ಗುರು ಪೂರ್ಣಿಮೆ ಅಥವಾ ವ್ಯಾಸ ಪೂರ್ಣಿಮೆ ಎನ್ನುವುದು ಗುರುಗಳನ್ನು ಸ್ಮರಿಸಲು ಮತ್ತು ಅವರ ಆಶೀರ್ವಾದ ಪಡೆಯಲು ಇರುವ ಪ್ರತ್ಯೇಕ ವಾರ್ಷಿಕ ಅವಕಾಶ. ಶ್ರೀ ಗುರುವಿನ ಆಶೀರ್ವಾದಗಳು ಇದ್ದ ವ್ಯಕ್ತಿಯು ಜೀವನದಲ್ಲಿ ಅತ್ಯಂತ ಉತ್ತಮ ಸ್ಥಾನವನ್ನು ಪಡೆದುಕೊಳ್ಳುತ್ತಾನೆ ಎಂಬುದು ನಮ್ಮ ಅಪಾರ ನಂಬಿಕೆಯಾಗಿದೆ. ಗುರು ಎನ್ನುವ ಎರಡು ಪದಗಳೇ ಅತ್ಯುತ್ತಮ ಅರ್ಥವನ್ನು ನೀಡುತ್ತವೆ. "ಗು" ಮತ್ತು "ರು" ಎನ್ನುವ ಮೂಲ ಪದಗಳನ್ನು ಹೊಂದಿದೆ. ಸಂಸ್ಕೃತ ಭಾಷೆಯಲ್ಲಿ "ಗು" ಅಂದರೆ ಅಂಧಕಾರ ಅಥವಾ ಅಜ್ಞಾನ. "ರು" ಅಂದರೆ ಕಳೆಯುವ ಅಥವಾ ದೂರ ಮಾಡುವ ಎಂದರ್ಥ. ಅಂದರೆ ಗುರು ಅಂದರೆ ಅಂಧಕಾರ ಅಥವಾ ಅಜ್ಞಾನವನ್ನು ದೂರ ಮಾಡುವವರು ಎಂದರ್ಥ. ಬಹುತೇಕ ಜನರು ಗುರುವನ್ನು ತಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಪರಿಗಣಿಸುತ್ತಾರೆ. ನಮ್ಮ ಬುದ್ಧಿಯಲ್ಲಿ ಇದ್ದ ಕತ್ತಲು ಅಥವಾ ಅಜ್ಞಾನವನ್ನು ಓಡಿಸಿ, ಜ್ಞಾನ ಎನ್ನುವ ಬೆಳಕನ್ನು ನೀಡುವವನೇ ಗುರು. ಅಂತಹ ಗುರುವಿಗೆ ಗುಲಾಮನಾದರೆ ಸಾಕಷ್ಟು ವಿದ್ಯೆ ಮತ್ತು ಜ್ಞಾನ ದೊರೆಯುವುದು. ಜೀವನದಲ್ಲಿ ಉತ್ತಮ ಸ್ಥಾನವನ್ನು ಪಡೆದುಕೊಳ್ಳಲು ಸಾಧ್ಯವಾಗುವುದು ಎಂದು ಹೇಳಲಾಗುತ್ತದೆ. ಸಂಕ್ಷಿಪ್ತವಾಗಿ ಹೇಳುವುದಾದರೆ ನಮ್ಮ ಜೀವನದ ಪ್ರಥಮ ಗುರುವಾದ ತಾಯಿಯು ನಡೆದಾಡಲು ಶುದ್ಧವಾಗಿರಲು, ಊಟ ಮಾಡಲು ಇತ್ಯಾದಿಗಳನ್ನು ಕಲಿಸಿದರೆ ತಂದೆಯು ಜನರೊಂದಿಗೆ ನಡೆದುಕೊಳ್ಳುವ ರೀತಿ, ವಿದ್ಯಾಭ್ಯಾಸ, ಸರಿ-ತಪ್ಪುಗಳನ್ನು ಗುರುತಿಸುವ ಮಾರ್ಗವನ್ನು ಕೊಡುವನು. ಹೆಚ್ಚಿನ ಜ್ಞಾನಕ್ಕಾಗಿ ಗುರುವನ್ನು ತೋರಿಸುವನು. ಗುರುವು ವಿವಿಧ ವಿಷಯಗಳ ಆಳವಾದ ಅಧ್ಯಯನಗಳನ್ನು ವಿಶಿಷ್ಟವಾಗಿ ಮಾಡುವ ಬಗೆ, ಜೀವನ ನಡೆಸಲು ಅಗತ್ಯವಾದ ಲೋಕಜ್ಞಾನವನ್ನು ಕೊಟ್ಟು ವಿದ್ಯಾವಂತನನ್ನಾಗಿ ಮಾಡಿ ಉತ್ತಮ ಜೀವನ ಪಡೆಯಲು ಅವಕಾಶ ಮಾಡುವನು. ಎಲ್ಲ ಗುರುಗಳೂ ತಮ್ಮ ಶಿಷ್ಯರ ಮಾನಸಿಕ ಅಭಿವೃದ್ಧಿ, ಅವರ ಉತ್ತಮ ಜೀವನ ಮಾರ್ಗದ ಪಾಲನೆ ಗಳಿಂದ ಮಾತ್ರವೇ ಸಂಪೂರ್ಣವಾಗಿ ತೃಪ್ತಿಯನ್ನು ಅಪೇಕ್ಷಿಸುತ್ತಾರೆ. ಅವರ ಆಶಯಗಳನ್ನು ಪ್ರಾಮಾಣಿಕವಾಗಿ ನಂಬಿ ನಡೆದರೆ ಅದು ಮೋಕ್ಷಕ್ಕೂ ದಾರಿಯಾಗುವುದು. ಇಂತಹ ಗುರುಗಳ ಸ್ಮರಣೆಗಾಗಿ ಆಚರಿಸುತ್ತಿರುವ ಶ್ರೀಗುರು ಪೂರ್ಣಿಮಾ ಶ್ರದ್ಧಾ ಪೂರ್ವಕವಾಗಿ ಆಚರಣೆಯಾಗಲಿ, ಗುರುಗಳಿಂದ ಸಮಸ್ತ ಶಿಷ್ಯ ವರ್ಗಕ್ಕೂ ಆಶೀರ್ವಾದ ದೊರೆಯಲಿ ಎಂದು ಆಶಿಸೋಣ.
ಮನುಷ್ಯ ತಾನು ಸುಖವಾಗಿರಲು ದುಡಿಯುತ್ತಾನೆ. ಹಣ ಕೂಡಿಡುತ್ತಾನೆ. ಆಸ್ತಿ ಗಳಿಸುತ್ತಾನೆ. ತಾನು ಮತ್ತು ತನ್ನ ಪ್ರೀತಿಯ ಕುಟುಂಬವನ್ನು ಸುಖವಾಗಿಡುವ ಕನಸುಗಳು ಸದಾ ನಡೆಯುತ್ತಲೇ ಇರುತ್ತವೆ. ಈ ಕನಸಿನ ಮಾರ್ಗದಲ್ಲಿ ಆಕಸ್ಮಿಕವಾಗಿ ಅವನ ದೇಹಕ್ಕೆ ದೊಡ್ಡ ಅನಾರೋಗ್ಯವೇನಾದರೂ ಎದುರಾದರೆ ಬಹಳ ಕಷ್ಟವಾಗುತ್ತದೆ. ಸುಧಾರಿಸಿಕೊಳ್ಳಲು ಸಾಧ್ಯವಾಗದಂತೆ ಗಳಿಸಿದ್ದೆಲ್ಲವೂ ನೀರಿನಂತೆ ಕರಗಿ ಹೋಗುತ್ತದೆ. ಇದರಿಂದ ಜೀವನದಲ್ಲಿ ಹಾಕಿಕೊಂಡ ಗುರಿಯನ್ನು ಸಾಧಿಸಲಾಗುವುದಿಲ್ಲ. ಇಂತಹ ಪರಿಸ್ಥಿತಿಯನ್ನು ಆರ್ಥಿಕವಾಗಿ ಸಮರ್ಥವಾಗಿ ಎದುರಿಸಲು ಬೇಕಾಗಿರುವುದು ಆರೋಗ್ಯ ವಿಮೆ. ಇದನ್ನು ಹೆಲ್ತ್ ಇನ್ಶುರೆನ್ಸ್ ( Heath Insurance) ಅಥವಾ ಮೆಡಿಕಲ್ ಇನ್ಸೂರೆನ್ಸ್ (Medical Insurance) ಎಂದೂ ಹೇಳಲಾಗುತ್ತದೆ. ಇದು ಆರೋಗ್ಯ ರಕ್ಷಣೆಗಾಗಿ ಎಂದೇ ಪಡೆದರೂ ಮುಂದಿನ ನಮ್ಮ ಜೀವನಕ್ಕಾಗಿ, ಪರೋಕ್ಷವಾಗಿ ಕೂಡಿಟ್ಟಿರುವ ಆಸ್ತಿಯನ್ನು ರಕ್ಷಣೆ ಮಾಡುತ್ತದೆ. ಈ ಬಗ್ಗೆ ತಿಳಿದುಕೊಳ್ಳಬೇಕಾದ ವಿಷಯಗಳು ಬಹಳ ಅನಿವಾರ್ಯ. ಇವೆಲ್ಲವನ್ನೂ ಸವಿಸ್ತಾರವಾಗಿ ತಿಳಿಸಿ ಹೇಳುವ ಪ್ರಯತ್ನವೇ ಈ ಲೇಖನ. ಆರೋಗ್ಯ ವಿಮೆ ಎಂದರೇನು? ನಾವು ಸದಾ ಆರೋಗ್ಯದಿಂದ ಇರಬೇಕೆಂದು ಬಯಸುವೆವಾದರೂ "ಮನುಷ್ಯ ಎಂದಮೇಲೆ ಏನಾದರೂ ಕಾಯಿಲೆ ಇದ್ದೇ ಇರುತ್ತದೆ" ಎಂಬಂತೆ ಹಲವು ಸಾರಿ ತಲೆನೋವು, ಜ್ವರ, ನೆಗಡಿ ಮೈ ಕೈ ನೋವು ಎಂದು ನರಳುತ್ತೇವೆ. ಚಿಕೂನ್ ಗುನ್ಯಾ, ಡೆಂಗ್ಯೂ, ಕೊರೋನಾ ಇತ್ಯಾದಿ ಕಾಯಿಲೆಗಳ...
ನಮ್ಮ ರಾಷ್ಟ್ರಪತಿಗಳಾಗಿದ್ದ ಡಾI ರಾಧಾಕೃಷ್ಣನ್ ರವರ ಹುಟ್ಟಿದದಿನವನ್ನ "ಟೀಚರ್ಸ್ ಡೇ" ಎಂದು ಆಚರಿಸುವಂತೆ, ಅಪೌರುಷೇಯ ವೇದಗಳನ್ನು ಕ್ರಮಬದ್ಧವಾಗಿ ಜೋಡಿಸಿ, ಅರ್ಥೈಸಿ - ಆಚರಿಸಲು ಅನುಕೂಲವಾಗುವಂತೆ 4 ವೇದಗಳಾಗಿ ವಿಂಗಡಿಸಿದ್ದಲ್ಲದೆ, ಅನೇಕ ಉಪನಿಷತ್ತುಗಳ ಸಾರವನ್ನು ಭಗವದ್ಗೀತೆಯ ಮೂಲಕ ತಿಳಿಸಿಕೊಟ್ಟ ಮಹನೀಯರ ಜನ್ಮದಿನವ ಗುರುಪೂರ್ಣಿಮೆಯೆಂದು, ನಮ್ಮ ಗುರುಗಳ ಸ್ಮರಿಸಿ - ಪೂಜಿಸುವ ಪವಿತ್ರ/ಶುಭದಿನ.
ReplyDelete