ಗಿಡಗಳು, ಬಳ್ಳಿಗಳು ವೃಕ್ಷಗಳು ಬೀಜಗಳ ಮೂಲಕ ಉತ್ಪತ್ತಿ ಆಗುತ್ತ ವೆ.ಜನನದ ಆಧಾರಗಳ ಮೇಲೆ ಹೇಳುವುದಾದರೆ ಈ ಜೀವ ಪಂಗಡವನ್ನು ಉದ್ಬೀಜ ಎಂದು ಕರೆಯುತ್ತಾರೆ.ಇವುಗಳು ಬೆಳೆಯುವಾಗ ಆಕಾಶದತ್ತ ದೃಷ್ಟಿಯಿಟ್ಟು ಸೂರ್ಯನ ಶಾಖವನ್ನು ಪಡೆದು ಆಹಾರವನ್ನು ಸೃಷ್ಟಿಸಿಕೊಂಡು ಸತ್ವ ಪೂರ್ಣವಾಗಿರುತ್ತದೆ. ಈ ಗಿಡ ಮರದ ಕೊಂಬೆಗಳನ್ನು ಕತ್ತರಿಸಿದಾಗ ಹೊಸ ಕೊಂಬೆಗಳು ಮೊದಲಿಗಿಂತಲೂ ಚೆನ್ನಾಗಿ ಬೆಳೆಯುತ್ತವೆ.ಎಲೆಗಳೂ ಸಮೃದ್ಧಿಯಾಗಿರುತ್ತದೆ. ಉತ್ಕೃಷ್ಟ ದರ್ಜೆಯ ಫಲ ಉತ್ಪಾದನೆಯಾಗುತ್ತದೆ . ಭತ್ತ ಗೋಧಿ ಎಳ್ಳು ಕಾಳು ಬೇಳೆಗಳು ಇತ್ಯಾದಿಗಳನ್ನು ಗಿಡಗಳು ಸತ್ತ ನಂತರವೇ ಅಥವಾ ಆ ಹಂತದಲ್ಲಿ ಬೇರ್ಪಡಿಸಿ ಅವುಗಳ ಬೀಜಗಳನ್ನು ಆಹಾರವಾಗಿ ಬಳಸುತ್ತೇವೆ. ಹೀಗೆ ಜೀವಿಗಳಿಗೆ ತೊಂದರೆಯಾಗದಂತೆ ಪಡೆಯುವ ಆಹಾರಗಳನ್ನು ಶಾಖಾಹಾರ ಎಂದು ಕರೆಯುತ್ತಾರೆ. ಈ ಉದ್ಬೀಜ ಜೀವಿಗಳು ಆಹಾರಕ್ಕಾಗಿ ಪೂರ್ಣವಾಗಿ ನಿಸರ್ಗವನ್ನೇ ನಂಬಿರುತ್ತವೆ.
ಜಗತ್ತಿನ ಎಲ್ಲಾ ಚರಾಚರ ಜೀವಿಗಳಿಗೆ ಈ ಗಿಡಮರಗಳ ಆಶ್ರಯ ಅನಿವಾರ್ಯ. ಸಸ್ಯವನ್ನು ಆಹಾರವಾಗಿ ಮಾಡಿ ಕೊಂಡಿರುವ, ಹಸುಗಳು, ಕುದುರೆ, ಮೇಕೆಗಳು, ಜಿಂಕೆಗಳು ಮರಿ ಹಾಕುತ್ತವೆ. ಅವುಗಳಿಗೆ ಆಹಾರವಾಗಿ ತನ್ನಲ್ಲಿ ಉತ್ಪತ್ತಿಯಾಗುವ ಹಾಲನ್ನು ನೀಡಿ ಹಾಕುತ್ತವೆ. ಕೆಚ್ಚಲಲ್ಲಿ ಸಂಗ್ರಹವಾಗುವ ಹಾಲು ಹೆಚ್ಚಾದಾಗ ಕಲ್ಲುಬಂಡೆ ಮರಗಳಿಗೆ ಒತ್ತಿ ಹಾಲನ್ನು ವಿಸರ್ಜಿಸುತ್ತವೆ ಅದಕ್ಕೆ ಹೆಚ್ಚಾಗಿರುವ ಹಾಲು ಆದ್ದರಿಂದ ಇದನ್ನು ಸಹ ಮೇಲಿನ ಶಾಖಾಹಾರಕ್ಕೆ ಸೇರಿಸಿರುತ್ತಾರೆ. ಈ ಸಸ್ಯಹಾರಿ ಪ್ರಾಣಿಗಳ ವಿಶೇಷವೇನೆಂದರೆ ಇವುಗಳು ಹುಟ್ಟುತ್ತಲೇ ಓಡಾಡಲು ಪ್ರಾರಂಭಿಸುತ್ತವೆ. ಇದು ಸಸ್ಯಹಾರದ ವಿಶೇಷ ಶಕ್ತಿಯ ಪರಿಣಾಮವಿರಬಹುದು.
ಮಾನವ, ಹಸು, ಕುದುರೆ, ಕುರಿ, ಮೇಕೆಗಳು, ಜಿಂಕೆ, ಆನೆ ಹೀಗೆ ಸಸ್ಯಹಾರಿ ಪ್ರಾಣಿಗಳ ಆಹಾರ ಹಣ್ಣು-ತರಕಾರಿಗಳು, ಭತ್ತ ಗೋಧಿ ಇತ್ಯಾದಿ ಸಸ್ಯಜನ್ಯ ಉತ್ಪನ್ನಗಳು. ಈ ಪ್ರಾಣಿಗಳ ಶರೀರ ವಿನ್ಯಾಸವು ಜೀರ್ಣಾಶಯಕ್ಕೆ ಹೊಂದುವಂತೆ ಕರುಳಿನ ಉದ್ದವು ಮಾಂಸಾಹಾರಿ ಪ್ರಾಣಿಗಳ ಕುರುಳಿಗಿಂತ ಹೆಚ್ಚು ಉದ್ದ ಇರುತ್ತದೆ. ದೇಹದ ರಚನೆಯ ಅನ್ವಯ ಹೇಳುವುದಾದರೆ ಮನುಷ್ಯನು ಶಾಕಾಹಾರಿ ಎಂದು ತಿಳಿಯಬಹುದಾಗಿದೆ. ಇತರ ಪ್ರಾಣಿಗಳನ್ನು ತಿಂದು ಜೀವಿಸುವ ಹುಲಿ ಚಿರತೆ ಕರಡಿ ಇತ್ಯಾದಿ ಪ್ರಾಣಿಗಳೊಂದಿಗೆ ಮನುಷ್ಯನೂ ಸೇರಿದಂತೆ ಮಾಂಸಾಹಾರಿ ಎಂದು ಕರೆಯಲ್ಪಟ್ಟು ಇವು ಹುಟ್ಟಿದ ಹಲವು ದಿನಗಳ ನಂತರವೇ ಓಡಾಡುತ್ತವೆ. ಈ ಜೀವಿಗಳ ಯಾವುದೇ ಭಾಗವನ್ನು ತುಂಡರಿಸಿದಾಗ ಮತ್ತೆ ಅವು ತನ್ನಿಂದ ತಾನೇ ಉತ್ಪತ್ತಿ ಆಗುವುದಿಲ್ಲ. ಅದು ಶಾಶ್ವತ ಅಂಗ ಹೀನವೇ.
ಜಗತ್ತಿನಲ್ಲಿ ಕಾಣಬರುವ ಇತರ ಜೀವಿಗಳೆಂದರೆ ಪ್ರಾಣಿಗಳು ಪಕ್ಷಿಗಳು, ಕ್ರಿಮಿಕೀಟಗಳು ಇತ್ಯಾದಿ. ಈ ಪ್ರಾಣಿಗಳೆಲ್ಲಾ ತನ್ನದೇ ಆಕಾರದ ಮರಿ ಅಥವಾ ಕರುವಿಗೆ ಜನ್ಮ ಕೊಡುತ್ತದೆ. ಹೀಗೆ ಗರ್ಭದಲ್ಲಿ ಪಿಂಡಗಳಾಗಿ ಪ್ರಾಣಿಗಳಿಂದ ಪ್ರಾಣಿ ಹುಟ್ಟುವ ಈ ಜೀವಿಗಳನ್ನು ಜರಾಯುಜ ಎಂದು ಕರೆಯುತ್ತಾರೆ. ಇವುಗಳು ಆಹಾರವನ್ನು ಸೇವಿಸುವಾಗ ಭೂಮಿಯ ಕಡೆ ಮುಖ ಮಾಡಿಕೊಂಡಿರುತ್ತವೆ. ಆಹಾರವನ್ನು ಹುಡುಕಿಕೊಂಡು ಹೋಗಿ ತಿನ್ನುತ್ತವೆ.
ಇನ್ನು ಕೆಲವು ಜೀವಿಗಳು ಮೊಟ್ಟೆಗಳ ಮೂಲಕ ಉತ್ಪನ್ನವಾಗುತ್ತವೆ. ಇವುಗಳನ್ನು ಅಂಡಜ ಎಂದು ಕರೆಯುತ್ತಾರೆ ಇವುಗಳಿಗೆ ಉದಾಹರಣೆ ಪಕ್ಷಿಗಳು, ಉರಗ, ಆಮೆ, ಮೀನು ಕ್ರಿಮಿಕೀಟಗಳು. ಇವುಗಳು ಜರಾಯುಜ ಜೀವಿ ಪಂಗಡಗಳಿಗೆ ಆಹಾರವಾಗುತ್ತವೆ .ಮೊಟ್ಟೆಯಿಂದ ಹುಟ್ಟಿರುವ ಈ ಜೀವಿಗಳು ಮಾಂಸಾಹಾರಿ ಎಂದೇ ಪರಿಗಣಿಸಲ್ಪಡುತ್ತದೆ.
ಇನ್ನೂ ಕೆಲವು ಜೀವಿಗಳು ಮೇಲ್ಕಂಡ ಜೀವಿ ಪಂಗಡದ ಬೆವರು ಅಥವಾ ದೇಹದ ಕಶ್ಮಲಗಳೊಂದಿಗೆ ಉತ್ಪತ್ತಿಯಾಗುತ್ತವೆ. ಹೇನು , ತಿಗಣೆ, ಪ್ರಾಣಿಗಳ ಮೈಮೇಲಿರುವ ಉಗುಣು, ಕೆಲವು ಬಗೆಯ ನೊಣಗಳು, ವೈರಸ್ ತಾವು ಹುಟ್ಟಿರುವ ಸ್ಥಳದ ಸುತ್ತಲೇ ಆಹಾರವನ್ನು ಹುಡುಕುವುದಾದರೂ ಅದೇ ರೀತಿಯ ಸ್ಥಳವು ಸಿಕ್ಕಲ್ಲಿ ಧಾರಾಳವಾಗಿ ಅಲ್ಲಿಗೆ ವಾಸವನ್ನು ಬದಲಾಯಿಸುತ್ತವೆ. ಈ ಜೀವಿ ಪಂಗಡವನ್ನು ಸ್ವೇದಜ ಎಂದು ಕರೆಯುತ್ತಾರೆ.
ಸೇವಿಸುವ ಆಹಾರದ ಅನುಗುಣವಾಗಿ ಶಾಖಾಹಾರವಾಗಿದ್ದರೆ ಆಹಾರದಂತೆಯೇ ಬೇರೆಯವರಿಗೆ ತೊಂದರೆ ಮಾಡದಿರುವುದರಿಂದ ಅವು ಮನುಷ್ಯನಲ್ಲಿ ಸಾತ್ವಿಕ ಗುಣಗಳು ಬೆಳೆಯಲು ಅವಕಾಶ ಮಾಡುತ್ತದೆ. ಮಾಂಸಾಹಾರಗಳ ಮೂಲಕ ಮನುಷ್ಯರಲ್ಲಿ ರಜೋಗುಣ ಅಥವಾ ಮತ್ತು ತಾಮಸ ಗುಣಗಳು ಎಂಬ ಪ್ರಚೋದನಕಾರಿ ಗುಣಗಳು ಉತ್ಪತ್ತಿಯಾಗುತ್ತವೆ ಎಂದು ಋಷಿಮುನಿಗಳ ಖಚಿತ ಅಭಿಪ್ರಾಯ.
ಶಾಖಹಾರಿ ಮತ್ತ್ತು ಮಾಂಸಾಹಾರಿ ವೆತ್ಯಾಸ ಚೆನ್ನಾಗಿ ನಿರೂಪಿತವಾಗಿದೆ
ReplyDeleteಊರ್ಧ್ವ ಮುಖವಾಗಿ ನಿಸರ್ಗ ನಂಬಿ ಬೆಳೆಯುವ ಉದ್ವಿಜ, ಸಸ್ಯವನ್ನೇ ಆಹಾರ ಮಾಡಿಕೊಂಡ ಪ್ರಾಣಿಗಳು ಮತ್ತವುಗಳ ವಿಶೇಷತೆ, ಜರಾಯುಜ, ಅಂಡಜ, ಸ್ವೇ ದ ಜ, ಶಾಖಾಹಾರಿ ಮಾಂಸಾಹಾರಿ ಗಳ ಜೀವನ ಶೈಲಿಯ ಪರಿಚಯ ಎಲ್ಲವನ್ನೂ ಸಂಕ್ಷಿಪ್ತ ವಾ ಗಿ ತಿಳಿಸುವ ಈ ಲೇಖನ ಮಕ್ಕಳಾದಿಯಾಗಿ ಎಲ್ಲರಿಗೂ ಅಮೂಲ್ಯ.
ReplyDelete
ReplyDeleteಬಹಳ ಸರಳವಾದ ಭಾಷೆಯಲ್ಲಿ ಹಾಗೂ ಸಾರಾಂಶ ಬರೀತ ಲೇಖನವಾಗಿದೆ.