Skip to main content

ಮನುಷ್ಯ ಶಾಖಾಹಾರಿಯೇ

ಗಿಡಗಳು, ಬಳ್ಳಿಗಳು ವೃಕ್ಷಗಳು ಬೀಜಗಳ ಮೂಲಕ ಉತ್ಪತ್ತಿ ಆಗುತ್ತ ವೆ.ಜನನದ ಆಧಾರಗಳ ಮೇಲೆ ಹೇಳುವುದಾದರೆ ಈ ಜೀವ ಪಂಗಡವನ್ನು ಉದ್ಬೀಜ ಎಂದು ಕರೆಯುತ್ತಾರೆ.ಇವುಗಳು ಬೆಳೆಯುವಾಗ ಆಕಾಶದತ್ತ ದೃಷ್ಟಿಯಿಟ್ಟು ಸೂರ್ಯನ ಶಾಖವನ್ನು ಪಡೆದು ಆಹಾರವನ್ನು ಸೃಷ್ಟಿಸಿಕೊಂಡು ಸತ್ವ ಪೂರ್ಣವಾಗಿರುತ್ತದೆ. ಈ ಗಿಡ ಮರದ ಕೊಂಬೆಗಳನ್ನು ಕತ್ತರಿಸಿದಾಗ ಹೊಸ ಕೊಂಬೆಗಳು ಮೊದಲಿಗಿಂತಲೂ ಚೆನ್ನಾಗಿ ಬೆಳೆಯುತ್ತವೆ.ಎಲೆಗಳೂ ಸಮೃದ್ಧಿಯಾಗಿರುತ್ತದೆ. ಉತ್ಕೃಷ್ಟ ದರ್ಜೆಯ ಫಲ ಉತ್ಪಾದನೆಯಾಗುತ್ತದೆ . ಭತ್ತ ಗೋಧಿ ಎಳ್ಳು ಕಾಳು ಬೇಳೆಗಳು ಇತ್ಯಾದಿಗಳನ್ನು ಗಿಡಗಳು ಸತ್ತ ನಂತರವೇ ಅಥವಾ ಆ ಹಂತದಲ್ಲಿ ಬೇರ್ಪಡಿಸಿ ಅವುಗಳ ಬೀಜಗಳನ್ನು ಆಹಾರವಾಗಿ ಬಳಸುತ್ತೇವೆ. ಹೀಗೆ ಜೀವಿಗಳಿಗೆ ತೊಂದರೆಯಾಗದಂತೆ ಪಡೆಯುವ ಆಹಾರಗಳನ್ನು ಶಾಖಾಹಾರ ಎಂದು ಕರೆಯುತ್ತಾರೆ. ಈ ಉದ್ಬೀಜ ಜೀವಿಗಳು ಆಹಾರಕ್ಕಾಗಿ ಪೂರ್ಣವಾಗಿ ನಿಸರ್ಗವನ್ನೇ ನಂಬಿರುತ್ತವೆ.

ಜಗತ್ತಿನ ಎಲ್ಲಾ ಚರಾಚರ ಜೀವಿಗಳಿಗೆ ಈ ಗಿಡಮರಗಳ ಆಶ್ರಯ ಅನಿವಾರ್ಯ. ಸಸ್ಯವನ್ನು ಆಹಾರವಾಗಿ ಮಾಡಿ ಕೊಂಡಿರುವ, ಹಸುಗಳು, ಕುದುರೆ, ಮೇಕೆಗಳು, ಜಿಂಕೆಗಳು ಮರಿ ಹಾಕುತ್ತವೆ. ಅವುಗಳಿಗೆ ಆಹಾರವಾಗಿ ತನ್ನಲ್ಲಿ ಉತ್ಪತ್ತಿಯಾಗುವ ಹಾಲನ್ನು ನೀಡಿ ಹಾಕುತ್ತವೆ. ಕೆಚ್ಚಲಲ್ಲಿ ಸಂಗ್ರಹವಾಗುವ ಹಾಲು ಹೆಚ್ಚಾದಾಗ ಕಲ್ಲುಬಂಡೆ ಮರಗಳಿಗೆ ಒತ್ತಿ ಹಾಲನ್ನು ವಿಸರ್ಜಿಸುತ್ತವೆ ಅದಕ್ಕೆ ಹೆಚ್ಚಾಗಿರುವ ಹಾಲು ಆದ್ದರಿಂದ ಇದನ್ನು ಸಹ ಮೇಲಿನ ಶಾಖಾಹಾರಕ್ಕೆ ಸೇರಿಸಿರುತ್ತಾರೆ. ಈ ಸಸ್ಯಹಾರಿ ಪ್ರಾಣಿಗಳ ವಿಶೇಷವೇನೆಂದರೆ ಇವುಗಳು ಹುಟ್ಟುತ್ತಲೇ ಓಡಾಡಲು ಪ್ರಾರಂಭಿಸುತ್ತವೆ. ಇದು ಸಸ್ಯಹಾರದ ವಿಶೇಷ ಶಕ್ತಿಯ ಪರಿಣಾಮವಿರಬಹುದು.

ಮಾನವ, ಹಸು, ಕುದುರೆ, ಕುರಿ, ಮೇಕೆಗಳು, ಜಿಂಕೆ, ಆನೆ ಹೀಗೆ ಸಸ್ಯಹಾರಿ ಪ್ರಾಣಿಗಳ ಆಹಾರ ಹಣ್ಣು-ತರಕಾರಿಗಳು, ಭತ್ತ ಗೋಧಿ ಇತ್ಯಾದಿ ಸಸ್ಯಜನ್ಯ ಉತ್ಪನ್ನಗಳು. ಈ ಪ್ರಾಣಿಗಳ ಶರೀರ ವಿನ್ಯಾಸವು ಜೀರ್ಣಾಶಯಕ್ಕೆ ಹೊಂದುವಂತೆ ಕರುಳಿನ ಉದ್ದವು ಮಾಂಸಾಹಾರಿ ಪ್ರಾಣಿಗಳ ಕುರುಳಿಗಿಂತ ಹೆಚ್ಚು ಉದ್ದ ಇರುತ್ತದೆ. ದೇಹದ ರಚನೆಯ ಅನ್ವಯ ಹೇಳುವುದಾದರೆ ಮನುಷ್ಯನು ಶಾಕಾಹಾರಿ ಎಂದು ತಿಳಿಯಬಹುದಾಗಿದೆ. ಇತರ ಪ್ರಾಣಿಗಳನ್ನು ತಿಂದು ಜೀವಿಸುವ ಹುಲಿ ಚಿರತೆ ಕರಡಿ ಇತ್ಯಾದಿ ಪ್ರಾಣಿಗಳೊಂದಿಗೆ ಮನುಷ್ಯನೂ ಸೇರಿದಂತೆ ಮಾಂಸಾಹಾರಿ ಎಂದು ಕರೆಯಲ್ಪಟ್ಟು ಇವು ಹುಟ್ಟಿದ ಹಲವು ದಿನಗಳ ನಂತರವೇ ಓಡಾಡುತ್ತವೆ. ಈ  ಜೀವಿಗಳ ಯಾವುದೇ ಭಾಗವನ್ನು ತುಂಡರಿಸಿದಾಗ ಮತ್ತೆ ಅವು ತನ್ನಿಂದ ತಾನೇ ಉತ್ಪತ್ತಿ ಆಗುವುದಿಲ್ಲ. ಅದು ಶಾಶ್ವತ ಅಂಗ ಹೀನವೇ.

ಜಗತ್ತಿನಲ್ಲಿ ಕಾಣಬರುವ ಇತರ ಜೀವಿಗಳೆಂದರೆ ಪ್ರಾಣಿಗಳು ಪಕ್ಷಿಗಳು, ಕ್ರಿಮಿಕೀಟಗಳು ಇತ್ಯಾದಿ. ಈ ಪ್ರಾಣಿಗಳೆಲ್ಲಾ ತನ್ನದೇ ಆಕಾರದ ಮರಿ ಅಥವಾ ಕರುವಿಗೆ ಜನ್ಮ ಕೊಡುತ್ತದೆ. ಹೀಗೆ ಗರ್ಭದಲ್ಲಿ ಪಿಂಡಗಳಾಗಿ ಪ್ರಾಣಿಗಳಿಂದ ಪ್ರಾಣಿ ಹುಟ್ಟುವ ಈ ಜೀವಿಗಳನ್ನು ಜರಾಯುಜ ಎಂದು ಕರೆಯುತ್ತಾರೆ. ಇವುಗಳು ಆಹಾರವನ್ನು ಸೇವಿಸುವಾಗ ಭೂಮಿಯ ಕಡೆ ಮುಖ ಮಾಡಿಕೊಂಡಿರುತ್ತವೆ. ಆಹಾರವನ್ನು ಹುಡುಕಿಕೊಂಡು ಹೋಗಿ ತಿನ್ನುತ್ತವೆ.

ಇನ್ನು ಕೆಲವು ಜೀವಿಗಳು ಮೊಟ್ಟೆಗಳ ಮೂಲಕ ಉತ್ಪನ್ನವಾಗುತ್ತವೆ. ಇವುಗಳನ್ನು ಅಂಡಜ ಎಂದು ಕರೆಯುತ್ತಾರೆ ಇವುಗಳಿಗೆ ಉದಾಹರಣೆ ಪಕ್ಷಿಗಳು, ಉರಗ, ಆಮೆ, ಮೀನು ಕ್ರಿಮಿಕೀಟಗಳು. ಇವುಗಳು ಜರಾಯುಜ ಜೀವಿ ಪಂಗಡಗಳಿಗೆ ಆಹಾರವಾಗುತ್ತವೆ .ಮೊಟ್ಟೆಯಿಂದ ಹುಟ್ಟಿರುವ ಈ ಜೀವಿಗಳು ಮಾಂಸಾಹಾರಿ ಎಂದೇ ಪರಿಗಣಿಸಲ್ಪಡುತ್ತದೆ.

ಇನ್ನೂ ಕೆಲವು ಜೀವಿಗಳು ಮೇಲ್ಕಂಡ ಜೀವಿ ಪಂಗಡದ ಬೆವರು ಅಥವಾ ದೇಹದ ಕಶ್ಮಲಗಳೊಂದಿಗೆ ಉತ್ಪತ್ತಿಯಾಗುತ್ತವೆ. ಹೇನು , ತಿಗಣೆ, ಪ್ರಾಣಿಗಳ ಮೈಮೇಲಿರುವ ಉಗುಣು, ಕೆಲವು ಬಗೆಯ ನೊಣಗಳು, ವೈರಸ್ ತಾವು ಹುಟ್ಟಿರುವ ಸ್ಥಳದ ಸುತ್ತಲೇ ಆಹಾರವನ್ನು ಹುಡುಕುವುದಾದರೂ ಅದೇ ರೀತಿಯ ಸ್ಥಳವು ಸಿಕ್ಕಲ್ಲಿ ಧಾರಾಳವಾಗಿ ಅಲ್ಲಿಗೆ ವಾಸವನ್ನು ಬದಲಾಯಿಸುತ್ತವೆ. ಈ ಜೀವಿ ಪಂಗಡವನ್ನು ಸ್ವೇದಜ ಎಂದು ಕರೆಯುತ್ತಾರೆ.

ಸೇವಿಸುವ ಆಹಾರದ ಅನುಗುಣವಾಗಿ ಶಾಖಾಹಾರವಾಗಿದ್ದರೆ ಆಹಾರದಂತೆಯೇ ಬೇರೆಯವರಿಗೆ ತೊಂದರೆ ಮಾಡದಿರುವುದರಿಂದ ಅವು ಮನುಷ್ಯನಲ್ಲಿ ಸಾತ್ವಿಕ ಗುಣಗಳು ಬೆಳೆಯಲು ಅವಕಾಶ ಮಾಡುತ್ತದೆ. ಮಾಂಸಾಹಾರಗಳ ಮೂಲಕ ಮನುಷ್ಯರಲ್ಲಿ ರಜೋಗುಣ ಅಥವಾ ಮತ್ತು ತಾಮಸ ಗುಣಗಳು ಎಂಬ ಪ್ರಚೋದನಕಾರಿ ಗುಣಗಳು ಉತ್ಪತ್ತಿಯಾಗುತ್ತವೆ ಎಂದು ಋಷಿಮುನಿಗಳ ಖಚಿತ ಅಭಿಪ್ರಾಯ.



Comments

  1. ಶಾಖಹಾರಿ ಮತ್ತ್ತು ಮಾಂಸಾಹಾರಿ ವೆತ್ಯಾಸ ಚೆನ್ನಾಗಿ ನಿರೂಪಿತವಾಗಿದೆ

    ReplyDelete
  2. ಊರ್ಧ್ವ ಮುಖವಾಗಿ ನಿಸರ್ಗ ನಂಬಿ ಬೆಳೆಯುವ ಉದ್ವಿಜ, ಸಸ್ಯವನ್ನೇ ಆಹಾರ ಮಾಡಿಕೊಂಡ ಪ್ರಾಣಿಗಳು ಮತ್ತವುಗಳ ವಿಶೇಷತೆ, ಜರಾಯುಜ, ಅಂಡಜ, ಸ್ವೇ ದ ಜ, ಶಾಖಾಹಾರಿ ಮಾಂಸಾಹಾರಿ ಗಳ ಜೀವನ ಶೈಲಿಯ ಪರಿಚಯ ಎಲ್ಲವನ್ನೂ ಸಂಕ್ಷಿಪ್ತ ವಾ ಗಿ ತಿಳಿಸುವ ಈ ಲೇಖನ ಮಕ್ಕಳಾದಿಯಾಗಿ ಎಲ್ಲರಿಗೂ ಅಮೂಲ್ಯ.

    ReplyDelete


  3. ಬಹಳ ಸರಳವಾದ ಭಾಷೆಯಲ್ಲಿ ಹಾಗೂ ಸಾರಾಂಶ ಬರೀತ ಲೇಖನವಾಗಿದೆ.

    ReplyDelete

Post a Comment

Popular posts from this blog

ಆರೋಗ್ಯ ಕವಚ

ಮನುಷ್ಯ ತಾನು ಸುಖವಾಗಿರಲು ದುಡಿಯುತ್ತಾನೆ. ಹಣ ಕೂಡಿಡುತ್ತಾನೆ. ಆಸ್ತಿ ಗಳಿಸುತ್ತಾನೆ. ತಾನು ಮತ್ತು ತನ್ನ ಪ್ರೀತಿಯ ಕುಟುಂಬವನ್ನು ಸುಖವಾಗಿಡುವ ಕನಸುಗಳು ಸದಾ ನಡೆಯುತ್ತಲೇ ಇರುತ್ತವೆ. ಈ ಕನಸಿನ ಮಾರ್ಗದಲ್ಲಿ ಆಕಸ್ಮಿಕವಾಗಿ ಅವನ ದೇಹಕ್ಕೆ ದೊಡ್ಡ ಅನಾರೋಗ್ಯವೇನಾದರೂ ಎದುರಾದರೆ ಬಹಳ ಕಷ್ಟವಾಗುತ್ತದೆ. ಸುಧಾರಿಸಿಕೊಳ್ಳಲು ಸಾಧ್ಯವಾಗದಂತೆ ಗಳಿಸಿದ್ದೆಲ್ಲವೂ ನೀರಿನಂತೆ ಕರಗಿ ಹೋಗುತ್ತದೆ. ಇದರಿಂದ ಜೀವನದಲ್ಲಿ ಹಾಕಿಕೊಂಡ ಗುರಿಯನ್ನು ಸಾಧಿಸಲಾಗುವುದಿಲ್ಲ. ಇಂತಹ ಪರಿಸ್ಥಿತಿಯನ್ನು ಆರ್ಥಿಕವಾಗಿ ಸಮರ್ಥವಾಗಿ ಎದುರಿಸಲು ಬೇಕಾಗಿರುವುದು ಆರೋಗ್ಯ ವಿಮೆ. ಇದನ್ನು ಹೆಲ್ತ್ ಇನ್ಶುರೆನ್ಸ್ ( Heath Insurance) ಅಥವಾ ಮೆಡಿಕಲ್ ಇನ್ಸೂರೆನ್ಸ್ (Medical Insurance) ಎಂದೂ ಹೇಳಲಾಗುತ್ತದೆ. ಇದು ಆರೋಗ್ಯ ರಕ್ಷಣೆಗಾಗಿ ಎಂದೇ ಪಡೆದರೂ ಮುಂದಿನ ನಮ್ಮ ಜೀವನಕ್ಕಾಗಿ, ಪರೋಕ್ಷವಾಗಿ ಕೂಡಿಟ್ಟಿರುವ ಆಸ್ತಿಯನ್ನು ರಕ್ಷಣೆ ಮಾಡುತ್ತದೆ. ಈ ಬಗ್ಗೆ ತಿಳಿದುಕೊಳ್ಳಬೇಕಾದ ವಿಷಯಗಳು ಬಹಳ ಅನಿವಾರ್ಯ. ಇವೆಲ್ಲವನ್ನೂ ಸವಿಸ್ತಾರವಾಗಿ ತಿಳಿಸಿ ಹೇಳುವ ಪ್ರಯತ್ನವೇ ಈ ಲೇಖನ. ಆರೋಗ್ಯ ವಿಮೆ ಎಂದರೇನು? ನಾವು ಸದಾ ಆರೋಗ್ಯದಿಂದ ಇರಬೇಕೆಂದು ಬಯಸುವೆವಾದರೂ "ಮನುಷ್ಯ ಎಂದಮೇಲೆ ಏನಾದರೂ ಕಾಯಿಲೆ ಇದ್ದೇ ಇರುತ್ತದೆ" ಎಂಬಂತೆ ಹಲವು ಸಾರಿ ತಲೆನೋವು, ಜ್ವರ, ನೆಗಡಿ ಮೈ ಕೈ ನೋವು ಎಂದು ನರಳುತ್ತೇವೆ. ಚಿಕೂನ್ ಗುನ್ಯಾ, ಡೆಂಗ್ಯೂ, ಕೊರೋನಾ ಇತ್ಯಾದಿ ಕಾಯಿಲೆಗಳ...

ಮಿತ್ರನೊಬ್ಬನ ಆತ್ಮಾವಲೋಕನ

ಮಿತ್ರ ಶಂಕರ ಒಮ್ಮೆ ಹೇಳಿದ್ದ, ಕೇಳಿ ಹಳತಾದರೂ ಓದುಗರಿಗೆ ಹೊಸತಾಗಿ, ಆತ್ಮೊನ್ನತಿಗೆ ಸಹಾಯ ವೆನಿಸುವ, ಆತ್ಮಾವಲೋಕನದ ಸಾಲುಗಳು ನಿಜವಾಗಿಯೂ ಕುತೂಹಲಕಾರಿಯಾಗಿದೆ. ಅದನ್ನು ಅವನಿಂದಲೇ ಕೇಳಿ: ಕಛೇರಿಯಲ್ಲಿ ವಿಶೇಷವಾದ ಕೆಲಸವೊಂದನ್ನು ನಿರೀಕ್ಷೆಗಿಂತ ಮೊದಲೇ ಯಶಸ್ವಿಯಾಗಿ ಪೂರೈಸಿದ್ದರಿಂದ ತುಂಬಾ ಸಂತೋಷವಾಗಿತ್ತು. ಆದ್ದರಿಂದ ಮನೆಗೆ ಸ್ವಲ್ಪ ಬೇಗನೆ ಬಂದಿದ್ದೆ. ಪ್ರತಿದಿನ ಯಾಕೆ ಲೇಟು ಎಂಬ ಮುಖವನ್ನು ಮಾಡುತ್ತಿದ್ದ ಮಡದಿ ಪ್ರೇಮ ಕೊಟ್ಟ ಒಂದು ಬಿಸಿಯಾದ ಸ್ಟ್ರಾಂಗ್ ಕಾಫಿ ಕುಡಿದು ನಿಧಾನವಾಗಿ ಸೋಫಾದ ಮೇಲೆ ಕಾಲು ಚಾಚುತ್ತಿದ್ದಂತೆಯೇ ನಿದ್ರಾ ದೇವಿಗೆ ವಶನಾಗಿ ಕೆಲವು ಸಮಯವಾಗಿರಬಹುದು. ಕೆಲವೇ ನಿಮಿಷಗಳಲ್ಲಿ ನಿದ್ದೆ ಬಂದಿತ್ತಾದರೂ ತಾಳಲಾರೆನೆಂಬ ಎದೆನೋವು, ಇದ್ದಕ್ಕಿದ್ದಂತೆ ಉಸಿರುಗಟ್ಟಿಸುವಂತಹ ಅನುಭವ. ಏನು ಗೊತ್ತಾಗುತ್ತಿಲ್ಲ. ಕೆಲವೇ ನಿಮಿಷಗಳಲ್ಲಿ ಗಾಬರಿಯಿಂದ ಪ್ರೇಮಾ, ಮಗಳು - ಅಳಿಯನನ್ನು ಕರೆಯುತ್ತಿದ್ದಾಳೆ. ಕಾಲು ಕೈ ಎದೆ ಭಾಗಗಳನ್ನು ಹಿತವಾಗಿ ಯಾರೋ ತಡವುತ್ತಿದ್ದಾರೇನೋ. ಹಾಗೆಯೇ ನನ್ನನ್ನು ಎತ್ತಿದಂತಹ ಅನುಭವ. ಎಲ್ಲಿಗೋ ಕರೆದುಕೊಂಡು ಹೋಗುತ್ತಿರಬಹುದು. ಯಾವುದೋ ವಾಹನದ ಸದ್ದು. ನನ್ನ ಕೈಗಳನ್ನು ಯಾರೋ ಎತ್ತುತ್ತಿದ್ದಾರೆ, ಏನಾಗುತ್ತಿದೆ? ಹೊಸತರದ ಹಾಸಿಗೆ. ಮೂಗು ಬಾಯಿಗೆ ಏನೋ ತಡೆ. ಸಣ್ಣದಾಗಿ ಬಿಟ್ಟು ಬಿಟ್ಟು ಕೇಳುವ ಏಕತಾನದ ಸದ್ದು. ಹಠಾತ್ತಾಗಿ ನಿಶ್ಯಬ್ದ. ನೀರವ ವಾತಾವರಣ. ಈಗ ನನಗೆ ನೋವು ಇದೆಯೇ. ಟಿವಿಯಲ್ಲಿ ಯಾವುದೋ ಕ...

ಬಾಳ ರೂಪಿಸಿದ ವಿಮೆ

ನಾವು ಸಮಾಜದಲ್ಲಿ ನಮಗಾಗಿ ನಾವು ಅನೇಕ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದೇವೆ. ಅದನ್ನು ಒದಗಿಸಲು ಅದರದೇ ಆದ ಸಂಸ್ಥೆ ಹಾಗೂ ಸೇವಾ ಸಿಬ್ಬಂದಿಗಳಿದ್ದಾರೆ. ಇವು ನಮ್ಮ ಬದುಕು ಸುಗಮವಾಗಲು ಸಹಾಯಕವಾಗಿ ವೆ . ಇವಲ್ಲದೆ  ಜೀವನದಲ್ಲಿ ನಮ್ಮ ಉನ್ನತಿಗೆ ಬಂಧುಮಿತ್ರರ ಪಾತ್ರ ತೀರಾ ಸಾಮಾನ್ಯ. ಆದರೆ ಸಂಸ್ಥೆಯೊಂದು ಕೊಡುವ ಸೇವೆಯೇ ಒಬ್ಬರ ಬದುಕನ್ನು ರೂಪಿಸಿಕೊಳ್ಳಲು ಅವಕಾಶವಾದ  ಘಟನೆಯ ಸ್ಮರಣೆಯೇ ಈ ಕಥೆಯ ಜೀವಾಳ. ಈ ಬೆಳಿಗ್ಗೆ ಬೆಂಗಳೂರಿನಿಂದ ಲಂಡನ್ ವರೆಗಿನ ಆಕಾಶ ಪಯಣ. ಇದಕ್ಕಾಗಿ ನಿನ್ನೆಯಿಂದಲೇ ನಿದ್ದೆ ಇಲ್ಲ. ರಾತ್ರಿ ಪೂರ್ತಿ ವಿಮಾನ ನಿಲ್ದಾಣದಲ್ಲಿ ಸಮಯ ಕಳೆದೆವು. ಲಂಡನ್ನಿನ ಸಮಯದಂತೆ ಮಧ್ಯಾಹ್ನವೇ ಬಂದೆವು. ಅಮೇರಿಕಾಕ್ಕೆ ಹೋಗುವ ವಿಮಾನ ಸಂಜೆ ಐದು ಗಂಟೆಗೆ. ಆದ್ದರಿಂದ ಕಾಯಲೇಬೇಕು. ವಿಮಾನ ನಿಲ್ದಾಣದಲ್ಲಿ ಆಯಾಸದಿಂದ ನಿದ್ದೆ ಬರುತ್ತಿದ್ದರೂ ಎಚ್ಚರವಾಗದಷ್ಟು ನಿದ್ದೆ ಬಂದು ಮುಂದಿನ ವಿಮಾನ ತಪ್ಪಿ ಹೋದರೆ ಎಂಬ ಭಯದಿಂದ ಕಣ್ಣು ಮುಚ್ಚಲಿಲ್ಲ. ಈಗ ಅಮೇರಿಕಾದ ವಾಶಿಂಗ್ಟನ್ಗೆ ಹೋಗುವ ವಿಮಾನದಲ್ಲಿ ಕುಳಿತಿದ್ದೇನೆ. ಪಕ್ಕದಲ್ಲಿ ಕುಳಿತ ನಮ್ಮವರಿಗೆ ಗಾಢ ನಿದ್ರೆ. ವಿಮಾನ ಪ್ರಯಾಣವೇನೋ ಹೆಮ್ಮೆಯ ವಿಷಯವೇ. ಆದರೆ ಇದೇ ಮೊದಲ ಪ್ರಯಾಣವಾದ್ದರಿಂದ ಏನೋ ಆತಂಕ, ಸಂತೋಷ, ದುಗುಡ ಜೊತೆಗೆ ಸಡಗರ. ಸುತ್ತ ನೋಡುತ್ತಾ ನನ್ನ ಬಗ್ಗೆ ನಾನು ಯೋಚಿಸುತ್ತಿದ್ದೇನೆ. ನಾನು ಎಲ್ಲಿದ್ದೇನೆ. ಎಲ್ಲಿಗೆ ಬಂದೆ. ಇರುವನೊಬ್ಬ ಮಗ ಆನಂದನೇ ನಮಗೆ ಸರ್ವಸ್ವ. ಆದ್ದ...