Skip to main content

ಪರಿಣಯ ಪ್ರಸ್ತಾಪ

ಕಾಲೇಜಿನ ಅತಿ ಹಿರಿಯ ವಿದ್ಯಾರ್ಥಿ ಶಿವಣ್ಣ ನಗರದ ಹೋಟೆಲೊಂದರಲ್ಲಿ ಹಳೆಯ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮ ಯೋಜಿಸಿದ್ದಾನೆ. ಅವನ ಬ್ಯಾಚಿನ ಸುಮಾರು ೧೮ ಜನ ನಿವೃತ್ತರಾದ ನಾವು ಸೇರಿದ್ದೇವೆ. ಇವರಲ್ಲಿ ೬ ಹೆಣ್ಣು ಮಕ್ಕಳು ಇದ್ದಾರೆ, ಈಗ ಹೆಂಗಸರು ಎನ್ನಿ, ಎಲ್ಲಾ ಸೇರಿದ್ದೇವೆ. ನೋಡಿ ಎಷ್ಟೊ ವರ್ಷಗಳಾಗಿದ್ದಕ್ಕೋ, ಬದಲಾದ ದೇಹ ಸೌಂದರ್ಯವೋ, ವಯೋಸಹಜ ಮರೆವೋ ಗೊತ್ತಿಲ್ಲ ಅಂತೂ ಯಾರನ್ನೂ ಗುರುತಿಸಲಾಗುತ್ತಿಲ್ಲ. ಇಷ್ಟೆಲ್ಲಾ ಯೋಚಿಸುತ್ತಿರುವ ಓಂಕಾರಿಗೆ ಅವನ ಹಳೇ ಕ್ಲಾಸ್ ಮೇಟ್ ದಾನಮ್ಮ ಮಾತ್ರ ನೆನಪಿನಲ್ಲಿದ್ದಾಳೆ, ಅವಳೂ ಬಂದಿರಬಹುದು. ಅವಳ ಮುಖ ಕಾಣದೆ ಕಸಿವಿಸಿಯಾಗುತ್ತಿದೆ. ಅವಳೇನು ಬರ್ತಾಳೋ ಇಲ್ಲೋ ಎಂದು ಕೊಂಡರೂ ಬರ್ತಾಳೆ ನೋಡು ಎಂದು ತನ್ನಲ್ಲೇ ಸ್ವಗತದಲ್ಲಿದ್ದಾನೆ. 

ಮೊದಲ ದಿನದ ಈ ಸಂಜೆ ಎಲ್ಲರೂ ಸೇರಿದ್ದಾರೆ. ಹೊಸದಾಗಿ ಪರಿಚಯ ಮಾಡಿ ಕೊಳ್ಳಬೇಕಾದ ಅನಿವಾರ್ಯತೆ ಮನಗಂಡು ಸಂಯೋಜಕ ಶಿವಣ್ಣ ಹೊಸ ಐಡಿಯಾ ಮಾಡಿದ್ದಾನೆ. ಎಲ್ಲರ ಅಡ್ಡಹೆಸರು ಕೇಳಿ ಅದನ್ನು ಕಾರ್ಡಿನಲ್ಲಿ ಬರೆಸಿ ಪ್ರತಿಯೊಬ್ಬರ ಎದೆಗೆ ನೇತು ಹಾಕಿದ್ದಾನೆ. ಈಗ ನಿಧಾನವಾಗಿ ಇರೋ ೧೫-೧೫ ಅಡಿ ಜಾಗದ ಹಾಲ್ ನಲ್ಲಿ ಎಲ್ಲರೂ ಎದುರು ಬದುರು ಬರುವಂತೆ ಸುತ್ತಬೇಕು. ಶಿವಣ್ಣ ರಿಮೋಟ್ ನಲ್ಲಿ ಮ್ಯೂಸಿಕ್ ಹಾಕುವುದು ನಿಲ್ಲಿಸುವುದು ಮಾಡುತ್ತಿರುತ್ತಾನೆ. ಅವನು ಯಾವಾಗ ಮ್ಯೂಸಿಕ್ ನಿಲ್ಲಿಸುವನೋ ಆ ವೇಳೆಯಲ್ಲಿ ಎದುರಿಗಿದ್ದವರ ಹೆಸರು ಓದಿ ಪರಿಚಯ ಮಾಡಿಕೊಳ್ಳಬೇಕು. ಹಾಗೆ ಎರಡನೇ ಬಾರಿ ಮ್ಯೂಸಿಕ್ ನಿಲ್ಲಿಸಿದಾಗ, ಆಶ್ಚರ್ಯ, ಓಂಕಾರಿ ದಾನಮ್ಮ ಮುಖಾಮುಖಿಯಾದರು. ಇಬ್ಬರಿಗೂ ಏನೋ ಖುಷಿ. ಸರಿ ಮತ್ತೆ ಮ್ಯೂಸಿಕ್ ಪ್ರಾರಂಭವಾಗಿ ನಿಂತಾಗ ಯಥಾ ಪ್ರಕಾರ ಓಂಕಾರಿ ದಾನಮ್ಮ ಮುಖಾಮುಖಿ. ಹೀಗೆಯೇ ಆಟ ಮುಗಿಯುವವರೆಗೂ ಅವರಿಬ್ಬರ ಮುಖಾಮುಖಿ ಮಾತ್ರ ಕಡೇವರೆಗೂ ಮುಂದುವರಿಯಿತು. ಈ ವೇಳೆಯಲ್ಲಿ ಅವಳ ವಿಷಯ ಇವನಿಗೆ, ಇವನ ವಿಷಯ ಅವಳಿಗೆ ಹೇಳಿಕೊಳ್ಳಲು ಅವಕಾಶವಾಯಿತು. ದಾನಮ್ಮಗೆ ೬೩ ವಯಸ್ಸಾಗಿದೆ. ಗಂಡ ಕೈಲಾಸ ಸೇರಿಕೊಂಡು ಎರಡು ವರ್ಷವಾಗಿದೆ. ಇರೋ ಎರಡು ಮಕ್ಕಳಿಗೆ ಇರೋ ಆಸ್ತಿ ಬೇಡ, ಅಮ್ಮ ಹೇಗೂ ಜರ್ಮನಿಗೆ ಬರೋಕೆ ರೆಡಿ ಇಲ್ಲ ಎಂದು ಇಲ್ಲೇ ಏನಾದರೂ ಮಾಡಿಕೋ ಎಂದಿದ್ದಾರೆ. ಇವಳೋ ಅವರಿವರು ಸಂಬಂಧಿಗಳ ಮನೆಗೆಂದು ಓಡಾಡಿಕೊಂಡು ಹಳೇ ಮನೆಯಲ್ಲಿ ಕಾಲ ಕಳೆಯುತ್ತಿದ್ದಾಳೆ. ಇನ್ನು ಓಂಕಾರಿ. ಎಂದೋ ವಿದುರನಾಗಿದ್ದಾನೆ. ಮಗಳು ಮದುವೆಯಾಗಿ ಮೈಸೂರಲ್ಲಿದ್ದಾಳೆ. ಅವಳ ಸಂಪರ್ಕವೂ ಅಷ್ಟಕಷ್ಟೇ. ಮಗ ಸ್ವೀಡನ್ನಿನಲ್ಲಿ ಇದ್ದಾನೆ. ಅವನು ಬಂದು ಮೂರು ನಾಲ್ಕು ವರ್ಷಗಳಾಯ್ತೇನೋ, ನೆನಪಿಗೆ ಬರ್ತಾ ಇಲ್ಲ. ದಾನಮ್ಮ ಇತರ ಮಿತ್ರರೊಂದಿಗೆ ಮಾತನಾಡಲು ಹೋಗಿದ್ದಾಗ ಏನೋ ಗಾಢವಾಗಿ ಯೋಚಿಸುತ್ತಿದ್ದ ಓಂಕಾರಿ ಈಗ ಒಂದು ನಿರ್ಧಾರಕ್ಕೆ ಬಂದಿದ್ದಾನೆ. ರಾತ್ರಿ ಊಟದ ಹೊತ್ತಿನಲ್ಲಿ ದಾನಮ್ಮ ಎದುರು ಕುಳಿತಿದ್ದಾಳೆ. ಅದೂ ಇದೂ ಮಾತಾಡುತ್ತಾ ಓಂಕಾರಿ ಹೆದರಿಕೊಳ್ಳುತ್ತಲೇ ಹಠಾತ್ತಾಗಿ ಅವಳೊಂದಿಗೆ ಒಂದು ಪ್ರಪೋಸಲ್ ಇಟ್ಟ. ಹೇಗೂ ನೀನೂ ಒಬ್ಬಳೇ ಇರೋದು ಹಾಗೆಯೇ ನಾನೂ ಸಹ. ನಾವಿಬ್ಬರೂ ಯಾಕೆ ಮದುವೆಯಾಗಬಾರದು? ಈ ವಯಸ್ಸಿನಲ್ಲಿ ಒಬ್ಬರಿಗೊಬ್ಬರು ನೋಡಿಕೊಂಡು ಇದ್ದರೆ ಒಳ್ಳೆಯದು ಅಲ್ಲವೇ ಎಂದ. ವಿದ್ಯಾರ್ಥಿ ಜೀವನದಲ್ಲೇ ಆಸೆಯಿದ್ದರೂ ಹೇಳಲಾಗಲಿಲ್ಲ ಎಂದು ಬಿಟ್ಟ. ಅವಳೂ ಅಲ್ಲಿ ಇಲ್ಲಿ ನೋಡುತ್ತಾ ಯೋಚಿಸುತ್ತಾ, ಹೂಂ ಆಗಲಿ ಎಂದು ನಿಧಾನವಾಗಿ ಹೇಳಿದಳು. ಇವನೂ ಸಂತೋಷ ಸಮಾಧಾನ ಹೆಚ್ಚಾಗಿ ಅಲ್ಲಿಯೇ ಟೇಬಲ್ ಮೇಲಿಟ್ಟಿದ್ದ ಊಟವನ್ನೇ ಮತ್ತೆ ಬೇಕಾ, ಬೇಕಾ ಎಂದು ಉಪಚರಿಸಿದ. ಊಟವಾಯಿತು. ಆಗಲೇ ತಡವಾಗಿದ್ದರಿಂದ ಅವರವರು ಉಳಿದ ಹೋಟೆಲ್ ರೂಂ ಗೆ ಹೋದರು. 

ಓಂಕಾರಿಗೆ ಮಲಗಿದಾಗೇನೋ ತಕ್ಷಣ ನಿದ್ದೆ ಬಂತು. ಹೊಸ ಜಾಗವೋ, ಹೊಸ ಹಾಸಿಗೆಯೋ, ತಿಂದ ಆಹಾರಕ್ಕೋ ಅಂತೂ ನಡುರಾತ್ರಿ ಎಚ್ಚರವಾಯಿತು. ಹಿಂದಿನ ದಿನ ರಾತ್ರಿ ನಡೆದ ಅವಿಸ್ಮರಣೀಯ ಪರಿಣಯ ಪ್ರಸ್ತಾಪ ರೀತಿಯನ್ನು ನೆನಪಿಸಿಕೊಳ್ಳಲು ಪ್ರಾರಂಭಿಸಿದ. ಓಂಕಾರಿಗೆ ಇದ್ದಕ್ಕಿದ್ದಂತೆ ಅನುಮಾನ ಶುರುವಾಯಿತು. ನೀನು ನನ್ನನ್ನು ಮದುವೆ ಯಾಗುತ್ತೀಯಾ ಎಂದು ಕೇಳಿದೆ. ಅವಳೇನಂದಳು. ಎಸ್ ಎಂದಳೋ ನೋ ಅಂದಳೋ. ನೆನಪಿಗೆ ಬರ್ತಾ ಇಲ್ಲ. ಏನಂದಳೂ, ಏನಂದಳೂ ಎಂದು ಯೋಚಿಸಿಯೇ ಯೋಚಿಸಿದ. ಸುಡುಗಾಡು, ನನಗೇ ಮರೆತು ಹೋಯ್ತಾ, ಸರಿಯಾಗಿ ಕೇಳಿಸಿಕೊಳ್ಳಲಿಲ್ಲವೋ ಅಥವಾ ಅವಳೇ ಏನೋ ಸರಿಯಾಗಿ ಹೇಳಲಿಲ್ಲವಾ. ಹೀಗೇ ಯೋಚಿಸುತ್ತಾ ಮಲಗಿದ ಓಂಕಾರಿಗೆ ನಿದ್ದೆ ಬಂದಾಗ ಬೆಳಗಾಗಿತ್ತು. ಎಚ್ಚರವಾದರೂ ನೆನಪಿಗೆ ಬರದ ಉತ್ತರ. ಈಗ ಹೇಗೆ ಕೇಳಲಿ ಎಂದುಕೊಂಡೇ ಸ್ನಾನ ಪೂಜೆ ಮುಗಿಸಿದ. ಇಂದಿನ ಕಾರ್ಯಕ್ರಮ ಉಪಾಹಾರದಿಂದ ಪ್ರಾರಂಭ ಎಂದಿದ್ದರೂ ಅವನಿಗೆ ಆ ಬಗ್ಗೆ ಚಿಂತೆ ಇಲ್ಲ, ಆದರೆ ತನ್ನ ಹಾಗೇ ಇರುವ ಬೇರೆಯವರು ಅವಳೊಂದಿಗೆ ಇದೇ ಪ್ರಸ್ತಾಪ ಮಾಡಿದರೆ ಎಂದು ಲಗುಬಗೆಯಿಂದ ಹೋಟೆಲ್ ಗೆ ಹೋದ. ಇನ್ನು ಉಪಹಾರ ಸೇವನೆ ನಡೆದಿತ್ತು. ಅಂತೂ ದಾನಮ್ಮನ ಹುಡುಕಿ ಎದುರು ಕುಳಿತು ಕೊಳ್ಳುವುದಕ್ಕೆ ಸಾಕಾಯಿತು. ಈಗ ಹೇಗೆ ಪ್ರಾರಂಭಿಸುವುದು ಎಂದು ಕೊಂಡೇ ಸ್ವಲ್ಪ ಹೊತ್ತು ಕಳೆದ. ಈ ನಡುವೆ ಯಾಕೋ ಮರೆವು ಅಲ್ಲವೇ ಎಂದು ಶುರು ಮಾಡಿದ. ಅಂದ್ಹಾಗೆ ನಿನ್ನೆ ನಾನು ಮದುವೆ ಬಗ್ಗೆ ಕೇಳಿದ್ದೆ ನೀನು ಏನಂದೆ, ಹೇಳು ಎಂದ. ಅವಳೋ ಸ್ವಲ್ಪ ಖುಷಿಯಿಂದಲೇ ಓ ನೀನಾ ಹಾಗೆ ಕೇಳಿದ್ದು. ನಾನು ಹೂಂ ಅಂತಲೇ ಅಂದೆ ಎಂದು ಗೊತ್ತಿದೆ. ಆದರೆ ಯಾರು ಮದುವೆ ಪ್ರಸ್ತಾಪ ಮಾಡಿದ್ದು ಎಂದು ರಾತ್ರಿಯಿಡೀ ಯೋಚಿಸಿ ಯೋಚಿಸಿ ಸಾಕಾಗಿತ್ತು. ಒಳ್ಳೆಯ ಪುಣ್ಯಾತ್ಮ ಎಂದಾಗ ಓಂಕಾರಿಗೆ ಬಂದ ದೊಡ್ಡ ಉಸಿರು ದೂರ ಕುಳಿತಿದ್ದ ಶಿವಣ್ಣನಿಗೂ ಕೇಳಿಸಿರಬಹುದು.

ಅಲ್ಲಿಯೇ ಇನ್ನೊಂದು ಘಟನೆ. ೬೫ರ ಪರಮೇಶಿಗೆ ಕಿವಿ ಸ್ವಲ್ಪ ಮಂದ. ಅತ್ತ ಅವಳ ಸಂಬಂಧಿ ಕ್ಲಾಸ್ ಮೇಟ್ ಪ್ರೇಮ ಬಂದಿದ್ದಾಳೆ. ಅವಳಿಗೋ ಅಪ್ಪೂಟ್ ಕೇಳಿಸೋದೇ ಇಲ್ಲ. ಅದೇಕೋ ಅವನ ಹಿಂದೆ ಹಿಂದೆ ಅವಳು ಹೋದರೂ ಅವನು ತಿರುಗವಲ್ಲ. ಆದರೂ ಅವಳ ಮಾತಿಗೆ ಉತ್ತರ ಕೊಡುತಿದ್ದ. ಅವನು ಹೋಗುವುದನ್ನು ನೋಡಿ, ಕೈ ತೊಳೆದು ಕೊಳ್ಳಲು ಹೋಗುತ್ತಿದ್ದೀಯಾ ಎಂದಳು. ಇಲ್ಲ ಇಲ್ಲೇ ಕೈ ತೊಳೆದು ಕೊಂಡು ಬರಲು ಹೋಗುತ್ತಿದ್ದೇನೆ ಎಂದ. ಹೌದಾ, ನೀನೇನೋ ಕೈ ತೊಳೆದು ಕೊಳ್ಳಲು ಹೋಗುತ್ತಿದ್ದೀಯ ಎಂದು ಕೊಂಡೆ ಎಂದಳು. ಅವನೋ, ಇಲ್ಲ ಇಲ್ಲ, ಇಲ್ಲೇ ಕೈ ತೊಳೆದು ಕೊಂಡು ಬರೋಕೆ ಹೋಗುತ್ತಿದ್ದೇನೆ ಎಂದ. ಕೇಳಿಸದವರ ಈ ಸಂಭಾಷಣೆ ಕೇಳಿಸುವವರಿಗೆ ಅರ್ಥವೇ ಆಗಲಿಲ್ಲ. ಇವುಗಳ ಮಧ್ಯೆ ಹಿರಿಯ ನಾಗರಿಕರ ಸಮಸ್ಯೆಗಳು, ಪರಿಹಾರೋಪಾಯ ಇತ್ಯಾದಿಗಳ ಚರ್ಚೆಯಲ್ಲಿ ಇಂತಹಾ ಸ್ವಾರಸ್ಯಕರ ಘಟನೆಗಳು ನಡೆದಿತ್ತು.


Comments

  1. ಪರಿಣಯ ಪ್ರಸ್ತಾಪ ಚಿಕ್ಕದಾಗಿ ಚೊಕ್ಕವಾಗಿ ಅರ್ಥಗರ್ಭಿತವಾಗಿದೆ. ಜನರು ವಯಸ್ಸಿಗಿಂತ, ವಯಸ್ಸಾದಮೇಲೆ ಬೇರೆಯೊಬ್ಬರ ಮೇಲೆ ಅವಲಂಬಿಸುವಂತೆ ಆಗುತ್ತದೆ. ಇದು ದೈಹಿಕ ಆಕರ್ಷಣೆ ಅಲ್ಲ. ಮಾನಸಿಕವಾಗಿ ಅವರಿಗಾಗಿ ಸ್ಪಂದಿಸುವ ಜೀವವೊಂದು ಬೇಕಾಗುತ್ತದೆ.ಅದರಲ್ಲೂ ಗಂಡ ಅಥವಾ ಹೆಂಡತಿ, ಮಕ್ಕಳಿಂದ ದೂರವಾಗಿ ಬಿಟ್ಟು, ಒಂಟಿಯಾಗಿ ಬಿಟ್ಟರೆ ನಿಜವಾಗಿ ಅವರು ಅನಾಥರಾಗಿ ಬಿಡುತ್ತಾರೆ. ಅಂತಹ ಸಮಯದಲ್ಲಿ ಜೊತೆಯಾಗಿ ಒಬ್ಬರು ಬೇಕೆನಿಸುವುದು ಸಹಜ. ಇದರಲ್ಲಿ ಓಂಕಾರ ಮತ್ತು ದಾನಮ್ಮ ಇಬ್ಬರು ಒಂದೇ ದೋಣಿಯ ಪಯಣಿಗರು ಆಗಿರುವುದರಿಂದ ಅವರ ನಿರ್ಧಾರ ಸರಿಯಾಗಿದೆ.

    ReplyDelete

Post a Comment

Popular posts from this blog

ಆರೋಗ್ಯ ಕವಚ

ಮನುಷ್ಯ ತಾನು ಸುಖವಾಗಿರಲು ದುಡಿಯುತ್ತಾನೆ. ಹಣ ಕೂಡಿಡುತ್ತಾನೆ. ಆಸ್ತಿ ಗಳಿಸುತ್ತಾನೆ. ತಾನು ಮತ್ತು ತನ್ನ ಪ್ರೀತಿಯ ಕುಟುಂಬವನ್ನು ಸುಖವಾಗಿಡುವ ಕನಸುಗಳು ಸದಾ ನಡೆಯುತ್ತಲೇ ಇರುತ್ತವೆ. ಈ ಕನಸಿನ ಮಾರ್ಗದಲ್ಲಿ ಆಕಸ್ಮಿಕವಾಗಿ ಅವನ ದೇಹಕ್ಕೆ ದೊಡ್ಡ ಅನಾರೋಗ್ಯವೇನಾದರೂ ಎದುರಾದರೆ ಬಹಳ ಕಷ್ಟವಾಗುತ್ತದೆ. ಸುಧಾರಿಸಿಕೊಳ್ಳಲು ಸಾಧ್ಯವಾಗದಂತೆ ಗಳಿಸಿದ್ದೆಲ್ಲವೂ ನೀರಿನಂತೆ ಕರಗಿ ಹೋಗುತ್ತದೆ. ಇದರಿಂದ ಜೀವನದಲ್ಲಿ ಹಾಕಿಕೊಂಡ ಗುರಿಯನ್ನು ಸಾಧಿಸಲಾಗುವುದಿಲ್ಲ. ಇಂತಹ ಪರಿಸ್ಥಿತಿಯನ್ನು ಆರ್ಥಿಕವಾಗಿ ಸಮರ್ಥವಾಗಿ ಎದುರಿಸಲು ಬೇಕಾಗಿರುವುದು ಆರೋಗ್ಯ ವಿಮೆ. ಇದನ್ನು ಹೆಲ್ತ್ ಇನ್ಶುರೆನ್ಸ್ ( Heath Insurance) ಅಥವಾ ಮೆಡಿಕಲ್ ಇನ್ಸೂರೆನ್ಸ್ (Medical Insurance) ಎಂದೂ ಹೇಳಲಾಗುತ್ತದೆ. ಇದು ಆರೋಗ್ಯ ರಕ್ಷಣೆಗಾಗಿ ಎಂದೇ ಪಡೆದರೂ ಮುಂದಿನ ನಮ್ಮ ಜೀವನಕ್ಕಾಗಿ, ಪರೋಕ್ಷವಾಗಿ ಕೂಡಿಟ್ಟಿರುವ ಆಸ್ತಿಯನ್ನು ರಕ್ಷಣೆ ಮಾಡುತ್ತದೆ. ಈ ಬಗ್ಗೆ ತಿಳಿದುಕೊಳ್ಳಬೇಕಾದ ವಿಷಯಗಳು ಬಹಳ ಅನಿವಾರ್ಯ. ಇವೆಲ್ಲವನ್ನೂ ಸವಿಸ್ತಾರವಾಗಿ ತಿಳಿಸಿ ಹೇಳುವ ಪ್ರಯತ್ನವೇ ಈ ಲೇಖನ. ಆರೋಗ್ಯ ವಿಮೆ ಎಂದರೇನು? ನಾವು ಸದಾ ಆರೋಗ್ಯದಿಂದ ಇರಬೇಕೆಂದು ಬಯಸುವೆವಾದರೂ "ಮನುಷ್ಯ ಎಂದಮೇಲೆ ಏನಾದರೂ ಕಾಯಿಲೆ ಇದ್ದೇ ಇರುತ್ತದೆ" ಎಂಬಂತೆ ಹಲವು ಸಾರಿ ತಲೆನೋವು, ಜ್ವರ, ನೆಗಡಿ ಮೈ ಕೈ ನೋವು ಎಂದು ನರಳುತ್ತೇವೆ. ಚಿಕೂನ್ ಗುನ್ಯಾ, ಡೆಂಗ್ಯೂ, ಕೊರೋನಾ ಇತ್ಯಾದಿ ಕಾಯಿಲೆಗಳ...

ಮಿತ್ರನೊಬ್ಬನ ಆತ್ಮಾವಲೋಕನ

ಮಿತ್ರ ಶಂಕರ ಒಮ್ಮೆ ಹೇಳಿದ್ದ, ಕೇಳಿ ಹಳತಾದರೂ ಓದುಗರಿಗೆ ಹೊಸತಾಗಿ, ಆತ್ಮೊನ್ನತಿಗೆ ಸಹಾಯ ವೆನಿಸುವ, ಆತ್ಮಾವಲೋಕನದ ಸಾಲುಗಳು ನಿಜವಾಗಿಯೂ ಕುತೂಹಲಕಾರಿಯಾಗಿದೆ. ಅದನ್ನು ಅವನಿಂದಲೇ ಕೇಳಿ: ಕಛೇರಿಯಲ್ಲಿ ವಿಶೇಷವಾದ ಕೆಲಸವೊಂದನ್ನು ನಿರೀಕ್ಷೆಗಿಂತ ಮೊದಲೇ ಯಶಸ್ವಿಯಾಗಿ ಪೂರೈಸಿದ್ದರಿಂದ ತುಂಬಾ ಸಂತೋಷವಾಗಿತ್ತು. ಆದ್ದರಿಂದ ಮನೆಗೆ ಸ್ವಲ್ಪ ಬೇಗನೆ ಬಂದಿದ್ದೆ. ಪ್ರತಿದಿನ ಯಾಕೆ ಲೇಟು ಎಂಬ ಮುಖವನ್ನು ಮಾಡುತ್ತಿದ್ದ ಮಡದಿ ಪ್ರೇಮ ಕೊಟ್ಟ ಒಂದು ಬಿಸಿಯಾದ ಸ್ಟ್ರಾಂಗ್ ಕಾಫಿ ಕುಡಿದು ನಿಧಾನವಾಗಿ ಸೋಫಾದ ಮೇಲೆ ಕಾಲು ಚಾಚುತ್ತಿದ್ದಂತೆಯೇ ನಿದ್ರಾ ದೇವಿಗೆ ವಶನಾಗಿ ಕೆಲವು ಸಮಯವಾಗಿರಬಹುದು. ಕೆಲವೇ ನಿಮಿಷಗಳಲ್ಲಿ ನಿದ್ದೆ ಬಂದಿತ್ತಾದರೂ ತಾಳಲಾರೆನೆಂಬ ಎದೆನೋವು, ಇದ್ದಕ್ಕಿದ್ದಂತೆ ಉಸಿರುಗಟ್ಟಿಸುವಂತಹ ಅನುಭವ. ಏನು ಗೊತ್ತಾಗುತ್ತಿಲ್ಲ. ಕೆಲವೇ ನಿಮಿಷಗಳಲ್ಲಿ ಗಾಬರಿಯಿಂದ ಪ್ರೇಮಾ, ಮಗಳು - ಅಳಿಯನನ್ನು ಕರೆಯುತ್ತಿದ್ದಾಳೆ. ಕಾಲು ಕೈ ಎದೆ ಭಾಗಗಳನ್ನು ಹಿತವಾಗಿ ಯಾರೋ ತಡವುತ್ತಿದ್ದಾರೇನೋ. ಹಾಗೆಯೇ ನನ್ನನ್ನು ಎತ್ತಿದಂತಹ ಅನುಭವ. ಎಲ್ಲಿಗೋ ಕರೆದುಕೊಂಡು ಹೋಗುತ್ತಿರಬಹುದು. ಯಾವುದೋ ವಾಹನದ ಸದ್ದು. ನನ್ನ ಕೈಗಳನ್ನು ಯಾರೋ ಎತ್ತುತ್ತಿದ್ದಾರೆ, ಏನಾಗುತ್ತಿದೆ? ಹೊಸತರದ ಹಾಸಿಗೆ. ಮೂಗು ಬಾಯಿಗೆ ಏನೋ ತಡೆ. ಸಣ್ಣದಾಗಿ ಬಿಟ್ಟು ಬಿಟ್ಟು ಕೇಳುವ ಏಕತಾನದ ಸದ್ದು. ಹಠಾತ್ತಾಗಿ ನಿಶ್ಯಬ್ದ. ನೀರವ ವಾತಾವರಣ. ಈಗ ನನಗೆ ನೋವು ಇದೆಯೇ. ಟಿವಿಯಲ್ಲಿ ಯಾವುದೋ ಕ...

ಬಾಳ ರೂಪಿಸಿದ ವಿಮೆ

ನಾವು ಸಮಾಜದಲ್ಲಿ ನಮಗಾಗಿ ನಾವು ಅನೇಕ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದೇವೆ. ಅದನ್ನು ಒದಗಿಸಲು ಅದರದೇ ಆದ ಸಂಸ್ಥೆ ಹಾಗೂ ಸೇವಾ ಸಿಬ್ಬಂದಿಗಳಿದ್ದಾರೆ. ಇವು ನಮ್ಮ ಬದುಕು ಸುಗಮವಾಗಲು ಸಹಾಯಕವಾಗಿ ವೆ . ಇವಲ್ಲದೆ  ಜೀವನದಲ್ಲಿ ನಮ್ಮ ಉನ್ನತಿಗೆ ಬಂಧುಮಿತ್ರರ ಪಾತ್ರ ತೀರಾ ಸಾಮಾನ್ಯ. ಆದರೆ ಸಂಸ್ಥೆಯೊಂದು ಕೊಡುವ ಸೇವೆಯೇ ಒಬ್ಬರ ಬದುಕನ್ನು ರೂಪಿಸಿಕೊಳ್ಳಲು ಅವಕಾಶವಾದ  ಘಟನೆಯ ಸ್ಮರಣೆಯೇ ಈ ಕಥೆಯ ಜೀವಾಳ. ಈ ಬೆಳಿಗ್ಗೆ ಬೆಂಗಳೂರಿನಿಂದ ಲಂಡನ್ ವರೆಗಿನ ಆಕಾಶ ಪಯಣ. ಇದಕ್ಕಾಗಿ ನಿನ್ನೆಯಿಂದಲೇ ನಿದ್ದೆ ಇಲ್ಲ. ರಾತ್ರಿ ಪೂರ್ತಿ ವಿಮಾನ ನಿಲ್ದಾಣದಲ್ಲಿ ಸಮಯ ಕಳೆದೆವು. ಲಂಡನ್ನಿನ ಸಮಯದಂತೆ ಮಧ್ಯಾಹ್ನವೇ ಬಂದೆವು. ಅಮೇರಿಕಾಕ್ಕೆ ಹೋಗುವ ವಿಮಾನ ಸಂಜೆ ಐದು ಗಂಟೆಗೆ. ಆದ್ದರಿಂದ ಕಾಯಲೇಬೇಕು. ವಿಮಾನ ನಿಲ್ದಾಣದಲ್ಲಿ ಆಯಾಸದಿಂದ ನಿದ್ದೆ ಬರುತ್ತಿದ್ದರೂ ಎಚ್ಚರವಾಗದಷ್ಟು ನಿದ್ದೆ ಬಂದು ಮುಂದಿನ ವಿಮಾನ ತಪ್ಪಿ ಹೋದರೆ ಎಂಬ ಭಯದಿಂದ ಕಣ್ಣು ಮುಚ್ಚಲಿಲ್ಲ. ಈಗ ಅಮೇರಿಕಾದ ವಾಶಿಂಗ್ಟನ್ಗೆ ಹೋಗುವ ವಿಮಾನದಲ್ಲಿ ಕುಳಿತಿದ್ದೇನೆ. ಪಕ್ಕದಲ್ಲಿ ಕುಳಿತ ನಮ್ಮವರಿಗೆ ಗಾಢ ನಿದ್ರೆ. ವಿಮಾನ ಪ್ರಯಾಣವೇನೋ ಹೆಮ್ಮೆಯ ವಿಷಯವೇ. ಆದರೆ ಇದೇ ಮೊದಲ ಪ್ರಯಾಣವಾದ್ದರಿಂದ ಏನೋ ಆತಂಕ, ಸಂತೋಷ, ದುಗುಡ ಜೊತೆಗೆ ಸಡಗರ. ಸುತ್ತ ನೋಡುತ್ತಾ ನನ್ನ ಬಗ್ಗೆ ನಾನು ಯೋಚಿಸುತ್ತಿದ್ದೇನೆ. ನಾನು ಎಲ್ಲಿದ್ದೇನೆ. ಎಲ್ಲಿಗೆ ಬಂದೆ. ಇರುವನೊಬ್ಬ ಮಗ ಆನಂದನೇ ನಮಗೆ ಸರ್ವಸ್ವ. ಆದ್ದ...