Skip to main content

ನೆಮ್ಮದಿ ಕೆಡಿಸಿದ್ದ ಮಂದ ನೇತ್ರ 


   ಅನಾರೋಗ್ಯ ಪರ್ವ-೧ 

    ೧೯೯೨ರಲ್ಲಿ ಒಂದು ಸಂಜೆ.ನಮ್ಮ ೨ವರ್ಷದ ಮಗನ ಎತ್ತಿ ಕೊಂಡು ಆಡಿಸುತ್ತಿದ್ದೆ.ಆಡುತ್ತಿದ್ದವನು ಇದ್ದಕ್ಕಿದ್ದಂತೆ ಕಣ್ಣಿಗೆ ಬೆರಳು ಹಾಕಿದನು.ಕಣ್ಣಿನ ನೋವು ಹೆಚ್ಚಾಗಿ ಅವನನ್ನು ಕೆಳಗೆ ಆಡಲು ಬಿಟ್ಟು ಕಣ್ಣು ನೇವರಿಸಿ ಕೊಳ್ಳಲು ಪ್ರಾರಂಭಿಸಿದೆ.ನೋವು ಶಮನಗೊಳಿಸಲು  ಗೊತ್ತಿರುವ  ತೊಂದರೆಯಾಗದಂತಹ ಮನೆಯ ಚಿಕಿತ್ಸೆ.ರಾತ್ರಿ ಮಲಗಿ ಬೆಳಿಗ್ಗೆ ಎದ್ದಮೇಲೂ ಕಣ್ಣು ಸಣ್ಣದಾಗಿ ನೋವುತ್ತಿತ್ತು.ಆದರೂ ಎಂದಿನಂತೆ ಬೆಳಿಗ್ಗೆ ೭ಘಂಟೆಗೆ  ಸ್ಕೂಟರ್ ನಲ್ಲಿ ಕೆಲಸಕ್ಕೆ ಹೋದೆ.ಸುಮಾರು ೮.೩೦ ರ ವೇಳೆಗೆ ಕಣ್ಣು ಮಂಜು ಕವಿದಂತಾಯಿತು.ತೀವ್ರ ತಲೆನೋವು.ಅಲ್ಲೇ ದೊರೆಯುವ ಪ್ರಥಮ ಚಿಕಿತ್ಸೆ ವೈದ್ಯರಲ್ಲಿಗೆ  ಹೋದೆನು. ಪರೀಕ್ಷಿಸಿ ಕಣ್ಣಿನ ವೈದ್ಯರನ್ನು ಭೇಟಿ ಮಾಡುವುದು ಅನಿವಾರ್ಯ ಎಂದು ಅವರು ಅಂದಾಗ ಸ್ವಲ್ಪ ಗಾಬರಿಯಾದೆ. 
    ನಿಧಾನವಾಗಿ ಸ್ಕೂಟರ್ ನಲ್ಲಿ ೬ ಕಿಲೋಮೀಟರ್ ದೂರದಲ್ಲಿನ ಮನೆಯ ಬಳಿಯ ನೇತ್ರಾಲಯದತ್ತ ಹೊರಟೆ. ಮನೆಗೆ ಇನ್ನೂ ಎರಡು ಕಿಲೋಮೀಟರ್ ಇರುವಾಗ  ಕಣ್ಣಿಗೆ ತೀರಾ ಮೋಡ ಕವಿದ ವಾತಾವರಣ.ಸಂಜೆಗತ್ತಲು. ಹೇಗೋ ಸುಧಾರಿಸಿಕೊಂಡು ಸ್ಕೂಟರ್ ಚಾಲನೆ ಮಾಡಿ ಕೊಂಡೇ  ಬಂದೆ. ಬೆಳಿಗ್ಗೆ ೯.೩೦ ಘಂಟೆ.ಎನ್ ಆರ್ ಕಾಲೋನಿಯ ಬಳಿ ಬರುವಾಗ ಮುಂದೆ ಏನೇನೂ ಕಾಣದು.ಅಲ್ಲಿಯೇ ಮುಖ್ಯ ರಸ್ತೆಯ ಬದಿಯಲ್ಲಿ ಕಾಲುದಾರಿ ಸಮೀಪದಲ್ಲಿ ಸ್ಕೂಟರ್ ನಿಲ್ಲಿಸಿ ಬೀಗ ಹಾಕಿದೆ.ಕತ್ತಲು ಆದರೆ ಬಿಸಿಲಿಗೆ ಮೈ ಸುಡುತ್ತಿತ್ತು. ರಸ್ತೆಯಲ್ಲಿನ ಪ್ರಯಾಣಿಕರೊಬ್ಬರಲ್ಲಿ ಸಹಾಯ ಕೇಳಿ ಅಲ್ಲಿಯ ಕಣ್ಣಾಸ್ಪತ್ರೆಗೆ ಹೋದೆನು.ಈಗಾಗಲೇ ಮುಂಚಿತವಾಗಿ ಭೇಟಿಗೆ ಅವಕಾಶ ಮಾಡಿ ಕೊಂಡವರನ್ನಷ್ಟೇ  ಪರೀಕ್ಷಿಸಲು ಪ್ರಾರಂಭಿಸಿದ್ದರು. ನನ್ನನ್ನು ನೋಡುವ ವೇಳೆಗೆ ಸಮಯ ಮಧ್ಯಾಹ್ನ ೨ಘಂಟೆ. ಆ ವೇಳೆಗೆ ಕಣ್ಣು ನೋವು ಕಡಿಮೆಯಾಗಿತ್ತು.ದೃಷ್ಟಿಯೂ ಸರಿಯಾಗಿತ್ತು.ಸರಿ, ಮನೆಗೆ ಹೋಗಲೇ ಅಥವಾ ಬಂದಿದ್ದಕ್ಕೆ ಕಣ್ಣು ಪರೀಕ್ಷೆ ಮುಗಿಸಿ ಕೊಂಡೇ ಹೋಗಲೇ.ಏನೋ ಜಿಜ್ಞಾಸೆ. ಆದರೂ ಅನುಭವಿಸಿದ್ದ ಸಮಸ್ಯೆ ಮರುಕಳಿಸ ಬಾರದೆಂದು  ಪರೀಕ್ಷೆ ಮಾಡಿಸಲು ನಿರ್ಧಾರ. ವೈದ್ಯರಿಂದ ಅನೇಕ ಪರೀಕ್ಷೆಗಳು. ಯಾವುದೋ ವಿಶೇಷ ಪರೀಕ್ಷೆ ಮಾಡಬೇಕೆಂದು ಅದಕ್ಕಾಗಿ ಹತ್ತಿರದಲ್ಲಿರುವ ಪ್ರಖ್ಯಾತ ವೈದ್ಯರ ಲ್ಯಾಬೋರೇಟರಿ ಗೆ ಕಳಿಸಿದರು.ಅಲ್ಲಿಗೆ ಹೋಗಿ ಪರೀಕ್ಷೆ ಮಾಡಿಸಲಾಗಿ ಅವರು ಮಾಂಟೆಕ್ ಟೆಸ್ಟ್ ಪಾಸಿಟಿವ್ ಎಂದೂ ಅದಕ್ಕೆ ತಾವೇ ಚಿಕಿತ್ಸೆ ಕೊಡುವುದಾಗಿಯೂ ಕಣ್ಣಿನ ವೈದ್ಯರೊಂದಿಗೆ ದೂರವಾಣಿ ಯಲ್ಲಿ ಚರ್ಚಿಸಿ ತಿಳಿಸಿದರು. 

    ಮರುದಿನದಿಂದಲೇ ನಾನು ಹೊಸ ಖಾಯಿಲೆಯ ರೋಗಿ.ಚಿಕಿತ್ಸೆ ಪ್ರಾರಂಭವಾಯಿತು . ಅವರು ಹೇಳಿದ ಎಚ್ಚರಿಕೆ ಪ್ರಕಾರ ಹತ್ತಿರಕ್ಕೆ ಯಾರನ್ನೂ ಸೇರಿಸಬೇಡಿ. ಮಕ್ಕಳು ಹೆಂಡತಿ ಹೀಗೆ ಯಾರೂ ಬೇಡ.ಕೆಮ್ಮು ಬಂದರೆ ಇನ್ನೂ ಎಚ್ಚರವಾಗಿರಬೇಕು. ಬೇರೆಯವರಿಗೆ ಕ್ಷಯರೋಗ ಬರಬಾರದಲ್ಲವೇ ಎಂದಿದ್ದು ತೀರಾ ಯೋಚನೆಗೀಡು ಮಾಡಿತು.ನನ್ನ ಖಾಯಿಲೆಯನ್ನು ಬೇರೆಯವರಿಗೆ ಹೇಳಿದರೆ ನಿಕೃಷ್ಟವಾಗಿ ನೋಡುವರು.ಭಯ ಗೊಳ್ಳುವರು. ಹೇಳದಿದ್ದರೆ ನನಗೆ ಉಪಚರಿಸುವುದು ಹೇಗೆ.ಜೊತೆಗೆ ಬೇರೆಯವರಿಗೆ ನನ್ನಿಂದ ಖಾಯಿಲೆ ಹರಡಬಾರದೆಂಬ ನನ್ನ ಕಾಳಜಿ ಬೇರೆ.ಎಲ್ಲಾ ಅಯೋಮಯ.ಮನಸ್ಸಿಗೆ ನೆಮ್ಮದಿ ಇಲ್ಲ.ಮಕ್ಕಳನ್ನು ಎತ್ತುವಂತಿಲ್ಲ, ಮುದ್ದಾಡುವಂತಿಲ್ಲ.ಯಾರಿಗೂ ಹೆಚ್ಚಿನ ಮಾಹಿತಿ ಕೊಡದೆ ತೊಂದರೆಯೂ ಆಗದಂತೆ ವ್ಯವಹರಿಸುತ್ತಿರುವೆ. ಇನ್ನೆಷ್ಟು ದಿನ. ವೈದ್ಯರ ಪ್ರಕಾರ ವಾಸಿ ಕಾಣಲು ೩-೪ತಿಂಗಳು ಬೇಕು.ಪ್ರತಿನಿತ್ಯ ಪಶುಗಳಿಗೆ ಕೊಡುವಂತಹ ದೊಡ್ಡ ದೊಡ್ಡ ಮಾತ್ರೆಗಳು ಹೊತ್ತಿಗೆರಡು.ದಿನಕ್ಕೆರಡು ಬಾರಿ.ಮಾತ್ರೆ ಹತ್ತಿರದ ಮೆಡಿಕಲ್ ಶಾಪ್ ನಲ್ಲಿ ಸಿಗುವುದಿಲ್ಲ.ಎಲ್ಲಕ್ಕೂ ಹೋಗಬೇಕು ವಿಕ್ಟೋರಿಯಾ ಆಸ್ಪತ್ರೆ ಹತ್ತಿರದ ಅಂಗಡಿಗೆ.ದೊಡ್ಡ ಖಾಯಿಲೆ.ದೊಡ್ಡ ಶಾಪು.ಆದರೆ ಬೆಲೆ ಕಡಿಮೆ.ಮಾತ್ರೆಯ ಗಾತ್ರ ದೊಡ್ಡದು.ಎಲ್ಲ ಕೆಲಸಕ್ಕೂ ನಿರುತ್ಸಾಹ.ಏನೋ ಆಧ್ಯಾತ್ಮಿಕತೆ.

    ಒಂದು ತಿಂಗಳು ಕಳೆಯಿತು.ಕಂಪನಿಯ ಮುಖ್ಯಾಧಿಕಾರಿಗಳ ಕಛೇರಿಯಲ್ಲಿ ಕೆಲಸವೊಂದಕ್ಕೆ ಕಾಯುತ್ತಾ ಕುಳಿತಿದ್ದೆ.ಆಕಸ್ಮಿಕವಾಗಿ ಅಲ್ಲಿಗೆ ಬಂದಿದ್ದ ಪ್ರಥಮ ಚಿಕಿತ್ಸೆ ಮಾಡಿದ್ದ ವೈದ್ಯರ ಭೇಟಿಯಾಯಿತು.ಅವರು ಹೇಗಿದೇರಿ ಕಣ್ಣು ನೋವು ಎಂದಾಗ ವಿಸ್ತಾರವಾಗಿ ನನ್ನ ರೋಗ ಔಷಧೋಪಚಾರದ ಬಗ್ಗೆ ಹೇಳಿದೆ.ಬೇರೆ ವೈದ್ಯರನ್ನು ಕಂಡು ಬಂದ ಬಳಿಕ  ನನಗೆ ತಿಳಿಸಬೇಕಾಗಿತ್ತು.ಎಂದ ಅವರು ಹೇಳಿದ ಖಾಯಿಲೆ ಯನ್ನು ಒಪ್ಪಲಿಲ್ಲ.ಬದಲು ಇನ್ನೊಬ್ಬ ಕಣ್ಣಿನ ತಜ್ಞ ವೈದ್ಯರ ಬಳಿ ಹೋಗಲು ಹೇಳಿದರು.ಈಗ ಹೊಸ ವೈದ್ಯರ ಬಳಿ ಪುನಃ ಕಣ್ಣಿನ ಪರೀಕ್ಷೆ. ಖಾಯಿಲೆಯ ಲಕ್ಷಣಗಳಾದ ಮಂದ ದೃಷ್ಟಿ, ತಲೆನೋವಿನೊಂದಿಗೆ ನರಳಿ ಕೆಲವು ಘಂಟೆಗಳ ನಂತರ  ಎಂದಿನಂತೆ ಸರಿಯಾಗಿದ್ದು  ಹೀಗೆ ವಿವರಗಳನ್ನು ಕೂಲಂಕಷವಾಗಿ ಕೇಳಿಕೊಂಡರು.ನಂತರ ಕಣ್ಣು ಶುದ್ದಿ ಮಾಡಿ ಪರೀಕ್ಷೆ ಯಾಯಿತು.ಅವರ ಧೀರ್ಘ ತಪಾಸಣೆಯ ತರುವಾಯ ಅವರ ತೀರ್ಮಾನ ನೆಮ್ಮದಿ ತರುವುದಾಗಿತ್ತು. ಇದು  ಸೀಎಸ್ಆರ್ ಎಂಬ  ತಾತ್ಕಾಲಿಕ ಕಣ್ಣಿನ ದೋಷವಾಗಿದ್ದು ವಿಶ್ವದಲ್ಲಿ ಅತಿ ಕಡಿಮೆ ಮಂದಿ ಇದರಿಂದ ನರಳುತ್ತಿರುವರು, ಇದಕ್ಕೆ ತೊಂದರೆ ಇದ್ದಾಗ ಕೆಲವು ಘಂಟೆಗಳ ವಿಶ್ರಾಂತಿ ಸಾಕು, ನಂತರ ಎಂದಿನಂತೆ ಮಾಮೂಲು ಕೆಲಸಗಳಿಗೆ ಹಿಂದಿರುಗಬಹುದು, ಇದಕ್ಕೆ ಯಾವುದೇ ಔಷಧಿಗಳೂ ಇಲ್ಲ ಅದರ ಅಗತ್ಯವೂ ಇಲ್ಲ ಎಂದರು ‌.ಹಾಗಾದರೆ ಆದ ಟೆಸ್ಟ್,ಅದರ ಫಲಿತಾಂಶ, ನಡೆದ ಔಷಧಿ ಸೇವನೆ ಏಕಾಯಿತು.ಎಂದಾಗ ಆ ಬಗ್ಗೆ ನಾನೇನು ಹೇಳಲಾರೆ. ನಿಮಗಂತೂ ಇರೋ ಸಮಸ್ಯೆ ಇದು.ಔಷಧಿ ಪಥ್ಯ ಎಲ್ಲಾ ನಿಲ್ಲಿಸಿ, ಎಂದಿನಂತೆ ಹಸನ್ಮುಖಿ ಜೀವನ ನಡೆಸಿ ಎಂದಿದ್ದು ಜೀವನದಲ್ಲಿ ಒಂದು ಹೊಸ ಅಧ್ಯಾಯ ವಾದಂತಾಯಿತು.

    ಮನೆಯಲ್ಲಿ ತಂದಿಟ್ಟ ಔಷಧಿ ಗಳನ್ನು ಅಗತ್ಯವಿದ್ದವರಿಗೆ ಕೊಡಿ ಎಂದು ಅಂಗಡಿಯವನಿಗೆ ಹೇಳಿದರೆ ಅವನಿಗೂ ಬೇಡವಾಯಿತು.ಆ ವರೆಗೆ ತಿಂದ ಮಾತ್ರೆಗಳನ್ನು ನೀರು ಎಳನೀರು ಕುಡಿದು ಪರಿಹಾರ ಮಾಡಿಕೊಂಡರೆ ಉಳಿದ ಮಾತ್ರೆಗಳನ್ನು ಕೊಳಚೆ ಚರಂಡಿ ನೀರಿಗೆ ಎಸೆದು ನಿಶ್ಚಿಂತನಾದೆ. ಅಂದಿನಿಂದ ಕೆಲವು ಬಾರಿ ಮಂದ ದೃಷ್ಟಿಯ ತಲೆನೋವು ಭಾಧಿಸಿದೆ. ಆದರೆ ಕೆಲವು ನಿಮಿಷಗಳಿಗೆ ಮಾತ್ರ.ಯಾವ ವೈದ್ಯರೇ ಆಗಲಿ ಧೀರ್ಘಕಾಲಿಕ ಔಷಧಿ ಸೇವನೆ ಹೇಳಿದರೆ, ದೊಡ್ಡ ಖಾಯಿಲೆಯ ಹೆಸರು ಹೇಳಿದರೆ ನಂಬಿ, ಆದರೆ ಇನ್ನೊಬ್ಬ ವೈದ್ಯರಲ್ಲಿ ತೋರಿಸಿ ಮುಂದುವರಿಯುವುದು ಅತ್ಯಂತ ಸೂಕ್ತ.

Comments

  1. ಅನುಭವದ ಎಳೆ, ಅದರ ಸಾಂದರ್ಭಿಕ ವರ್ಣನೆಗಳು ಚೆನ್ನಾಗಿವೆ.ಅದರೊಂದಿಗೇ ಅದಕ್ಕೆ ತಕ್ಕ ಪರಿಹಾರದ ಹಾದಿ ಮತ್ತು ಕೊನೆಯಲ್ಲಿ ರುವ ಸಲಹೆಗಳು ಅನುಕರಣೀಯ.

    ReplyDelete
  2. ನೀನು   ಇತರರಿಗೆ    "ಎರಡನೇ   ಅಭಿಪ್ರಾಯ"  ಪಡೆಯಲು   ಸೂಚಿಸುವುದು    ಅನುಭವಜನ್ಯ  ಅಲ್ಲವೇ ?

    ReplyDelete
  3. ನಿಜ. ಯಾವುದೇ ಅನಾರೋಗ್ಯ ಬಂದು, ವೈದ್ಯರು ದೀರ್ಘ ಕಾಲ ಆಗಬಹುದು ಎಂದರೆ, ಖಂಡಿತಾ ಮತ್ತೊಂದು ವೈದ್ಯರಿಗೆ ತೋರಿಸುವುದು ಉತ್ತಮ.

    ReplyDelete
  4. ಈ ಕಾಯಿಲೆಯ ಅನುಭವ ಇದೆಯಲ್ಲಾ ಇದು ಸಂಸಾರ ಗುಟ್ಟು ವ್ಯಾಧಿ ರಟ್ಟು ಅನ್ನುವ ಹಾಗೆ ಇರಬೇಕು. ಇದರಿಂದಾದ ಕಹಿ ಅನುಭವಗಳಿಂದ ಬೇರೆಯವರಿಗೆ ಅನುಕೂಲವಾಗುವ ಸಂಭವವಿರುತ್ತದೆ. ನಾವು ರೋಗಿಗಳನ್ನು ನೋಡಲು ಹೋಗುವುದು ಅವರಿಗೆ
    ಧೈರ್ಯ ಹೇಳುವುದಲ್ಲದೆ , ಅವರ ಅನುಭವ ಮತ್ತು ಕಾಯಿಲೆಯಿಂದ ಗುಣವಾದ ಬಗ್ಗೆ ತಿಳಿಯು ವುದರಿಂದ
    ಕೆಲವು ಸಲ ನಮಗೆ ತಿಳಿದ ಸಲಹೆ ಕೊಡಲು ಸಹಾಯವಾಗುತ್ತದೆ. ನಿಮ್ಮ ಅನುಭವ ಬರಹದ
    ಮೂಲಕ ತಿಳಿಸುತ್ತಿರುವುದಕ್ಕೆ ಧನ್ಯವಾದಗಳು

    ReplyDelete
  5. Yes,Second opinion is always good.

    ReplyDelete

Post a Comment

Popular posts from this blog

ಆರೋಗ್ಯ ಕವಚ

ಮನುಷ್ಯ ತಾನು ಸುಖವಾಗಿರಲು ದುಡಿಯುತ್ತಾನೆ. ಹಣ ಕೂಡಿಡುತ್ತಾನೆ. ಆಸ್ತಿ ಗಳಿಸುತ್ತಾನೆ. ತಾನು ಮತ್ತು ತನ್ನ ಪ್ರೀತಿಯ ಕುಟುಂಬವನ್ನು ಸುಖವಾಗಿಡುವ ಕನಸುಗಳು ಸದಾ ನಡೆಯುತ್ತಲೇ ಇರುತ್ತವೆ. ಈ ಕನಸಿನ ಮಾರ್ಗದಲ್ಲಿ ಆಕಸ್ಮಿಕವಾಗಿ ಅವನ ದೇಹಕ್ಕೆ ದೊಡ್ಡ ಅನಾರೋಗ್ಯವೇನಾದರೂ ಎದುರಾದರೆ ಬಹಳ ಕಷ್ಟವಾಗುತ್ತದೆ. ಸುಧಾರಿಸಿಕೊಳ್ಳಲು ಸಾಧ್ಯವಾಗದಂತೆ ಗಳಿಸಿದ್ದೆಲ್ಲವೂ ನೀರಿನಂತೆ ಕರಗಿ ಹೋಗುತ್ತದೆ. ಇದರಿಂದ ಜೀವನದಲ್ಲಿ ಹಾಕಿಕೊಂಡ ಗುರಿಯನ್ನು ಸಾಧಿಸಲಾಗುವುದಿಲ್ಲ. ಇಂತಹ ಪರಿಸ್ಥಿತಿಯನ್ನು ಆರ್ಥಿಕವಾಗಿ ಸಮರ್ಥವಾಗಿ ಎದುರಿಸಲು ಬೇಕಾಗಿರುವುದು ಆರೋಗ್ಯ ವಿಮೆ. ಇದನ್ನು ಹೆಲ್ತ್ ಇನ್ಶುರೆನ್ಸ್ ( Heath Insurance) ಅಥವಾ ಮೆಡಿಕಲ್ ಇನ್ಸೂರೆನ್ಸ್ (Medical Insurance) ಎಂದೂ ಹೇಳಲಾಗುತ್ತದೆ. ಇದು ಆರೋಗ್ಯ ರಕ್ಷಣೆಗಾಗಿ ಎಂದೇ ಪಡೆದರೂ ಮುಂದಿನ ನಮ್ಮ ಜೀವನಕ್ಕಾಗಿ, ಪರೋಕ್ಷವಾಗಿ ಕೂಡಿಟ್ಟಿರುವ ಆಸ್ತಿಯನ್ನು ರಕ್ಷಣೆ ಮಾಡುತ್ತದೆ. ಈ ಬಗ್ಗೆ ತಿಳಿದುಕೊಳ್ಳಬೇಕಾದ ವಿಷಯಗಳು ಬಹಳ ಅನಿವಾರ್ಯ. ಇವೆಲ್ಲವನ್ನೂ ಸವಿಸ್ತಾರವಾಗಿ ತಿಳಿಸಿ ಹೇಳುವ ಪ್ರಯತ್ನವೇ ಈ ಲೇಖನ. ಆರೋಗ್ಯ ವಿಮೆ ಎಂದರೇನು? ನಾವು ಸದಾ ಆರೋಗ್ಯದಿಂದ ಇರಬೇಕೆಂದು ಬಯಸುವೆವಾದರೂ "ಮನುಷ್ಯ ಎಂದಮೇಲೆ ಏನಾದರೂ ಕಾಯಿಲೆ ಇದ್ದೇ ಇರುತ್ತದೆ" ಎಂಬಂತೆ ಹಲವು ಸಾರಿ ತಲೆನೋವು, ಜ್ವರ, ನೆಗಡಿ ಮೈ ಕೈ ನೋವು ಎಂದು ನರಳುತ್ತೇವೆ. ಚಿಕೂನ್ ಗುನ್ಯಾ, ಡೆಂಗ್ಯೂ, ಕೊರೋನಾ ಇತ್ಯಾದಿ ಕಾಯಿಲೆಗಳ...

ಮಿತ್ರನೊಬ್ಬನ ಆತ್ಮಾವಲೋಕನ

ಮಿತ್ರ ಶಂಕರ ಒಮ್ಮೆ ಹೇಳಿದ್ದ, ಕೇಳಿ ಹಳತಾದರೂ ಓದುಗರಿಗೆ ಹೊಸತಾಗಿ, ಆತ್ಮೊನ್ನತಿಗೆ ಸಹಾಯ ವೆನಿಸುವ, ಆತ್ಮಾವಲೋಕನದ ಸಾಲುಗಳು ನಿಜವಾಗಿಯೂ ಕುತೂಹಲಕಾರಿಯಾಗಿದೆ. ಅದನ್ನು ಅವನಿಂದಲೇ ಕೇಳಿ: ಕಛೇರಿಯಲ್ಲಿ ವಿಶೇಷವಾದ ಕೆಲಸವೊಂದನ್ನು ನಿರೀಕ್ಷೆಗಿಂತ ಮೊದಲೇ ಯಶಸ್ವಿಯಾಗಿ ಪೂರೈಸಿದ್ದರಿಂದ ತುಂಬಾ ಸಂತೋಷವಾಗಿತ್ತು. ಆದ್ದರಿಂದ ಮನೆಗೆ ಸ್ವಲ್ಪ ಬೇಗನೆ ಬಂದಿದ್ದೆ. ಪ್ರತಿದಿನ ಯಾಕೆ ಲೇಟು ಎಂಬ ಮುಖವನ್ನು ಮಾಡುತ್ತಿದ್ದ ಮಡದಿ ಪ್ರೇಮ ಕೊಟ್ಟ ಒಂದು ಬಿಸಿಯಾದ ಸ್ಟ್ರಾಂಗ್ ಕಾಫಿ ಕುಡಿದು ನಿಧಾನವಾಗಿ ಸೋಫಾದ ಮೇಲೆ ಕಾಲು ಚಾಚುತ್ತಿದ್ದಂತೆಯೇ ನಿದ್ರಾ ದೇವಿಗೆ ವಶನಾಗಿ ಕೆಲವು ಸಮಯವಾಗಿರಬಹುದು. ಕೆಲವೇ ನಿಮಿಷಗಳಲ್ಲಿ ನಿದ್ದೆ ಬಂದಿತ್ತಾದರೂ ತಾಳಲಾರೆನೆಂಬ ಎದೆನೋವು, ಇದ್ದಕ್ಕಿದ್ದಂತೆ ಉಸಿರುಗಟ್ಟಿಸುವಂತಹ ಅನುಭವ. ಏನು ಗೊತ್ತಾಗುತ್ತಿಲ್ಲ. ಕೆಲವೇ ನಿಮಿಷಗಳಲ್ಲಿ ಗಾಬರಿಯಿಂದ ಪ್ರೇಮಾ, ಮಗಳು - ಅಳಿಯನನ್ನು ಕರೆಯುತ್ತಿದ್ದಾಳೆ. ಕಾಲು ಕೈ ಎದೆ ಭಾಗಗಳನ್ನು ಹಿತವಾಗಿ ಯಾರೋ ತಡವುತ್ತಿದ್ದಾರೇನೋ. ಹಾಗೆಯೇ ನನ್ನನ್ನು ಎತ್ತಿದಂತಹ ಅನುಭವ. ಎಲ್ಲಿಗೋ ಕರೆದುಕೊಂಡು ಹೋಗುತ್ತಿರಬಹುದು. ಯಾವುದೋ ವಾಹನದ ಸದ್ದು. ನನ್ನ ಕೈಗಳನ್ನು ಯಾರೋ ಎತ್ತುತ್ತಿದ್ದಾರೆ, ಏನಾಗುತ್ತಿದೆ? ಹೊಸತರದ ಹಾಸಿಗೆ. ಮೂಗು ಬಾಯಿಗೆ ಏನೋ ತಡೆ. ಸಣ್ಣದಾಗಿ ಬಿಟ್ಟು ಬಿಟ್ಟು ಕೇಳುವ ಏಕತಾನದ ಸದ್ದು. ಹಠಾತ್ತಾಗಿ ನಿಶ್ಯಬ್ದ. ನೀರವ ವಾತಾವರಣ. ಈಗ ನನಗೆ ನೋವು ಇದೆಯೇ. ಟಿವಿಯಲ್ಲಿ ಯಾವುದೋ ಕ...

ಬಾಳ ರೂಪಿಸಿದ ವಿಮೆ

ನಾವು ಸಮಾಜದಲ್ಲಿ ನಮಗಾಗಿ ನಾವು ಅನೇಕ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದೇವೆ. ಅದನ್ನು ಒದಗಿಸಲು ಅದರದೇ ಆದ ಸಂಸ್ಥೆ ಹಾಗೂ ಸೇವಾ ಸಿಬ್ಬಂದಿಗಳಿದ್ದಾರೆ. ಇವು ನಮ್ಮ ಬದುಕು ಸುಗಮವಾಗಲು ಸಹಾಯಕವಾಗಿ ವೆ . ಇವಲ್ಲದೆ  ಜೀವನದಲ್ಲಿ ನಮ್ಮ ಉನ್ನತಿಗೆ ಬಂಧುಮಿತ್ರರ ಪಾತ್ರ ತೀರಾ ಸಾಮಾನ್ಯ. ಆದರೆ ಸಂಸ್ಥೆಯೊಂದು ಕೊಡುವ ಸೇವೆಯೇ ಒಬ್ಬರ ಬದುಕನ್ನು ರೂಪಿಸಿಕೊಳ್ಳಲು ಅವಕಾಶವಾದ  ಘಟನೆಯ ಸ್ಮರಣೆಯೇ ಈ ಕಥೆಯ ಜೀವಾಳ. ಈ ಬೆಳಿಗ್ಗೆ ಬೆಂಗಳೂರಿನಿಂದ ಲಂಡನ್ ವರೆಗಿನ ಆಕಾಶ ಪಯಣ. ಇದಕ್ಕಾಗಿ ನಿನ್ನೆಯಿಂದಲೇ ನಿದ್ದೆ ಇಲ್ಲ. ರಾತ್ರಿ ಪೂರ್ತಿ ವಿಮಾನ ನಿಲ್ದಾಣದಲ್ಲಿ ಸಮಯ ಕಳೆದೆವು. ಲಂಡನ್ನಿನ ಸಮಯದಂತೆ ಮಧ್ಯಾಹ್ನವೇ ಬಂದೆವು. ಅಮೇರಿಕಾಕ್ಕೆ ಹೋಗುವ ವಿಮಾನ ಸಂಜೆ ಐದು ಗಂಟೆಗೆ. ಆದ್ದರಿಂದ ಕಾಯಲೇಬೇಕು. ವಿಮಾನ ನಿಲ್ದಾಣದಲ್ಲಿ ಆಯಾಸದಿಂದ ನಿದ್ದೆ ಬರುತ್ತಿದ್ದರೂ ಎಚ್ಚರವಾಗದಷ್ಟು ನಿದ್ದೆ ಬಂದು ಮುಂದಿನ ವಿಮಾನ ತಪ್ಪಿ ಹೋದರೆ ಎಂಬ ಭಯದಿಂದ ಕಣ್ಣು ಮುಚ್ಚಲಿಲ್ಲ. ಈಗ ಅಮೇರಿಕಾದ ವಾಶಿಂಗ್ಟನ್ಗೆ ಹೋಗುವ ವಿಮಾನದಲ್ಲಿ ಕುಳಿತಿದ್ದೇನೆ. ಪಕ್ಕದಲ್ಲಿ ಕುಳಿತ ನಮ್ಮವರಿಗೆ ಗಾಢ ನಿದ್ರೆ. ವಿಮಾನ ಪ್ರಯಾಣವೇನೋ ಹೆಮ್ಮೆಯ ವಿಷಯವೇ. ಆದರೆ ಇದೇ ಮೊದಲ ಪ್ರಯಾಣವಾದ್ದರಿಂದ ಏನೋ ಆತಂಕ, ಸಂತೋಷ, ದುಗುಡ ಜೊತೆಗೆ ಸಡಗರ. ಸುತ್ತ ನೋಡುತ್ತಾ ನನ್ನ ಬಗ್ಗೆ ನಾನು ಯೋಚಿಸುತ್ತಿದ್ದೇನೆ. ನಾನು ಎಲ್ಲಿದ್ದೇನೆ. ಎಲ್ಲಿಗೆ ಬಂದೆ. ಇರುವನೊಬ್ಬ ಮಗ ಆನಂದನೇ ನಮಗೆ ಸರ್ವಸ್ವ. ಆದ್ದ...