ಸೊರಬದ ಮುನಿಸಿಪಲ್ ಹೈಸ್ಕೂಲಿನಲ್ಲಿ ಕನ್ನಡ ಪಂಡಿತರಾಗಿದ್ದ ನಮ್ಮ ಪೂಜ್ಯ ಗುರುಗಳಾದ ವಿದ್ವಾಂಸರಾದ
ಶ್ರೀ ವೆಂಕಟರಾಮ ಭಟ್ಟರವರ ಸ್ಮರಣಾರ್ಥವಾಗಿ "ಸಾರಸ್ವತ" ಸಂಸ್ಮರಣ ಗ್ರಂಥ ಬಿಡುಗಡೆಗಾಗಿ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ೩೦/೩/೨೦೧೯ ರಂದು ನಡೆದ ಸಮಾರಂಭಕ್ಕೆ ಬಂದ ಮಿತ್ರರನ್ನು ಕುರಿತ ಅಂದಿನ ಆಶು ಕವಿತೆ.
ಗುರುವ ಸ್ಮರಣೆಗೆ ಬಂದಿಹ ಮಿತ್ರರೇ
ಗೊತ್ತು ನನಗೂ ನಿಮಗೂ ಈ ಹೊತ್ತು
ಆಗುತಿದೆ ಸಂತೋಷವೋ ದುಗುಡವೋ
ಕಾಣುತಿದೆ ಎಲ್ಲೆಲ್ಲಿ ಅದೇನು ಸಡಗರವೋ
ಇಂದು ಸಂಜೆಯ ಈ ಸಂತಸದ ಮುಖಗಳು,
ಕಂಡಾಗ ಎನಿಸದೆ ಇವರೆಲ್ಲ ಎಷ್ಟು ಸುಖಿಗಳು
ಯೋಚಿಸುತ್ತಾ ಕಂಡಾಗ ಹಲವು ಬಾಡಿವೆ,ಬಳಲಿವೆ,
ಒಂದಂತೂ ಸತ್ಯ ತೋರಿದಂತಲ್ಲ ಇದುವೇ ನಿತ್ಯ
ನಿಗಿನಿಗಿ ಮುಖದಲ್ಲಿ ನಗುವನ್ನು ತಂದು
ಪರಿಚಯವ ಹುಡುಕುತಿಹರು ಕಾತುರದಿ ಇಂದು
ಪರಿಚಯದ ವದನ ಕಂಡರೆ ಅದೇನೋ ಹಿತ
ಅವರೇ ಮಾತನಾಡಿಸಿದರೆ ಯಾರೆಂದು ಯೋಚಿಸುತ
ಮತ್ತೆ ಸಿಗಲಾರದ ಊರಾಚೆಯ ಹಲವು ಮಿತ್ರರು
ಬೇಡವೆಂದರೂ ಕಾಣುತಿಹ ನಮ್ಮೂರ ಹಿತಶತೃರು
ಸಂವತ್ಸರದ ಚಕ್ರ ಒಮ್ಮೆ ಸುತ್ತಿದವರೇ ಎಲ್ಲಾ
ಬಾಳಿನ ಹಾದಿಯಲಿ ಹೂವು ಮುಳ್ಳನೆ ಕಂಡಿರೆಲ್ಲಾ
ಆಗಿರುವಿರಿ ಉದ್ಯೋಗಿಯೋ ಮಾಲೀಕರೋ
ಬದುಕು ನೀಗಲು ಹತ್ತು ಹಲವು ಪಾತ್ರಗಳು
ಮತ್ತೆ ಸೋಲು ಗೆಲುವಿನ ವ್ಯವಹಾರಗಳು
ಜೀವ ಭಾವದಿ ಹರ್ಷ ದುಃಖದ ನಿಮಿಷಗಳು,
ಕಂಡಿರುವಿರಿ ಸಮಾಜದ ಹಂತಗಳು, ಅಂತಸ್ತು ಗಳು,
ಮಾನಗಳು ಅವಮಾನಗಳು ಕುಟುಂಬ ಸೌಖ್ಯಗಳು
ಎದುರಿಸಿರುವಿರಿ ಹಿರಿಯ ಕಿರಿಯರ ತರಹ ಭಾವಗಳು
ಒಬ್ಬೊಬ್ಬರದು ಒಂದೊಂದು ರೀತಿಯ ಸುಖವೇ
ಯಾರದೂ ಹೊರತಲ್ಲ ಎಂದು ಕೊಂಡಂತೆ ದುಃಖ
ಗುರುವಿನ ಚರಿತೆಯನು ಓದಿದಿದರೇ ಹೇಗೆ
ಅಷ್ಟೋಂದು ನಮದಲ್ಲ ಬದುಕಿನ ಬೇಗೆ
ಸಾರ್ಥಕತೆಯ ಹಾದಿ ಇರುವುದೇ ಹೀಗೆ
ಇದ್ದೇ ಇರುತವೆ ಎಲ್ಲರಿಗೂ ಹಲವಾರು ಕೆಲಸ
ಬದಿಗಿಟ್ಟು ಬಂದು ಕಳೆದಿರಿ ಒಂದು ದಿವಸ
ಕಾರಣವು ಯಾವುದಿದೋ ಪಡೆವ ಸಂತಸಕೆ
ಬಿಡದಿರಲಿ ಮನ ಖುಷಿಯ ಪಡೆಯುವುದಕೆ
ಶಾಂತಿಯಿರಲಿ ,ಸುಖವಿರಲಿ, ನೆಮ್ಮದಿಯಿರಲಿ
ಬಾಳಿನಲಿ ಆರೋಗ್ಯವಂತೂ ಸದಾ ನಿಮಗಿರಲಿ.
ಸತ್ಯ.. ಅದೊಂದು ಅವಿಸ್ಮರಣೀಯ ಸನ್ನಿವೇಶ.. ಮನಸ್ಸಿನಲ್ಲಿ ಮೂಡಿದ ಭಾವಗಳನ್ನು ನೈಜವಾಗಿ ಬಿಂಬಿಸುವ ಕವನ.. ಧನ್ಯವಾದಗಳು🙏
ReplyDelete