ಅಮೇರಿಕಾ-ನಾ ಕಂಡ ವಿಶೇಷಗಳು ಮುಂದುವರಿದ ಭಾಗ.
ಸ್ವಯಂ ಸೇವಾ
ಪೆಟ್ರೋಲ್ ಬಂಕಿಗೆ ಹೋಗಿ ನಿಮ್ಮ ಕಾರಿಗೆ ನೀವೇ ಪೆಟ್ರೋಲ್ ತುಂಬಿಕೊಳ್ಳಬೇಕು, ಸಾರ್ವಜನಿಕ ಸೇವೆಗೆ ಖರ್ಚು ಮಾಡಿ ಕೊಳ್ಳಲು ನಿಮ್ಮ ಸೇವಾಕಾರ್ಡಿಗೆ ನೀವೇ ಹಣ (ರೀಚಾರ್ಜ್) ತುಂಬಿಕೊಳ್ಳಬೇಕು.ನಿಮಗೆ ಬೇಕಾದ ಪಾದರಕ್ಷೆಯನ್ನು ನೀವೇ ಆಯ್ಕೆ ಮಾಡಿ ಕೊಂಡು ಹಣ ನೀಡಬೇಕು.ಅಂಚೆ ಸೇವೆಯೂ ಸ್ವಸಹಾಯ ಪದ್ಧತಿಯೇ. ಇಲ್ಲಿರುವಂತೆ ಎಲ್ಲಾ ಕಡೆ ಜೆರಾಕ್ಸ್ ಬ್ರೌಸಿಂಗ್ ಕೇಂದ್ರಗಳಿಲ್ಲ.ಕೊರಿಯರ್, ಜೆರಾಕ್ಸ್ ಪ್ರತಿ,ಅಥವಾ ಪ್ರಿಂಟ್ ಔಟ್ ಪಡೆಯಲು ಎಲ್ಲೋ ಒಂದೊಂದೇ ಇರುವ ಅವುಗಳ ಕೇಂದ್ರಗಳಿಗೆ ಹೋಗಬೇಕು.
ಅಂಗಡಿಗಳು
ವಾಲ್ ಮಾರ್ಟ್ ಸೂಪರ್ ಮಾರ್ಕೆಟ್ ಅಥವಾ ೭/೧೧ ಇತ್ಯಾದಿ ಮಾಲ್ ಗಳಿಗೆ ಹೋಗಿಯೇ ಬೇಕಾದ ವಸ್ತುಗಳನ್ನು ತರಬೇಕು.ಅವುಗಳೋ, ಕ್ರಿಕೆಟ್ ಮೈದಾನದ ಅಳತೆಯವು.ಅಲ್ಲಿಗೆ ನಾವೇ ಹೋಗಿ ಬೇಕಾದುದನ್ನು ಆರಿಸಿಕೊಂಡು ಬರಬೇಕು.ಮನೆಗೆ ಬೇಕಾದ ಆಹಾರ ಸಾಮಗ್ರಿ ಗಳು, ಪಾತ್ರೆ ಪಡುಗಗಳು, ಬಟ್ಟೆ ಗಳು, ತರಕಾರಿಗಳು, ಹಾಲು, ಮೊಸರು, ಎಲೆಕ್ಟ್ರಾನಿಕ್ ಉಪಕರಣಗಳು, ಎಲೆಕ್ಟ್ರಿಕಲ್ ಉಪಕರಣಗಳು,ಇತ್ಯಾದಿ.. ಹೀಗೆ ಏನು ಬೇಕಾದರೂ ಅಲ್ಲಿಗೇ ಹೋಗಬೇಕು. ಅವುಗಳೋ ಬಹಳಷ್ಟು ದೂರದಲ್ಲಿರುವುವವೇ. ಖರ್ಚಿಲ್ಲದೆ ಹೋಗಲಾಗುವುದಿಲ್ಲ.ಅಲ್ಲಿ ಆಯ್ಕೆ ಮಾಡಿದ ವಸ್ತುಗಳನ್ನು ತೋರಿಸಿ ಹಣ ಪಾವತಿ ಮಾಡಬೇಕು.ಅಲ್ಲಿಯೂ ನಾವೇ ಸ್ವಯಂ ಬಿಲ್ ಮಾಡಿಕೊಂಡು ಪಾವತಿಯನ್ನು ಮಾಡಬಹುದು.ಏನೇ ಇರಲಿ, ಬೇಕಾದ ವಸ್ತುಗಳನ್ನು ಸಂಗ್ರಹಿಸಿ ಕ್ಯಾಶ್ ಕೌಂಟರ್ ಗೆ ಬರೋ ಹೊತ್ತಿಗೆ ಕಾಲೆಲ್ಲಾ ನೋವು ಬಂದಿರುತ್ತದೆ.ಕುಳಿತು ಕೊಳ್ಳೋಕೇನೂ ಅನುಕೂಲ ಇರುವುದಿಲ್ಲ.
ನಮ್ಮಲ್ಲಿದ್ದಂತೆ ಗಲ್ಲಿಗಲ್ಲಿಗಳಲ್ಲಿ ಅಂಗಡಿಗಳಿಲ್ಲ.ಒಂದು ಬೆಂಕಿ ಪಟ್ಟಣ ತರಲೂ ಮೇಲ್ಕಂಡ ಬೃಹತ್ ಅಂಗಡಿ ಗಳಿಗೆ ಹೋಗಬೇಕು.
ಇನ್ನು ಈ ಮಾಲ್ ಗಳಲ್ಲೋ ನಮಗೆ ಬೇಕಾದಂತೆ ಸಣ್ಣ ಸಣ್ಣ ಪ್ರಮಾಣದಲ್ಲಿ ವಸ್ತು ಗಳು ಸಿಗುವುದಿಲ್ಲ.ಹೆಚ್ಚಿನ ಪ್ರಮಾಣದಲ್ಲಿ ತರುವುದು ಕಡ್ಡಾಯ.
ಒಂದು ರೀತಿಯಲ್ಲಿ ಹೇಳುವುದಾದರೆ ಪದೇಪದೇ ಮಾಲ್ ಗಳಿಗೆ ಹೋಗಲು ಸಾಧ್ಯವಿಲ್ಲ ವಾದ್ದರಿಂದ ಹೀಗಿರಬಹುದೇನೋ.ಹೋಲ್ ಸೇಲ್, ಡಿಸ್ಕೌಂಟ್ ಸೇಲ್ ಎಂದು ವರ್ಷದಲ್ಲಿ ಹಲವು ಬಾರಿ ನಡೆಯುತ್ತದೆ. ಅದಕ್ಕೆ ಹಗಲಿರುಳೆನ್ನದೆ ಸರತಿ ಸಾಲಿನಲ್ಲಿ ನಿಂತು ಖರೀದಿ ಮಾಡುವವರೂ ಇದ್ದಾರೆ.
ದುಬಾರಿ ಕಟಿಂಗ್
ಕೇಶಮುಂಡನ, ಶೇವಿಂಗ್ ಗಳು ದುಬಾರಿ ವ್ಯವಹಾರ.ಕೇಶಮುಂಡನ ಕನಿಷ್ಠ ೧೫ಡಾಲರ್. ಅದಕ್ಕೂ ಅಪಾಯಿಂಟ್ಮೆಂಟ್ ಪಡೆದು ಹೋಗಬೇಕು.ಬಹುತೇಕ ಈ ಕೆಲಸ ಮಾಡುವವರು ಲಲನೆಯರೇ.ನಮ್ಮಲ್ಲಿ ಈ ಕೇಶಮುಂಡನಕ್ಕೆ ಸಿಂಹಾಸನವೇ ಇರುತ್ತದೆ.ಅಲ್ಲಿಯ ಖುರ್ಚಿ ಗಳು ದೇವರಿಗೇ ಪ್ರೀತಿ.ಒಳ್ಳೆ ಅನುಕೂಲಕರ ಕನ್ನಡಿ ಇಲ್ಲ. ಮುಂಡನದ ನಂತರ ತಲೆಯ ಹಿಂಭಾಗ ನೋಡಿಕೊಳ್ಳಲು ನಾಪಿತರು ಮತ್ತೊಂದು ಸಣ್ಣ ಕನ್ನಡಿಯನ್ನು ಹಿಂಭಾಗದಲ್ಲಿ ಹಿಡಿದು ತೋರಿಸುತ್ತಾರೆ.ಇದು ನಮ್ಮಲ್ಲಿ ಹಲವು ದಶಕಗಳ ಹಿಂದೆ ಇತ್ತು. ದುಬಾರಿ ಬೆಲೆಗಳ ಕಾರಣದಿಂದ ಹೆಚ್ಚಿನ ಗಂಡಸರು ಸ್ವಯಂ ಶೇವಿಂಗ್ ಮಾಡಿಕೊಳ್ಳುವ ರಾಗಿದ್ದಾರೆ. ಮುಖದಲ್ಲಿ ಮೀಸೆ ಇಲ್ಲ.ಎಲೆಕ್ಟ್ರಾನಿಕ್ ಶೇವಿಂಗ್ ಮಿಶನ್ ತಲೆ ಕೆನ್ನೆ,ಗಡ್ಡ ಎನ್ನದೆ ಎಲ್ಲಾ ಇಟ್ಟ ಅಳತೆಗೆ ಬೋಳಿಸಿಕೊಂಡು ಹೋಗುತ್ತದೆ.
ಹೋಟೇಲ್
ಹೋಟೇಲ್ ಗೆ ನಮ್ಮಲ್ಲಿರುವಂತೆ ನೇರವಾಗಿ ನುಗ್ಗಿ ಏನು ತಿಂಡಿ,ಬಿಸೀ ಏನಿದೆ ಎಂದು ಕೇಳುವಂತಿಲ್ಲ.ಅಲ್ಲಿ ಹೋಟೆಲ್ ನ ಬಾಗಿಲಿಗೆ ಹೋಗಿ ನಿಲ್ಲಬೇಕು.ಕೆಲವೇ ಸೆಕೆಂಡ್ ಗಳಲ್ಲಿ ಹೋಟೇಲ್ ನಲ್ಲಿ ಕುಳಿತು ಕೊಳ್ಳಲು ಸ್ಥಳವಿದ್ದರೆ ಅಲ್ಲಿಯ ನೌಕರ ಹೊರಬರುತ್ತಾನೆ ಸ್ಥಳವಿದ್ದರೆ ಭೋಜನ ಶಾಲೆ ಗೆ ಕರೆದೊಯ್ಯವನು, ಇಲ್ಲವೇ ಕಾಯುವ ಜಾಗದಲ್ಲಿ ಕೂಡಿಸುವನು.ಒಮ್ಮೆ ಭೋಜನ ಶಾಲೆಯಲ್ಲಿ ಕೂಡಿಸಿದನೆಂದರೆ ನಿಮ್ಮ ಊಟೋಪಚಾರಕ್ಕೇ ಅವನು ಮೀಸಲು. ಹೋಟೆಲ್ ಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಸೇವೆ ಸಿಗುವಂತಿದ್ದರೆ ಮಾತ್ರ ತೆರೆದಿದೆ ಎಂದು ಫಲಕವಿರುತ್ತದೆ.ಇಲ್ಲವೇ ಮುಚ್ಚಿದೆ ಎಂದು ಪಲಕ ಹಾಕಿ ಸೇವೆಯನ್ನು ನಿಲ್ಲಿಸುವರು.
ಹೋಟೇಲ್ ಗೆ ನಮ್ಮಲ್ಲಿರುವಂತೆ ನೇರವಾಗಿ ನುಗ್ಗಿ ಏನು ತಿಂಡಿ,ಬಿಸೀ ಏನಿದೆ ಎಂದು ಕೇಳುವಂತಿಲ್ಲ.ಅಲ್ಲಿ ಹೋಟೆಲ್ ನ ಬಾಗಿಲಿಗೆ ಹೋಗಿ ನಿಲ್ಲಬೇಕು.ಕೆಲವೇ ಸೆಕೆಂಡ್ ಗಳಲ್ಲಿ ಹೋಟೇಲ್ ನಲ್ಲಿ ಕುಳಿತು ಕೊಳ್ಳಲು ಸ್ಥಳವಿದ್ದರೆ ಅಲ್ಲಿಯ ನೌಕರ ಹೊರಬರುತ್ತಾನೆ ಸ್ಥಳವಿದ್ದರೆ ಭೋಜನ ಶಾಲೆ ಗೆ ಕರೆದೊಯ್ಯವನು, ಇಲ್ಲವೇ ಕಾಯುವ ಜಾಗದಲ್ಲಿ ಕೂಡಿಸುವನು.ಒಮ್ಮೆ ಭೋಜನ ಶಾಲೆಯಲ್ಲಿ ಕೂಡಿಸಿದನೆಂದರೆ ನಿಮ್ಮ ಊಟೋಪಚಾರಕ್ಕೇ ಅವನು ಮೀಸಲು. ಹೋಟೆಲ್ ಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಸೇವೆ ಸಿಗುವಂತಿದ್ದರೆ ಮಾತ್ರ ತೆರೆದಿದೆ ಎಂದು ಫಲಕವಿರುತ್ತದೆ.ಇಲ್ಲವೇ ಮುಚ್ಚಿದೆ ಎಂದು ಪಲಕ ಹಾಕಿ ಸೇವೆಯನ್ನು ನಿಲ್ಲಿಸುವರು.
ಸಮಾ ದಾನ
ಸೇವೆಯೇನೋ ಉತ್ತಮವೇ. ಕೇಶಮುಂಡನವೂ ಸೇರಿದಂತೆ ಟ್ಯಾಕ್ಸಿ, ಹೋಟೆಲ್, ಟೂರ್ ಗೈಡ್, ಟೂರ್ ಬಸ್ ಹೀಗೆ ಯಾವ ಸೇವೆ ಪಡೆದರೂ ಟಿಪ್ಸ್ ಬಹುತೇಕ ಕಡ್ಡಾಯ.ಈ ಟಿಪ್ಸ್ ಸಾಮಾನ್ಯವಾಗಿ ಶೇಕಡಾ ೧೦ರಿಂದ ಪ್ರಾರಂಭ. ಪ್ರತಿಷ್ಟೆ ವಿಷಯವಾದ್ದರಿಂದ ಧಾರಾಳವಾಗಿ ಕೊಡಬೇಕು.
ಗುಜರೀ ಮಾಲು
ಬೇಡವಾದ ವಸ್ತುಗಳನ್ನು ಕೊಳ್ಳಲು ಬರುವ ಹಳೇ ಪೇಪರ್, ಪಾತ್ರೆ ಸಾಮಾನು ಎಂದು ಕೇಳಿಕೊಂಡು ಬರುವವರಿಲ್ಲ.ಬೇಡವಾದದ್ದೆಲ್ಲಾ ಕಸಗಳೇ ಇಲ್ಲಿ. ಆದ್ದರಿಂದ ಉಪಯೋಗಿಸಿದ ಟೀವಿ, ಫ್ರಿಟ್ಜ್, ಟೇಬಲ್, ಖುರ್ಚಿ, ಹಾಸಿಗೆ, ಬೀರು,ಮಂಚ ಹೀಗೆ ಏನು ಬೇಡವಾದರೂ ಕಸದ ಡಬ್ಬಿ ಹತ್ತಿರ ಇಡುತ್ತಾರೆ.ಅದನ್ನು ಯಾರು ಬೇಕಾದರೂ ತೆಗೆದುಕೊಂಡು ಹೋಗಬಹುದು.ಅದಕ್ಕೆ ಹಣದ ವ್ಯವಹಾರ ಇಲ್ಲ.
ಇನ್ನು ಭಿಕ್ಷುಕರು/ಹೋಂಲೆಸ್ ಬೆಗ್ಗರ್ ಎಸೆಯಲಾದ ಪೇಪರ್, ಡಬ್ಬಿಗಳನ್ನೂ,ಲೋಹದ ವಸ್ತುಗಳು ಇತ್ಯಾದಿಗಳನ್ನು ರೀಸೈಕ್ಲಿಂಗ್ ಕೇಂದ್ರ ಕ್ಕೆ ತೆಗೆದು ಕೊಂಡು ಹೋಗಿ ಹಣ ಪಡೆಯುವರು.ಅಲ್ಲದೆ ಅವರು ಕಸದ ಡಬ್ಬಿ ಯಲ್ಲಿ ಎಸೆಯಲಾದ ಪಿಜ್ಜಾ ,ಬರ್ಗರ್, ಸ್ಯಾಂಡ್ ವಿಚ್ ಇತ್ಯಾದಿ ಗಳನ್ನು ಆರಿಸಿ ತಿನ್ನುವುದನ್ನೂ ಕಾಣಬಹುದು
ನಮ್ಮ ಹಬ್ಬ
ಅನುಕೂಲ ಇರುವ ಭಾರತೀಯರು ವರ್ಷದಲ್ಲಿ ಬರುವ ತಮ್ಮ ಹಬ್ಬಗಳನ್ನು ಆಚರಿಸುತ್ತಾರೆ. ಆದರೂ ಅದು ವಾರಾಂತ್ಯದಲ್ಲಿ ಅಥವಾ ದೀರ್ಘ ವಾರಾಂತ್ಯಕ್ಕೆ ಹೊಂದಿ ಕೊಂಡಂತೆ ಆಚರಿಸುವುದು ಸಾಮಾನ್ಯ.ಹಿರಿಯರ ತಿಥಿ ಕಾರ್ಯಗಳಿಗೇನು ಮಾಡುವರೋ ತಿಳಿಯದು.
ಸ್ವಯಂಸೇವೆ, ಹೋಟೆಲ್, ಅಂಗಡಿ/ಮಾಲ್ ಗಳು, ಕಟಿಂಗ್ ಎಲ್ಲದರ ವರ್ಣನೆ ಯಥಾರ್ಥವಾಗಿದೆ. ಕೊನೆಯ ಪ್ರಶ್ನೆ ಚೆನ್ನಾಗಿದೆ. ಬಹುಶಃ ಮಾಡಿಸುವವರು ಸಿಗಬಹುದೇನೋ, ಮಾಡುವವರು!
ReplyDeletesame in England also.
ReplyDelete