ಏನೋ ತಳಮಳ, ಅದೇನೋ ಗೊಂದಲ
ಮನೆಯಲ್ಲೇ ಇದ್ದರೂ ಎಲ್ಲರೂ ದೂರ ದೂರ
ಕೇಳಿದ್ದೆಲ್ಲ ಮಾಡಿ ಬಡಿಸಲು ಮಡದಿ ರೆಡಿ
ಕೇಳುವ ಹೇಳುವ ಸಂಭ್ರಮವಿಲ್ಲ ಮನಸಿನಡಿ
ಅಜ್ಞಾತ ಕಣ್ಣುಗಳು ನನ್ನನ್ನೇ ಅನುಸರಿಸುತಿದೆಯೇ
ಯಾವ ಕ್ಷಣದಲಿ ಹೇಗೆ ಇವನ ಬೇಟೆಯಾಡಲೆಂದೇ
ಹೊಸದಾಗಿ ಬಂದಿರುವ ಲೋಕದ ಹೊಸ ವ್ಯಾಧಿ
ಸದಾ ಚಿಂತೆ ನರಳಿಸುತ ಜೀವ ಪಡೆಯುವ ಹಾದಿ
ಬೇಡದ ರಜೆಯಲ್ಲಿ ಕೇಳುತಿದೆ ಬರೀ ಕಳೆದುಕೊಂಡ ಸುದ್ದಿ
ಮನೆಯಲ್ಲೇ ಇದ್ದರೂ ಎಲ್ಲರೂ ದೂರ ದೂರ
ಕೇಳಿದ್ದೆಲ್ಲ ಮಾಡಿ ಬಡಿಸಲು ಮಡದಿ ರೆಡಿ
ಕೇಳುವ ಹೇಳುವ ಸಂಭ್ರಮವಿಲ್ಲ ಮನಸಿನಡಿ
ಅಜ್ಞಾತ ಕಣ್ಣುಗಳು ನನ್ನನ್ನೇ ಅನುಸರಿಸುತಿದೆಯೇ
ಯಾವ ಕ್ಷಣದಲಿ ಹೇಗೆ ಇವನ ಬೇಟೆಯಾಡಲೆಂದೇ
ಹೊಸದಾಗಿ ಬಂದಿರುವ ಲೋಕದ ಹೊಸ ವ್ಯಾಧಿ
ಸದಾ ಚಿಂತೆ ನರಳಿಸುತ ಜೀವ ಪಡೆಯುವ ಹಾದಿ
ಬೇಡದ ರಜೆಯಲ್ಲಿ ಕೇಳುತಿದೆ ಬರೀ ಕಳೆದುಕೊಂಡ ಸುದ್ದಿ
ಬೇಕಾದವರ ಸಾವು ಭಯ ಹುಟ್ಟಿಸುತ್ತಿದೆ ಮನವ ಗುದ್ದಿ
ಸರತಿಯ ಸಾಲಲ್ಲಿ ಇರಬಹುದೇ ನಾನು ನನ್ನವರ ಹೆಸರು
ಹಾಗೆಂಬ ಯೋಚನೆಯೇ ತೋರುವುದೇ ಮನದ ಕೆಸರು
ಜೀವನವು ಲೊಳಲೊಟ್ಟೆ ದಾಸವಾಣಿ ಹೇಳುತಿದೆ
ಎಂತೆಲ್ಲ ಅಧ್ಯಾತ್ಮ ವಿಚಾರಗಳು ಮನದಲಿ ಬರುತಿದೆ
ಬಂಧು ಮಿತ್ರರ ನಡುವೆ ಎಂದಿದ್ದರೂ ನೀನು ಒಂಟಿ
ಯಾವಾಗ ಕರೆದರೂ ಬರಬೇಕು ತಕ್ಷಣ ಹೊಂಟಿ
ಚಂದಿರನ ಕಂಡಿವೆವು ಕಾಣುವೆವು ನಾಳೆ ಮಂಗಳನ
ಎಂದವರು ಹೆಣಗಾಡುತಿಹರೇ ಎದುರಿಸಲು ಕೊರೋನ
ಎಲ್ಲಿ ಹೋಯಿತು ಎಲ್ಲವನು ಗೆಲ್ಲುವೆನೆಂಬ ಸಾಮರ್ಥ್ಯ
ಇರುವ ಭೂಮಿಯಲೆ ತಪ್ಪುತಿದೆಯೇ ನಮ್ಮ ಅಧಿಪತ್ಯ
ಅಣುಬಾಂಬಿನಲ್ಲೇ ಜಗವ ಗೆಲುವೆ ಎನ್ನುವ ಸಖನೇ
ಅಣುವೊಂದರ ಮೂಲ ತಿಳಿಯದೆ ಒದ್ದಾಡುತ್ತಿಹನೇ
ಎಲ್ಲಿ ಹೋಯಿತು ನಮ್ಮ ದಿಟ್ಟತನ ದರ್ಪ ಅಹಂಕಾರ
ದಾರಿ ತಿಳಿಯದೆ ಮುದುರಿ ಕುಳಿತಿಹುದೇ ಅಲಂಕಾರ
ಎಲ್ಲಿ ಹೋಯಿತು ನಮ್ಮಪಾಂಡಿತ್ಯ ಜ್ಞಾನ ವಿಜ್ಞಾನ
ನರರ ಸಂಹಾರ ತೋರಿಸುತಿದೆ ನಮ್ಮಯ ಅಜ್ಞಾನ
ನಾನಿರುವೆ ನಾ ನಿಮ್ಮ ಬದುಕಿಸುವೆ ಎನ್ನುವಾ ಮದ್ದು
ಇಲ್ಲದೆ ಪ್ರಾಣ ಮಲಗಿದೆ ಐಸಿಯುನಲಿ ಹೊದಿಕೆ ಹೊದ್ದು
ನಮ್ಮೆಲ್ಲರ ದುಷ್ಟ ಅಹಂಕಾರ ತೋರಿಸುತಿದೆ ಕನ್ನಡಿ
ಅಣಕಿಸಿ ಕೇಳುವ ನಗು ಆಗುವುದೇ ಏಳಿಗೆಯ ಮುನ್ನುಡಿ
ಯುದ್ಧ ಬಿಡುವೆ ಹಠವನ್ನು ಬಿಡುವೆ ಶತ್ರುತ್ವ ನಾ ಬಿಡುವೆ
ಬಂದಿರುವ ವ್ಯಾಧಿ ಕಳೆಯಲು ಸರ್ವ ಆಸೆಯ ಬಿಡುವೆ
ಶರಣಾದೆ ಶಕ್ತಿಯೇ ಲೋಕದ ಪ್ರಾಣ ಹರಣವ ನಿಲಿಸು
ಕರುಣೆಯ ತೋರಿ ಲೋಕ ಬಂದುಬಾಂಧವರ ಉಳಿಸು
ಶಿರಬಾಗಿ ಹೇಳುವೆನು ಇನ್ಮುಂದೆ ನಾಶಮಾಡೆನು ಪ್ರಕೃತಿ
ಮಾತು ಕೊಡುವೆನು ಬದುಕಲಿ ನಿಲ್ಲಿಸುವೆ ಎಲ್ಲ ವಿಕೃತಿ
ಜೀವನವು ಲೊಳಲೊಟ್ಟೆ ದಾಸವಾಣಿ ಹೇಳುತಿದೆ
ಎಂತೆಲ್ಲ ಅಧ್ಯಾತ್ಮ ವಿಚಾರಗಳು ಮನದಲಿ ಬರುತಿದೆ
ಬಂಧು ಮಿತ್ರರ ನಡುವೆ ಎಂದಿದ್ದರೂ ನೀನು ಒಂಟಿ
ಯಾವಾಗ ಕರೆದರೂ ಬರಬೇಕು ತಕ್ಷಣ ಹೊಂಟಿ
ಚಂದಿರನ ಕಂಡಿವೆವು ಕಾಣುವೆವು ನಾಳೆ ಮಂಗಳನ
ಎಂದವರು ಹೆಣಗಾಡುತಿಹರೇ ಎದುರಿಸಲು ಕೊರೋನ
ಎಲ್ಲಿ ಹೋಯಿತು ಎಲ್ಲವನು ಗೆಲ್ಲುವೆನೆಂಬ ಸಾಮರ್ಥ್ಯ
ಇರುವ ಭೂಮಿಯಲೆ ತಪ್ಪುತಿದೆಯೇ ನಮ್ಮ ಅಧಿಪತ್ಯ
ಅಣುಬಾಂಬಿನಲ್ಲೇ ಜಗವ ಗೆಲುವೆ ಎನ್ನುವ ಸಖನೇ
ಅಣುವೊಂದರ ಮೂಲ ತಿಳಿಯದೆ ಒದ್ದಾಡುತ್ತಿಹನೇ
ಎಲ್ಲಿ ಹೋಯಿತು ನಮ್ಮ ದಿಟ್ಟತನ ದರ್ಪ ಅಹಂಕಾರ
ದಾರಿ ತಿಳಿಯದೆ ಮುದುರಿ ಕುಳಿತಿಹುದೇ ಅಲಂಕಾರ
ಎಲ್ಲಿ ಹೋಯಿತು ನಮ್ಮಪಾಂಡಿತ್ಯ ಜ್ಞಾನ ವಿಜ್ಞಾನ
ನರರ ಸಂಹಾರ ತೋರಿಸುತಿದೆ ನಮ್ಮಯ ಅಜ್ಞಾನ
ನಾನಿರುವೆ ನಾ ನಿಮ್ಮ ಬದುಕಿಸುವೆ ಎನ್ನುವಾ ಮದ್ದು
ಇಲ್ಲದೆ ಪ್ರಾಣ ಮಲಗಿದೆ ಐಸಿಯುನಲಿ ಹೊದಿಕೆ ಹೊದ್ದು
ನಮ್ಮೆಲ್ಲರ ದುಷ್ಟ ಅಹಂಕಾರ ತೋರಿಸುತಿದೆ ಕನ್ನಡಿ
ಅಣಕಿಸಿ ಕೇಳುವ ನಗು ಆಗುವುದೇ ಏಳಿಗೆಯ ಮುನ್ನುಡಿ
ಯುದ್ಧ ಬಿಡುವೆ ಹಠವನ್ನು ಬಿಡುವೆ ಶತ್ರುತ್ವ ನಾ ಬಿಡುವೆ
ಬಂದಿರುವ ವ್ಯಾಧಿ ಕಳೆಯಲು ಸರ್ವ ಆಸೆಯ ಬಿಡುವೆ
ಶರಣಾದೆ ಶಕ್ತಿಯೇ ಲೋಕದ ಪ್ರಾಣ ಹರಣವ ನಿಲಿಸು
ಕರುಣೆಯ ತೋರಿ ಲೋಕ ಬಂದುಬಾಂಧವರ ಉಳಿಸು
ಶಿರಬಾಗಿ ಹೇಳುವೆನು ಇನ್ಮುಂದೆ ನಾಶಮಾಡೆನು ಪ್ರಕೃತಿ
ಮಾತು ಕೊಡುವೆನು ಬದುಕಲಿ ನಿಲ್ಲಿಸುವೆ ಎಲ್ಲ ವಿಕೃತಿ
ಮನದಲ್ಲಿಯ ಆಸೆ,ಮನದಲ್ಲಿಹ ದುಗುಡ, ಮನಸ್ಸಿನ ಬೇಗುದಿ, ಹೇಳಿಕೊಳ್ಳಲಾಗದ ಭಯ, ಎಲ್ಲರ ಮನಸ್ಸಿನ ಸ್ಥಿತಿ, ಎಲ್ಲರ ತಳಮಳ,ಸೊಗಸಾಗಿದೆ. ಕವನ ಬಹಳ ಚೆನ್ನಾಗಿ ಮೂಡಿ ಬಂದಿದೆ.
ReplyDelete
ReplyDeleteಅಣುಬಾಂಬಿನಂತೆ ಬಂದ ಕೊರೋನ ವ್ಯಾಧಿಯ ಪದ್ಯ, ಚೆನ್ನಾಗಿ ಪ್ರಕಟಿಸಿದ್ಧಾರ
ಅಣುವೊಂದು ಜಗತ್ತನ್ನು ಕೈಗೊಂಬೆ ಮಾಡಿಕೊಂಡು ಆಡಿಸುವ ಬಗೆ, ನಮ್ಮಲಿನ ತೊಳಲಾಟ ಬಹಳ ಚೆನ್ನಾಗಿ ಕವನದಲ್ಲಿ ಮೂಡಿಬಂದಿದೆ, ಬದುಕೆಂದರೆ ಭಯನಾ
ReplyDeleteವಾಸ್ತವತೆಯ ತಳಮಳದ ಈ ಕವಿತೆ ಚೆನ್ನಾಗಿ ಬಂದಿದೆ
ReplyDeleteಇವತ್ತಿನ ಪರಿಸ್ಥಿತಿಗೆ ಕನ್ನಡಿ ಹಿಡಿದಂತೆ ಇದೆ ಈ ಕವನ
ReplyDeleteಕರೋನಾ ಮಹಾಮಾರಿಯ ಮುಂದೆ ಮಂಡಿಯೂರಿ ಕುಳಿತು ಜೀವಕ್ಕಾಗಿ ಹೊಣೆಬೇಡುತ್ತಿರುವ ಈಗಿನ ನಮ್ಮ ಪರಿಸ್ಥಿತಿಯ ಮುಂದೆ, ಬೇಡಿದ್ದನ್ನು ಬೇಯ್ಸಿ ಮಾಡಿಹಾಕುವ ಧರ್ಮಪತ್ನಿ ಯಾಗಲೀ, ಕಛೇರಿಗೆ ಬರಬೇಡಿಯನ್ನುವ ಸ್ಥಿತಿಯಾಗಲೀ, ಆಧ್ಯಾತ್ಮ ಕಲಿಸುವ ದಾಸವಾಣಿಯಾಗಲೀ, ಬಾಹ್ಯಾಕಾಶ ದಲ್ಲಿ ಮಾಡಿದ ಸಾಧನೆಯಾಗಲೀ, ದೇಶದೇಶದ ನಡುವಿನ ಗಡಿ ಸಂಘರ್ಷವಾಗಲೀ, ಅಭ್ಯಾಸದಿಂದ ಪಡೆದ ಪಾಂಡಿತ್ಯವಾಗಲೀ ಪ್ರಯೋಜನಕ್ಕೆ ಬಾರದೇ ನಮ್ಮ ಸ್ವಯಂಕೃತಾಪರಾಧದಿಂದ ಒದಗಿದ ಈಗಿನ ಸ್ಥಿತಿಯು ಮರುಕಳಿಸದಂತೆ ನೋಡಿಕೊಳ್ಳುವ ಆಶ್ವಾಸನೆಯೊಂದಿಗೆ, ಕಾಣದಂತೆ ಕಾಡುವ ಆ ದೈತ್ಯ ಶಕ್ತಿಯನ್ನು ಬೇಡಿಕೊಳ್ಳುವ ತಮ್ಮ ಕವನ ಅತ್ಯದ್ಭುತ ಹಾಗೂ ಪ್ರಶಂಸನೀಯ.
ReplyDeleteಅದ್ಭುತವಾಗಿ ಕವನ ಮೂಡಿ ಬಂಧಿದೆ.
ReplyDelete
ReplyDeleteರಮೇಶ್ ನಾಡಿಗ್ ಹೊಸಬಾಳೆ.
ಎಲ್ಲರಿಗೂ ಎಲ್ಲರ ಮೇಲೆ ಅನುಮಾನ ಹುಟ್ಟಿಸುವ, ನಿರ್ದಿಷ್ಟ ಲಕ್ಷಣಗಳಿಲ್ಲದ, ಎಲ್ಲ ಲಕ್ಷಣಗಳು ತನ್ನದೇ ಎನ್ನುವ, ಮಾರು ವೇಷದ ಖಾಯಿಲೆ ಬಗ್ಗೆ ಬಹಳ ಚೆನ್ನಾಗಿ ತಿಳಿಸಿಕೊಟ್ಟಿದ್ದೀರಿ. ಧನ್ಯವಾದಗಳು..
ಕವನ ಓದಿ ಸಂತೋಷ ಪಡಲು ಸಹ ತಳಮಳ
ReplyDeleteನಿಜವಾಗಿ ಕವನ ಚೆನ್ನಾಗಿ ಮೂಡಿಬಂದಿದೆ
ರಾಮಚಂದ್ರ ಅವರೇ
ಬಹಳ ದಕ್ಷತೆಯಿಂದ ಮನಸ್ಸಿನ ವಿಚಾರವನ್ನು ಪ್ರಕಟಿಸಿದ್ದಾರೆ ಮಿತ್ರ ರಾಮಚಂದ್ರ.
ReplyDelete೯೮ ಪ್ರತಿಶತ ಮನುಷ್ಯರು ಗುಣವಾಗುತ್ತಿದ್ದಾರೆ.
ಕಾಳಜಿ ವಹಿಸೋಣ. ಸಹನೆಯು ಮತ್ತೆ ಕರುಣೆಯೂ ಹಾಗೂ ಸಹಕಾರವನ್ನು ಪ್ರಕಟಿಸಿ ಬದುಕೋಣ. ನನ್ನ ಕೈಯಲ್ಲಿ ಇರುವುದೇ ಇಷ್ಟು.
ಗುರುರಾಜ್
ReplyDeleteಸಾರ, ವಾಸ್ತವ ಪರಿಸ್ತ್ಗಿತಿಯನ್ನು ಸ್ಪಷ್ಟವಾಗಿ ಕಾವ್ಯವಾಗಿ ಪ್ರಕಟಿಸಿದ್ದೀರಿ. ಮನಸ್ಸಿನ ತಳಮಳ ಎಲ್ಲರಿಗೂ ಆವರಿಸಿರುವುದು ಸತ್ಯದ ಸಂಗತಿ.
ಬಹಳ ಚೆನ್ನಾಗಿ ಮೂಡಿ ಬಂದಿದೆ.
ಮದ್ದಿಲ್ಲಾದ manada ತಳಮಳದ ವ್ಯಾಧಿ ಸೊಗಸಾಗಿ ಕಾವ್ಯಶೈಲಿಯಲ್ಲಿ ಅದರ ನಾನಾ ರೂಪಗಳನ್ನೂ, ಅದರ ಕಾರಣವಾದವುಗಳನ್ನೂ ಸೂಕ್ಷ್ಮಆದರೆ ಸ್ಪಷ್ಟವಾಗಿ ಬಿಂಬಿಸಿದೀರ.
ReplyDeleteನಾಲ್ಕು ಸಾಲುಗಳ, 9 ನುಡಿಗಳ ಪದ್ಯರೂಪದಲ್ಲಿ ಬಂದಿರುವ ತಳಮಳದ ವ್ಯಾಧಿಯು, ಹೊಸ ವ್ಯಾಧಿಯು ತಂದ ಬವಣೆಗಳು, ಭಯ,ಚಿಂತೆ, ಸಾವು ನೋವಿನ ಸುದ್ದಿಗಳು, ಅದರೊಂದಿಗೇ ಮಾನವನ ಜ್ಞಾನ- ವಿಜ್ಞಾನಗಳ ಅಹಂಕಾರವೆಂಬ ಭಾವಗಳಿಗೆ ವ್ಯಾಧಿಯ ನೆಪದಲ್ಲಿ ಹಿಡಿದ ಎಚ್ಚರಿಕೆಯ ಕನ್ನಡಿ, ಇರಬೇಕಾದ ಜೀವನ ಶೈಲಿ, ಉಪಸಂಹಾರದ ಶರಣಾಗತ ವೈಖರಿ ಒಂದಾದ ಮೇಲೊಂದು ಮಳೆಯಂತೆ ಮೂಡಿ ಬಂದಿದೆ. ಕಾವ್ಯದಲ್ಲೂ ಪ್ರತಿಭೆ ಮೆರೆದಿರುವ ಲೇಖಕರಿಗೆ ನಮೋ
ReplyDeleteಅಣ್ಣ,
ReplyDeleteತುಂಬ ಪ್ರಸ್ತುತವಾಗಿದೆ ಈ ಕವನ..
ಚಂದಿರನ ಕಂಡಿವೆವು ಕಾಣುವೆವು ನಾಳೆ ಮಂಗಳನ
ಎಂದವರು ಹೆಣಗಾಡುತಿಹರೇ ಎದುರಿಸಲು ಕೊರೋನ ..
ಪ್ರಿಯ ರಾಮಚಂದ್ರ,
ReplyDeleteನಿಮ್ಮೀ ಕವನವನ್ನೋದಲು ಏಳು ತಿಂಗಳಾದಮೇಲೆ ಇಂದು ಸಾಧ್ಯವಾಯಿತು!
ನೀವು ಕವಿತೆ/ಕವನ ಮಾಧ್ಯಮದಲ್ಲಿಯೂ ಕೃಷಿ ಮಾಡಿರುವಿರಿ ಎಂಬುದು ಈಗ ನೆನಪಿಗೆ ಬಂತು. ಇದು ನಿಮ್ಮ ಚೊಚ್ಚಲ ರಚನೆಯಂತೂ ಅಲ್ಲ! ನಲವತ್ತು ವರ್ಷಗಳ ಹಿಂದೆಯೇ (ನಾವು ಸಹೋದ್ಯೋಗಿಗಳಾದ ಹೊಸತರಲ್ಲಿ) ನೀವು ಒಮ್ಮೆ ನಿಮ್ಮ ಒಂದು ರಚನೆಯನ್ನು ನನ್ನ ಜೊತೆ ಹಂಚಿಕೊಂಡದ್ದುಂಟು!
ಈ ಕವನದ ಕೆಲವು ಸಾಲುಗಳು ಸುಲಲಿತವಾಗಿ, ಕವಿತೆ/ಕವನಗಳ architecture ಗೆ ಹೊಂದಿಕೊಳ್ಳುತ್ತವೆ.
ಈ ಸಾಂಕ್ರಾಮಿಕ ಪೀಡೆಯು ಮನುಕುಲದಲ್ಲಿ ಎಬ್ಬಿಸುತ್ತಿರುವ ಹಾವಳಿಯ ಬಗ್ಗೆ ನಿಮ್ಮ ಕಾಳಜಿ, ಕಳವಳಗಳನ್ನು ಈ ಕವನದಲ್ಲಿ ಸಮರ್ಥವಾಗಿ ವ್ಯಕ್ತಪಡಿಸಿದ್ದೀರಿ.
ಸುಜ್ಞಾನ, ಪಾಂಡಿತ್ಯ ಇವುಗಳು ದುಷ್ಟ ಮನಸ್ಸುಗಳು ನಡೆಸುವ ಕಾರುಬಾರುಗಳನ್ನು ಎದುರಿಸುವಲ್ಲಿ ಮೊದಮೊದಲು ಸೋಲುತ್ತವೆ. ಆದರೆ ಕೊನೆಯಲ್ಲಿ ಜಯಶೀಲವಾಗುತ್ತವೆ.
ಕರ್ತನು ತನ್ನ ಸೃಷ್ಠಿಯ ಸಂಪೂರ್ಣ ವಿನಾಶಕ್ಕೆ ಎಡೆಮಾಡಿಕೊಡನು.
ನಿಮ್ಮವ
ಸುಬ್ರಹ್ಮಣ್ಯಂ