Skip to main content

ಹಾದಿ ತಪ್ಪಿಸಿದ ದಶರಥ

ಮಿತ್ರ ನಂಜಪ್ಪನವರ ನೆನಪಿನ ಪುಟಗಳು-೧


ಅದೊಂದು ಸಾರ್ವಜನಿಕ ಉದ್ದಿಮೆ.ನಾನು ಕೆಲಸಕ್ಕೆ ಸೇರಿ ಹತ್ತು ವರ್ಷಗಳಾಗಿವೆ. ಹೇಗೇ ಖರ್ಚು ಮಾಡಿದರೂ ಹಣ ಉಳಿತಾಯ ಮಾಡಲಾಗುತ್ತಿಲ್ಲ, ಹೀಗಾದರೆ ಮುಂದೆ ಮನೆ, ಮಕ್ಕಳ ವಿದ್ಯಾಭ್ಯಾಸ ಮಾಡುವುದು ಹೇಗೆ ಎಂಬ ವಿಚಾರ ಮನೆಯಲ್ಲಿ ಹೆಂಡತಿ ಯೊಂದಿಗೆ ನಡೆಯುವ ದಿನನಿತ್ಯದ ಕಡೆಯ ಚರ್ಚೆ.ಹೀಗಿದ್ದಾಗಲೇ ಮನಸ್ಸಿಗೆ  ಬಂದಿದ್ದು  ಚೀಟಿ ಹಾಕುವುದು.  ತಿಂಗಳ ಸಂಬಳದಲ್ಲಿ ಉಳಿತಾಯ ಮಾಡುವ ರೀತಿ ಗಳು ಎಲ್ಐಸಿ, ಎನ್ಎಸ್ಸಿ ಹೀಗೆ ಕೆಲವಾರು ಅವಕಾಶ ವಿದ್ದರೂ  ಕಡಿಮೆ ಅವಧಿಯಲ್ಲಿ ಹೆಚ್ಚು ಹಣ ಕೈಗೆ ಸಿಗಬೇಕಿದ್ದರೆ ಖಾಸಗಿ ವ್ಯಕ್ತಿಗಳು ನಡೆಸುವ ಚೀಟಿ, ದುಬಾರಿಯಾದರೂ ತಟ್ಟನೆ ಸಿಗುವ ಸಾಲ,ನಾವೇ ಬಂಡವಾಳಕ್ಕೆ ಕೊಟ್ಟರೆ ಹೆಚ್ಚು ಬಡ್ಡಿ ದೊರೆಯುವ ವ್ಯವಹಾರಗಳು ಕಷ್ಟದಿಂದ ಪರಿಹಾರ, ಆಸ್ತಿ ಮನೆ ಮಾಡಿಕೊಳ್ಳಲು ಅವಕಾಶ ವಾಗುವ ಮಾರ್ಗ ಗಳಾಗಿದ್ದವು.ಆದ್ದರಿಂದಲೇ ಚೀಟಿ ಎಂಬುದು  ಅಂದು ಜನಜನಿತ ವಾಗಿತ್ತು. ಸರಿಯಾಗಿ ಚೀಟಿ ನಡೆಸುವವರನ್ನು ಹುಡುಕುತ್ತಿದ್ದೆ. 
   ನಮ್ಮ ಕಂಪೆನಿಯಲ್ಲಿ ಒಬ್ಬ  ಬ್ಯಾಂಕರ್ ದಶರಥರಾವ್, ಹೆಸರೇ ಹೇಳುವಂತೆ ಹಲವು ಹತ್ತು ಆರ್ಥಿಕ ವ್ಯವಹಾರ ಮಾಡುತ್ತಿದ್ದ.ಪ್ರತಿ ತಿಂಗಳ ಚೀಟಿ, ಬಡ್ಡಿಗೆ ಹಣ ಪಡೆಯುವ, ಕೊಡುವ, ತಿಂಗಳಿಗೊಮ್ಮೆ ಹಣ ಉಳಿತಾಯ ಮಾಡುವ ಈ ರೀತಿ ಅನೇಕ ವ್ಯವಹಾರ ಗಳನ್ನು ಮಾಡುತ್ತಿದ್ದ.ಕ್ರಮ ಬದ್ದವಾಗಿ ಹಲವಾರು ವರ್ಷಗಳಿಂದ ನಡೆಸಿಕೊಂಡು ಪ್ರಖ್ಯಾತನಾಗಿದ್ದ.  ನಂಬಿಕಸ್ಥ ಎಂದು ಹೆಸರೂ ಮಾಡಿದ್ದ.  ಹಲವು ವರ್ಷಗಳಿಂದ ಅವನ ವ್ಯವಹಾರ ಮತ್ತು ಅವನ ಜನಪ್ರಿಯತೆ ನೋಡಿ  ನಾನೂ ಒಂದು ಲಕ್ಷದ ,೨೫ ತಿಂಗಳ ಚೀಟಿ ಹಾಕಿದೆ. ಕೆಲವು ತಿಂಗಳು ಕಳೆದಿರಬಹುದು,  ನನಗೆ ಬೇರೆ ಕಟ್ಟಡದಲ್ಲಿನ ಇಲಾಖೆಗೆ ವರ್ಗವಾಯಿತು. ನಾನು ಈ ಮೊದಲು ಇದ್ದ ಸ್ಥಳದಿಂದ  ಈ ಜಾಗ ಬಹಳ ದೂರದಲ್ಲಿತ್ತು.ಆದಾಗ್ಯೂ ದಶರಥ ಅಲ್ಲಿಗೇ ಬಂದು ಚೀಟಿ ಹಣ ತೆಗೆದುಕೊಂಡು ಹೋಗುತ್ತಿದ್ದ . ಅವನು ತಪ್ಪದೇ ಬರುವುದು,
     ನಾನು ಪ್ರತಿ ತಿಂಗಳೂ ಹಣ ಕಟ್ಟುತ್ತಿದ್ದುದು ಹೊಸ ಸಹೋದ್ಯೋಗಿ ಗಳ ಗಮನ ಸೆಳೆಯುತ್ತಿತ್ತು.ಅವರಿಗೂ ಆಸೆಯಾಗಿ ನನ್ನಲ್ಲಿ ಅವನ ಬಗ್ಗೆ ಕೇಳಿದರು.ಅವನೂ ಸರಿಯಾದ ವ್ಯವಹಾರಸ್ಥ ಎಂದು ನನ್ನ ಅನುಭವ ತಿಳಿಸಿದೆ. ಅವರೂ ಈ ಚೀಟಿಗೆ ಸದಸ್ಯರಾದರು. ಹೀಗೆ ಹಲವು ತಿಂಗಳು ಕಳೆದವು. ಚೀಟಿ, ಬಡ್ಡಿ ಲೇವಾದೇವಿ ಗಳು  ಎಂದಿನಂತೆ ನಡೆಯುತ್ತಿದ್ಧವು.ಈ ಮಧ್ಯೆ ಹೊಸ ಸುರಕ್ಷಾ ಕಾರಣಗಳಿಂದ ಹೊರಗಿನ ಇಲಾಖೆಯವರಿಗೆ  ನಮ್ಮ ಕೆಲಸದ ಸ್ಥಳಕ್ಕೆ ಬರಲು ಅನುಮತಿ ಇಲ್ಲವಾಯಿತು. ಆದ್ದರಿಂದ ಅವನೂ ಕಂತು ಸಂಗ್ರಹಕ್ಕೆ ಬರಲು ತೊಂದರೆಯಾಯಿತು.ಇದರಿಂದಾಗಿ ನಾನು ಅವನಲ್ಲಿಗೇ ಹೋಗಿ ಹಣ ಕೊಟ್ಟು ಬರುತ್ತಿದ್ದೆ. ಉಳಿದವರಿಗೆ ಹಾಗೆ ಹೋಗಿ ಹಣ ಕೊಟ್ಟು ಬರಲು ತೊಂದರೆ  ಎನಿಸುತ್ತಿತ್ತು. ಆದ್ದರಿಂದ ಹಣ ಕಟ್ಟುವವರು ನೀವು ಹೋದಾಗ ಅವನಿಗೆ ತಮ್ಮಹಣವನ್ನೂ ಕೊಡುವಂತೆ ಕೇಳಿಕೊಂಡರು.ನಾನೂ ಯಾಕಾಗಬಾರದು ಎಂದು  ಒಪ್ಪಿದಾಗ ಎಲ್ಲರೂ ನನ್ನಲ್ಲಿ ಯೇ ಹಣ ಕೊಟ್ಟು ಹೋಗಲು ಪ್ರಾರಂಭಿಸಿದರು.ಈ ಚೀಟಿ ವ್ಯವಹಾರ ಗಳು ಕೇವಲ ನಂಬಿಕೆ ಮೇಲೆ ನಡೆಯುವುದು. ಅದಕ್ಕೇನು ಪಾಸುಬುಕ್ ಏನೂ ಇಲ್ಲ.ಆ ದಶರಥನ ನೋಟ್ ಬುಕ್ ಎಂಟ್ರಿ ಮಾತ್ರ.ಅದೂ ಅವನೇ ಮಾಡಿಕೊಳ್ಳುವುದು.
 ಆಗಲಿ ಎಂದು ನಾನೂ ಧಾರಾಳವಾಗಿ ಒಪ್ಪಿಕೊಂಡೆ. ಅವನಿಗೆ ತಲುಪುವ ಹಣ, ಹೇಳುವ ವಿಷಯಗಳನ್ನು ನನ್ನ ಮೂಲಕ ಕಳುಹಿಸಲು ಪ್ರಾರಂಭಿಸಿದರು.ನನಗೆ ಗೊತ್ತಿಲ್ಲ ದಂತೆ ಹಣ ಕೊಡುವವರು ನಾನೂ ದಶರಥನಿಗೆ  ಸಬ್ಏಜೆಂಟ್ ಎಂದು ಭಾವಿಸುವಂತಾಯಿತು. ಹೀಗೇ ಮೂರು ನಾಲ್ಕು ವರ್ಷಗಳಾಯಿತು. ಇದ್ದಕ್ಕಿದ್ದಂತೆ ಒಂದು ದಿನ  ಕೋಟಿಗಟ್ಟಲೆ ವ್ಯವಹಾರ ಮಾಡುತ್ತಿದ್ದ ಈ ದಶರಥ ಹಠಾತ್ತಾಗಿ ಮಾಯವಾದ.ಕಂಪನಿಯಲ್ಲಿ ‌ಹಣ ಕಟ್ಟುತ್ತಿದ್ದವರು ಸಹಜವಾಗಿ ಗಾಬರಿಯಾದರು.ನನ್ನ ಮೂಲಕ ಹಣ ಕಟ್ಟುತ್ತಿದ್ದವರು ದಶರಥನ ಬಗ್ಗೆ ಕೇಳಲು ಪ್ರಾರಂಭಿಸಿದರು.ನನಗೂ ಅದು ಹೊಸ ವಿಷಯವೇ.ಜೊತೆಗೆ ನನ್ನ ಚೀಟಿಯೂ ಇದ್ದುದರಿಂದ ನಾನೂ ಮನಸ್ಸಿನಲ್ಲಿ ಪರಿತಪಿಸುತ್ತಿದ್ದೆ. ಅವರ ಪ್ರಶ್ನೆಗೆ ಗೊತ್ತಿಲ್ಲವೆಂದರೂ ಅವರು ಒಪ್ಪುತ್ತಿರಲಿಲ್ಲ. ಇತ್ತ ಈ ದಶರಥನೂ ಬರಲಿಲ್ಲ.ಒಂದು ದಿನ ಅವರೆಲ್ಲರೂ ನನ್ನ ಸುತ್ತ ಸೇರಿ ನಂಜಪ್ಪನವರೇ, ನಾವು ನಿಮಗೆ ಹಣ ಕೊಟ್ಟಿದ್ದು. ಒಳ್ಳೆ ಮಾತಿನಿಂದ ನೀನು ನಮ್ಮ ಹಣ ಕೊಡಬೇಕು.ನೀವು ದಶರಥನೊಂದಿಗೆ ಏನು ವ್ಯವಹಾರ ಇಟ್ಟು ಕೊಂಡಿದ್ದೀರೋ ಅದು ನಮಗೆ ಬೇಡ ವಿಷಯ.  ಎಂದಿದ್ದು ನನ್ನನ್ನು ತುಂಬಾ ಇಕ್ಕಟ್ಟಿಗೆ ಸೇರಿಸಿತು.ಆದಾಗ್ಯೂ ನೀವುಗಳು ನಿಮ್ಮ ಲಾಭಕ್ಕಾಗಿ ಚೀಟಿ ಸದಸ್ಯರಾಗಿದ್ದಿರಿ.ನೀವು ಅವನಲ್ಲಿಗೆ ಹೋಗಿ ಹಣ ಕೊಡುವ ಶ್ರಮವನ್ನು ಉಳಿಸಿಕೊಳ್ಳಲು ನನ್ನ ಕೈನಲ್ಲಿ ಹಣ ಕಳುಹಿಸುತ್ತಿದ್ದಿರಿ.ಇನ್ನೂ ನನ್ನಿಂದಲೇ ನಿಮಗೆ ಉಪಕಾರ ವಾಗಿದ್ದರೂ ನನ್ನನ್ನು ಪೀಡಿಸುವುದು ಸರಿಯಲ್ಲ ಎಂದು ಹೇಳಿದೆ ನಾದರೂ ಯಾರೂ ಕೇಳಲಿಲ್ಲ.ಅವರ ಧ್ವನಿಯೂ ಹೆಚ್ಚಾಗಿತ್ತು. ಒಬ್ಬೊಬ್ಬರು ಒಂದೊಂದು ಚುಚ್ಚು ಮಾತನ್ನೂ ಬೆನ್ನು ಹಿಂದೆ ಹೇಳುತ್ತಿದ್ದವರು ಎದುರಿಗೇ ಹೇಳಲು ಶುರು ಮಾಡಿದರು. ಕಂಪೆನಿಯಲ್ಲಿ ಕೆಲಸ ಮಾಡಲಾಗದ ಪರಿಸ್ಥಿತಿ ಯಾಯಿತು.
ಇದರಿಂದಾಗಿ ಕಂಪನಿಗೆ ಹೋಗಲು ಅಂಜಿಕೆಯಾಯಿತು.
ಈ ಯೋಚನೆಯಲ್ಲೇ ಕೆಲಸಕ್ಕೆ ಹೋಗದೆ ಕುಳಿತ ನನ್ನನ್ನು ಕಂಡು ನನ್ನ ಹೆಂಡತಿ  ಎಷ್ಟು ದಿನ ವೆಂದು ಹೀಗೆ ಕುಳಿತು ಕೊಳ್ಳುವಿರಿ.ಚಿಂತೆ ಮಾಡಬೇಡಿ.ಉಳಿಯುವ ಹಣದಲ್ಲೇ ಸಂಸಾರ ಮಾಡೋಣ.ಸ್ವಲ್ಪ ದಿನ ಗಳು ಕಷ್ಟವಾಗುತ್ತದೆ.ಹೇಗೋ ನಿಭಾಯಿಸೋಣ ,ಕೆಲಸ ಬಿಟ್ಟು ಕುಳಿತು ಕೊಳ್ಳುವುದು ಸರಿಯಲ್ಲ. ಎಂದಳು. ಅವಳು ಆಗ ನೀಡಿ ಸಾಂತ್ವನ ಸಮಾಧಾನದ ಸಲಹೆಗಳು   ನನಗೆ ಧೈರ್ಯ ತಂದಿತು. ಕಂಪನಿಗೆ ಮರುದಿನವೇ ಹೋದೆ.
ಆಗಲಿರುವ ಅಪಮಾನಕ್ಕೆ  ಹೆದರಿ ಹಣ ಕೊಡಲು ಒಪ್ಪಿಕೊಂಡೆ.  ನಾನೇ ಹಣವನ್ನು ಕಳೆದು ಕೊಂಡವನು..  ಇದರ ಜೊತೆಗೆ ಇವರಿಗೆಲ್ಲಾ ಹೇಗೆ ಹಣ ಕೊಡಲಿ,ಈ ಚಿಂತೆಯಲ್ಲೇ ಒಟ್ಟು ಹಣದ ಹೊರೆಯನ್ನು ಲೆಕ್ಕ ಹಾಕಿದೆ. ಪ್ರತಿ ತಿಂಗಳೂ ಸಂಬಳವನ್ನು ಅಲ್ಲೇ ಕೊಟ್ಟು ಬರುತ್ತಿದ್ದೆ. ಈ ಸಮಯದಲ್ಲಿ ಯೇ ನನ್ನ ಶ್ರೀಮತಿ ಗೆ ಆಸ್ಪತ್ರೆಗೆ ಹೋಗುವಂಥಾ ಅನಾರೋಗ್ಯವೇರ್ಪಟ್ಟಿತು. ಜೊತೆಗೆ ಮಾನಸಿಕ ನೋವುಗಳು.ತಿಂಗಳ ಸಂಬಳದಲ್ಲಿ  ಖರ್ಚಿನೊಂದಿಗೆ ಸಾಲ ತೀರಿಸಲು ಅಸಾಧ್ಯ ವಾಯಿತು.ಸಾಲಗಾರರ ಕಾಟ ತಾಳಲಾರದೇ     ಪಿಎಫ್ ಎಂಬ ಭವಿಷ್ಯ ದ ನಿಧಿಯನ್ನು ವರ್ತಮಾನದ ಅನಿವಾರ್ಯ ಸಮಸ್ಯೆಗಾಗಿ  ವಾಪಸ್ ಪಡೆದು ಸಾಲ ತೀರಿಸಿದೆ.
ಈ ಸಂದರ್ಭದಲ್ಲಿ ನನ್ನ ಸಹೋದ್ಯೋಗಿ ಮಿತ್ರ ಶೇಷಗಿರಿರಾವ್ ರವರನ್ನು ಅತ್ಯಂತ ಗೌರವದಿಂದ ನೆನಪಿಸಿ ಕೊಳ್ಳುತ್ತೇನೆ. ಮೇಲ್ಕಂಡ ದಶರಥ ಮಾಯವಾದಾಗ ಎಲ್ಲರೂ ಹಣಕ್ಕಾಗಿ ಪೀಡಿಸುತ್ತಿದ್ದರೆ ಈ ಶೇಷಗಿರಿರಾವ್ ಹೇಳಿದ್ದರು, ನಂಜಪ್ಪ ನವರೇ ನಮಗೆ ಅನುಕೂಲ ವಾಗಲಿ ಎಂದು ಚೀಟಿ ಹಾಕಿದೆವು.ನಾವೇ ಚೀಟಿ ಹಣ ಕಟ್ಟುತ್ತಿದ್ದೆವು.ಅದನ್ನು ನಿಮ್ಮ ಮೂಲಕ ಕಳುಹಿಸುತ್ತಿದ್ದೆವು.ಹೀಗಿರುವಾಗ ಆ ದಶರಥ ಇಲ್ಲ ಎಂದು ನಿಮ್ಮನ್ನು ದುಡ್ಡು ಕೇಳುವುದು ನನಗೆ ಸರಿ ಎನಿಸುತ್ತಿಲ್ಲ. ಎಲ್ಲಾ ಸರಿಯಿದ್ದು ನಮಗೆ ಲಾಭವಾಗಿದ್ದರೆ ಅದನ್ನು ನಿಮಗೇನೂ ನಾವು ಕೊಡುತ್ತಿರಲಿಲ್ಲ.ಆದ್ದರಿಂದ ದಯವಿಟ್ಟು ನನಗೆ ನೀವೇನೂ ಕೊಡಬೇಡಿ,ನಾನೂ ತೆಗೆದು ಕೊಳ್ಳುವುದಿಲ್ಲ. ನ್ಯಾಯವಾದ ಹಣವಾಗಿದ್ದರೆ ನನಗೆ ಯಾವುದೋ ದಾರಿಯಿಂದ ದೇವರು ತುಂಬಿಸಿ ಕೊಡುತ್ತಾನೆ ಎಂದು ಹೇಳಿದ್ದಷ್ಟೇ ಅಲ್ಲ,  ನನ್ನಿಂದ ಒಂದು ಪೈಸೆಯನ್ನೂ ಪಡೆಯಲಿಲ್ಲ. ಅವರು ಯಾವಾಗಲೂ ಹೇಳುತ್ತಿದ್ದ ಶ್ರೀ ರಾಘವೇಂದ್ರ ಗುರುಗಳ ಭಕ್ತರಾಗಿ ದ್ದಕ್ಕೂ ಸರಿ ಎಂಬುವಂತೆ ನಡೆದು ಕೊಂಡರು.ಅವರು ಸದಾ ಸ್ಮರಣೀಯರು
ಆದರೂ ಬಹುತೇಕ ಜನಗಳು ತಮ್ಮ ಲಾಭಕ್ಕೆ ಯಾರಿಗೋ ಕೊಟ್ಟು ಕಳೆದು ಕೊಂಡ ನಷ್ಟದ ಹಣವನ್ನು ತುಂಬಿಸಿ ಕೊಟ್ಟು ಸಮಾಜದಲ್ಲಿ  ಮರ್ಯಾದೆ ಉಳಿಸಿ ಕೊಂಡಿದ್ದು ನನ್ನ ಜೀವನದ ದುಃಖದ ಮೈಲಿಗಲ್ಲು. ಈ ಬಗ್ಗೆ ಮಾನಸಿಕವಾಗಿ ಅದೆಷ್ಟು ಆತ್ತಿದ್ದೇನೋ ನನಗೆ ತಿಳಿಯದು.ಇದರಿಂದ ಅಂತೂ ಒಂದು ಪಾಠ ಕಲಿತಿದ್ದೇನೆ.ಯಾವ ಕಾರಣಕ್ಕೂ ಬೇರೆಯವರ ಹಣ ಪಡೆಯಬಾರದು .ಆದರೆ ಈ ಪಾಠಕ್ಕೆ ನಾನು ತೆತ್ತ ಬೆಲೆ ಎಷ್ಟು? ಇದು ಯಾರಿಗೂ ಆಗಬಾರದೆಂದು ದೇವರಲ್ಲಿ ಈಗಲೂ ಪ್ರಾರ್ಥಿಸುವೆ.
ಈ ದಶರಥನ ನಂಬಿ ಉಳಿದವರು ಕೆಟ್ಟರೋ ಉದ್ಧಾರ ವಾದರೋ ತಿಳಿಯದು.ಆದರೆ ನನ್ನ ಸಂಸಾರದ ರಥ ಬಲು ಕಲ್ಲು ಮುಳ್ಳಿನ ಹಾದಿ ತುಳಿದಿದ್ದು ನಿಜ. ಕಾಲೋ ಸರ್ವ ಭಕ್ಷಕಃ ಎಂಬಂತೆ ನಿಧಾನವಾದರೂ ನನ್ನ ಕುಟುಂಬದ ಆರ್ಥಿಕ ಸ್ಥಿತಿ, ಪರಿಸ್ಥಿತಿಗಳು  ತಿಳಿಯಾಯಿತು.ಈ ಹಿಂದೆಯೇ ತಿಳಿಸಿದಂತೆ ನನ್ನ ಹೆಂಡತಿಯು  ಕೊಟ್ಟ ಸಲಹೆ, ಅದರಂತೆ ನೀಡಿದ ಅವಳ ಸಹಕಾರ , ಜಾಣ್ಮೆ ಯ ಉಳಿತಾಯ ಗಳು ಮುಂದಿನ ದಿನಗಳಲ್ಲಿ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ, ಮದುವೆ ಕಾರ್ಯಕ್ರಮ ಗಳು ನಡೆದು ಈಗ ನೆಮ್ಮದಿ ಮತ್ತು ಅನುಕೂಲವಾಗಿದ್ದೇನೆ.ಭವಿಷ್ಯನಿಧಿಯನ್ನು ಅಂದು ಸಾಲ ಮಾಡಿ ಕಳೆದು ಕೊಂಡಿರಬಹುದು.ಆದರೆ ಸೂಕ್ತ ಸಹಕಾರ ಕೊಡುತ್ತ ಅಭ್ಯುದಯದ ಹಾದಿ ಹತ್ತಿಸಿದ ನನ್ನ ಬಾಳ ಮೈತ್ರಿ ಯೇ  ಮುಂದೆ ಭವಿಷ್ಯದ ನಿಧಿಯಾದಳು ಎಂಬುದು ಹೆಮ್ಮೆ ಯಿಂದ ಹೇಳುವ ಸತ್ಯ.
ಬದುಕಿನಲ್ಲಿ ಬಂದ ಹಾದಿಯತ್ತ ಯಾವಾಗಲಾದರೂ ದೃಷ್ಟಿ ಹರಿಸಿದಾಗ ಬೇಡವೆಂದರೂ ಮನಸ್ಸಿಗೆ ಅನಿಸುತ್ತದೆ ,ದಶರಥ  ಹಾದಿ ತಪ್ಪಿಸಿದ್ದ.
(ಮಿತ್ರ ನಂಜಪ್ಪನವರ ಅನುಮತಿ ಪಡೆದು ಬರೆದು ಪ್ರಕಾಶಿಸಿದ ಲೇಖನ)

Comments

Popular posts from this blog

ಆರೋಗ್ಯ ಕವಚ

ಮನುಷ್ಯ ತಾನು ಸುಖವಾಗಿರಲು ದುಡಿಯುತ್ತಾನೆ. ಹಣ ಕೂಡಿಡುತ್ತಾನೆ. ಆಸ್ತಿ ಗಳಿಸುತ್ತಾನೆ. ತಾನು ಮತ್ತು ತನ್ನ ಪ್ರೀತಿಯ ಕುಟುಂಬವನ್ನು ಸುಖವಾಗಿಡುವ ಕನಸುಗಳು ಸದಾ ನಡೆಯುತ್ತಲೇ ಇರುತ್ತವೆ. ಈ ಕನಸಿನ ಮಾರ್ಗದಲ್ಲಿ ಆಕಸ್ಮಿಕವಾಗಿ ಅವನ ದೇಹಕ್ಕೆ ದೊಡ್ಡ ಅನಾರೋಗ್ಯವೇನಾದರೂ ಎದುರಾದರೆ ಬಹಳ ಕಷ್ಟವಾಗುತ್ತದೆ. ಸುಧಾರಿಸಿಕೊಳ್ಳಲು ಸಾಧ್ಯವಾಗದಂತೆ ಗಳಿಸಿದ್ದೆಲ್ಲವೂ ನೀರಿನಂತೆ ಕರಗಿ ಹೋಗುತ್ತದೆ. ಇದರಿಂದ ಜೀವನದಲ್ಲಿ ಹಾಕಿಕೊಂಡ ಗುರಿಯನ್ನು ಸಾಧಿಸಲಾಗುವುದಿಲ್ಲ. ಇಂತಹ ಪರಿಸ್ಥಿತಿಯನ್ನು ಆರ್ಥಿಕವಾಗಿ ಸಮರ್ಥವಾಗಿ ಎದುರಿಸಲು ಬೇಕಾಗಿರುವುದು ಆರೋಗ್ಯ ವಿಮೆ. ಇದನ್ನು ಹೆಲ್ತ್ ಇನ್ಶುರೆನ್ಸ್ ( Heath Insurance) ಅಥವಾ ಮೆಡಿಕಲ್ ಇನ್ಸೂರೆನ್ಸ್ (Medical Insurance) ಎಂದೂ ಹೇಳಲಾಗುತ್ತದೆ. ಇದು ಆರೋಗ್ಯ ರಕ್ಷಣೆಗಾಗಿ ಎಂದೇ ಪಡೆದರೂ ಮುಂದಿನ ನಮ್ಮ ಜೀವನಕ್ಕಾಗಿ, ಪರೋಕ್ಷವಾಗಿ ಕೂಡಿಟ್ಟಿರುವ ಆಸ್ತಿಯನ್ನು ರಕ್ಷಣೆ ಮಾಡುತ್ತದೆ. ಈ ಬಗ್ಗೆ ತಿಳಿದುಕೊಳ್ಳಬೇಕಾದ ವಿಷಯಗಳು ಬಹಳ ಅನಿವಾರ್ಯ. ಇವೆಲ್ಲವನ್ನೂ ಸವಿಸ್ತಾರವಾಗಿ ತಿಳಿಸಿ ಹೇಳುವ ಪ್ರಯತ್ನವೇ ಈ ಲೇಖನ. ಆರೋಗ್ಯ ವಿಮೆ ಎಂದರೇನು? ನಾವು ಸದಾ ಆರೋಗ್ಯದಿಂದ ಇರಬೇಕೆಂದು ಬಯಸುವೆವಾದರೂ "ಮನುಷ್ಯ ಎಂದಮೇಲೆ ಏನಾದರೂ ಕಾಯಿಲೆ ಇದ್ದೇ ಇರುತ್ತದೆ" ಎಂಬಂತೆ ಹಲವು ಸಾರಿ ತಲೆನೋವು, ಜ್ವರ, ನೆಗಡಿ ಮೈ ಕೈ ನೋವು ಎಂದು ನರಳುತ್ತೇವೆ. ಚಿಕೂನ್ ಗುನ್ಯಾ, ಡೆಂಗ್ಯೂ, ಕೊರೋನಾ ಇತ್ಯಾದಿ ಕಾಯಿಲೆಗಳ...

ಮಿತ್ರನೊಬ್ಬನ ಆತ್ಮಾವಲೋಕನ

ಮಿತ್ರ ಶಂಕರ ಒಮ್ಮೆ ಹೇಳಿದ್ದ, ಕೇಳಿ ಹಳತಾದರೂ ಓದುಗರಿಗೆ ಹೊಸತಾಗಿ, ಆತ್ಮೊನ್ನತಿಗೆ ಸಹಾಯ ವೆನಿಸುವ, ಆತ್ಮಾವಲೋಕನದ ಸಾಲುಗಳು ನಿಜವಾಗಿಯೂ ಕುತೂಹಲಕಾರಿಯಾಗಿದೆ. ಅದನ್ನು ಅವನಿಂದಲೇ ಕೇಳಿ: ಕಛೇರಿಯಲ್ಲಿ ವಿಶೇಷವಾದ ಕೆಲಸವೊಂದನ್ನು ನಿರೀಕ್ಷೆಗಿಂತ ಮೊದಲೇ ಯಶಸ್ವಿಯಾಗಿ ಪೂರೈಸಿದ್ದರಿಂದ ತುಂಬಾ ಸಂತೋಷವಾಗಿತ್ತು. ಆದ್ದರಿಂದ ಮನೆಗೆ ಸ್ವಲ್ಪ ಬೇಗನೆ ಬಂದಿದ್ದೆ. ಪ್ರತಿದಿನ ಯಾಕೆ ಲೇಟು ಎಂಬ ಮುಖವನ್ನು ಮಾಡುತ್ತಿದ್ದ ಮಡದಿ ಪ್ರೇಮ ಕೊಟ್ಟ ಒಂದು ಬಿಸಿಯಾದ ಸ್ಟ್ರಾಂಗ್ ಕಾಫಿ ಕುಡಿದು ನಿಧಾನವಾಗಿ ಸೋಫಾದ ಮೇಲೆ ಕಾಲು ಚಾಚುತ್ತಿದ್ದಂತೆಯೇ ನಿದ್ರಾ ದೇವಿಗೆ ವಶನಾಗಿ ಕೆಲವು ಸಮಯವಾಗಿರಬಹುದು. ಕೆಲವೇ ನಿಮಿಷಗಳಲ್ಲಿ ನಿದ್ದೆ ಬಂದಿತ್ತಾದರೂ ತಾಳಲಾರೆನೆಂಬ ಎದೆನೋವು, ಇದ್ದಕ್ಕಿದ್ದಂತೆ ಉಸಿರುಗಟ್ಟಿಸುವಂತಹ ಅನುಭವ. ಏನು ಗೊತ್ತಾಗುತ್ತಿಲ್ಲ. ಕೆಲವೇ ನಿಮಿಷಗಳಲ್ಲಿ ಗಾಬರಿಯಿಂದ ಪ್ರೇಮಾ, ಮಗಳು - ಅಳಿಯನನ್ನು ಕರೆಯುತ್ತಿದ್ದಾಳೆ. ಕಾಲು ಕೈ ಎದೆ ಭಾಗಗಳನ್ನು ಹಿತವಾಗಿ ಯಾರೋ ತಡವುತ್ತಿದ್ದಾರೇನೋ. ಹಾಗೆಯೇ ನನ್ನನ್ನು ಎತ್ತಿದಂತಹ ಅನುಭವ. ಎಲ್ಲಿಗೋ ಕರೆದುಕೊಂಡು ಹೋಗುತ್ತಿರಬಹುದು. ಯಾವುದೋ ವಾಹನದ ಸದ್ದು. ನನ್ನ ಕೈಗಳನ್ನು ಯಾರೋ ಎತ್ತುತ್ತಿದ್ದಾರೆ, ಏನಾಗುತ್ತಿದೆ? ಹೊಸತರದ ಹಾಸಿಗೆ. ಮೂಗು ಬಾಯಿಗೆ ಏನೋ ತಡೆ. ಸಣ್ಣದಾಗಿ ಬಿಟ್ಟು ಬಿಟ್ಟು ಕೇಳುವ ಏಕತಾನದ ಸದ್ದು. ಹಠಾತ್ತಾಗಿ ನಿಶ್ಯಬ್ದ. ನೀರವ ವಾತಾವರಣ. ಈಗ ನನಗೆ ನೋವು ಇದೆಯೇ. ಟಿವಿಯಲ್ಲಿ ಯಾವುದೋ ಕ...

ಬಾಳ ರೂಪಿಸಿದ ವಿಮೆ

ನಾವು ಸಮಾಜದಲ್ಲಿ ನಮಗಾಗಿ ನಾವು ಅನೇಕ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದೇವೆ. ಅದನ್ನು ಒದಗಿಸಲು ಅದರದೇ ಆದ ಸಂಸ್ಥೆ ಹಾಗೂ ಸೇವಾ ಸಿಬ್ಬಂದಿಗಳಿದ್ದಾರೆ. ಇವು ನಮ್ಮ ಬದುಕು ಸುಗಮವಾಗಲು ಸಹಾಯಕವಾಗಿ ವೆ . ಇವಲ್ಲದೆ  ಜೀವನದಲ್ಲಿ ನಮ್ಮ ಉನ್ನತಿಗೆ ಬಂಧುಮಿತ್ರರ ಪಾತ್ರ ತೀರಾ ಸಾಮಾನ್ಯ. ಆದರೆ ಸಂಸ್ಥೆಯೊಂದು ಕೊಡುವ ಸೇವೆಯೇ ಒಬ್ಬರ ಬದುಕನ್ನು ರೂಪಿಸಿಕೊಳ್ಳಲು ಅವಕಾಶವಾದ  ಘಟನೆಯ ಸ್ಮರಣೆಯೇ ಈ ಕಥೆಯ ಜೀವಾಳ. ಈ ಬೆಳಿಗ್ಗೆ ಬೆಂಗಳೂರಿನಿಂದ ಲಂಡನ್ ವರೆಗಿನ ಆಕಾಶ ಪಯಣ. ಇದಕ್ಕಾಗಿ ನಿನ್ನೆಯಿಂದಲೇ ನಿದ್ದೆ ಇಲ್ಲ. ರಾತ್ರಿ ಪೂರ್ತಿ ವಿಮಾನ ನಿಲ್ದಾಣದಲ್ಲಿ ಸಮಯ ಕಳೆದೆವು. ಲಂಡನ್ನಿನ ಸಮಯದಂತೆ ಮಧ್ಯಾಹ್ನವೇ ಬಂದೆವು. ಅಮೇರಿಕಾಕ್ಕೆ ಹೋಗುವ ವಿಮಾನ ಸಂಜೆ ಐದು ಗಂಟೆಗೆ. ಆದ್ದರಿಂದ ಕಾಯಲೇಬೇಕು. ವಿಮಾನ ನಿಲ್ದಾಣದಲ್ಲಿ ಆಯಾಸದಿಂದ ನಿದ್ದೆ ಬರುತ್ತಿದ್ದರೂ ಎಚ್ಚರವಾಗದಷ್ಟು ನಿದ್ದೆ ಬಂದು ಮುಂದಿನ ವಿಮಾನ ತಪ್ಪಿ ಹೋದರೆ ಎಂಬ ಭಯದಿಂದ ಕಣ್ಣು ಮುಚ್ಚಲಿಲ್ಲ. ಈಗ ಅಮೇರಿಕಾದ ವಾಶಿಂಗ್ಟನ್ಗೆ ಹೋಗುವ ವಿಮಾನದಲ್ಲಿ ಕುಳಿತಿದ್ದೇನೆ. ಪಕ್ಕದಲ್ಲಿ ಕುಳಿತ ನಮ್ಮವರಿಗೆ ಗಾಢ ನಿದ್ರೆ. ವಿಮಾನ ಪ್ರಯಾಣವೇನೋ ಹೆಮ್ಮೆಯ ವಿಷಯವೇ. ಆದರೆ ಇದೇ ಮೊದಲ ಪ್ರಯಾಣವಾದ್ದರಿಂದ ಏನೋ ಆತಂಕ, ಸಂತೋಷ, ದುಗುಡ ಜೊತೆಗೆ ಸಡಗರ. ಸುತ್ತ ನೋಡುತ್ತಾ ನನ್ನ ಬಗ್ಗೆ ನಾನು ಯೋಚಿಸುತ್ತಿದ್ದೇನೆ. ನಾನು ಎಲ್ಲಿದ್ದೇನೆ. ಎಲ್ಲಿಗೆ ಬಂದೆ. ಇರುವನೊಬ್ಬ ಮಗ ಆನಂದನೇ ನಮಗೆ ಸರ್ವಸ್ವ. ಆದ್ದ...