Skip to main content

ಜೀವನತತ್ವ - ಹಾಡಿನ ರೂಪ

ನಾವು ಚಿಕ್ಕವರಿದ್ದಾಗ, ಆಟ ಆಡುವಾಗ ಆಟದ ಮಧ್ಯೆ ಕೇವಲ ಒಬ್ಬರನ್ನು ಗುರುತಿಸ ಬೇಕಾದಾಗ ಈ ಕೆಳಕಂಡ ಪ್ರಾಸಬದ್ಧವಾಗಿ ಜೋಡಿಸಿದ ಪದಗಳ ಸಾಲನ್ನು ಹಾಡಿನ ರೂಪದಲ್ಲಿ ಹೇಳುತ್ತಿದ್ದವು:

"ಅವಲಕ್ಕಿ ಪವಲಕ್ಕಿ ಕಾಂಚಣ ಮಿಣಮಿಣ
ಡಾಂ ಡೂಂ, ಟಸ್ ಪುಸ್, ಕೊಯ್ ಕೊಟಾರ್"

ಪದಗಳನ್ನು ಒಬ್ಬೊಬ್ಬರಿಗೆ ಒಂದೊಂದು ಪದವಂತೆ ತೋರಿಸುತ್ತಾ ಹೇಳುತ್ತಿದ್ದೆವು. ಕಡೆಯಲ್ಲಿ ಕೊಟಾರ್ ಎಂಬ ಶಬ್ದವು ಯಾರಿಗೆ ಬರುತ್ತದೆಯೋ ಅವರನ್ನು ಸೋತಿದ್ದಾರೆಂದೋ ಅಥವಾ ಗೆದ್ದಿದ್ದಾರೆಂದೋ ಎಂದು ಗುರುತಿಸಿದ್ದೆವು. ಇದು ಅಂದು ಕೇವಲ ಆಟವೇ ಆಗಿದ್ದರೂ ಇದರಲ್ಲಿ ಪ್ರತಿಯೊಬ್ಬರ ಜೀವನದ ಹಲವು ಹಂತಗಳನ್ನು ವಿವರಿಸುವ ತತ್ವವೇ ಅಡಗಿದೆ ಎಂಬುವುದನ್ನು ತಿಳಿದಿರಲಿಲ್ಲ. ಆದರೆ ಅವುಗಳ ಅರ್ಥವೇ ಗಹನ.

ಅವಲಕ್ಕಿ - ಮನುಷ್ಯ ಜೀವಿ ಬಾಲ್ಯದಲ್ಲಿದ್ದಾಗ ಮೃದುವಾದ ಆಹಾರವನ್ನು ಸೇವಿಸುತ್ತದೆ .  ಇರತಕ್ಕ ಆಹಾರವನ್ನು ನೆನೆಸಿ ಅಥವಾ ಬೇಯಿಸಿ ಹಿಸುಕಿ ಅವಲಕ್ಕಿ ಯಂತೆ ಮಾಡಿ ಸೇವಿಸುತ್ತದೆ . ಇದನ್ನು ಸಂಕ್ಷಿಪ್ತವಾಗಿ ಅವಲಕ್ಕಿ ಎಂದು ಕರೆಯುತ್ತಾರೆ.

ಪವಲಕ್ಕಿ - ದೊಡ್ಡವನಾದಂತೆ ಈ ಜೀವಿಗೆ ಆಹಾರದ ಪ್ರಮಾಣ ಕನಿಷ್ಠ ಒಂದು ಪಾವು ಬೇಕಾಗುತ್ತದೆ. ಆಹಾರವನ್ನು ಅದರ ಮೂಲರೂಪವಾದ ಅಕ್ಕಿ ಎಂದು ಗುರುತಿಸಿ ಅದರ ಪ್ರಮಾಣಕ್ಕೆ ಸೇರಿಸಿದಾಗ ಅದು ಪಾವಲಕ್ಕಿ ಅಥವಾ ಪವಲಕ್ಕಿ ಎಂದಾಗುತ್ತದೆ. (ವಯೋಮಾನ ಸುಮಾರು ೨೫ ರವರೆಗೆ )

ಕಾಂಚಾಣ - ಇನ್ನು ಜೀವಿ ಬೆಳೆದಂತೆ ಅದು ದುಡಿಯಲು ಪ್ರಾರಂಭಿಸುತ್ತದೆ  . ಅದರಲ್ಲಿ ಹಣ ಅಥವಾ ದ್ರವ್ಯ ಅಥವಾ ಅದರ ಮೂಲರೂಪವಾದ ಬಂಗಾರ ಸಂಗ್ರಹವಾಗುತ್ತದೆ. ಬಂಗಾರವನ್ನು ಕಾಂಚಾಣ ಎಂದು ಕರೆಯುತ್ತಾರೆ. ಈ ವೇಳೆಯಲ್ಲಿ ಜೀವಿಗೆ ವಿವಾಹವಾಗಿ ಸಂಗಾತಿ ಮಕ್ಕಳ ಜೊತೆ ಸಡಗರ ಸಂತೋಷದ ಜೀವನ  (ವಯೋಮಾನ ೨೫ ರಿಂದ ೩೫)

ಮಿಣ ಮಿಣ - ಕೈನಲ್ಲಿ ದ್ರವ್ಯಗಳು ಓಡಾಡುತ್ತಿದ್ದಾಗ ಚೆನ್ನಾಗಿರತಕ್ಕಂತಹ ಬಟ್ಟೆಗಳು, ಒಳ್ಳೆಯ ಸೀರೆಗಳು, ಉಂಗುರ, ವಾಚ್,  ನೆಕ್ಲೆಸ್ ಸರಗಳು ಬ್ರೇಸ್ಲೆಟ್, ಇತ್ಯಾದಿ ಆಭರಣಗಳು ಸೇರ್ಪಡೆಯಾಗುತ್ತದೆ. ಆಭರಣಗಳಿಗೆ ತಕ್ಕಂತಹ ಯವ್ವನದ ದೇಹದ ಮೈಕಟ್ಟು ಅವನನ್ನು ಮಿಣ ಮಿಣ ವಾಗಿ ಚೆನ್ನಾಗಿ ಹೊಳೆಯುವಂತೆ ಕಾಣಿಸುತ್ತದೆ. (ವಯೋಮಾನ ೩೫ ರಿಂದ ೪೫)

ಡಾಂ ಡೂಂ - ಹಣದ ಅನುಕೂಲತೆ, ಹೊಳೆಯುವ ಯೌವ್ವನ, ಸುತ್ತಮುತ್ತಲೂ ಇಷ್ಟಪಡುವ ಜನಗಳು ಸಮಾಜದಲ್ಲಿನ ಸ್ಥಾನಮಾನಗಳು ಅವರನ್ನು ಸಂತೋಷವಾಗಿಡಲು ಅವನು ಧಾರಾಳವಾಗಿ ಮಾಡುವ ಖರ್ಚನ್ನು ಡಾಂ ಡೂಂ ಎಂದು ಕರೆಯುತ್ತಾರೆ. (ವಯೋಮಾನ ೪೫ ರಿಂದ ೫೫)

ಟಸ್ ಪುಸ್ -  ಈ ವೇಳೆಗೆ ಮಕ್ಕಳ ವಿದ್ಯಾಭ್ಯಾಸ ಮುಗಿಸಿ ಕೆಲಸಕ್ಕೆ ಸೇರಿರುತ್ತಾರೆ ಅಥವಾ ಆ ಪ್ರಯತ್ನದಲ್ಲಿ ಇರುತ್ತಾರೆ. ಕೆಲವು ಮಕ್ಕಳಿಗೆ ಮದುವೆಯಾಗಿರುತ್ತದೆ. ಅವರೂ ಸಹ ಮನೆಯಲ್ಲಿ ತಮ್ಮ ಅಭಿಪ್ರಾಯವನ್ನು ಮಂಡಿಸುವವರಾದ್ದರಿಂದ ಮನೆಯಲ್ಲಿ ಭಿನ್ನಾಭಿಪ್ರಾಯಗಳು ಪ್ರಾರಂಭವಾಗಿರುತ್ತದೆ. ಅವರ ಧ್ವನಿ ದೊಡ್ಡದಾದಾಗ ನಿಧಾನವಾಗಿ ಟಸ್ ಎಂದು ಉಸಿರು ಬಿಡ ಬೇಕಾಗುತ್ತದೆ. 
ಸಂಸಾರ ಮಕ್ಕಳೊಂದಿಗೆ ವಾದಗಳು ಹೆಚ್ಚಾದಾಗ ಪುಸ್ ಎಂದುಕೊಳ್ಳುತ್ತಾ ಸೋಲೊಪ್ಪಿ ಸುಮ್ಮನೆ ಕುಳಿತುಕೊಳ್ಳಬೇಕಾಗುತ್ತದೆ.  ಟಸ್ಪುಸ್ ಎಂದು ತನ್ನಲ್ಲಿಯೇ ತಾನು ಹೇಳಿಕೊಳ್ಳುವ ಬೇಸರದ ಸ್ವಗತ ಪ್ರಾರಂಭವಾಗುತ್ತದೆ. ನಿಶ್ಶಕ್ತಿ ಅಥವಾ ನಿವೃತ್ತಿಯು ಆನಿಶ್ಚಿತತೆಯ ಯೋಚನೆ ಮಾಡಿಸುತ್ತದೆ  (ವಯೋಮಾನ ೫೫ ರಿಂದ ೬೫).

ಕೊಯ್ ಕೊಟಾರ್ - ವಯೋಮಾನಕ್ಕೆ ತಕ್ಕಂತಹ ಕಾಯಿಲೆಗಳು, ಓಡಾಡಲಾಗದ ನಿಶ್ಶಕ್ತಿ, ಮಕ್ಕಳು ಸಂಸಾರದವರಿಂದ ಇವನ ಬಗ್ಗೆ ನಡೆಯುವ  ತಾತ್ಸಾರ, ವಿಷಯ ಹಂಚಿಕೊಳ್ಳಲು ಸಿಗದ ಮಿತ್ರರು ಇವುಗಳೆಲ್ಲವೂ ಕೊಯ್ ಕೊಯ್ ಎಂದು ನರಳುತ್ತಾ  ಒಂದು ದಿನ ಕೊಟಾರ್ ಎಂದು ಪ್ರಾಣ ಬಿಡುತ್ತದೆ. ಹೀಗೆ ಕೊಟಾರ್ ಎನ್ನುತ್ತಾ ಅದು ಬದುಕಲು ಸೋತರೂ ಒಂದು ರೀತಿಯಲ್ಲಿ ಈ ಭವಬಂಧನದಿಂದ ಗೆದ್ದಂತೆಯೇ.

ಇಂತಹ ಜೀವನ ಚಕ್ರವನ್ನು ವಿವರಿಸುವ ನಾಲ್ಕು ಸಾಲಿನ ಹಾಡಿನ ರೂಪ ತುಂಬಾ ಮಾರ್ಮಿಕವಾಗಿದೆ. ಈ ಕಥೆ ಓದಿ ಮನನ ಮಾಡಿಕೊಂಡರೆ ತನ್ನ ಜೀವನ ಹೇಗೆ ಸಾಗುತ್ತದೆ ಎಂದು ಯೋಚಿಸಿ ಜೀವನಕ್ರಮವನ್ನು ತಿದ್ದಿಕೊಳ್ಳಲು ಅವಕಾಶವಾಗುತ್ತದೆ. ಅಲ್ಲವೇ.

Comments

  1. "ಅದ್ಭುತವಾದ   ಅರ್ಥ  ವಿಶ್ಲೇಷಣೆ"   ಮೆಚ್ಚಿದೆ  ತಮ್ಮಾ   ನಿನ್ನ   ಸಂಸ್ಕಾರಯುತ   ಶೈಲಿಯ.    ನಿನ್ನ   ಪ್ರೀತಿಯ   ಹಿರಿಯಣ್ಣ. 

    ReplyDelete

Post a Comment

Popular posts from this blog

ಆರೋಗ್ಯ ಕವಚ

ಮನುಷ್ಯ ತಾನು ಸುಖವಾಗಿರಲು ದುಡಿಯುತ್ತಾನೆ. ಹಣ ಕೂಡಿಡುತ್ತಾನೆ. ಆಸ್ತಿ ಗಳಿಸುತ್ತಾನೆ. ತಾನು ಮತ್ತು ತನ್ನ ಪ್ರೀತಿಯ ಕುಟುಂಬವನ್ನು ಸುಖವಾಗಿಡುವ ಕನಸುಗಳು ಸದಾ ನಡೆಯುತ್ತಲೇ ಇರುತ್ತವೆ. ಈ ಕನಸಿನ ಮಾರ್ಗದಲ್ಲಿ ಆಕಸ್ಮಿಕವಾಗಿ ಅವನ ದೇಹಕ್ಕೆ ದೊಡ್ಡ ಅನಾರೋಗ್ಯವೇನಾದರೂ ಎದುರಾದರೆ ಬಹಳ ಕಷ್ಟವಾಗುತ್ತದೆ. ಸುಧಾರಿಸಿಕೊಳ್ಳಲು ಸಾಧ್ಯವಾಗದಂತೆ ಗಳಿಸಿದ್ದೆಲ್ಲವೂ ನೀರಿನಂತೆ ಕರಗಿ ಹೋಗುತ್ತದೆ. ಇದರಿಂದ ಜೀವನದಲ್ಲಿ ಹಾಕಿಕೊಂಡ ಗುರಿಯನ್ನು ಸಾಧಿಸಲಾಗುವುದಿಲ್ಲ. ಇಂತಹ ಪರಿಸ್ಥಿತಿಯನ್ನು ಆರ್ಥಿಕವಾಗಿ ಸಮರ್ಥವಾಗಿ ಎದುರಿಸಲು ಬೇಕಾಗಿರುವುದು ಆರೋಗ್ಯ ವಿಮೆ. ಇದನ್ನು ಹೆಲ್ತ್ ಇನ್ಶುರೆನ್ಸ್ ( Heath Insurance) ಅಥವಾ ಮೆಡಿಕಲ್ ಇನ್ಸೂರೆನ್ಸ್ (Medical Insurance) ಎಂದೂ ಹೇಳಲಾಗುತ್ತದೆ. ಇದು ಆರೋಗ್ಯ ರಕ್ಷಣೆಗಾಗಿ ಎಂದೇ ಪಡೆದರೂ ಮುಂದಿನ ನಮ್ಮ ಜೀವನಕ್ಕಾಗಿ, ಪರೋಕ್ಷವಾಗಿ ಕೂಡಿಟ್ಟಿರುವ ಆಸ್ತಿಯನ್ನು ರಕ್ಷಣೆ ಮಾಡುತ್ತದೆ. ಈ ಬಗ್ಗೆ ತಿಳಿದುಕೊಳ್ಳಬೇಕಾದ ವಿಷಯಗಳು ಬಹಳ ಅನಿವಾರ್ಯ. ಇವೆಲ್ಲವನ್ನೂ ಸವಿಸ್ತಾರವಾಗಿ ತಿಳಿಸಿ ಹೇಳುವ ಪ್ರಯತ್ನವೇ ಈ ಲೇಖನ. ಆರೋಗ್ಯ ವಿಮೆ ಎಂದರೇನು? ನಾವು ಸದಾ ಆರೋಗ್ಯದಿಂದ ಇರಬೇಕೆಂದು ಬಯಸುವೆವಾದರೂ "ಮನುಷ್ಯ ಎಂದಮೇಲೆ ಏನಾದರೂ ಕಾಯಿಲೆ ಇದ್ದೇ ಇರುತ್ತದೆ" ಎಂಬಂತೆ ಹಲವು ಸಾರಿ ತಲೆನೋವು, ಜ್ವರ, ನೆಗಡಿ ಮೈ ಕೈ ನೋವು ಎಂದು ನರಳುತ್ತೇವೆ. ಚಿಕೂನ್ ಗುನ್ಯಾ, ಡೆಂಗ್ಯೂ, ಕೊರೋನಾ ಇತ್ಯಾದಿ ಕಾಯಿಲೆಗಳ...

ಮಿತ್ರನೊಬ್ಬನ ಆತ್ಮಾವಲೋಕನ

ಮಿತ್ರ ಶಂಕರ ಒಮ್ಮೆ ಹೇಳಿದ್ದ, ಕೇಳಿ ಹಳತಾದರೂ ಓದುಗರಿಗೆ ಹೊಸತಾಗಿ, ಆತ್ಮೊನ್ನತಿಗೆ ಸಹಾಯ ವೆನಿಸುವ, ಆತ್ಮಾವಲೋಕನದ ಸಾಲುಗಳು ನಿಜವಾಗಿಯೂ ಕುತೂಹಲಕಾರಿಯಾಗಿದೆ. ಅದನ್ನು ಅವನಿಂದಲೇ ಕೇಳಿ: ಕಛೇರಿಯಲ್ಲಿ ವಿಶೇಷವಾದ ಕೆಲಸವೊಂದನ್ನು ನಿರೀಕ್ಷೆಗಿಂತ ಮೊದಲೇ ಯಶಸ್ವಿಯಾಗಿ ಪೂರೈಸಿದ್ದರಿಂದ ತುಂಬಾ ಸಂತೋಷವಾಗಿತ್ತು. ಆದ್ದರಿಂದ ಮನೆಗೆ ಸ್ವಲ್ಪ ಬೇಗನೆ ಬಂದಿದ್ದೆ. ಪ್ರತಿದಿನ ಯಾಕೆ ಲೇಟು ಎಂಬ ಮುಖವನ್ನು ಮಾಡುತ್ತಿದ್ದ ಮಡದಿ ಪ್ರೇಮ ಕೊಟ್ಟ ಒಂದು ಬಿಸಿಯಾದ ಸ್ಟ್ರಾಂಗ್ ಕಾಫಿ ಕುಡಿದು ನಿಧಾನವಾಗಿ ಸೋಫಾದ ಮೇಲೆ ಕಾಲು ಚಾಚುತ್ತಿದ್ದಂತೆಯೇ ನಿದ್ರಾ ದೇವಿಗೆ ವಶನಾಗಿ ಕೆಲವು ಸಮಯವಾಗಿರಬಹುದು. ಕೆಲವೇ ನಿಮಿಷಗಳಲ್ಲಿ ನಿದ್ದೆ ಬಂದಿತ್ತಾದರೂ ತಾಳಲಾರೆನೆಂಬ ಎದೆನೋವು, ಇದ್ದಕ್ಕಿದ್ದಂತೆ ಉಸಿರುಗಟ್ಟಿಸುವಂತಹ ಅನುಭವ. ಏನು ಗೊತ್ತಾಗುತ್ತಿಲ್ಲ. ಕೆಲವೇ ನಿಮಿಷಗಳಲ್ಲಿ ಗಾಬರಿಯಿಂದ ಪ್ರೇಮಾ, ಮಗಳು - ಅಳಿಯನನ್ನು ಕರೆಯುತ್ತಿದ್ದಾಳೆ. ಕಾಲು ಕೈ ಎದೆ ಭಾಗಗಳನ್ನು ಹಿತವಾಗಿ ಯಾರೋ ತಡವುತ್ತಿದ್ದಾರೇನೋ. ಹಾಗೆಯೇ ನನ್ನನ್ನು ಎತ್ತಿದಂತಹ ಅನುಭವ. ಎಲ್ಲಿಗೋ ಕರೆದುಕೊಂಡು ಹೋಗುತ್ತಿರಬಹುದು. ಯಾವುದೋ ವಾಹನದ ಸದ್ದು. ನನ್ನ ಕೈಗಳನ್ನು ಯಾರೋ ಎತ್ತುತ್ತಿದ್ದಾರೆ, ಏನಾಗುತ್ತಿದೆ? ಹೊಸತರದ ಹಾಸಿಗೆ. ಮೂಗು ಬಾಯಿಗೆ ಏನೋ ತಡೆ. ಸಣ್ಣದಾಗಿ ಬಿಟ್ಟು ಬಿಟ್ಟು ಕೇಳುವ ಏಕತಾನದ ಸದ್ದು. ಹಠಾತ್ತಾಗಿ ನಿಶ್ಯಬ್ದ. ನೀರವ ವಾತಾವರಣ. ಈಗ ನನಗೆ ನೋವು ಇದೆಯೇ. ಟಿವಿಯಲ್ಲಿ ಯಾವುದೋ ಕ...

ಬಾಳ ರೂಪಿಸಿದ ವಿಮೆ

ನಾವು ಸಮಾಜದಲ್ಲಿ ನಮಗಾಗಿ ನಾವು ಅನೇಕ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದೇವೆ. ಅದನ್ನು ಒದಗಿಸಲು ಅದರದೇ ಆದ ಸಂಸ್ಥೆ ಹಾಗೂ ಸೇವಾ ಸಿಬ್ಬಂದಿಗಳಿದ್ದಾರೆ. ಇವು ನಮ್ಮ ಬದುಕು ಸುಗಮವಾಗಲು ಸಹಾಯಕವಾಗಿ ವೆ . ಇವಲ್ಲದೆ  ಜೀವನದಲ್ಲಿ ನಮ್ಮ ಉನ್ನತಿಗೆ ಬಂಧುಮಿತ್ರರ ಪಾತ್ರ ತೀರಾ ಸಾಮಾನ್ಯ. ಆದರೆ ಸಂಸ್ಥೆಯೊಂದು ಕೊಡುವ ಸೇವೆಯೇ ಒಬ್ಬರ ಬದುಕನ್ನು ರೂಪಿಸಿಕೊಳ್ಳಲು ಅವಕಾಶವಾದ  ಘಟನೆಯ ಸ್ಮರಣೆಯೇ ಈ ಕಥೆಯ ಜೀವಾಳ. ಈ ಬೆಳಿಗ್ಗೆ ಬೆಂಗಳೂರಿನಿಂದ ಲಂಡನ್ ವರೆಗಿನ ಆಕಾಶ ಪಯಣ. ಇದಕ್ಕಾಗಿ ನಿನ್ನೆಯಿಂದಲೇ ನಿದ್ದೆ ಇಲ್ಲ. ರಾತ್ರಿ ಪೂರ್ತಿ ವಿಮಾನ ನಿಲ್ದಾಣದಲ್ಲಿ ಸಮಯ ಕಳೆದೆವು. ಲಂಡನ್ನಿನ ಸಮಯದಂತೆ ಮಧ್ಯಾಹ್ನವೇ ಬಂದೆವು. ಅಮೇರಿಕಾಕ್ಕೆ ಹೋಗುವ ವಿಮಾನ ಸಂಜೆ ಐದು ಗಂಟೆಗೆ. ಆದ್ದರಿಂದ ಕಾಯಲೇಬೇಕು. ವಿಮಾನ ನಿಲ್ದಾಣದಲ್ಲಿ ಆಯಾಸದಿಂದ ನಿದ್ದೆ ಬರುತ್ತಿದ್ದರೂ ಎಚ್ಚರವಾಗದಷ್ಟು ನಿದ್ದೆ ಬಂದು ಮುಂದಿನ ವಿಮಾನ ತಪ್ಪಿ ಹೋದರೆ ಎಂಬ ಭಯದಿಂದ ಕಣ್ಣು ಮುಚ್ಚಲಿಲ್ಲ. ಈಗ ಅಮೇರಿಕಾದ ವಾಶಿಂಗ್ಟನ್ಗೆ ಹೋಗುವ ವಿಮಾನದಲ್ಲಿ ಕುಳಿತಿದ್ದೇನೆ. ಪಕ್ಕದಲ್ಲಿ ಕುಳಿತ ನಮ್ಮವರಿಗೆ ಗಾಢ ನಿದ್ರೆ. ವಿಮಾನ ಪ್ರಯಾಣವೇನೋ ಹೆಮ್ಮೆಯ ವಿಷಯವೇ. ಆದರೆ ಇದೇ ಮೊದಲ ಪ್ರಯಾಣವಾದ್ದರಿಂದ ಏನೋ ಆತಂಕ, ಸಂತೋಷ, ದುಗುಡ ಜೊತೆಗೆ ಸಡಗರ. ಸುತ್ತ ನೋಡುತ್ತಾ ನನ್ನ ಬಗ್ಗೆ ನಾನು ಯೋಚಿಸುತ್ತಿದ್ದೇನೆ. ನಾನು ಎಲ್ಲಿದ್ದೇನೆ. ಎಲ್ಲಿಗೆ ಬಂದೆ. ಇರುವನೊಬ್ಬ ಮಗ ಆನಂದನೇ ನಮಗೆ ಸರ್ವಸ್ವ. ಆದ್ದ...