Skip to main content

ಅಮೇರಿಕಾ ಪ್ರವಾಸ ವಿಶೇಷ-೨

ಅಮೇರಿಕಾ-ನಾ ಕಂಡ ವಿಶೇಷಗಳು ಮುಂದುವರಿದ ಭಾಗ.

ಸ್ವಯಂ ಸೇವಾ 
ಪೆಟ್ರೋಲ್ ಬಂಕಿಗೆ ಹೋಗಿ ನಿಮ್ಮ ಕಾರಿಗೆ ನೀವೇ ಪೆಟ್ರೋಲ್ ತುಂಬಿಕೊಳ್ಳಬೇಕು, ಸಾರ್ವಜನಿಕ ಸೇವೆಗೆ ಖರ್ಚು ಮಾಡಿ ಕೊಳ್ಳಲು ನಿಮ್ಮ ಸೇವಾಕಾರ್ಡಿಗೆ ನೀವೇ ಹಣ (ರೀಚಾರ್ಜ್) ತುಂಬಿಕೊಳ್ಳಬೇಕು.ನಿಮಗೆ ಬೇಕಾದ ಪಾದರಕ್ಷೆಯನ್ನು ನೀವೇ ಆಯ್ಕೆ ಮಾಡಿ ಕೊಂಡು ಹಣ ನೀಡಬೇಕು.ಅಂಚೆ ಸೇವೆಯೂ  ಸ್ವಸಹಾಯ ಪದ್ಧತಿಯೇ.  ಇಲ್ಲಿರುವಂತೆ ಎಲ್ಲಾ ಕಡೆ ಜೆರಾಕ್ಸ್ ಬ್ರೌಸಿಂಗ್ ಕೇಂದ್ರಗಳಿಲ್ಲ.ಕೊರಿಯರ್, ಜೆರಾಕ್ಸ್ ಪ್ರತಿ,ಅಥವಾ ಪ್ರಿಂಟ್ ಔಟ್ ಪಡೆಯಲು ಎಲ್ಲೋ ಒಂದೊಂದೇ ಇರುವ ಅವುಗಳ ಕೇಂದ್ರಗಳಿಗೆ ಹೋಗಬೇಕು.



ಅಂಗಡಿಗಳು
ವಾಲ್ ಮಾರ್ಟ್ ಸೂಪರ್ ಮಾರ್ಕೆಟ್ ಅಥವಾ ೭/೧೧ ಇತ್ಯಾದಿ ಮಾಲ್ ಗಳಿಗೆ ಹೋಗಿಯೇ ಬೇಕಾದ ವಸ್ತುಗಳನ್ನು ತರಬೇಕು.ಅವುಗಳೋ, ಕ್ರಿಕೆಟ್ ಮೈದಾನದ ಅಳತೆಯವು.ಅಲ್ಲಿಗೆ ನಾವೇ ಹೋಗಿ ಬೇಕಾದುದನ್ನು ಆರಿಸಿಕೊಂಡು ಬರಬೇಕು.ಮನೆಗೆ ಬೇಕಾದ ಆಹಾರ ಸಾಮಗ್ರಿ ಗಳು, ಪಾತ್ರೆ ಪಡುಗಗಳು, ಬಟ್ಟೆ ಗಳು, ತರಕಾರಿಗಳು, ಹಾಲು, ಮೊಸರು, ಎಲೆಕ್ಟ್ರಾನಿಕ್ ಉಪಕರಣಗಳು, ಎಲೆಕ್ಟ್ರಿಕಲ್ ಉಪಕರಣಗಳು,ಇತ್ಯಾದಿ..  ಹೀಗೆ ಏನು ಬೇಕಾದರೂ ಅಲ್ಲಿಗೇ ಹೋಗಬೇಕು. ಅವುಗಳೋ ಬಹಳಷ್ಟು ದೂರದಲ್ಲಿರುವುವವೇ. ಖರ್ಚಿಲ್ಲದೆ ಹೋಗಲಾಗುವುದಿಲ್ಲ.ಅಲ್ಲಿ ಆಯ್ಕೆ ಮಾಡಿದ ವಸ್ತುಗಳನ್ನು ತೋರಿಸಿ ಹಣ ಪಾವತಿ ಮಾಡಬೇಕು.ಅಲ್ಲಿಯೂ ನಾವೇ ಸ್ವಯಂ ಬಿಲ್ ಮಾಡಿಕೊಂಡು ಪಾವತಿಯನ್ನು ಮಾಡಬಹುದು.ಏನೇ ಇರಲಿ, ಬೇಕಾದ ವಸ್ತುಗಳನ್ನು ಸಂಗ್ರಹಿಸಿ ಕ್ಯಾಶ್ ಕೌಂಟರ್ ಗೆ ಬರೋ ಹೊತ್ತಿಗೆ ಕಾಲೆಲ್ಲಾ ನೋವು ಬಂದಿರುತ್ತದೆ.ಕುಳಿತು ಕೊಳ್ಳೋಕೇನೂ ಅನುಕೂಲ ಇರುವುದಿಲ್ಲ.
ನಮ್ಮಲ್ಲಿದ್ದಂತೆ ಗಲ್ಲಿಗಲ್ಲಿಗಳಲ್ಲಿ ಅಂಗಡಿಗಳಿಲ್ಲ.ಒಂದು ಬೆಂಕಿ ಪಟ್ಟಣ ತರಲೂ ಮೇಲ್ಕಂಡ ಬೃಹತ್ ಅಂಗಡಿ ಗಳಿಗೆ ಹೋಗಬೇಕು.
ಇನ್ನು ಈ ಮಾಲ್ ಗಳಲ್ಲೋ ನಮಗೆ ಬೇಕಾದಂತೆ ಸಣ್ಣ ಸಣ್ಣ ಪ್ರಮಾಣದಲ್ಲಿ ವಸ್ತು ಗಳು ಸಿಗುವುದಿಲ್ಲ.ಹೆಚ್ಚಿನ ಪ್ರಮಾಣದಲ್ಲಿ ತರುವುದು ಕಡ್ಡಾಯ.
ಒಂದು ರೀತಿಯಲ್ಲಿ ಹೇಳುವುದಾದರೆ ಪದೇಪದೇ ಮಾಲ್ ಗಳಿಗೆ ಹೋಗಲು ಸಾಧ್ಯವಿಲ್ಲ ವಾದ್ದರಿಂದ ಹೀಗಿರಬಹುದೇನೋ.ಹೋಲ್ ಸೇಲ್, ಡಿಸ್ಕೌಂಟ್  ಸೇಲ್ ಎಂದು ವರ್ಷದಲ್ಲಿ ಹಲವು ಬಾರಿ ನಡೆಯುತ್ತದೆ. ಅದಕ್ಕೆ ಹಗಲಿರುಳೆನ್ನದೆ ಸರತಿ ಸಾಲಿನಲ್ಲಿ ನಿಂತು ಖರೀದಿ ಮಾಡುವವರೂ ಇದ್ದಾರೆ.



ದುಬಾರಿ ಕಟಿಂಗ್
ಕೇಶಮುಂಡನ, ಶೇವಿಂಗ್ ಗಳು ದುಬಾರಿ ವ್ಯವಹಾರ.ಕೇಶಮುಂಡನ ಕನಿಷ್ಠ ೧೫ಡಾಲರ್. ಅದಕ್ಕೂ ಅಪಾಯಿಂಟ್ಮೆಂಟ್ ಪಡೆದು ಹೋಗಬೇಕು.ಬಹುತೇಕ ಈ ಕೆಲಸ ಮಾಡುವವರು ಲಲನೆಯರೇ.ನಮ್ಮಲ್ಲಿ ಈ ಕೇಶಮುಂಡನಕ್ಕೆ ಸಿಂಹಾಸನವೇ ಇರುತ್ತದೆ.ಅಲ್ಲಿಯ ಖುರ್ಚಿ ಗಳು ದೇವರಿಗೇ ಪ್ರೀತಿ.ಒಳ್ಳೆ ಅನುಕೂಲಕರ ಕನ್ನಡಿ ಇಲ್ಲ. ಮುಂಡನದ ನಂತರ ತಲೆಯ ಹಿಂಭಾಗ ನೋಡಿಕೊಳ್ಳಲು ನಾಪಿತರು ಮತ್ತೊಂದು ಸಣ್ಣ ಕನ್ನಡಿಯನ್ನು ಹಿಂಭಾಗದಲ್ಲಿ ಹಿಡಿದು ತೋರಿಸುತ್ತಾರೆ.ಇದು ನಮ್ಮಲ್ಲಿ ಹಲವು ದಶಕಗಳ ಹಿಂದೆ ಇತ್ತು.  ದುಬಾರಿ ಬೆಲೆಗಳ ಕಾರಣದಿಂದ ಹೆಚ್ಚಿನ ಗಂಡಸರು ಸ್ವಯಂ ಶೇವಿಂಗ್ ಮಾಡಿಕೊಳ್ಳುವ ರಾಗಿದ್ದಾರೆ. ಮುಖದಲ್ಲಿ ಮೀಸೆ ಇಲ್ಲ.ಎಲೆಕ್ಟ್ರಾನಿಕ್ ಶೇವಿಂಗ್ ಮಿಶನ್ ತಲೆ ಕೆನ್ನೆ,ಗಡ್ಡ ಎನ್ನದೆ ಎಲ್ಲಾ ಇಟ್ಟ ಅಳತೆಗೆ ಬೋಳಿಸಿಕೊಂಡು ಹೋಗುತ್ತದೆ.



ಹೋಟೇಲ್
ಹೋಟೇಲ್ ಗೆ ನಮ್ಮಲ್ಲಿರುವಂತೆ  ನೇರವಾಗಿ ನುಗ್ಗಿ ಏನು ತಿಂಡಿ,ಬಿಸೀ ಏನಿದೆ ಎಂದು ಕೇಳುವಂತಿಲ್ಲ.ಅಲ್ಲಿ ಹೋಟೆಲ್ ನ ಬಾಗಿಲಿಗೆ ಹೋಗಿ ನಿಲ್ಲಬೇಕು.ಕೆಲವೇ ಸೆಕೆಂಡ್ ಗಳಲ್ಲಿ ಹೋಟೇಲ್ ನಲ್ಲಿ ಕುಳಿತು ಕೊಳ್ಳಲು ಸ್ಥಳವಿದ್ದರೆ ಅಲ್ಲಿಯ ನೌಕರ ಹೊರಬರುತ್ತಾನೆ ಸ್ಥಳವಿದ್ದರೆ  ಭೋಜನ ಶಾಲೆ ಗೆ ಕರೆದೊಯ್ಯವನು, ಇಲ್ಲವೇ ಕಾಯುವ ಜಾಗದಲ್ಲಿ ಕೂಡಿಸುವನು.ಒಮ್ಮೆ ಭೋಜನ ಶಾಲೆಯಲ್ಲಿ ಕೂಡಿಸಿದನೆಂದರೆ ನಿಮ್ಮ ಊಟೋಪಚಾರಕ್ಕೇ ಅವನು ಮೀಸಲು. ಹೋಟೆಲ್ ಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಸೇವೆ ಸಿಗುವಂತಿದ್ದರೆ ಮಾತ್ರ ತೆರೆದಿದೆ ಎಂದು ಫಲಕವಿರುತ್ತದೆ.ಇಲ್ಲವೇ ಮುಚ್ಚಿದೆ ಎಂದು ಪಲಕ ಹಾಕಿ ಸೇವೆಯನ್ನು ನಿಲ್ಲಿಸುವರು.



ಸಮಾ ದಾನ
ಸೇವೆಯೇನೋ ಉತ್ತಮವೇ. ಕೇಶಮುಂಡನವೂ ಸೇರಿದಂತೆ ಟ್ಯಾಕ್ಸಿ, ಹೋಟೆಲ್, ಟೂರ್ ಗೈಡ್, ಟೂರ್ ಬಸ್ ಹೀಗೆ ಯಾವ ಸೇವೆ ಪಡೆದರೂ ಟಿಪ್ಸ್ ಬಹುತೇಕ ಕಡ್ಡಾಯ.ಈ ಟಿಪ್ಸ್ ಸಾಮಾನ್ಯವಾಗಿ ಶೇಕಡಾ ೧೦ರಿಂದ ಪ್ರಾರಂಭ. ಪ್ರತಿಷ್ಟೆ ವಿಷಯವಾದ್ದರಿಂದ ಧಾರಾಳವಾಗಿ ಕೊಡಬೇಕು.



ಗುಜರೀ ಮಾಲು
ಬೇಡವಾದ ವಸ್ತುಗಳನ್ನು ಕೊಳ್ಳಲು ಬರುವ ಹಳೇ ಪೇಪರ್, ಪಾತ್ರೆ ಸಾಮಾನು ಎಂದು ಕೇಳಿಕೊಂಡು ಬರುವವರಿಲ್ಲ.ಬೇಡವಾದದ್ದೆಲ್ಲಾ ಕಸಗಳೇ ಇಲ್ಲಿ. ಆದ್ದರಿಂದ ಉಪಯೋಗಿಸಿದ ಟೀವಿ, ಫ್ರಿಟ್ಜ್, ಟೇಬಲ್, ಖುರ್ಚಿ, ಹಾಸಿಗೆ, ಬೀರು,ಮಂಚ ಹೀಗೆ ಏನು ಬೇಡವಾದರೂ  ಕಸದ ಡಬ್ಬಿ ಹತ್ತಿರ ಇಡುತ್ತಾರೆ.ಅದನ್ನು ಯಾರು ಬೇಕಾದರೂ ತೆಗೆದುಕೊಂಡು ಹೋಗಬಹುದು.ಅದಕ್ಕೆ ಹಣದ ವ್ಯವಹಾರ ಇಲ್ಲ.
ಇನ್ನು ಭಿಕ್ಷುಕರು/ಹೋಂಲೆಸ್ ಬೆಗ್ಗರ್ ಎಸೆಯಲಾದ ಪೇಪರ್, ಡಬ್ಬಿಗಳನ್ನೂ,ಲೋಹದ ವಸ್ತುಗಳು ಇತ್ಯಾದಿಗಳನ್ನು ರೀಸೈಕ್ಲಿಂಗ್ ಕೇಂದ್ರ ಕ್ಕೆ ತೆಗೆದು ಕೊಂಡು ಹೋಗಿ ಹಣ ಪಡೆಯುವರು.ಅಲ್ಲದೆ ಅವರು ಕಸದ ಡಬ್ಬಿ ಯಲ್ಲಿ ಎಸೆಯಲಾದ ಪಿಜ್ಜಾ ,ಬರ್ಗರ್, ಸ್ಯಾಂಡ್ ವಿಚ್ ಇತ್ಯಾದಿ ಗಳನ್ನು ಆರಿಸಿ ತಿನ್ನುವುದನ್ನೂ ಕಾಣಬಹುದು



ನಮ್ಮ ಹಬ್ಬ
ಅನುಕೂಲ ಇರುವ ಭಾರತೀಯರು ವರ್ಷದಲ್ಲಿ ಬರುವ ತಮ್ಮ ಹಬ್ಬಗಳನ್ನು ಆಚರಿಸುತ್ತಾರೆ. ಆದರೂ ಅದು ವಾರಾಂತ್ಯದಲ್ಲಿ ಅಥವಾ ದೀರ್ಘ ವಾರಾಂತ್ಯಕ್ಕೆ ಹೊಂದಿ ಕೊಂಡಂತೆ ಆಚರಿಸುವುದು ಸಾಮಾನ್ಯ.ಹಿರಿಯರ ತಿಥಿ ಕಾರ್ಯಗಳಿಗೇನು ಮಾಡುವರೋ ತಿಳಿಯದು.

Comments

  1. ಸ್ವಯಂಸೇವೆ, ಹೋಟೆಲ್, ಅಂಗಡಿ/ಮಾಲ್ ಗಳು, ಕಟಿಂಗ್ ಎಲ್ಲದರ ವರ್ಣನೆ ಯಥಾರ್ಥವಾಗಿದೆ. ಕೊನೆಯ ಪ್ರಶ್ನೆ ಚೆನ್ನಾಗಿದೆ. ಬಹುಶಃ ಮಾಡಿಸುವವರು ಸಿಗಬಹುದೇನೋ, ಮಾಡುವವರು!

    ReplyDelete

Post a Comment

Popular posts from this blog

ಆರೋಗ್ಯ ಕವಚ

ಮನುಷ್ಯ ತಾನು ಸುಖವಾಗಿರಲು ದುಡಿಯುತ್ತಾನೆ. ಹಣ ಕೂಡಿಡುತ್ತಾನೆ. ಆಸ್ತಿ ಗಳಿಸುತ್ತಾನೆ. ತಾನು ಮತ್ತು ತನ್ನ ಪ್ರೀತಿಯ ಕುಟುಂಬವನ್ನು ಸುಖವಾಗಿಡುವ ಕನಸುಗಳು ಸದಾ ನಡೆಯುತ್ತಲೇ ಇರುತ್ತವೆ. ಈ ಕನಸಿನ ಮಾರ್ಗದಲ್ಲಿ ಆಕಸ್ಮಿಕವಾಗಿ ಅವನ ದೇಹಕ್ಕೆ ದೊಡ್ಡ ಅನಾರೋಗ್ಯವೇನಾದರೂ ಎದುರಾದರೆ ಬಹಳ ಕಷ್ಟವಾಗುತ್ತದೆ. ಸುಧಾರಿಸಿಕೊಳ್ಳಲು ಸಾಧ್ಯವಾಗದಂತೆ ಗಳಿಸಿದ್ದೆಲ್ಲವೂ ನೀರಿನಂತೆ ಕರಗಿ ಹೋಗುತ್ತದೆ. ಇದರಿಂದ ಜೀವನದಲ್ಲಿ ಹಾಕಿಕೊಂಡ ಗುರಿಯನ್ನು ಸಾಧಿಸಲಾಗುವುದಿಲ್ಲ. ಇಂತಹ ಪರಿಸ್ಥಿತಿಯನ್ನು ಆರ್ಥಿಕವಾಗಿ ಸಮರ್ಥವಾಗಿ ಎದುರಿಸಲು ಬೇಕಾಗಿರುವುದು ಆರೋಗ್ಯ ವಿಮೆ. ಇದನ್ನು ಹೆಲ್ತ್ ಇನ್ಶುರೆನ್ಸ್ ( Heath Insurance) ಅಥವಾ ಮೆಡಿಕಲ್ ಇನ್ಸೂರೆನ್ಸ್ (Medical Insurance) ಎಂದೂ ಹೇಳಲಾಗುತ್ತದೆ. ಇದು ಆರೋಗ್ಯ ರಕ್ಷಣೆಗಾಗಿ ಎಂದೇ ಪಡೆದರೂ ಮುಂದಿನ ನಮ್ಮ ಜೀವನಕ್ಕಾಗಿ, ಪರೋಕ್ಷವಾಗಿ ಕೂಡಿಟ್ಟಿರುವ ಆಸ್ತಿಯನ್ನು ರಕ್ಷಣೆ ಮಾಡುತ್ತದೆ. ಈ ಬಗ್ಗೆ ತಿಳಿದುಕೊಳ್ಳಬೇಕಾದ ವಿಷಯಗಳು ಬಹಳ ಅನಿವಾರ್ಯ. ಇವೆಲ್ಲವನ್ನೂ ಸವಿಸ್ತಾರವಾಗಿ ತಿಳಿಸಿ ಹೇಳುವ ಪ್ರಯತ್ನವೇ ಈ ಲೇಖನ. ಆರೋಗ್ಯ ವಿಮೆ ಎಂದರೇನು? ನಾವು ಸದಾ ಆರೋಗ್ಯದಿಂದ ಇರಬೇಕೆಂದು ಬಯಸುವೆವಾದರೂ "ಮನುಷ್ಯ ಎಂದಮೇಲೆ ಏನಾದರೂ ಕಾಯಿಲೆ ಇದ್ದೇ ಇರುತ್ತದೆ" ಎಂಬಂತೆ ಹಲವು ಸಾರಿ ತಲೆನೋವು, ಜ್ವರ, ನೆಗಡಿ ಮೈ ಕೈ ನೋವು ಎಂದು ನರಳುತ್ತೇವೆ. ಚಿಕೂನ್ ಗುನ್ಯಾ, ಡೆಂಗ್ಯೂ, ಕೊರೋನಾ ಇತ್ಯಾದಿ ಕಾಯಿಲೆಗಳ...

ಮಿತ್ರನೊಬ್ಬನ ಆತ್ಮಾವಲೋಕನ

ಮಿತ್ರ ಶಂಕರ ಒಮ್ಮೆ ಹೇಳಿದ್ದ, ಕೇಳಿ ಹಳತಾದರೂ ಓದುಗರಿಗೆ ಹೊಸತಾಗಿ, ಆತ್ಮೊನ್ನತಿಗೆ ಸಹಾಯ ವೆನಿಸುವ, ಆತ್ಮಾವಲೋಕನದ ಸಾಲುಗಳು ನಿಜವಾಗಿಯೂ ಕುತೂಹಲಕಾರಿಯಾಗಿದೆ. ಅದನ್ನು ಅವನಿಂದಲೇ ಕೇಳಿ: ಕಛೇರಿಯಲ್ಲಿ ವಿಶೇಷವಾದ ಕೆಲಸವೊಂದನ್ನು ನಿರೀಕ್ಷೆಗಿಂತ ಮೊದಲೇ ಯಶಸ್ವಿಯಾಗಿ ಪೂರೈಸಿದ್ದರಿಂದ ತುಂಬಾ ಸಂತೋಷವಾಗಿತ್ತು. ಆದ್ದರಿಂದ ಮನೆಗೆ ಸ್ವಲ್ಪ ಬೇಗನೆ ಬಂದಿದ್ದೆ. ಪ್ರತಿದಿನ ಯಾಕೆ ಲೇಟು ಎಂಬ ಮುಖವನ್ನು ಮಾಡುತ್ತಿದ್ದ ಮಡದಿ ಪ್ರೇಮ ಕೊಟ್ಟ ಒಂದು ಬಿಸಿಯಾದ ಸ್ಟ್ರಾಂಗ್ ಕಾಫಿ ಕುಡಿದು ನಿಧಾನವಾಗಿ ಸೋಫಾದ ಮೇಲೆ ಕಾಲು ಚಾಚುತ್ತಿದ್ದಂತೆಯೇ ನಿದ್ರಾ ದೇವಿಗೆ ವಶನಾಗಿ ಕೆಲವು ಸಮಯವಾಗಿರಬಹುದು. ಕೆಲವೇ ನಿಮಿಷಗಳಲ್ಲಿ ನಿದ್ದೆ ಬಂದಿತ್ತಾದರೂ ತಾಳಲಾರೆನೆಂಬ ಎದೆನೋವು, ಇದ್ದಕ್ಕಿದ್ದಂತೆ ಉಸಿರುಗಟ್ಟಿಸುವಂತಹ ಅನುಭವ. ಏನು ಗೊತ್ತಾಗುತ್ತಿಲ್ಲ. ಕೆಲವೇ ನಿಮಿಷಗಳಲ್ಲಿ ಗಾಬರಿಯಿಂದ ಪ್ರೇಮಾ, ಮಗಳು - ಅಳಿಯನನ್ನು ಕರೆಯುತ್ತಿದ್ದಾಳೆ. ಕಾಲು ಕೈ ಎದೆ ಭಾಗಗಳನ್ನು ಹಿತವಾಗಿ ಯಾರೋ ತಡವುತ್ತಿದ್ದಾರೇನೋ. ಹಾಗೆಯೇ ನನ್ನನ್ನು ಎತ್ತಿದಂತಹ ಅನುಭವ. ಎಲ್ಲಿಗೋ ಕರೆದುಕೊಂಡು ಹೋಗುತ್ತಿರಬಹುದು. ಯಾವುದೋ ವಾಹನದ ಸದ್ದು. ನನ್ನ ಕೈಗಳನ್ನು ಯಾರೋ ಎತ್ತುತ್ತಿದ್ದಾರೆ, ಏನಾಗುತ್ತಿದೆ? ಹೊಸತರದ ಹಾಸಿಗೆ. ಮೂಗು ಬಾಯಿಗೆ ಏನೋ ತಡೆ. ಸಣ್ಣದಾಗಿ ಬಿಟ್ಟು ಬಿಟ್ಟು ಕೇಳುವ ಏಕತಾನದ ಸದ್ದು. ಹಠಾತ್ತಾಗಿ ನಿಶ್ಯಬ್ದ. ನೀರವ ವಾತಾವರಣ. ಈಗ ನನಗೆ ನೋವು ಇದೆಯೇ. ಟಿವಿಯಲ್ಲಿ ಯಾವುದೋ ಕ...

ಬಾಳ ರೂಪಿಸಿದ ವಿಮೆ

ನಾವು ಸಮಾಜದಲ್ಲಿ ನಮಗಾಗಿ ನಾವು ಅನೇಕ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದೇವೆ. ಅದನ್ನು ಒದಗಿಸಲು ಅದರದೇ ಆದ ಸಂಸ್ಥೆ ಹಾಗೂ ಸೇವಾ ಸಿಬ್ಬಂದಿಗಳಿದ್ದಾರೆ. ಇವು ನಮ್ಮ ಬದುಕು ಸುಗಮವಾಗಲು ಸಹಾಯಕವಾಗಿ ವೆ . ಇವಲ್ಲದೆ  ಜೀವನದಲ್ಲಿ ನಮ್ಮ ಉನ್ನತಿಗೆ ಬಂಧುಮಿತ್ರರ ಪಾತ್ರ ತೀರಾ ಸಾಮಾನ್ಯ. ಆದರೆ ಸಂಸ್ಥೆಯೊಂದು ಕೊಡುವ ಸೇವೆಯೇ ಒಬ್ಬರ ಬದುಕನ್ನು ರೂಪಿಸಿಕೊಳ್ಳಲು ಅವಕಾಶವಾದ  ಘಟನೆಯ ಸ್ಮರಣೆಯೇ ಈ ಕಥೆಯ ಜೀವಾಳ. ಈ ಬೆಳಿಗ್ಗೆ ಬೆಂಗಳೂರಿನಿಂದ ಲಂಡನ್ ವರೆಗಿನ ಆಕಾಶ ಪಯಣ. ಇದಕ್ಕಾಗಿ ನಿನ್ನೆಯಿಂದಲೇ ನಿದ್ದೆ ಇಲ್ಲ. ರಾತ್ರಿ ಪೂರ್ತಿ ವಿಮಾನ ನಿಲ್ದಾಣದಲ್ಲಿ ಸಮಯ ಕಳೆದೆವು. ಲಂಡನ್ನಿನ ಸಮಯದಂತೆ ಮಧ್ಯಾಹ್ನವೇ ಬಂದೆವು. ಅಮೇರಿಕಾಕ್ಕೆ ಹೋಗುವ ವಿಮಾನ ಸಂಜೆ ಐದು ಗಂಟೆಗೆ. ಆದ್ದರಿಂದ ಕಾಯಲೇಬೇಕು. ವಿಮಾನ ನಿಲ್ದಾಣದಲ್ಲಿ ಆಯಾಸದಿಂದ ನಿದ್ದೆ ಬರುತ್ತಿದ್ದರೂ ಎಚ್ಚರವಾಗದಷ್ಟು ನಿದ್ದೆ ಬಂದು ಮುಂದಿನ ವಿಮಾನ ತಪ್ಪಿ ಹೋದರೆ ಎಂಬ ಭಯದಿಂದ ಕಣ್ಣು ಮುಚ್ಚಲಿಲ್ಲ. ಈಗ ಅಮೇರಿಕಾದ ವಾಶಿಂಗ್ಟನ್ಗೆ ಹೋಗುವ ವಿಮಾನದಲ್ಲಿ ಕುಳಿತಿದ್ದೇನೆ. ಪಕ್ಕದಲ್ಲಿ ಕುಳಿತ ನಮ್ಮವರಿಗೆ ಗಾಢ ನಿದ್ರೆ. ವಿಮಾನ ಪ್ರಯಾಣವೇನೋ ಹೆಮ್ಮೆಯ ವಿಷಯವೇ. ಆದರೆ ಇದೇ ಮೊದಲ ಪ್ರಯಾಣವಾದ್ದರಿಂದ ಏನೋ ಆತಂಕ, ಸಂತೋಷ, ದುಗುಡ ಜೊತೆಗೆ ಸಡಗರ. ಸುತ್ತ ನೋಡುತ್ತಾ ನನ್ನ ಬಗ್ಗೆ ನಾನು ಯೋಚಿಸುತ್ತಿದ್ದೇನೆ. ನಾನು ಎಲ್ಲಿದ್ದೇನೆ. ಎಲ್ಲಿಗೆ ಬಂದೆ. ಇರುವನೊಬ್ಬ ಮಗ ಆನಂದನೇ ನಮಗೆ ಸರ್ವಸ್ವ. ಆದ್ದ...