ಮಧ್ಯಾಹ್ನದ ಊಟದ ಬಳಿಕ ನಮ್ಮ ಯಾತ್ರೆ ಮುಂದುವರಿದು ತಿರುವನಂತಪುರಂ ಸೇರಿದಾಗ ಸಮಯ ಮಧ್ಯಾಹ್ನ ೪ ಘಂಟೆ.ಈ ನಗರವು ಕೇರಳದ ರಾಜಧಾನಿ ಆಗಿದ್ದು ಭಾರೀ ಸಂಖ್ಯೆ ಯ ಆಭರಣಗಳ, ವಿವಿಧ ಕಲಾಕೃತಿಗಳ,ವೈಭವದ ಬಟ್ಟೆಗಳನ್ನು ಅಂಗಡಿಗಳಲ್ಲಿ ನೋಡ ಬಹುದಾಗಿದೆ.ಇಲ್ಲಿನ ಸುಪ್ರಸಿದ್ಧ ತಿರುವನಂತಪುರಂ ದೇವಾಲಯ ಹೆಸರಿನಂತೆ ಅನಂತ ಪದ್ಮನಾಭ ಸ್ವಾಮಿ ದೇವಸ್ಥಾನವಾಗಿದ್ದು ಶಯನನಾಗಿ ಬಲಗೈಲಿ ಶಿವಲಿಂಗಾಕಾರದ ಕಮಂಡಲವನ್ನು ಹಿಡಿದು ಕೊಂಡಿದ್ದಾನೆ.ಈ ವಿಗ್ರಹವು ೧೮ ಅಡಿ ಉದ್ದವಾಗಿದ್ದು ಮೂರು ಬಾಗಿಲುಗಳ ಮೂಲಕ ನೋಡಬೇಕಾಗಿದೆ. ನಾಭಿಯಿಂದ ಬಂದಿರುವ ಬ್ರಹ್ಮ ನನ್ನೂ ಕಾಣಬಹುದು.ದೇವಸ್ಥಾನ ಪ್ರವೇಶಿಸಲು ನಿಗದಿತ ಸಮಯ,ವಸ್ತ್ರಸಂಹಿತೆ ಯ ಕಡ್ಡಾಯ ಆಚರಣೆ ಯಾತ್ರಿಕರಿಗೆ ಅಷ್ಟೇ ಅಲ್ಲ.ಅಲ್ಲಿ ಕೆಲಸ ಮಾಡುವ ರಕ್ಷಣಾ ಸಿಬ್ಬಂದಿಗಳಿಗೂ ಅನ್ವಯವಾಗುತ್ತದೆ.ಇಲ್ಲಿನ ಕಾರ್ಯಕ್ರಮ ದ ನಂತರ ಸಮೀಪದ ಕೊಲ್ಲಂ ನಲ್ಲಿ ರಾತ್ರಿ ಊಟ ವಾಸ್ತವ್ಯ.
ಶನಿವಾರದಂದು ಮುಂಜಾನೆಯೇ ಆದಿ ಶಂಕರಾಚಾರ್ಯರ ಜನ್ಮಸ್ಥಳ ಕಾಲಡಿ ಕ್ಷೇತ್ರದತ್ತ ಪಯಣ.ಮಾರ್ಗಮಧ್ಯೆ ದೊರೆತ ಶರವಣ ಭವನದಲ್ಲಿ ಉಪಹಾರ.ಆದಿ ಶಂಕರಾಚಾರ್ಯರ ಜನ್ಮಸ್ಥಳ,ತಾಯಿ ಆರ್ಯಾಂಬ ರವರ ಸಮಾಧಿ ಸ್ಥಳ,ಶ್ರೀ ಶಾರದಾ ಮತ್ತು ಸುತ್ತ ಸಪ್ತಮಾತೃಕೆಯರಾದ ಬ್ರಾಹ್ಮೀ, ಮಾಹೇಶ್ವರಿ, ಕೌಮಾರೀ, ವೈಷ್ಣವಿ, ವಾರಾಹಿ,ನಾರಸಿಂಹಿ, ಇಂದ್ರಾಣಿಯರ ಪುಟ್ಟ ಪುಟ್ಟ ದೇವಾಲಯಗಳು ಆಕರ್ಷಕವಾಗಿದೆ. ಶ್ರೀ ಶಂಕರರು ಚಿಕ್ಕವರಿದ್ದಾಗ ಪೂರ್ಣಾ ಎಂಬ ನದಿಯು ಸುಮಾರು ಮೂರು ಕಿಲೋಮೀಟರ್ ದೂರದಲ್ಲಿದ್ದು ಅವರ ತಾಯಿಗೆ ಪ್ರತಿ ದಿನ ಪ್ರಯಾಸದಿಂದ ಹೋಗಿ ಬರುತ್ತಿದ್ದರು.ಒಂದು ದಿನ ಹಾಗೆ ಹೋಗಿ ಬರುವಾಗ ಕುಸಿದು ಬಿದ್ದರು.ಇದನ್ನು ಕಂಡು ಮನ ಕರಗಿ ಕುಲದೈವ ಕೃಷ್ಣ ನಲ್ಲಿ ಬಾಲ ಶಂಕರರು ಪ್ರಾರ್ಥಿಸಲಾಗಿ ನಿನಗೆ ಬೇಕಾದ ಜಾಗದಲ್ಲಿ ಗುರುತು ಮಾಡು. ಅಲ್ಲಿಗೇ ನದಿ ಹರಿಯುತ್ತದೆ ಎಂದು ಪರಿಹಾರ ಹೇಳಿದುದರಿಂದ ಶಂಕರರು ಮನೆಯ ಬಳಿಯಲ್ಲಿ ಕಾಲಿನಿಂದ ಗುರುತು ಮಾಡಿ ನೀರು ಹರಿಸಿದರು.ಇದರಿಂದಾಗಿ ಆ ಸ್ಥಳಕ್ಕೆ ಕಾಲಡಿ ಎಂಬ ಹೆಸರು ಬಂದಿತು.
ಶ್ರೀ ಶಂಕರರ ಕುಲದೇವತೆ ಕೃಷ್ಣನ ದೇವಾಲಯ, ಪೂರ್ಣಾ ನದಿ ದರ್ಶನ ಮಾಡಿದೆವು.ಅನತಿ ದೂರದಲ್ಲಿರುವ ಕಂಚಿ ಕಾಮಕೋಟಿ ಸ್ವಾಮಿಯವರು ಕಟ್ಟಿಸಿರುವ ಅಧ್ವೈತ ಸಿದ್ಧಾಂತ ಪ್ರವರ್ತಕ ಆದಿಶಂಕರರ ಜೀವನ ಪರಿಚಯ ಮಾಡಿಸುವ ಎಂಟು ಅಂತಸ್ತಿನ ಕೀರ್ತಿ ಸ್ಥಂಭ ವಿದೆ. (ಪ್ರತಿ ಚಿತ್ರದ ವಿವರಗಳು ತಮಿಳು, ತೆಲುಗು, ಇಂಗ್ಲಿಷ್ ಹಾಗೂ ಕನ್ನಡದಲ್ಲಿದ್ದು ಗೂಗಲ್ ನಲ್ಲಿ ಬರುವ ಕನ್ನಡ ಅನುವಾದ ತಪ್ಪು ತಪ್ಪಾಗಿ ರುತ್ತದೆ).
ಇಲ್ಲಿನ ಪೂಜೆಯ ನಂತರ ಗುರುವಾಯೂರು ದೇವಸ್ಥಾನಕ್ಕೆ ಪಯಣ.ಹಿಂದೆ ದ್ವಾರಕಾ ನಗರವು ನಶಿಸುತ್ತಿರುವ ಸಮಯದಲ್ಲಿ ಶ್ರೀ ಕೃಷ್ಣನು ತನ್ನ ಮೂರ್ತಿಯನ್ನು ದಕ್ಷಿಣ ತೀರದ ಕುರುವೈ ಸಮುದ್ರ ದಡದಲ್ಲಿ ತನ್ನ ಸ್ಥಾಪನೆ ಮಾಡಬೇಕೆಂದು ದೇವಗುರು ಬೃಹಸ್ಪತಿ ಮತ್ತು ವಾಯುದೇವರಿಗೆ ತಿಳಿಸಲಾಗಿ ಅವರು ಅದರಂತೆ ಆ ದೇವರನ್ನು ಸ್ಥಾಪಿಸಿದರು.ಹಾಗೆ ಸ್ಥಾಪನೆ ಮಾಡಿದ ಗುರು ಮತ್ತು ವಾಯುಗಳ ಹೆಸರಿನಲ್ಲಿ ಆ ಪ್ರದೇಶವು ಕರೆಯಲ್ಪಟ್ಟಿತು ಎಂದು ಸ್ಥಳ ಮಹಾತ್ಮೆ ತಿಳಿಸುತ್ತದೆ.ಈ ಭಾಗದಲ್ಲಿ ಸುಮಾರು ೨೫೦೦ವರ್ಷಗಳ ಹಿಂದೆ ಧರ್ಮವನ್ನು ಪದ್ಧತಿ ಗಳನ್ನು ಕಠಿಣವಾಗಿ ಪಾಲಿಸುತ್ತಿದ್ದ ಬ್ರಾಹ್ಮಣರು ವಾಸವಾಗಿದ್ದ ಇತಿಹಾಸ ವಿದೆ.ಇಂದಿಗೂ ಅವರಿಂದಲೇ ಪೂಜಾ ಕೈಂಕರ್ಯಗಳು ಬಲು ಶಿಸ್ತು ಬದ್ಧವಾಗಿ ನಡೆದುಕೊಂಡು ಬರುತ್ತಿದೆ.ದೇವರ ವಿಗ್ರಹವು ಅತಿ ಚಿಕ್ಕದಾದರೂ ಮಹಿಮೆ ಹೆಚ್ಚಿದ್ದು ದೇಶದ ಎಲ್ಲಾ ಪ್ರಾಂತ್ಯ ಗಳಿಂದ ದಿನ ನಿತ್ಯವೂ ಭಕ್ತರು ಬರುತ್ತಿದ್ದಾರೆ. ದೇವಾಲಯ ಪ್ರವೇಶ ಹಿಂದೂಗಳಿಗೆ ಮಾತ್ರವಿದ್ದು ವಸ್ತ್ರಸಂಹಿತೆ ಕಡ್ಡಾಯ. ನಾವು ಸಂಜೆ ಐದು ಘಂಟೆಗೇ ಸರತಿಯಲ್ಲಿ ನಿಂತರೂ ದೇವರ ದರ್ಶನ ವಾಗಲು ರಾತ್ರಿ ಎಂಟು ಘಂಟೆಯಾಗಿತ್ತು. ನಂತರ ಹೋಟೆಲ್ನಲ್ಲಿ ಊಟ, ವಿಶ್ರಾಂತಿ.
ಭಾನುವಾರ ಸೃಷ್ಟಿ ಸೌಂದರ್ಯದ ವಯನಾಡಿನತ್ತ ಹೊರಟೆವು.ಹಸಿರು ಹೊತ್ತ ಆಳವಾದ ಕಂದರಗಳು, ಬೆಟ್ಟ ಗುಡ್ಡಗಳ ಸಾಲು, ಔಷಧಿ ಸಸ್ಯಗಳ ಪ್ರದರ್ಶನ ಗಳು, ಚಹಾ ತೋಟಗಳು,ಗಿರಿಸಾಲುಗಳ ಮಧ್ಯೆ ಹಾದುಹೋಗುವ ಮಾರ್ಗ ಗಳು ಅಪಾಯಕಾರಿ ತಿರುವುಗಳು ಎಲ್ಲಾ ರುದ್ರ ರಮಣೀಯ. ಶತಮಾನದ ಹಿಂದೆ ಇದ್ದ ದಟ್ಟ ಅರಣ್ಯದಲ್ಲಿ ಬ್ರಿಟಿಷ್ ಅಧಿಕಾರಿಯೊಬ್ಬನು ಆದಿವಾಸಿ ನಾಯಕನಿಂದ ಈ ಅರಣ್ಯದಲ್ಲಿ ಮಾರ್ಗ ದರ್ಶನ ಪಡೆದು ಅನುಕೂಲ ಮಾಡಿಕೊಂಡನು.ಬ್ರಿಟಿಶರ ಸಹಜ ದುರ್ಬುದ್ಧಿ ಯಿಂದ ಈ ಆದಿವಾಸಿ ಯಿಂದ ಭವಿಷ್ಯದಲ್ಲಿ ತೊಂದರೆ ಯಾಗ ಬಹುದೆಂಬ ಭಯದಿಂದ ಅವನ ಕೊಲೆ ಮಾಡಿಸಿದನೆಂದೂ ಮೃತನಾದ ಆದಿವಾಸಿ ಯು ಇಲ್ಲಿ ನಡೆದಾಡುವ ಜನರಿಗೆ ಪ್ರೇತನಾಗಿ ಕಾಡುತ್ತಿದ್ದುದರಿಂದ ಮಾಂತ್ರಿಕರೊಬ್ಬರ ಸಹಾಯದಿಂದ ಆ ಪ್ರೇತವನ್ನು ಬಂಧಿಸಿ ಮರಕ್ಕೆ ಕಟ್ಟಿ ಹಾಕಿ ಸಮಸ್ಯೆ ಪರಿಹಾರ ವಾಯಿತೆಂದೂ ಪ್ರತೀತಿ ಇದೆ.ಹಾಗೆ ಕಟ್ಟಿದ ಮರ ಹಾಗೂ ಸರಪಳಿಯನ್ನು ನೋಡಬಹುದಾಗಿದೆ.ಈ ಸೃಷ್ಟಿ ಸೌಂದರ್ಯವನ್ನು ಸವಿಯಲು ಅವಕಾಶ ಮಾಡಿದವರಿಗೊಂದು ಧನ್ಯವಾದ.ಮಾರ್ಗ ಮಧ್ಯೆ ದೊರೆತ ಉಡುಪಿ ಗ್ರ್ಯಾಂಡ್ ಪ್ಯಾಲೇಸ್ ಹೋಟೆಲ್ ನಲ್ಲಿ ಭೋಜನ.ವಿಷ್ಣುವಿನ ವಾಮನಾವತಾರದಲ್ಲಿ ಕೊಟ್ಟ ಮಾತಿನಂತೆ ತಲೆ ಮೇಲೆ ಕಾಲಿಡಿಸಿಕೊಂಡು ಅದನ್ನೇ ದಾನ ಮಾಡಿದ , ದೀಪಾವಳಿಯ ಬಲಿ ಪಾಡ್ಯಮಿಯನ್ನು ಶಾಶ್ವತ ಮಾಡಿದ, ಪುರಾಣದ ಮಹಾದಾನಿ ಖ್ಯಾತಿಯ ಮಹಾಬಲಿ.ಇವನ ಮಗ ಬಾಣಾಸುರ ಮುಂದಿನ ಹಲವಾರು ವರ್ಷಗಳನ್ನು ಪ್ರಜಾವತ್ಸಲನಾಗಿ ಯಶಸ್ವಿಯಾಗಿ ರಾಜ್ಯವಾಳಿದ.ಅವನ ಹೆಸರಿನ ಪರ್ವತ ಸಾಲು ಇದೆ.ಇಲ್ಲಿಯೇ ಹುಟ್ಟಿ ಹರಿಯುವ ಭಾರೀ ನೀರಿಗೆ ಕಲ್ಲು ಮಣ್ಣುಗಳ ಬೃಹತ್ ಒಡ್ಡು ನಿರ್ಮಾಣ ಮಾಡಿ ನೀರು ಹಿಡಿದಿಟ್ಟುಕೊಂಡಿದ್ದಾರೆ.ಈ ರೀತಿಯ ಒಡ್ಡು ಅಥವಾ ಡ್ಯಾಂ ಏಷಿಯಾ ದಲ್ಲೇ ಎರಡನೇಯದು ಎಂಬ ದಾಖಲೆ.ಈ ಡ್ಯಾಂ ನ ದಂಡದ ಮೇಲೆ ದೊಡ್ಡದೆನಿಸುವ ಸೌರ ಶಕ್ತಿ ಸ್ಥಾವರ ವಿದೆ.ಇದಲ್ಲದೆ ಈ ಕಬಿನಿ ಜಲಾಶಯದಿಂದ ಜಲವಿದ್ಯುತ್ ತಯಾರಾಗುತ್ತದೆ. ಈ ಪ್ರಕೃತಿ ಸೌಂದರ್ಯದ ಸನಿಹ ಆಟ ನೋಟಗಳಿಗೆ ಸಮೃದ್ಧ ಅವಕಾಶವನ್ನು ಮಾಡಿದ್ದಾರೆ.ಇಲ್ಲಿಂದ ಸ್ವಲ್ಪವೇ ದೂರದಲ್ಲಿ ವಯನಾಡ್ ನ ಜಿಲ್ಲೆಯ ರಾಜಧಾನಿ ಕಲ್ಪೆಟ್ಟ ಎಂಬಲ್ಲಿ ನಮ್ಮ ರಾತ್ರಿಯ ವಾಸ್ತವ್ಯ.
ಮರುದಿನ ನವೆಂಬರ್ ೩೦.ಬೆಳಿಗ್ಗೆ ಉಪಾಹಾರದ ನಂತರ ನಂಜನಗೂಡು ನಂಜುಂಡೇಶ್ವರ ದರ್ಶನ ಪೂರೈಸಿ ಶ್ರೀರಂಗಪಟ್ಟಣದ ಶ್ರೀರಂಗ ದರ್ಶನ.ಮಧ್ಯಾಹ್ನದ ಭೋಜನದ ನಂತರ ಬೆಂಗಳೂರು ತಲುಪಿದೆವು.
ಪ್ರಿಯ ರಾಮಚಂದ್ರ,
ReplyDeleteನೀವು ಈ ಯಾತ್ರೆಯನ್ನು ಕೈಗೊಂಡಿದ್ದು ತಿಳಿದಿರಲಿಲ್ಲ.
ಅನಂತಪದ್ಮನಾಭನ ಮತ್ತು ಗುರುವಾಯೂರಪ್ಪನ ಪುಣ್ಯದರ್ಶನ ಗಳಿಸಿ ಕೃತಾರ್ಥರಾದಿರಿ!
ಕಾಲಟಿ ಕ್ಷೇತ್ರದ ಹೆಸರಿನ ಹಿನ್ನೆಲೆ ತಿಳಿದಿರಲಿಲ್ಲ.......
ನಿಮ್ಮೀ ಕಥನ ಮೊದಲ ಕಂತು ಅಲ್ಲ ಎಂದು ತಿಳಿಯುತ್ತೇನೆ. ಹಿಂದಿನ ಕಂತುಗಳಿಗಾಗಿ ಹುಡುಕಾಟ ನಡೆಸುತ್ತೇನೆ.