನ್ನು ಏಕ ಕಾಲದಲ್ಲಿ ನಿಭಾಯಿಸಿದವರ ಕಥೆಗಳಲ್ಲಿ ಮಿತ್ರರೊಬ್ಬರ ಅನುಭವವೇ ಈ ಲೇಖನ. ರಾಘಣ್ಣ ಇಂಜಿನಿಯರಿಂಗ್ ನಲ್ಲಿ ಮಾಸ್ಟರ್ ಪದವೀಧರ. ದೊಡ್ಡ ಸಂಸ್ಥೆಯಲ್ಲಿ ಕೆಲಸ. ಸದಾ ಹೊಸತನ್ನು ಮಾಡುವ ಚಪಲ. ಕಾರ್ಯ ನಿಮಿತ್ತ ಊರಿಂದ ಊರಿಗೆ ಹೋಗುವಾಗ ಹಾದಿ ಪಕ್ಕದ ತೋಟ ಗದ್ದೆಗಳನ್ನು ನೋಡಿ ಖುಷಿ ಪಡುವನು, ರೈತ ಮಧ್ಯಾಹ್ನದ ವೇಳೆ ಊಟ ಮಾಡಿದ್ದನ್ನು ನೋಡಿದಾಗ ಎಷ್ಟು ಸುಖವಾಗಿ ನೆಮ್ಮದಿಯಿಂದ ಇದ್ದಾನೆ ಎಂದು, ಆ ರೈತನ ಜಾಗದಲ್ಲಿ ತಾನು ಇದ್ದಂತೆ, ತನಗೆ ಹೆಂಡತಿ ಮುದ್ದೆ ಊಟ ತಂದು ಕೊಟ್ಟಂತೆ ಕನಸು ಕಾಣುತ್ತಿದ್ದ. ಸುಗ್ಗಿಯ ವೇಳೆ ಮಾರಾಟವಾದ ಧವಸ-ದಾನ್ಯಗಳ ದರ, ಅವುಗಳಿಗೆ ಮಾರುಕಟ್ಟೆಯಲ್ಲಿ ಇರುವ ಬೇಡಿಕೆ ಕಂಡಾಗ ರೈತರ ಜೀವನದ ಮುಂದೆ ಬೇರೇನೂ ಇಲ್ಲ ಎಂದು ಎನಿಸುತ್ತಿತ್ತು. ಆಗ ತಾನು ರೈತ ಆಗಬೇಕು ಎಂಬ ಸುಪ್ತ ಆಸೆ ಚಿಗುರುತ್ತಿತ್ತು. ಮದುವೆ ಮ...

ಜ್ಞಾನಗಳಿಕೆಯ ಪಯಣ

ಹಳೆಯ ಕಾಲದಲ್ಲಿ ಇದ್ದ ಹಲವು ವಸ್ತುಗಳು ಮತ್ತು ವ್ಯವಸ್ಥೆಗಳು ಕಾಲಾಂತರದಲ್ಲಿ, ಕೆಲವು ನಶಿಸಿ ಹೋಗಿವೆ, ಕೆಲವು ಬದಲಾಗಿವೆ. ಇನ್ನು ಕೆಲವದರ ಸ್ಥಾನದಲ್ಲಿ ಹೊಸ ವಸ್ತುಗಳು ಸೇರಿಕೊಂಡಿವೆ. ಬದಲಾವಣೆ ನಿರಂತರ. ಅದು ಜಗದ ನಿಯಮ. ಆದ್ದರಿಂದ ಅದು ಮುಂದೂ ಬದಲಾಗುತ್ತಲೇ ಇರುತ್ತದೆ. ಅದರಂತೆಯೇ ಯಾವುದೇ ಕೆಲಸ ಮಾಡಲೂ ಬೇಕಾದ ಮಾಹಿತಿ ಹಿಂದೆ ಯಾವ ರೀತಿ ಇತ್ತು ಮತ್ತು ಬದಲಾದ ದಿನಗಳಲ್ಲಿ ಹೇಗಿದೆ, ಅದರ ಮೇಲಿರುವ ಅವಲಂಬನೆಯಿಂದ ಆಗುತ್ತಿರುವ ಪರಿಣಾಮದ ಬಗ್ಗೆ ಒಂದು ಸಣ್ಣ ಚರ್ಚೆಯೇ ಮುಂದೆ ವಿವರಿಸಿರುವ ಘಟನೆ. ಅಂದು ಪರ ರಾಜ್ಯದಿಂದ ಊರಿನತ್ತ ಪ್ರವಾಸಿ ಬಸ್ ನಲ್ಲಿ ಹೊರಟಿದ್ದೇವೆ. ತಡೆಯಿಲ್ಲದೆ ಪ್ರಯಾಣ ಮತ್ತು ಇತರ ಕಾರಣಗಳಿಂದ ನಮ್ಮ ಮೊಬೈಲ್ ಗಳನ್ನು ಚಾರ್ಜ್ ಮಾಡಲಾಗಿಲ್ಲ. ಆ ಹಳೆಯ ಮಾದರಿಯ ಬಸ್ಸಿನಲ್ಲಿ ಚಾರ್ಜ್ ಮಾಡುವ ವ್ಯವಸ್ಥೆ ಇಲ್ಲ. ರಾತ್ರಿ ವೇಳೆಯಲ್ಲಿ ಯಾವುದೋ ವ್ಯವಹಾರದ ಮಾತುಕತೆ ನಡೆಯುತ್ತಿದೆ. ಹೊಸತಲೆಮಾರಿನ ಹುಡುಗರೇ ಹೆಚ್ಚಿನ ಪ್ರವಾಸಿಗರು. ಚಾರ್ಜ್ ಇಲ್ಲದ ಮೊಬೈಲ್ ಗಳಿಂದಾಗಿ ಅದನ್ನು ನಂಬಿ ಕೊಂಡಿರುವವರಿಗೆ ಆಗಿರುವ ತೊಂದರೆ ಹೇಳತೀರದು. ಒಬ್ಬೊಬ್ಬರದು ಒಂದೊಂದು ಸಮಸ್ಯೆ . ಊರಿಗೆ ಸಂಪರ್ಕಿಸಲು ಆಗುತ್ತಿಲ್ಲ.  ಕೆಲವರಿಗೆ ತಮ್ಮ ಮೊಬೈಲ್ ಸಂಪರ್ಕ ಸಂಖ್ಯೆಯನ್ನು ಹೇಳಲೂ ಮೊಬೈಲ್ ನೋಡಿಯೇ ಹೇಳ ಬೇಕಾಗಿರುವಾಗ  ತಮಗೆ ಬೇಕಾದವರ ಮೊಬೈಲ್ ಸಂಪರ್ಕ ಸಂಖ್ಯೆ ತಿಳಿಯದ ಸ್ಥಿತಿ. ಕೆಲವರಿಗೆ ರೇಡಿಯೋ ಕೇಳಲು ಬೇಕಾದರೆ, ಹಲವರಿಗೆ ಫೇಸ್ ...

ಇವು ನಮಗೆ ಗೊತ್ತಿರೋದೇ.

ನಮ್ಮ ದೈನಂದಿನ ಜೀವನದಲ್ಲಿ ಸಂಭಾಷಣೆಯಲ್ಲೋ, ಯಾವುದಾದರೂ ಕೆಲಸ ಮಾಡುತ್ತಲೋ, ಓದುತ್ತಲೋ, ಇಲ್ಲವೇ ಯಾವುದೋ ವಿಷಯವನ್ನು ಕುರಿತು ಯೋಚನೆ ಮಾಡುತ್ತಲೋ ಇರುತ್ತೇವೆ. ಹೀಗೆ ಇರುವಾಗ ಹಲವಾರು ವಿಚಾರಗಳು ಪ್ರತಿಯೊಬ್ಬರ ಮನಸ್ಸಿನಲ್ಲ್ಲೂ ಸುಳಿದಾಡುತ್ತವೆ. ಎಚ್ಚರದಿಂದ ಇವುಗಳನ್ನು ಗುರುತಿಸಿದರೆ ಅವುಗಳಲ್ಲಿ ಕೆಲವು ವಿಶೇಷವಾಗಿ ಕಾಣಬಹುದು ಅಥವಾ ತೀರಾ ಸಾಮಾನ್ಯವಾಗಿರಬಹುದು. ಆದರೂ ಆ ವಾಕ್ಯಗಳು ಚಿಂತನಾರ್ಹವಾಗಿರುತ್ತದೆ. ಇದು ಎಲ್ಲರ ಅನುಭವವೂ ಹೌದು. ಇಂತಹಾ ಒಂದು ವಾಕ್ಯ ಸಮಯೋಚಿತವಾಗಿ ಮನಸಿಗೆ ಬಂದಲ್ಲಿ ಅದು ಇಡೀ ದಿನವನ್ನೇ ಸಮಾಧಾನ ವಾಗಿಡಬಲ್ಲದು. ಇವುಗಳು ಕೆಲವೊಮ್ಮೆ ವ್ಕಕ್ತಿತ್ವ ವಿಕಸನ ಹಾಗೂ ಆತ್ಮ ಶೋಧನೆಗೆ ಸಹಾಯಕವಾಗಬಲ್ಲದು. ಆದ್ದರಿಂದ ನನ್ನ ಮನಸಿಗೆ ಬಂದ ಕೆಲವು ಇಂತಹಾ ವಿಚಾರಗಳನ್ನು ಇಲ್ಲಿ ತಮ್ಮೊಂದಿಗೆ ಹಂಚಿಕೊಂಡಿದ್ದೇನೆ. ಓದುಗರಿಗೆ ಇದರ ಉಪಯೋಗವಾದರೆ ಸಂತಸದ ವಿಷಯ. 1 ಎಲ್ಲಿ ಆದರ್ಶ ಇದೆಯೋ ,  ಅಲ್ಲಿ ಅನುಭವದ ಕೃಷಿ ಇರಬೇಕು .  ಕೇವಲ ಮಾತಿರಬಾರದು .  ಕೃತಿ ಇಲ್ಲದ ಶಬ್ಧಗಳು ಆದರ್ಶವನ್ನು ಕೊಲೆ ಮಾಡುತ್ತವೆ . 2 ನಮ್ಮನ್ನು ನಾವು ಸಂತೈಸಿಕೊಳ್ಳುವುದೇ ನಮ್ಮ ಎಲ್ಲಾ ದು:ಖಗಳಿಂದ ಮತ್ತು ಚಿಂತೆಗಳಿಂದ ಹೊರಬರಲು ಸಮರ್ಥವಾದ ಮಾರ್ಗ. 3 ಹಾಗೆ ಮಾಡಿದರೆ ಒಳ್ಳೆಯದು ,  ಹೀಗೆ ಮಾಡಿದರೆ ಕೆಟ್ಟದ್ದು  -  ಇಂತಹಾ ಸಲಹೆ ಕೊಡುವುದು ಸುಲಭ .  ಅನುಸರಿಸುವುದೇ ಕಷ್ಟ .  ಆದರೂ ನಾವು ಸಲಹೆ ಕೊಡದೆ...