Skip to main content

ಅಮೇರಿಕಾ ಪ್ರವಾಸ ವಿಶೇಷ-೧

ಪುಷ್ಪ ಮಾರ್ಗ
ಅಮೇರಿಕಾದ ನನ್ನ ತಿರುಗಾಟ ಬಹುತೇಕ ನಗರಗಳಲ್ಲಿ. ಅಲ್ಲೆಲ್ಲಾ ವಿಶಾಲವಾದ ರಸ್ತೆಗಳು. ಅಗಲವಾದ ಕಾಲುದಾರಿಗಳು. ಹಾಗೇ ಹೋಗುವಾಗ ಹಲವಾರು ಮನೆಗಳ ಮುಂದೆ ಹೂದೋಟವನ್ನು ಕಂಡೆವು. ಬಣ್ಣ  ಬಣ್ಣದ ಹೂವುಗಳಿಂದ ತುಂಬಿರುವ ಗಿಡಗಳು. ಅಲ್ಲಿ ಯಾರೂ ಪೂಜೆಗೆ ಹೂವಿನ ಬಳಕೆ ಮಾಡುವುದಿಲ್ಲ ಎಂದೆನಿಸಿತು. ಅಲ್ಲದೆ ನಮ್ಮಲ್ಲಿರುವಂತೆ ಉಚಿತವಾಗಿ ಪುಣ್ಯ ಪಡೆಯುವ ಕಳ್ಳಭಕ್ತರ ಕಾಟವೂ ಇಲ್ಲ. ಯಥೇಚ್ಛವಾಗಿ ಬೆಳೆದಿರುವ ಹೂಗಳು ಇರುವುದು ಕೆಲವೇ ತಿಂಗಳು. ಸಹಜ. ಬಾಕಿಯಂತೆ ಮಂಜು ಸುರಿಯುವ ಹೆಚ್ಚಿನ ದಿನಗಳಲ್ಲಿ ಈ ಗಿಡಗಳು ಬೆಳೆಯುವುದಾದರೂ ಹೇಗೆ. ಬೆಳೆದ ಹೂಗಳು ಗಿಡದಲ್ಲೇ ಒಣಗಿ ಬೀಳುವುದು ಸಹಜ. ವಸತಿ ಪ್ರದೇಶದ ಮಾರ್ಗಗಳಲ್ಲಿ ಕಾಣ ಸಿಗುವ ಈ ಸಹಜ  ದೃಶ್ಯ ಮನೋಹರ.



ಶೌಚಕಲ್ಪ
ಈ ದೇಶದಲ್ಲಿ ಶುಚಿತ್ವಕ್ಕೆ ಅತಿ ಹೆಚ್ಚಿನ ಪ್ರಾಧಾನ್ಯತೆಯನ್ನು ಕೊಟ್ಟಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಕಸಕಡ್ಡಿ ಪೇಪರ್ ತುಂಡುಗಳು ಹೀಗೇ ಏನೂ ಕಾಣಸಿಗದು. ಪಾಪುಕಾರ್ನ, ಚಿಪ್ಸ್, ಕಾಫಿಯನ್ನು ಕೊಂಡವರು ಅದನ್ನು ಸೇವಿಸುತ್ತಾ ನಡೆದಾಡುವುದಾದರೂ ಉಪಯೋಗಿಸಿರುವ ಕಾಫೀ ಕಪ್ ನ್ನು ರಸ್ತೆ ಪಕ್ಕದಲ್ಲಿ ಅಲ್ಲಲ್ಲಿ ಇಟ್ಟಿರುವ ಕಸದ ಡಬ್ಬಿಗೇ ಎಸೆಯುತ್ತಾರೆ. ನಮ್ಮಲ್ಲಿಯಂತೆ  ಕಾಲುದಾರಿಗಳಲ್ಲಿ, ಕಂಬದ ಮೂಲೆಗಳಲ್ಲಿ, ಮರದ ಹಿಂದೆ ಜಲಭಾಧೆ ತೀರಿಸಿ ಕೊಳ್ಳುವುದನ್ನು ನೋಡಲು ಸಾಧ್ಯವೇ ಇಲ್ಲ. ಇಂಥಾ ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರ ಮಾಡಿದರೆ ಹಲವು ಡಾಲರು ದಂಡ. ಊರಿಂದ ಊರಿಗೆ ಹೋಗುವಾಗ ಅಲ್ಲಲ್ಲಿ ಸಾರ್ವಜನಿಕ ಸ್ನಾನ ಮತ್ತು ಶೌಚಾಲಯ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆಯನ್ನು ಸರ್ಕಾರವೇ ಒದಗಿಸಿದ್ದು ಅವುಗಳನ್ನು ವ್ಯವಸ್ಥಿತವಾಗಿ ಸಂರಕ್ಷಣೆ ಮಾಡಲಾಗಿದೆ. ಅವುಗಳ ಫಲಾನುಭವಿಗಳೂ ಜವಾಬ್ದಾರಿಯಿಂದ ಉಪಯೋಗಿಸುತ್ತಾರೆ. ಸಾಮಾನ್ಯವಾಗಿ ಈ ವ್ಯವಸ್ಥೆ ಗಳಿಂದಾಗಿ ಹೋದ ಸ್ಥಳಗಳಲ್ಲಿ ಇದಕ್ಕೇ ಬೇಕಾಗಿ ಹೋಟೆಲ್ ರೂಂ ಪಡೆಯುವ ಅಗತ್ಯವಿಲ್ಲ.
ನಗರಗಳಲ್ಲಿ ಶೌಚಾಲಯಕ್ಕಾಗಿ ಪೆಟ್ರೋಲ್ ಬಂಕ್ ಗಳಿಗೆ ಅಥವಾ ಹೋಟೆಲ್ ಗೆ ಹೋಗುತ್ತಾರೆ. ಬಹುತೇಕ ಸ್ಥಳಗಳಲ್ಲಿ ಶೌಚಸೇವೆ ಉಚಿತ ವಾದರೂ ನ್ಯೂಯಾರ್ಕ್ ನಂತಹ ಜನನಿಬಿಡ ನಗರಗಳಲ್ಲಿ ಬಹಳಷ್ಟು ಹೋಟಲ್ ಗಳಲ್ಲಿ ಕೇವಲ ಶೌಚಾಲಯವನ್ನಷ್ಟೇ ಉಚಿತ ವಾಗಿ ಉಪಯೋಗಿಸಲು ಸಾಧ್ಯವಿಲ್ಲ. ಅವುಗಳ ಬಾಗಿಲು ತೆರೆಯಲು ಪಾಸ್ವರ್ಡ್ ಬೇಕಾಗುತ್ತದೆ. ಅಂಥಾ ಪಾಸ್ ವರ್ಡ್ ಗಳು ನಾವು ಅಲ್ಲಿ ವ್ಯಾಪಾರ ಮಾಡಿದಾಗ ಪಡೆದ ಬಿಲ್ಲಿನಲ್ಲಿ ಲಭ್ಯ ವಿರುತ್ತದೆ. ಆ ಪಾಸ್ ವರ್ಡ್ ಬಳಸಿ ಶೌಚಾಲಯ ದ ಬಾಗಿಲು ತೆರೆಯಬಹುದಾಗಿದೆ. ನಾವು ಪಡೆದ ಬಿಲ್ಲಿನಲ್ಲಿ ಬಹುಶಃ ಶೌಚಾಲಯ ಶುಲ್ಕ ವೂ  ಸೇರಿರುತ್ತದೆ ಎನ್ನಬಹುದು.



ಟಿಶ್ಯೂ ಪತ್ರಿಕಾ
ಇನ್ನೊಂದು ವಿಚಿತ್ರ ವೆಂದರೆ ಇಲ್ಲಿ  ಯಥೇಶ್ಚ ವಾಗಿ ನೀರು ಸಿಗುವುದಾದರೂ ಅವುಗಳ ಬಳಕೆ ಕಡಿಮೆ. ಮಲ ವಿಸರ್ಜನೆ ನಂತರ ತೊಳೆದು ಕೊಳ್ಳುವುದರ ಬದಲು ಟಿಸ್ಯೂ ಎಂಬ ಪೇಪರ್ನಿಂದ ಒರೆಸಿ ಕೊಳ್ಳುತ್ತಾರೆ. ಹೀಗೆ ಬಳಸಲು ಅನುಕೂಲವಾಗುವಂತೆ ಅಂಥಾ ಟಿಸ್ಯೂದ ರೋಲ್ ಗಳನ್ನು ಎಲ್ಲಾ ಶೌಚಾಲಯ ದಲ್ಲೂ ನೇತು ಹಾಕಿರುತ್ತಾರೆ.ಅಕಸ್ಮಾತ್ ಅದು ಮುಗಿದು ತೊಂದರೆಯಾಗಬಾರದೆಂದು ಹೆಚ್ಚಿನ ಒಂದು ರೋಲ್ ನ್ನೂ ತುರ್ತು ಉಪಯೋಗಕ್ಕೆ ಇಟ್ಟಿರುತ್ತಾರೆ. ಒರೆಸಿಕೊಂಡ ಟಿಸ್ಯೂವನ್ನು ಅಲ್ಲಿಯೇ ಶೌಚಾಸನದಲ್ಲಿ ಎಸೆದು.ಹೊರಬಂದು ಕೈ ತೊಳೆಯುತ್ತಾರೆ.ಆ ನಲ್ಲಿ ಗಳಲ್ಲಿ ಬಿಸಿ ಮತ್ತು ತಣ್ಣೀರು ಯಾವಾಗಲೂ ದೊರೆಯುತ್ತದೆ.ತೊಳೆದ ಕೈ ಗಳನ್ನು ಒಣಗಿಸಿ ಕೊಳ್ಳಲು ಇನ್ನೊಂದು ಟಿಸ್ಯೂ ಅಥವಾ ಬಿಸಿಗಾಳಿ ಯಂತ್ರಕ್ಕೆ ಕೈಯೊಡ್ಡುತ್ತಾರೆ.ಯಾರೂ ಕರವಸ್ತ್ರ ಬಳಕೆ ಮಾಡುತ್ತಿದ್ದುದನ್ನು ನೋಡಲು ಸಿಗಲಿಲ್ಲ.
ಅಡಿಗೆ ಮನೆಗಳಲ್ಲೂ , ಹೋಟೆಲ್ ನಲ್ಲಿ ಊಟದ ನಂತರವೂ ಟಿಸ್ಯೂ ಪೇಪರ್ ತರಹದ ಪೇಪರ್ ಬಳಕೆ ಮಾಡುತ್ತಿದ್ದು ಅವುಗಳನ್ನು ನ್ಯಾಪ್ಕಿನ್ ಎಂದು ಕರೆಯಲಾಗಿದೆ . ಹೀಗೆ ಹೋಟೇಲ್ ಮತ್ತು ಶೌಚಾಲಯ ಇತ್ಯಾದಿ ಗಳಲ್ಲಿ ಬಳಕೆ ಮಾಡುವ ಎಲ್ಲಾ ಟಿಸ್ಯೂ / ನ್ಯಾಪ್ಕಿನ್ ಗಳು ಉಚಿತವಾಗಿ ಯೇ ದೊರೆಯುವುದೊಂದು ನೆಮ್ಮದಿಯ ವಿಷಯ. ಎಲ್ಲವನ್ನೂ ಲೆಕ್ಕ ಹಾಕುವ ನಮಗೆ ಈ ಬಿಸಿಗಾಳಿ,ಟಿಸ್ಯೂ ಪೇಪರ್ ಗಳ ಬಳಕೆ ದುಂದುವೆಚ್ಚ ವೆನಿಸಿದರೆ ಸೋಜಿಗವೇನಲ್ಲ.



ಶ್ವಾನ ವ್ಯಾಖ್ಯಾನ
ಈ ದೇಶದಲ್ಲಿ ಬೀದಿ ನಾಯಿಗಳಿಲ್ಲ , ಬೀಡಾಡಿ ಹಸುಗಳು  ಎಮ್ಮೆಗಳು ಕಾಣಸಿಗದು.ಇರುವುದೆಲ್ಲ ಸಾಕು ನಾಯಿಗಳೇ. ಅವುಗಳಿಂದ ಮನಬಂದಂತೆ ಎಲ್ಲಾದರಲ್ಲಿ ವಿಸರ್ಜನೆ ಮಾಡಿಸುವುದು ಅಪರಾಧ. ಆದ್ದರಿಂದ ಜನ ವಾಸವಿರುವ ಪ್ರದೇಶದಲ್ಲಿ ಅಲ್ಲಲ್ಲಿ ಕಂಬಗಳಿಗೆ ಡಬ್ಬಿಗಳನ್ನು ಜೋಡಿಸಿರುತ್ತಾರೆ. ನಮ್ಮಲ್ಲಿರುವ ಮಾಲ್ ಗಳಲ್ಲಿ  ಕೊಂಡ ವಸ್ತುಗಳನ್ನು ತುಂಬುವ ಕವರುಗಳ ರೋಲ್ ಜೋಡಿಸಿದಂತೆ ಇಲ್ಲಿಯೂ ಕವರುಗಳನ್ನು ಜೋಡಿಸಿದ್ದು ಅವುಗಳ ಬಣ್ಣ ಮಾತ್ರ ಕಪ್ಪು. ಬೆಳಗಿನ  ಮತ್ತು ಸಂಜೆ ವೇಳೆಯಲ್ಲಿ ಅಲ್ಲಲ್ಲಿ ಜನರು ವಿಧವಿಧದ ನಾಯಿಗಳನ್ನು ಹಿಡಿದು ಕೊಂಡು ಹೋಗುವ ಜನ.ಒಂದು ಕೈನಲ್ಲಿ ನಾಯಿ ಹಿಡಿದ ಚೈನ್ ಮತ್ತೊಂದರಲ್ಲಿ ಒಂದು ಪ್ಲಾಸ್ಟಿಕ್ ಕವರ್. ನಾಯಿಗಳು ಮಲ ವಿಸರ್ಜನೆ ಮಾಡಿದ ಕೂಡಲೇ ಅದನ್ನು ಕೈಗೆ ಅಂಟದಂತೆ ಕಲಾತ್ಮಕವಾಗಿ   ಕವರ್ ನಲ್ಲಿ ತುಂಬಿ ಕೊಳ್ಳುತ್ತಾರೆ. ಅದನ್ನು ಮೇಲೆ ಹೇಳಿದ ಡಬ್ಬಿಗಳಲ್ಲಿ ಎಸೆದು ಅಲ್ಲೇ ದೊರೆಯುವ ರೋಲ್ ನಿಂದ  ಹೊಸ ಕವರು ಪಡೆದು ಮತ್ತೆ ನಾಯಿ ಯನ್ನು ತಿರುಗಾಡಿಸಲು ಹೊರಡುವುದು ಸಾಮಾನ್ಯ ನೋಟ.



ನೀರು-ವಿದ್ಯುತ್
ವರ್ಷದ ಸದಾಕಾಲವೂ ನಿರಂತರ ಬಿಸಿ ಮತ್ತು ತಣ್ಣೀರು ಸರಬರಾಜು ಇರುತ್ತದೆ.ವಾತಾವರಣದ ಉಷ್ಣತೆ ಅತಿ ಕಡಿಮೆಯಾದಾಗ  ನೀರು ಮಂಜುಗಡ್ಡೆ ಯಾಗುವುದು ಸಹಜ.ಕೊಳವೆಗಳಲ್ಲಿ ಹರಿಯುವ ನೀರು ಮಂಜುಗಡ್ಡೆ ಯಾದರೆ ಸಮಸ್ಯೆ ಯ ತೀವ್ರತೆ ಹೆಚ್ಚು.ಅದಕ್ಕೆ ಅವಕಾಶ ವಾಗದಂತೆ ಬಿಸಿನೀರನ್ನೂ ಅನುಗಾಲ ಹರಿಯುವಂತೆ ಮಾಡಿದ್ದಾರೆ.ಜೊತೆಗೆ ವಿದ್ಯುತ್ ಸರಬರಾಜು ಸಹ ಅಖಂಡವಾಗಿ ಅವ್ಯಾಹತವಾಗಿ ದೊರೆಯುತ್ತದೆ.ಸಾರ್ವಜನಿಕ ಸಂಪರ್ಕ ನೀರಿನ ಕೊಳವೆಗಳು, ವಿದ್ಯುತ್ ಗಳ  ಕೇಬಲ್ ಗಳಿಗೆ ರಸ್ತೆಯ ಮತ್ತು ಕಾಲುದಾರಿಯ ಮದ್ಯೆ ಇರುವ ವಿಶೇಷ ಡಕ್ಟಗಳಲ್ಲಿ ಅವಕಾಶ ಮಾಡಿದ್ದು ದುರಸ್ತಿ ಮತ್ತು ಸಂರಕ್ಷಣೆ ಗೆ ಸುಲಭ ಮಾಡಿಕೊಂಡಿದ್ದಾರೆ.



ಸಾರ್ವಜನಿಕ ಸಂಪರ್ಕ
ಸಾರ್ವಜನಿಕ ಸಂಪರ್ಕಗಳಾದ ರೈಲುಗಳು ಬಸ್ ಗಳು ಸಮಯಕ್ಕೆ ಸರಿಯಾಗಿ ಚಲಿಸುತ್ತವೆ.ಅವುಗಳ ಆಯಾ ನಿಮಿಷದ ಚಲನಸ್ಥಿತಿಯನ್ನು ಡಿಜಿಟಲ್ ಬೋರ್ಡ್ ಮೂಲಕ ಕಾಯುತ್ತಿರುವ ಬಸ್ ಮತ್ತು ರೈಲು ನಿಲ್ದಾಣ ಗಳಲ್ಲಿ ನೋಡಬಹುದು.ಈ ನಿಲ್ದಾಣ ಗಳೂ ಸಹ ಮಳೆ ಚಳಿಗಳಿಂದ ಉತ್ತಮ ರಕ್ಷಣೆ ಕೊಡುವುದಾಗಿದೆ.ಆದರೆ ಈ ರೈಲುಗಳನ್ನು ಮತ್ತು ಬಸ್ ಗಳನ್ನು ಉಪಯೋಗಿಸುವವರು ಅತಿ ಕಡಿಮೆ.ಬಹುತೇಕ ಜನ ಸ್ವಂತ ಕಾರು ಉಳ್ಳವರಾಗಿದ್ದಾರೆ.



ಸರಳ ಸಾರ್ವಜನಿಕ ಸೇವೆ ಗಳು , ಲಂಚರಹಿತ ವ್ಯವಸ್ಥೆ ಗಳು ಕೆಲಸಗಳನ್ನು ಶೀಘ್ರ ವಾಗಿ ಮುಗಿಸಲು ಅವಕಾಶ ಮಾಡಿದೆ.ನಾ ಭೇಟಿ ಕೊಟ್ಟ ಡೆನ್ವರ್ ಸಾರಿಗೆ ಕಛೇರಿಯಲ್ಲಿ  ವಾಹನ ವಾರ್ಷಿಕ  ತೆರಿಗೆ ಸಲ್ಲಿಸಲು ಕಳೆದ ಸಮಯ ಕೇವಲ ಐದು ನಿಮಿಷಗಳು.ಅಲ್ಲದೆ ಅಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇವಾ ಕೌಂಟರ್ ಗಳು ಇದ್ದು  ಎಲ್ಲಾ ಕೌಂಟರ್ ಗಳಲ್ಲಿಯೂ ಬೇಕಾದ  ಪಡೆಯಬಹುದಾಗಿತ್ತು. ನಮ್ಮಲ್ಲಿರುವಂತೆ ನಿಮ್ಮ ಪ್ಯಾನ್ ಕಾರ್ಡ್ ಅಥವಾ ಆಧಾರ್ ಕೊಡಿ, ಕಳೆದ ಅಥವಾ ಹಳೇ ಸಾಲಿನ ರಸೀದಿ ಕೊಡಿ ಎನ್ನುವುದು, ಸರಿಯಾದ ಚಿಲ್ಲರೆ ಕೊಡಿ ಅಥವಾ ಹೆಚ್ಚಿನ ಹಣ ಕೊಡಿ ಎಂದು ಕೇಳುವವರಿಲ್ಲ. ಕಾರ್ಡ ಮೂಲಕ ಪಾವತಿ ಕಡ್ಡಾಯ. ಹಿರಿಯ ನಾಗರೀಕರಿಗೆ ನೈಜ ಪ್ರಾಧಾನ್ಯತೆ.



ಪಾದಚಾರಿಗಳು
ಪಾದಚಾರಿಗಳು ಅಥವಾ ರಸ್ತೆ ಯಲ್ಲಿ ಓಡಾಡುವ ಪಶು ಪಕ್ಷಿಗಳು ಕಂಡುಬಂದಲ್ಲಿ ಅವುಗಳಿಗೆ ಪ್ರಾಶಸ್ತ್ಯ ನೀಡುವರು ವಾಹನ ಚಾಲಕರು.ಪಾದಚಾರಿಗಳು ರಸ್ತೆ ದಾಟುವಾಗ ಸರ್ಕಲ್ ಗಳಲ್ಲೇ ದಾಟಬೇಕು.ಹಾಗೆ ದಾಟುವ ಮುನ್ನ ಪ್ರಾರಂಭದಲ್ಲೇ ಇರುವ  ಸಿಗ್ನಲ್ ಕಂಬಕ್ಕೆ ಜೋಡಿಸಿರುವ ದಾಟು ಸ್ವಿಚ್ ನ್ನು ಆನ್ ಮಾಡಿದಲ್ಲಿ ಬರುವ ವಾಹನ ಚಾಲಕರಿಗೆ ನಾವು ದಾಟುವ ಸಂದೇಶ ಹೋಗುತ್ತದೆ. ಅವರು ವಾಹನವನ್ನು ನಿಲ್ಲಿಸುತ್ತಾರೆ.ಚಾಲಕರು ಪಾದಚಾರಿಗಳು ಪೂರ್ತಿ ಯಾಗಿ ರಸ್ತೆ ಯನ್ನು ದಾಟಿದ ನಂತರವೇ ತನ್ನ ವಾಹನವನ್ನು ಚಲಾಯಿಸುತ್ತಾರೆ.



ವಿಭಿನ್ನಗಾತ್ರ ದ ನಮ್ಮ ಜೀವಿಗಳು.
ಇಲ್ಲಿ ಕಾಣಸಿಗುವ ಕಾಗೆಗಳು, ಗುಬ್ಬಚ್ಚಿಗಳು, ಅಳಿಲು ಗಳು ಇಲ್ಲಿಯೂ ಇದ್ದು ನಮ್ಮ ದೇಶದಲ್ಲಿ ಇರುವ ಅದೇ ಪ್ರಾಣಿಗಳ  ಗಾತ್ರದಲ್ಲಿ ಹೆಚ್ಚಿನದಾಗಿದೆ.ಅದೇನು ಆಹಾರದ ಪರಿಣಾಮವೋ, ಅವುಗಳಿಗಿರುವ ನೆಮ್ಮದಿಯೋ ಅಥವಾ ದೊಡ್ಡ ದೇಶವೆಂಬ ಹಿರಿಮೆಯೋ ಗೊತ್ತಿಲ್ಲ.ನೋಡಲಂತೂ ದೊಡ್ಡದಾಗಿ ಕಾಣುತ್ತವೆ.

Comments

  1. ನೀವು ಕಂಡವು ವಿಶೇಷಗಳಾದರೂ, ಅವುಗಳ ವಿಶೇಷಗಳನ್ನು ನಿಮ್ಮದೇ ವಿಶೇಷ ಶೈಲಿಯಲ್ಲಿ ವರ್ಣಿಸಿದ್ದೀರಿ.

    ReplyDelete

Post a Comment

Popular posts from this blog

ಆರೋಗ್ಯ ಕವಚ

ಮನುಷ್ಯ ತಾನು ಸುಖವಾಗಿರಲು ದುಡಿಯುತ್ತಾನೆ. ಹಣ ಕೂಡಿಡುತ್ತಾನೆ. ಆಸ್ತಿ ಗಳಿಸುತ್ತಾನೆ. ತಾನು ಮತ್ತು ತನ್ನ ಪ್ರೀತಿಯ ಕುಟುಂಬವನ್ನು ಸುಖವಾಗಿಡುವ ಕನಸುಗಳು ಸದಾ ನಡೆಯುತ್ತಲೇ ಇರುತ್ತವೆ. ಈ ಕನಸಿನ ಮಾರ್ಗದಲ್ಲಿ ಆಕಸ್ಮಿಕವಾಗಿ ಅವನ ದೇಹಕ್ಕೆ ದೊಡ್ಡ ಅನಾರೋಗ್ಯವೇನಾದರೂ ಎದುರಾದರೆ ಬಹಳ ಕಷ್ಟವಾಗುತ್ತದೆ. ಸುಧಾರಿಸಿಕೊಳ್ಳಲು ಸಾಧ್ಯವಾಗದಂತೆ ಗಳಿಸಿದ್ದೆಲ್ಲವೂ ನೀರಿನಂತೆ ಕರಗಿ ಹೋಗುತ್ತದೆ. ಇದರಿಂದ ಜೀವನದಲ್ಲಿ ಹಾಕಿಕೊಂಡ ಗುರಿಯನ್ನು ಸಾಧಿಸಲಾಗುವುದಿಲ್ಲ. ಇಂತಹ ಪರಿಸ್ಥಿತಿಯನ್ನು ಆರ್ಥಿಕವಾಗಿ ಸಮರ್ಥವಾಗಿ ಎದುರಿಸಲು ಬೇಕಾಗಿರುವುದು ಆರೋಗ್ಯ ವಿಮೆ. ಇದನ್ನು ಹೆಲ್ತ್ ಇನ್ಶುರೆನ್ಸ್ ( Heath Insurance) ಅಥವಾ ಮೆಡಿಕಲ್ ಇನ್ಸೂರೆನ್ಸ್ (Medical Insurance) ಎಂದೂ ಹೇಳಲಾಗುತ್ತದೆ. ಇದು ಆರೋಗ್ಯ ರಕ್ಷಣೆಗಾಗಿ ಎಂದೇ ಪಡೆದರೂ ಮುಂದಿನ ನಮ್ಮ ಜೀವನಕ್ಕಾಗಿ, ಪರೋಕ್ಷವಾಗಿ ಕೂಡಿಟ್ಟಿರುವ ಆಸ್ತಿಯನ್ನು ರಕ್ಷಣೆ ಮಾಡುತ್ತದೆ. ಈ ಬಗ್ಗೆ ತಿಳಿದುಕೊಳ್ಳಬೇಕಾದ ವಿಷಯಗಳು ಬಹಳ ಅನಿವಾರ್ಯ. ಇವೆಲ್ಲವನ್ನೂ ಸವಿಸ್ತಾರವಾಗಿ ತಿಳಿಸಿ ಹೇಳುವ ಪ್ರಯತ್ನವೇ ಈ ಲೇಖನ. ಆರೋಗ್ಯ ವಿಮೆ ಎಂದರೇನು? ನಾವು ಸದಾ ಆರೋಗ್ಯದಿಂದ ಇರಬೇಕೆಂದು ಬಯಸುವೆವಾದರೂ "ಮನುಷ್ಯ ಎಂದಮೇಲೆ ಏನಾದರೂ ಕಾಯಿಲೆ ಇದ್ದೇ ಇರುತ್ತದೆ" ಎಂಬಂತೆ ಹಲವು ಸಾರಿ ತಲೆನೋವು, ಜ್ವರ, ನೆಗಡಿ ಮೈ ಕೈ ನೋವು ಎಂದು ನರಳುತ್ತೇವೆ. ಚಿಕೂನ್ ಗುನ್ಯಾ, ಡೆಂಗ್ಯೂ, ಕೊರೋನಾ ಇತ್ಯಾದಿ ಕಾಯಿಲೆಗಳ...

ಮಿತ್ರನೊಬ್ಬನ ಆತ್ಮಾವಲೋಕನ

ಮಿತ್ರ ಶಂಕರ ಒಮ್ಮೆ ಹೇಳಿದ್ದ, ಕೇಳಿ ಹಳತಾದರೂ ಓದುಗರಿಗೆ ಹೊಸತಾಗಿ, ಆತ್ಮೊನ್ನತಿಗೆ ಸಹಾಯ ವೆನಿಸುವ, ಆತ್ಮಾವಲೋಕನದ ಸಾಲುಗಳು ನಿಜವಾಗಿಯೂ ಕುತೂಹಲಕಾರಿಯಾಗಿದೆ. ಅದನ್ನು ಅವನಿಂದಲೇ ಕೇಳಿ: ಕಛೇರಿಯಲ್ಲಿ ವಿಶೇಷವಾದ ಕೆಲಸವೊಂದನ್ನು ನಿರೀಕ್ಷೆಗಿಂತ ಮೊದಲೇ ಯಶಸ್ವಿಯಾಗಿ ಪೂರೈಸಿದ್ದರಿಂದ ತುಂಬಾ ಸಂತೋಷವಾಗಿತ್ತು. ಆದ್ದರಿಂದ ಮನೆಗೆ ಸ್ವಲ್ಪ ಬೇಗನೆ ಬಂದಿದ್ದೆ. ಪ್ರತಿದಿನ ಯಾಕೆ ಲೇಟು ಎಂಬ ಮುಖವನ್ನು ಮಾಡುತ್ತಿದ್ದ ಮಡದಿ ಪ್ರೇಮ ಕೊಟ್ಟ ಒಂದು ಬಿಸಿಯಾದ ಸ್ಟ್ರಾಂಗ್ ಕಾಫಿ ಕುಡಿದು ನಿಧಾನವಾಗಿ ಸೋಫಾದ ಮೇಲೆ ಕಾಲು ಚಾಚುತ್ತಿದ್ದಂತೆಯೇ ನಿದ್ರಾ ದೇವಿಗೆ ವಶನಾಗಿ ಕೆಲವು ಸಮಯವಾಗಿರಬಹುದು. ಕೆಲವೇ ನಿಮಿಷಗಳಲ್ಲಿ ನಿದ್ದೆ ಬಂದಿತ್ತಾದರೂ ತಾಳಲಾರೆನೆಂಬ ಎದೆನೋವು, ಇದ್ದಕ್ಕಿದ್ದಂತೆ ಉಸಿರುಗಟ್ಟಿಸುವಂತಹ ಅನುಭವ. ಏನು ಗೊತ್ತಾಗುತ್ತಿಲ್ಲ. ಕೆಲವೇ ನಿಮಿಷಗಳಲ್ಲಿ ಗಾಬರಿಯಿಂದ ಪ್ರೇಮಾ, ಮಗಳು - ಅಳಿಯನನ್ನು ಕರೆಯುತ್ತಿದ್ದಾಳೆ. ಕಾಲು ಕೈ ಎದೆ ಭಾಗಗಳನ್ನು ಹಿತವಾಗಿ ಯಾರೋ ತಡವುತ್ತಿದ್ದಾರೇನೋ. ಹಾಗೆಯೇ ನನ್ನನ್ನು ಎತ್ತಿದಂತಹ ಅನುಭವ. ಎಲ್ಲಿಗೋ ಕರೆದುಕೊಂಡು ಹೋಗುತ್ತಿರಬಹುದು. ಯಾವುದೋ ವಾಹನದ ಸದ್ದು. ನನ್ನ ಕೈಗಳನ್ನು ಯಾರೋ ಎತ್ತುತ್ತಿದ್ದಾರೆ, ಏನಾಗುತ್ತಿದೆ? ಹೊಸತರದ ಹಾಸಿಗೆ. ಮೂಗು ಬಾಯಿಗೆ ಏನೋ ತಡೆ. ಸಣ್ಣದಾಗಿ ಬಿಟ್ಟು ಬಿಟ್ಟು ಕೇಳುವ ಏಕತಾನದ ಸದ್ದು. ಹಠಾತ್ತಾಗಿ ನಿಶ್ಯಬ್ದ. ನೀರವ ವಾತಾವರಣ. ಈಗ ನನಗೆ ನೋವು ಇದೆಯೇ. ಟಿವಿಯಲ್ಲಿ ಯಾವುದೋ ಕ...

ಬಾಳ ರೂಪಿಸಿದ ವಿಮೆ

ನಾವು ಸಮಾಜದಲ್ಲಿ ನಮಗಾಗಿ ನಾವು ಅನೇಕ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದೇವೆ. ಅದನ್ನು ಒದಗಿಸಲು ಅದರದೇ ಆದ ಸಂಸ್ಥೆ ಹಾಗೂ ಸೇವಾ ಸಿಬ್ಬಂದಿಗಳಿದ್ದಾರೆ. ಇವು ನಮ್ಮ ಬದುಕು ಸುಗಮವಾಗಲು ಸಹಾಯಕವಾಗಿ ವೆ . ಇವಲ್ಲದೆ  ಜೀವನದಲ್ಲಿ ನಮ್ಮ ಉನ್ನತಿಗೆ ಬಂಧುಮಿತ್ರರ ಪಾತ್ರ ತೀರಾ ಸಾಮಾನ್ಯ. ಆದರೆ ಸಂಸ್ಥೆಯೊಂದು ಕೊಡುವ ಸೇವೆಯೇ ಒಬ್ಬರ ಬದುಕನ್ನು ರೂಪಿಸಿಕೊಳ್ಳಲು ಅವಕಾಶವಾದ  ಘಟನೆಯ ಸ್ಮರಣೆಯೇ ಈ ಕಥೆಯ ಜೀವಾಳ. ಈ ಬೆಳಿಗ್ಗೆ ಬೆಂಗಳೂರಿನಿಂದ ಲಂಡನ್ ವರೆಗಿನ ಆಕಾಶ ಪಯಣ. ಇದಕ್ಕಾಗಿ ನಿನ್ನೆಯಿಂದಲೇ ನಿದ್ದೆ ಇಲ್ಲ. ರಾತ್ರಿ ಪೂರ್ತಿ ವಿಮಾನ ನಿಲ್ದಾಣದಲ್ಲಿ ಸಮಯ ಕಳೆದೆವು. ಲಂಡನ್ನಿನ ಸಮಯದಂತೆ ಮಧ್ಯಾಹ್ನವೇ ಬಂದೆವು. ಅಮೇರಿಕಾಕ್ಕೆ ಹೋಗುವ ವಿಮಾನ ಸಂಜೆ ಐದು ಗಂಟೆಗೆ. ಆದ್ದರಿಂದ ಕಾಯಲೇಬೇಕು. ವಿಮಾನ ನಿಲ್ದಾಣದಲ್ಲಿ ಆಯಾಸದಿಂದ ನಿದ್ದೆ ಬರುತ್ತಿದ್ದರೂ ಎಚ್ಚರವಾಗದಷ್ಟು ನಿದ್ದೆ ಬಂದು ಮುಂದಿನ ವಿಮಾನ ತಪ್ಪಿ ಹೋದರೆ ಎಂಬ ಭಯದಿಂದ ಕಣ್ಣು ಮುಚ್ಚಲಿಲ್ಲ. ಈಗ ಅಮೇರಿಕಾದ ವಾಶಿಂಗ್ಟನ್ಗೆ ಹೋಗುವ ವಿಮಾನದಲ್ಲಿ ಕುಳಿತಿದ್ದೇನೆ. ಪಕ್ಕದಲ್ಲಿ ಕುಳಿತ ನಮ್ಮವರಿಗೆ ಗಾಢ ನಿದ್ರೆ. ವಿಮಾನ ಪ್ರಯಾಣವೇನೋ ಹೆಮ್ಮೆಯ ವಿಷಯವೇ. ಆದರೆ ಇದೇ ಮೊದಲ ಪ್ರಯಾಣವಾದ್ದರಿಂದ ಏನೋ ಆತಂಕ, ಸಂತೋಷ, ದುಗುಡ ಜೊತೆಗೆ ಸಡಗರ. ಸುತ್ತ ನೋಡುತ್ತಾ ನನ್ನ ಬಗ್ಗೆ ನಾನು ಯೋಚಿಸುತ್ತಿದ್ದೇನೆ. ನಾನು ಎಲ್ಲಿದ್ದೇನೆ. ಎಲ್ಲಿಗೆ ಬಂದೆ. ಇರುವನೊಬ್ಬ ಮಗ ಆನಂದನೇ ನಮಗೆ ಸರ್ವಸ್ವ. ಆದ್ದ...