Skip to main content

ಪತ್ರಂ ಪುಷ್ಪಂ ಫಲಂ ತೋಯಂ

"ಪತ್ರಂ ಪುಷ್ಪಂ ಫಲಂ ತೋಯಂ" ಎಂಬ ಭಗವದ್ಗೀತೆಯ ವಾಕ್ಯವನ್ನು ಸೂಚ್ಯವಾಗಿ ಹೇಳಿರುವ ಭಕ್ತಿ ಸಮರ್ಪಣೆಯನ್ನು ಈ ಕೆಳಕಂಡಂತೆ ನಾಲ್ಕು ರೀತಿಗಳಾಗಿ ವಿಶ್ಲೇಷಿಸಬಹುದು.


ಪತ್ರಂ - ಶ್ರೀಕೃಷ್ಣನನ್ನು ತನ್ನವನನ್ನಾಗಿ ಮಾಡಿಕೊಳ್ಳಲು ತುಲಾಭಾರ ಮಾಡಿದಾಗ ಸತ್ಯಭಾಮೆಯ ತನ್ನಲ್ಲಿರುವ ಆಗರ್ಭ ಚಿನ್ನ, ವಜ್ರಗಳ, ವೈಡೂರ್ಯಗಳ ಆಭರಣಗಳಿಗೆ ಸಮತೂಕನಾಗದ ಶ್ರೀಕೃಷ್ಣ ರುಕ್ಮಿಣಿಯು ಭಕ್ತಿಯಿಂದ ಸಮರ್ಪಿಸಿದ ತುಳಸಿಯೆಂಬ ಪತ್ರೆಗೆ ಒಲಿದು ಬಂದಿದ್ದು ಗಮನಿಸಿದಾಗ ದೇವರಿಗೆ ಆಭರಣಗಳಿಂದ ಮೆಚ್ಚಿಸಲಾಗುವುದಿಲ್ಲ ಎಂದು ಮನವರಿಕೆಯಾಗುತ್ತದೆ.


ಪುಷ್ಪಂ - ಗಜೇಂದ್ರನೆಂಬ ಆನೆಯ ಕಾಲನ್ನು ಕೊಳದಲ್ಲಿದ್ದ ಮೊಸಳೆಯು ಕಚ್ಚಿ ಹಿಡಿದಾಗ ತನ್ನ ಪೂರ್ವಜನ್ಮದ ಪುಣ್ಯ ಸ್ಮರಣೆಯಿಂದ ನೆನೆದು ದೇವರನ್ನು ಅನನ್ಯ ಭಕ್ತಿಯಿಂದ ಪ್ರಾರ್ಥಿಸಿ ಕೊಳದಲ್ಲಿಯೇ ಕೈಗೆ ಸಿಕ್ಕ ತಾವರೆಯನ್ನು ದೇವರಿಗೆ ಒಪ್ಪಿಸಿದಾಗ, ಮಹಾವಿಷ್ಣುವು ಗಜೇಂದ್ರನನ್ನು ರಕ್ಷಿಸಿದ ಕಥೆ ಎಲ್ಲರಿಗೂ ಗೊತ್ತಿರುವುದೇ.


ಫಲಂ - ರಾಮಾಯಣ ಕಾಲದಲ್ಲಿ ಶಬರಿಯು ಅನನ್ಯ ಭಕ್ತಿಯಿಂದ ಶ್ರೀರಾಮನಿಗೆ ಉತ್ಕೃಷ್ಟ ಹಣ್ಣು ಕೊಡುವ ಉದ್ದೇಶದಿಂದ ಪ್ರತಿ ಹಣ್ಣನ್ನು ಕಚ್ಚಿ ರುಚಿಯನ್ನು ನೋಡಿ ಚೆನ್ನಾಗಿರುವುದನ್ನು ಆರಿಸಿ ಸಮರ್ಪಿಸಿ ಮೋಕ್ಷವನ್ನು ಪಡೆದುದನ್ನು ಕಂಡಾಗ ದೇವರಿಗೆ ಭಕ್ತಿಯ ಹೊರತು ಬೇರೇನು ಬೇಡ ಎಂದು ತಿಳಿಯುತ್ತದೆ.


ತೋಯಂ - ಬಲಿಚಕ್ರವರ್ತಿಯು ದಾನ ಬೇಡಿದ ವಾಮನನಿಗೆ ತಾನು ನಿಂತಿರುವ ಭೂಮಿಯನ್ನು ಸಹ ತೋಯಂ ಎಂದರೆ ಒಂದು ತೊಟ್ಟು ನೀರಿನ ಮೂಲಕ ದಾನ ಮಾಡಿ ಪಾತಾಳಕ್ಕೆ ಹೊರಟುಹೋದ ಕಥೆಯನ್ನು ಕೇಳಿದ್ದೇವೆ ಅದನ್ನು ದೀಪಾವಳಿ ಹಬ್ಬವಾಗಿ ಆಚರಣೆ ಮಾಡುತ್ತಿದ್ದೇವೆ. ಈಗಲೂ ಸಹ ಯಾವುದೇ ದಾನ ಸಮರ್ಪಣೆ ನೀರಿನ ತೊಟ್ಟಿನೊಂದಿಗೆ ಮಾಡುವುದು ಪದ್ಧತಿಯಾಗಿದೆ.


ಈ ಕಥಾ ದೃಷ್ಟಾಂತಗಳ ಮೂಲಕ ದೇವರು ನೀವು ಕೊಡುವ ಯಾವುದೇ ಬೆಲೆಬಾಳುವ ವಸ್ತುಗಳನ್ನು ಆಹಾರ ಪದಾರ್ಥಗಳನ್ನು ಅಪೇಕ್ಷಿಸುವುದಿಲ್ಲ ಬೇಕಾಗಿರುವುದು ನಿಮ್ಮ ನಿಷ್ಕಲ್ಮಶ ಭಕ್ತಿ ಮಾತ್ರ. ಭಕ್ತಿಯೆಂದರೆ ನಿಮ್ಮನ್ನು ನೀವು ದೇವರಿಗೆ ಸಮರ್ಪಣೆ ಮಾಡಿಕೊಳ್ಳುವುದು ಎಂದರ್ಥ. ಅಂದರೆ ಯಾವುದೇ ಕೆಲಸವನ್ನು ಮಾಡುವುದಾದರೂ ಅದನ್ನು ಶ್ರದ್ಧೆ ಮುಖ್ಯ.ಭಕ್ತಿಯಿಂದ ಮಾಡಿದಾಗ ಮಾತ್ರ ಹಿಡಿದ ಕೆಲಸ ಕೈಗೂಡುತ್ತದೆ.

Comments

  1. ದೇವರು ಭಕ್ತಿಯನ್ನು ಬಿಟ್ಟು ಬೇರೆ ಏನನ್ನು ಅಪೇಕ್ಷಿ ಸುವುದಿಲ್ಲ

    ReplyDelete
  2. The story gives more interesting information. Thank you.

    ReplyDelete
  3. ಭಗವದ್ಗೀತೆಗೆ   ಟಿಪ್ಪಣಿ   ಬರೆದ,  ಶ್ರೀ  ಶಂಕರರಾದಿಯಾಗಿ   ಯಾವ   ಅನುವಾದಕರಿಗೂ,  ಮತ್ತು   ಸ್ವತಃ    ವೇದವ್ಯಾಸರಿಗೂ   ಗೋಚರಿಸದ   ಅರ್ಥ   ವಿಶ್ಲೇಷಣೆ   ಎನ್ನಲಡ್ಡಿಯಿಲ್ಲ.    ಹಿರಿಯಣ್ಣ   ಕೆ  ಪಿ

    ReplyDelete

Post a Comment

Popular posts from this blog

ಆರೋಗ್ಯ ಕವಚ

ಮನುಷ್ಯ ತಾನು ಸುಖವಾಗಿರಲು ದುಡಿಯುತ್ತಾನೆ. ಹಣ ಕೂಡಿಡುತ್ತಾನೆ. ಆಸ್ತಿ ಗಳಿಸುತ್ತಾನೆ. ತಾನು ಮತ್ತು ತನ್ನ ಪ್ರೀತಿಯ ಕುಟುಂಬವನ್ನು ಸುಖವಾಗಿಡುವ ಕನಸುಗಳು ಸದಾ ನಡೆಯುತ್ತಲೇ ಇರುತ್ತವೆ. ಈ ಕನಸಿನ ಮಾರ್ಗದಲ್ಲಿ ಆಕಸ್ಮಿಕವಾಗಿ ಅವನ ದೇಹಕ್ಕೆ ದೊಡ್ಡ ಅನಾರೋಗ್ಯವೇನಾದರೂ ಎದುರಾದರೆ ಬಹಳ ಕಷ್ಟವಾಗುತ್ತದೆ. ಸುಧಾರಿಸಿಕೊಳ್ಳಲು ಸಾಧ್ಯವಾಗದಂತೆ ಗಳಿಸಿದ್ದೆಲ್ಲವೂ ನೀರಿನಂತೆ ಕರಗಿ ಹೋಗುತ್ತದೆ. ಇದರಿಂದ ಜೀವನದಲ್ಲಿ ಹಾಕಿಕೊಂಡ ಗುರಿಯನ್ನು ಸಾಧಿಸಲಾಗುವುದಿಲ್ಲ. ಇಂತಹ ಪರಿಸ್ಥಿತಿಯನ್ನು ಆರ್ಥಿಕವಾಗಿ ಸಮರ್ಥವಾಗಿ ಎದುರಿಸಲು ಬೇಕಾಗಿರುವುದು ಆರೋಗ್ಯ ವಿಮೆ. ಇದನ್ನು ಹೆಲ್ತ್ ಇನ್ಶುರೆನ್ಸ್ ( Heath Insurance) ಅಥವಾ ಮೆಡಿಕಲ್ ಇನ್ಸೂರೆನ್ಸ್ (Medical Insurance) ಎಂದೂ ಹೇಳಲಾಗುತ್ತದೆ. ಇದು ಆರೋಗ್ಯ ರಕ್ಷಣೆಗಾಗಿ ಎಂದೇ ಪಡೆದರೂ ಮುಂದಿನ ನಮ್ಮ ಜೀವನಕ್ಕಾಗಿ, ಪರೋಕ್ಷವಾಗಿ ಕೂಡಿಟ್ಟಿರುವ ಆಸ್ತಿಯನ್ನು ರಕ್ಷಣೆ ಮಾಡುತ್ತದೆ. ಈ ಬಗ್ಗೆ ತಿಳಿದುಕೊಳ್ಳಬೇಕಾದ ವಿಷಯಗಳು ಬಹಳ ಅನಿವಾರ್ಯ. ಇವೆಲ್ಲವನ್ನೂ ಸವಿಸ್ತಾರವಾಗಿ ತಿಳಿಸಿ ಹೇಳುವ ಪ್ರಯತ್ನವೇ ಈ ಲೇಖನ. ಆರೋಗ್ಯ ವಿಮೆ ಎಂದರೇನು? ನಾವು ಸದಾ ಆರೋಗ್ಯದಿಂದ ಇರಬೇಕೆಂದು ಬಯಸುವೆವಾದರೂ "ಮನುಷ್ಯ ಎಂದಮೇಲೆ ಏನಾದರೂ ಕಾಯಿಲೆ ಇದ್ದೇ ಇರುತ್ತದೆ" ಎಂಬಂತೆ ಹಲವು ಸಾರಿ ತಲೆನೋವು, ಜ್ವರ, ನೆಗಡಿ ಮೈ ಕೈ ನೋವು ಎಂದು ನರಳುತ್ತೇವೆ. ಚಿಕೂನ್ ಗುನ್ಯಾ, ಡೆಂಗ್ಯೂ, ಕೊರೋನಾ ಇತ್ಯಾದಿ ಕಾಯಿಲೆಗಳ...

ರಾಘಣ್ಣನ ಎಸ್ಟೇಟ್

ದುಡಿಮೆ ತಂದುಕೊಡುವ ವೃತ್ತಿಗೆ ಹೊಂದಿಕೊಳ್ಳುವವರೇ ಹೆಚ್ಚು. ಪ್ರವೃತ್ತಿಯಾಗಿ ಕೆಲವರಿಗೆ ಕೃಷಿ, ಸಂಗೀತ, ನೃತ್ಯ ಕಲೆ ಇತ್ಯಾದಿ ಹೀಗೆ ಹಲವು ಹವ್ಯಾಸ ಇರುವುದಾದರೂ ಅದರಿಂದ ಜೀವನ ನಡೆಸಲು ಸಾಕಾದಷ್ಟು ದುಡಿಯಲು ಅಸಾಧ್ಯವಾದುದರಿಂದ ಅದನ್ನು ಆರಿಸಿಕೊಳ್ಳಲು ಅವಕಾಶವಾಗಿರುವುದಿಲ್ಲ. ಕೆಲವರಿಗೆ ಅದು ಸದಾ ಕಾಡುತ್ತಿದ್ದರೆ, ಮತ್ತೆ ಕೆಲವರಿಗೆ ಅವಕಾಶ ಕಂಡಾಗ ಪ್ರವೃತ್ತಿಯ ಆಸೆ ಭುಗಿಲೇಳುತ್ತದೆ. ಅಗತ್ಯವೆನಿಸಿ ಅದನ್ನೂ ನಿಭಾಯಿಸಬಲ್ಲೆ ಎನಿಸಿದರೆ ಅದನ್ನು ಮಾಡಲು ಹಿಂಜರಿಯುವುದಿಲ್ಲ. ಹಾಗೆ ವೃತ್ತಿ ಹಾಗೂ ಪ್ರವೃತ್ತಿಗಳನ್ನು ಏಕ ಕಾಲದಲ್ಲಿ ನಿಭಾಯಿಸಿದವರ ಕಥೆಗಳಲ್ಲಿ ಮಿತ್ರರೊಬ್ಬರ ಅನುಭವವೇ ಈ ಲೇಖನ. ರಾಘಣ್ಣ ಇಂಜಿನಿಯರಿಂಗ್ ನಲ್ಲಿ ಮಾಸ್ಟರ್ ಪದವೀಧರ. ದೊಡ್ಡ ಸಂಸ್ಥೆಯಲ್ಲಿ ಕೆಲಸ. ಸದಾ ಹೊಸತನ್ನು ಮಾಡುವ ಚಪಲ. ಕಾರ್ಯ ನಿಮಿತ್ತ ಊರಿಂದ ಊರಿಗೆ ಹೋಗುವಾಗ ಹಾದಿ ಪಕ್ಕದ ತೋಟ ಗದ್ದೆಗಳನ್ನು ನೋಡಿ ಖುಷಿ ಪಡುವನು, ರೈತ ಮಧ್ಯಾಹ್ನದ ವೇಳೆ ಊಟ ಮಾಡಿದ್ದನ್ನು ನೋಡಿದಾಗ ಎಷ್ಟು ಸುಖವಾಗಿ ನೆಮ್ಮದಿಯಿಂದ ಇದ್ದಾನೆ ಎಂದು, ಆ ರೈತನ ಜಾಗದಲ್ಲಿ ತಾನು ಇದ್ದಂತೆ, ತನಗೆ ಹೆಂಡತಿ ಮುದ್ದೆ ಊಟ ತಂದು ಕೊಟ್ಟಂತೆ ಕನಸು ಕಾಣುತ್ತಿದ್ದ. ಸುಗ್ಗಿಯ ವೇಳೆ ಮಾರಾಟವಾದ ಧವಸ-ದಾನ್ಯಗಳ ದರ, ಅವುಗಳಿಗೆ ಮಾರುಕಟ್ಟೆಯಲ್ಲಿ ಇರುವ ಬೇಡಿಕೆ ಕಂಡಾಗ ರೈತರ ಜೀವನದ ಮುಂದೆ ಬೇರೇನೂ ಇಲ್ಲ ಎಂದು ಎನಿಸುತ್ತಿತ್ತು. ಆಗ ತಾನು ರೈತ ಆಗಬೇಕು ಎಂಬ ಸುಪ್ತ ಆಸೆ ಚಿಗುರುತ್ತಿತ್ತು. ಮದುವೆ ಮ...

ಕಗ್ಗಳ್ಳಿಯ ಮಳೆರಾತ್ರಿ

ಇತ್ತೀಚಿನ ದಶಕಗಳಲ್ಲಿ ವಿಶ್ವದ ವಿದ್ಯಾಮಾನಗಳು ಅಂದು ಕೊಂಡಿರುವುದಕ್ಕಿಂತ ಹೆಚ್ಚಿನ ವೇಗದಲ್ಲಿ ನಡೆಯುತ್ತಿದೆ ಎನಿಸುತ್ತದೆ. ಇಂತಹಾ ವೇಗವನ್ನು ಗಮನಿಸಿದಾಗ ನಡೆದ ಘಟನೆಗಳು ತಮಾಷೆ ಎಂದು ಕಂಡರೂ ಮನಸ್ಸಿನ ನೆಮ್ಮದಿಯನ್ನು ಕೆಡಿಸಿದ ಪ್ರಸಂಗಗಳು ಕಾಣಸಿಗುತ್ತವೆ. ಪ್ರತಿಯೊಂದನ್ನೂ ದೇಶ ಕಾಲಮಾನಕ್ಕೆ ಹೋಲಿಸಿ ಗಮನ ಸೆಳೆದ ವಾಸ್ತವ ಘಟನೆಯೇ ಈ ಕಥೆಗೆ ಆಧಾರವಾಗಿದೆ. ಕಳೆದ ದಶಕದ ಮೊದಲ ದಿನಗಳು. ಮಳೆಗಾಲದ ಒಂದು ಸಂಜೆ. ಮನೆಯ ಮುಂದಿನ ಕಟ್ಟೆಯ ಮೇಲೆ ಕುಳಿತ ಕಮಲಳ ಮನಸ್ಸಿನಲ್ಲಿ ಏನೋ ಯೋಚನೆ. ವಾರದಿಂದ ಬರುತ್ತಿದ್ದ ಮಳೆ ಇಂದೇಕೋ ಹೊಳವು ಕೊಟ್ಟಿದೆ. ಮೇಯಲು ಹೋದ ಜಾನುವಾರುಗಳು ಮನೆಗೆ ಬರುವ ಸಮಯ. ಹತ್ತಿರದಲ್ಲಿ ಏನಾದರೂ ಅವು ಬರುವುದು ಕಾಣುತ್ತದೆಯೇ ಎಂದು ಹೋಗಿ ನೋಡೋಣ ಎಂದರೆ ಎಲ್ಲೆಲ್ಲೂ ಕಿಚಿ ಕಿಚಿ ಎನ್ನುವ ಕೆಸರು ನೆಲ. ಜಾರಿ ಬೀಳದಂತೆ ನಡೆಯಲು ಅಂಗಳದಲ್ಲಿ ಹಾಕಿದ ಅಡಿಕೆ ಮರದ ಹಲಗೆಯ ತುಂಡುಗಳು. ಬೇಡವೆಂದರೂ ಕೆಸರಿನಲ್ಲಿ ಆಡುವ ಮಕ್ಕಳು. ತಲೆ ಮೈ ಕೈ ನೆನೆಸಿಕೊಂಡು ಬಂದು ಆರೋಗ್ಯ ಕೆಡಿಸಿಕೊಳ್ಳುವರೇನೋ ಎಂಬ ಭಯ. ಪದೇ ಪದೇ ಒದ್ದೆಯಾಗುವ ಬಟ್ಟೆಗಳು. ಮೊನ್ನೆ ಒಣಗಲು ಹಾಕಿದ ಬಟ್ಟೆಗಳೇ ಒಣಗಿಲ್ಲ. ಮಲೆನಾಡಿನ ಮಳೆಗಾಲ ಎಂದರೆ ಇವೆಲ್ಲ ಸಾಮಾನ್ಯವೇ. ಎಲ್ಲೆಲ್ಲೂ ನೀರು. ನೋಡಿದಲ್ಲೆಲ್ಲಾ ಹಸಿರು. ತರಕಾರಿ, ಹೂವುಗಳು ಯಥೇಚ್ಛವಾಗಿ ಬೆಳೆಸಬಹುದು, ಬೇಕಾದಾಗ ಹತ್ತಿರದಲ್ಲೇ ಜಲಪಾತಕ್ಕೆ ಹೋಗಬಹುದು. ಆದರೆ ಪುರುಸೊತ್ತು ಬೇಕಲ್ಲವೇ? ಯಾವಾಗೋ ಒಂದು ಸಾರಿ ಜ...