Skip to main content

ಇವು ನಮಗೆ ಗೊತ್ತಿರೋದೇ.

ನಮ್ಮ ದೈನಂದಿನ ಜೀವನದಲ್ಲಿ ಸಂಭಾಷಣೆಯಲ್ಲೋ, ಯಾವುದಾದರೂ ಕೆಲಸ ಮಾಡುತ್ತಲೋ, ಓದುತ್ತಲೋ, ಇಲ್ಲವೇ ಯಾವುದೋ ವಿಷಯವನ್ನು ಕುರಿತು ಯೋಚನೆ ಮಾಡುತ್ತಲೋ ಇರುತ್ತೇವೆ. ಹೀಗೆ ಇರುವಾಗ ಹಲವಾರು ವಿಚಾರಗಳು ಪ್ರತಿಯೊಬ್ಬರ ಮನಸ್ಸಿನಲ್ಲ್ಲೂ ಸುಳಿದಾಡುತ್ತವೆ. ಎಚ್ಚರದಿಂದ ಇವುಗಳನ್ನು ಗುರುತಿಸಿದರೆ ಅವುಗಳಲ್ಲಿ ಕೆಲವು ವಿಶೇಷವಾಗಿ ಕಾಣಬಹುದು ಅಥವಾ ತೀರಾ ಸಾಮಾನ್ಯವಾಗಿರಬಹುದು. ಆದರೂ ಆ ವಾಕ್ಯಗಳು ಚಿಂತನಾರ್ಹವಾಗಿರುತ್ತದೆ. ಇದು ಎಲ್ಲರ ಅನುಭವವೂ ಹೌದು. ಇಂತಹಾ ಒಂದು ವಾಕ್ಯ ಸಮಯೋಚಿತವಾಗಿ ಮನಸಿಗೆ ಬಂದಲ್ಲಿ ಅದು ಇಡೀ ದಿನವನ್ನೇ ಸಮಾಧಾನ ವಾಗಿಡಬಲ್ಲದು. ಇವುಗಳು ಕೆಲವೊಮ್ಮೆ ವ್ಕಕ್ತಿತ್ವ ವಿಕಸನ ಹಾಗೂ ಆತ್ಮ ಶೋಧನೆಗೆ ಸಹಾಯಕವಾಗಬಲ್ಲದು. ಆದ್ದರಿಂದ ನನ್ನ ಮನಸಿಗೆ ಬಂದ ಕೆಲವು ಇಂತಹಾ ವಿಚಾರಗಳನ್ನು ಇಲ್ಲಿ ತಮ್ಮೊಂದಿಗೆ ಹಂಚಿಕೊಂಡಿದ್ದೇನೆ. ಓದುಗರಿಗೆ ಇದರ ಉಪಯೋಗವಾದರೆ ಸಂತಸದ ವಿಷಯ.

1

ಎಲ್ಲಿ ಆದರ್ಶ ಇದೆಯೋ, ಅಲ್ಲಿ ಅನುಭವದ ಕೃಷಿ ಇರಬೇಕುಕೇವಲ ಮಾತಿರಬಾರದುಕೃತಿ ಇಲ್ಲದ ಶಬ್ಧಗಳು ಆದರ್ಶವನ್ನು ಕೊಲೆ ಮಾಡುತ್ತವೆ.

2

ನಮ್ಮನ್ನು ನಾವು ಸಂತೈಸಿಕೊಳ್ಳುವುದೇ ನಮ್ಮ ಎಲ್ಲಾ ದು:ಖಗಳಿಂದ ಮತ್ತು ಚಿಂತೆಗಳಿಂದ ಹೊರಬರಲು ಸಮರ್ಥವಾದ ಮಾರ್ಗ.

3

ಹಾಗೆ ಮಾಡಿದರೆ ಒಳ್ಳೆಯದುಹೀಗೆ ಮಾಡಿದರೆ ಕೆಟ್ಟದ್ದು - ಇಂತಹಾ ಸಲಹೆ ಕೊಡುವುದು ಸುಲಭಅನುಸರಿಸುವುದೇ ಕಷ್ಟಆದರೂ ನಾವು ಸಲಹೆ ಕೊಡದೆ ಸುಮ್ಮನಿರುವುದಿಲ್ಲ.

4

ಸಂಬಂಧದ ಸಾಮರಸ್ಯ ವೃದ್ಧಿಸುವ ಏಕೈಕ ಸಾಧನ ಕ್ಷಮೆ. ಕ್ಷಮಿಸುವ ಹೃದಯ ವೈಶಾಲ್ಯತೆ ನಮ್ಮದಾಗಲಿ.

5

ಜೀವನವನ್ನು ಇದ್ದಂತೆ ಒಪ್ಪಿಕೊಂಡರೆ ಅದೇ ನೆಮ್ಮದಿ.

6

ಜೀವನದಲ್ಲಿ ಅಳವಡಿಸಿಕೊಂಡ ಪದ ಹೆಚ್ಚು ಮೌಲ್ಯಯುತ.

7

ನಮ್ಮ ಕಂಡರಾಗದ ಎಲ್ಲರೂ ಒಂದು ಕಾಲದಲ್ಲಿ ನಮಗೆ ತೀರಾ ಬೇಕಾದವರೇ ಆಗಿರುತ್ತಾರೆ.

8

ಜಗತ್ತಿನಲ್ಲಿನ ಎಲ್ಲರನ್ನೂ ಸುಖವಾಗಿಡಲು ಯಾರಿಂದಲೂ ಸಾಧ್ಯವಿಲ್ಲ. ಆದರೆ ಕೆಲವರನ್ನಾದರೂ ಸಂತಸಗೊಳಿಸುವ ಸಾಮರ್ಥ್ಯ ಪ್ರತಿಯೊಬ್ಬರಲ್ಲೂ ಇರುತ್ತದೆ.

9

ನಮ್ಮ ತಪ್ಪುಗಳಿಗೆ ನಾವು ಉತ್ತಮ ವಕೀಲರು ಹಾಗೂ ಪರರ ತಪ್ಪುಗಳಿಗೆ ಅತ್ಯುತ್ತಮ ನ್ಯಾಯಾಧೀಶರುಇದೇ ನಮ್ಮ ವಿಶೇಷತೆ.

10

ನಾವು ಎಲ್ಲಿಯವರೆಗೂ ಸಹಿಸಿಕೊಂಡು ಹೋಗುತ್ತೇವೆಯೋ, ಅಲ್ಲಿಯವರೆಗೂ ನಾವು ಅವರಿಗೆ ಒಳ್ಳೆಯವರು.

11

ಆರೋಗ್ಯವಿದ್ದರೆ ಆನಂದಆರೋಗ್ಯದತ್ತ ಪ್ರತಿದಿನವೂ ಹೆಜ್ಜೆ ಹಾಕೋಣ.

12

ಸಮಾಧಾನ ಕೊಡುವುದೇ ಸಮಾಧಾನಕರ ಜೀವನ ಮಾರ್ಗ.

13

ಎಲ್ಲಾ ಸಮಯವೂ ಸರಿಯಾದುದೇ. ನಮ್ಮ ಗುರಿ ಸಾಧಿಸುವತ್ತ ಕಾಲದೊಂದಿಗೆ ನಮ್ಮ ಪ್ರಯಾಣದ ತಯಾರಿ ಸರಿಯಾಗಿರಬೇಕು.

14

ಹಣ ಮನುಷ್ಯರ ಜೀವನದ ಒಂದು ಅತೀ ಕೆಟ್ಟ ಸಂಶೋಧನೆ. ಆದರೆ ಅದು ಮನುಷ್ಯನು ನಂಬಿಕೆಗೆ ಅರ್ಹನೋ ಆಲ್ಲವೋ ಎಂಬುದನ್ನು ಹಾಗೂ ಮನುಷ್ಯನ ಸ್ವಭಾವವನ್ನು ಪರೀಕ್ಷೆ ಮಾಡುತ್ತದೆ.

15

ನಾವೂ ಬೆಳೆದು ಬೇರೆಯವರನ್ನು ಬೆಳೆಸುವುದೇ ಯಶಸ್ಸು.

16

ಪರ್ವತದಲ್ಲಿ ಕುಳಿತು ತಪಸ್ಸು ಮಾಡುವುದು ಸುಲಭ. ಆದರೆ ಅದೇ ಪರಿವಾರದ ಮಧ್ಯೆ ಇದ್ದುಕೊಂಡು ಎಲ್ಲರ ನಡುವೆ ತಾಳ್ಮೆಯ ಜೀವನ ತಪಸ್ಸು ನಡೆಸುವುದು ಬಲು ಕಠಿಣ.

17

ಜೀವನದಲ್ಲಿ ಕೆಟ್ಟ ವ್ಯಕ್ತಿಗಳನ್ನು ನಂಬಿ ಮೋಸ ಹೋಗುತ್ತೇವೆನಂತರದ ದಿನಗಳಲ್ಲಿ ಒಳ್ಳೆಯ ವ್ಯಕ್ತಿಗಳನ್ನೂ ಅನುಮಾನಿಸುತ್ತೇವೆಕೇಳಿದರೆ ಅನುಭವದಿಂದ ಕಲಿತದ್ದು ಎನ್ನುತ್ತೇವೆ.

18

ಅತಿಯಾದ ಯೋಚನೆಯೇ ನಮ್ಮ ಜೀವನದ ಸಂತೋಷವನ್ನು ಹಾಳುಮಾಡಿ, ನಾವು ದುಃಖಪಡಲು ಅತಿ ದೊಡ್ಡ ಕಾರಣವಾಗುತ್ತದೆ.

19

ಪರಿಶುದ್ಧವಾದ ಸ್ನೇಹಸಹಾಯಪ್ರೀತಿ ಮತ್ತು ಪ್ರೋತ್ಸಾಹ ಅತಿ ವಿರಳ.

20

ನಮ್ಮ ಜೀವನದ ಜವಾಬ್ದಾರಿಗಳು ಎಂದಿಗೂ ಕೊನೆಯಾಗುವುದಿಲ್ಲ. ಆದರೆ ನಮ್ಮ ಜೀವನ ಕಡೆಯಾಗುತ್ತದೆ. ಈ ಕೆಲಸ ಹಾಗೂ ಜವಾಬ್ದಾರಿಗಳ ನಡುವೆ ಸೇವೆ ಸತ್ಸಂಗಗಳಿಗೆ ಅವಕಾಶ ಮಾಡಿಕೊಳ್ಳಬೇಕು.

21

ನಮ್ಮ ಸಂತೋಷಕ್ಕೆ ನಾವೇ ಕಾರಣರು. ಬೇರೆಯವರಿಂದ ಅದು ಸಿಗುತ್ತದೆ ಎಂದುಕೊಂಡರೆ ನಿರಾಶೆಯೇ ಖಾತ್ರಿ.

22

ಭಯವನ್ನು ಒಮ್ಮೆಯೂ ಎದುರಿಸಲಾಗದಿದ್ದರೆ ಜೀವನವಿಡೀ ಓಡುತ್ತಲೇ ಇರಬೇಕಾಗುತ್ತದೆ.

23

ನಾವೇ ನಮ್ಮ ಜೀವನದ ಚಾಲಕರು. ಆ ಚಾಲನೆಯ ಅಧಿಕಾರವನ್ನು ಮತ್ತು ಆ ಸ್ಥಳವನ್ನು ಬೇರೆಯವರು ಕದಿಯಲು ಅವಕಾಶ ಮಾಡಬಾರದು.

24

ನಾವು ಮಾರ್ಪಡಿಸಲಾಗದ ವಿಷಯಗಳ ಬಗ್ಗೆ ಚಿಂತೆ ಮಾಡಬಾರದು. ಏಕೆಂದರೆ ಅದು ನಮಗೆ ಯಾವುದೇ ರೀತಿಯ ಸಹಾಯ ಮಾಡುವುದಿಲ್ಲ. ಇನ್ನೂ ನಮ್ಮ ಆರೋಗ್ಯ ಹಾಳಾಗಬಹುದು.

25

ಪ್ರತಿಯೊಂದು ಮಹತ್ಸಾಧನೆಯೂ ಹಲವು ಬಾರಿ ಅಸಾಧ್ಯ ಎಂದು ತಿಳಿಯಲಾಗಿತ್ತು.

26

ಕಡೆಯ ಏಟಿಗೇ ಕಲ್ಲು ಒಡೆದಿರಬಹುದು. ಹಾಗೆಂದಾಕ್ಷಣಕ್ಕೆ ಮೊದಲ ಏಟುಗಳು ನಿರುಪಯೋಗಿ ಎನ್ನಲಾಗದು. ಅವ್ಯಾಹತ ಪ್ರಯತ್ನದ ಪರಿಣಾಮವೇ ಯಶಸ್ಸು.

27

ಸುಖದ ಬದುಕಿಗೆ ನಂಬಿಕೆ ಮತ್ತು ನೆಮ್ಮದಿಗಳು ಅನಿವಾರ್ಯ.

28

ತಾನು ಸ್ವಂತವಾಗಿ ಕಷ್ಟವನ್ನು ಅನುಭವಿಸದಿದ್ದವರಿಗೆ ಬೇರೆಯವರ ಕಷ್ಟ ಅರ್ಥವಾಗುವುದಿಲ್ಲ.

29

ಬೆಳಗಿನ ವೇಳೆಯಲ್ಲಿ ಮನದಲ್ಲಿ ಬರುವ ಧನಾತ್ಮಕ ಚಿಂತನೆ ಒಮ್ಮೊಮ್ಮೆ ಜೀವನವನ್ನೇ ಸುಖಮಯವಾಗಿ ಬದಲಾಯಿಸುತ್ತದೆ.

30

ನಾವು ಸುಳ್ಳು ಹೇಳಿದರೆ ಬಹಳ ಚೆನ್ನಅದೇ ಬೇರೆಯವರು ಹೇಳಿದರೆ ನಮಗೆ ಕೋಪಸುಳ್ಳನ್ನು ನಾವು ಸದಾ ಕಾಪಾಡಬೇಕುಆದರೆ ಸತ್ಯ ಮಾತ್ರ ನಮ್ಮನ್ನು ಅನುಗಾಲ ಕಾಪಾಡುತ್ತದೆಇವೆಲ್ಲವೂ ಯಾರಿಗೂ ಗೊತ್ತಿಲ್ಲದ್ದೇನಲ್ಲ.

31

ನಾವು ಏನಾದರೂ ಕಳೆದುಕೊಂಡಿದ್ದಕ್ಕೆ ಪ್ರತಿಯಾಗಿ ಏನನ್ನಾದರೂ ಪಡೆದಿರುತ್ತೇವೆಅಂತೆಯೇ ಏನನ್ನಾದರೂ ಪಡೆದಿದ್ದರೆ ಅದಕ್ಕೆ ಪ್ರತಿಯಾಗಿ ಮತ್ತೇನನ್ನಾದರೂ ಕಳೆದುಕೊಂಡಿರುತ್ತೇವೆ.

32

ಪ್ರಯತ್ನವೇ ಬದುಕಿಗೆ ಮೂಲಾಧಾರ.

33

ತನ್ನನ್ನು ತಾನು ನೋಡಿಕೊಳ್ಳದೆ ಬೇರೆಯವರ ನ್ಯೂನತೆಯತ್ತ ಗಮನಹರಿಸುವುದೂ ಒಂದು ಮನುಜ ಸ್ವಭಾವ.

34

ಕಠಿಣ ಸಂದರ್ಭಗಳಲ್ಲಿಯೇ ನಮ್ಮ ನಿಜವಾದ ಸಾಮರ್ಥ್ಯ ಅನಾವರಣಗೊಳ್ಳುತ್ತವೆ ಹಾಗೆಯೇ ನಾವು ಅದನ್ನು ಎದುರಿಸಲು ಅಷ್ಟೇ ಕ್ರಿಯಾಶೀಲರಾಗುತ್ತೇವೆ.

35

ಆತ್ಮವಿಶ್ವಾಸದ ಮೇಲೆ ನಂಬಿಕೆ ಇದ್ದವರಿಗೆ ಯಶಸ್ಸು ಸಹಜ.

36

ಎಷ್ಟೇ ಕಷ್ಟಗಳಿದ್ದರೂ ಸುಖವಾಗಿ ಬದುಕುವಂತೆ ಮಾಡುವುದು ನಂಬಿಕೆ ಮತ್ತು ನೆಮ್ಮದಿ ಮಾತ್ರ.

37

ಒಂದು ಕ್ಷಣ ದಿನವನ್ನೇ ಬದಲಾಯಿಸುತ್ತದೆ. ಒಂದು ದಿನ ಜೀವನವನ್ನೇ ಬದಲಾಯಿಸುತ್ತದೆ. ಅಂತಹಾ ಜೀವನ ಇಡೀ ವಿಶ್ವವನ್ನೇ ಬದಲಾಯಿಸುತ್ತದೆ. ಅಂತಹಾ ಅತ್ಯುತ್ತಮ ಕ್ಷಣ ನಮ್ಮದಾಗಬೇಕು.

38

ನಾವು ಯಾರನ್ನು ಹುಡುಕಿಕೊಂಡು ಹೋಗುತ್ತೇವೆಯೋ ಅವರನ್ನು ನಮ್ಮವರು ಎಂದು ಭಾವಿಸುವುದರ ಬದಲು ಯಾರು ನಮ್ಮನ್ನು ಹುಡುಕಿಕೊಂಡು ಬರುವರೋ ಅವರನ್ನು ನಮ್ಮವರು ಎಂದು ತಿಳಿಯುವುದು ಅತ್ಯಂತ ಸಮಂಜಸ.

39

ಒಳ್ಳೆಯ ಸಂಬಂಧಗಳನ್ನು ಪ್ರೀತಿಯಿಂದ ಉಳಿಸಿಕೊಳ್ಳಬೇಕು. ಕೆಟ್ಟ ಸಂಬಂಧಗಳನ್ನು ಮೌನದಿಂದ ಕಳೆದುಕೊಳ್ಳಬೇಕು.

40

ಜೀವನದ ಏಳುಬೀಳುಗಳನ್ನು ಅರ್ಥಮಾಡಿಕೊಂಡು ಅದರಲ್ಲಿಯೇ ನೆಮ್ಮದಿ ಕಾಣುವುದೇ ಸಂತೋಷ.

41

ದುಡುಕಿನ ನಡೆ ಹಲವು ಬಾರಿ ಒಡಕಿಗೆ ಅವಕಾಶವಾಗುತ್ತದೆ.

42

ಉತ್ತಮ ಸಮಯಕ್ಕಾಗಿ ಕಾಯುವುದಕ್ಕಿಂತ, ಸಮಯವನ್ನು ಉತ್ತಮವಾಗಿ ಉಪಯೋಗಿಸುವುದೇ ಸರಿ. ಸಮಯಕ್ಕೆ ಯಾವುದೇ ಭೇದಭಾವ ಇರುವುದಿಲ್ಲ.

43

ಪರಿಸ್ಥಿತಿಗಳು ಬಾರದೇ ವ್ಯಕ್ತಿಯ ಸಾಮರ್ಥ್ಯ ಅಥವಾ ಪ್ರಾಮಾಣಿಕತೆ ಅನಾವರಣಗೊಳ್ಳುವುದಿಲ್ಲ.

44

ಅನ್ಯರ ಟೀಕೆಗೆ ಆತ್ಮವಿಶ್ವಾಸ ಕಳೆದುಕೊಳ್ಳದೆವಿಚಲಿತರಾಗದೆಸಾಧನಾ ಪಥದಲ್ಲಿಹೆಜ್ಜೆ ಹಾಕುವವರು ನಿಶ್ಚಯವಾಗಿ ವಿಜಯಿಗಳಾಗುತ್ತಾರೆ..

45

ಗುರುತಿಗೆ ಗುಣವೇ ಸಾಕು

46

ಏನು ಮಾತನಾಡುತ್ತೇವೆ ಎನ್ನುವುದರ ಜೊತೆಗೆ ಯಾವ ಧ್ವನಿಯಲ್ಲಿ ಮಾತನಾಡುತ್ತೇವೆ ಎಂಬುದೂ ಪ್ರಮುಖವಾಗಿರುತ್ತದೆ. ಧ್ವನಿ ಬದಲಾದಾಗ ಬದುಕು ಬದಲಾಗುತ್ತದೆ.

47

ಸಂಬಂಧಗಳು ನೋವನ್ನು ಹಂಚಿಕೊಳ್ಳುವಂತಿರಬೇಕು. ಹಾಗೆಂದು ಹೆಚ್ಚಿಸಬಾರದು.

48

ಬದಲಾವಣೆಯಾಗಲು ಒಪ್ಪದಿದ್ದರೆ ಪ್ರಗತಿ ಅಸಾಧ್ಯ. ಯಾರು ತಮ್ಮ ಮನಸ್ಸನ್ನು ಬದಲಾಯಿಸಲು ಒಪ್ಪುವುದಿಲ್ಲವೋ ಅವರು ಏನನ್ನೂ ಬದಲಾಯಿಸಲಾರರು.

49

ದಾರಿಯಲ್ಲಿ ಬಿದ್ದಾಗ ಬೇರೆಯವರು ನೋಡದಂತೆ ಎದ್ದೇಳಬೇಕು. ಜೀವನದಲ್ಲಿ ಬಿದ್ದಾಗ ಎಲ್ಲರೂ ನೋಡುವಂತೆ ಎದ್ದೇಳಬೇಕು.

50

ನಂಬಿಕೆಯನ್ನು ಸಂಪಾದಿಸುವುದು ಬಲು ಕಷ್ಟ. ಇದು ಹಣಕ್ಕಿಂತಲೂ ದುಬಾರಿ.

51

ಕೈಲಾಗದ ಶತ್ರುವಿನ ಕಡೆಯ ಆಯುಧವೇ ಅಪಪ್ರಚಾರ.

52

ಪರಸ್ಪರ ಹಿತಕ್ಕೆ ಧಕ್ಕೆಯಾಗದಂತೆ ಜೀವಿಸುವುದೇ ಸ್ವಾತಂತ್ರ್ಯದ ಲಕ್ಷಣ.

53

ಕೆಲವೊಮ್ಮೆ ನಾವು ಸಾಧಿಸುವ ಯಶಸ್ಸುಗಳೇ ನಮಗೆ ಶತೃಗಳನ್ನು ಸೃಷ್ಟಿ ಮಾಡುತ್ತದೆ.

54

ಬೇರೆಯವರಲ್ಲಿ ಸಂತೋಷ ಕಾಣುವವರೇ ಸದಾ ಸುಖಿಗಳು.

55

ನಮ್ಮ ಪಾಲಿನ ಕೆಲಸವನ್ನು ನಾವು ಮೌನವಾಗಿ ನಿರ್ವಹಿಸುವುದನ್ನು ಧ್ಯಾನ ಎಂದು ಕರೆಯಬಹುದು.

56

ಪ್ರತಿದಿನ ಎದುರಿಸುವ ನೋವು ನಲಿವುಗಳುನಿರೀಕ್ಷೆ ನಿರಾಸೆಗಳುಎದುರಿಸುವ ಪರಿಸ್ಥಿತಿಯ ಪರೀಕ್ಷೆಗಳೇ ಬದುಕಿನ ಪಾಠಗಳು ಎಂದು ಭಾವಿಸಬೇಕು.

57

ನಮಗೆ ಬೇಕೆನಿಸುವುದೆಲ್ಲಾ ದುಬಾರಿಯಾದುದೇಹಾಗೆ ನೋಡಿದರೆ ನಾವು ಜೀವಿಸಲು ಅಗತ್ಯವಿರುವ ಪ್ರೀತಿಸಂತೋಷ ಹಾಗೂ ಬಾಂಧವ್ಯಗಳು ಉಚಿತವಾಗಿಯೇ ಸಿಗುತ್ತದೆ.

58

ಇರ್ಲಿಪರ್ವಾಗಿಲ್ಲ ಎಂಬುವುದರಲ್ಲಿ ಇರುವ ನೋವನ್ನುಏನಾದರೂ ಮಾಡ್ಕೋ ಎಂಬುವುದರಲ್ಲಿ ಇರುವ ಕಾಳಜಿಯನ್ನು ಮತ್ತು ಸುಮ್ನೆ ತಮಾಷೆ ಮಾಡಿದೆ ಎಂಬುವುದರಲ್ಲಿರುವ ನಿಜವನ್ನು ಗಮನಿಸಬೇಕು.

59

ಎಲ್ಲಾ ಸಮಸ್ಯೆಗಳಿಗೂ ಪರಿಹಾರ ತಾಳ್ಮೆ ಒಂದೇ.

60

ಅನಗತ್ಯ ವಸ್ತುಗಳನ್ನು ಕೊಳ್ಳುತ್ತಾ ಹೋದಂತೆ ನಮ್ಮಲ್ಲಿರುವ ಅಗತ್ಯ ವಸ್ತುಗಳನ್ನು ಮಾರಬೇಕಾಗುತ್ತದೆ.

61

ಇತರರು ಬೆಳೆಯುತ್ತಿರುವಾಗ ನಾವೂ ಕೂಡ ಬೆಳೆಯಬಹುದುಇತರರಿಂದ ಸಾಧ್ಯವಾಗುವುದಾದರೆ ನಮ್ಮಿಂದಲೂ ಸಾಧ್ಯ ಎಂಬ ಭಾವನೆ ಸರಿಯಾದದ್ದು.

62

ದೇವರ ಮೇಲಿನ ಭಯವು ನಮಗೆ ಉತ್ತಮ ಮಾರ್ಗದರ್ಶನ ನೀಡುತ್ತದೆ, ಸಮಾಜದಲ್ಲಿ ನಮ್ಮ ಸಂಬಂಧಗಳನ್ನು ಬಲ ಪಡಿಸಿಕೊಳ್ಳಲು ಸಹಾಯವಾಗುತ್ತದೆ.

63

ಆಕಸ್ಮಾತ್ ಕಾಲು ಎಡವಿದರೆ ದೇಹಕ್ಕಷ್ಟೇ ಗಾಯದ ಸಂಭವನಾಲಿಗೆಯೇನಾದರೂ ಎಡವಿದರೆ ಸಂಬಂಧಗಳಿಗೇ ಅಪಾಯ.

64

ನಾವು ಎಲ್ಲರಿಗೂ ಹೊಂದಿಕೊಂಡಾಗ ಮಾತ್ರ ನಮಗೆ ಎಲ್ಲರಲ್ಲೂ ವಿಶ್ವಾಸ ಇರಲು ಸಾಧ್ಯ.

65

ನಮ್ಮ ಕಂಡರಾಗದ ಎಲ್ಲರೂ ಒಂದು ಕಾಲದಲ್ಲಿ ನಮಗೆ ತೀರಾ ಬೇಕಾದವರೇ ಆಗಿರುತ್ತಾರೆ.

66

ಈ ನಿಮಿಷವು ಎಷ್ಟೇ ಕಷ್ಟನಷ್ಟವಿರಸ ವಿಸ್ಮಯಗಳಿಂದ ಕೂಡಿದ್ದರೂ ಅದರಲ್ಲಿನ ರಸ ನಿಮಿಷವನ್ನು ಸಂತೋಷದಿಂದ ಅನುಭವಿಸುವ ವ್ಯಕ್ತಿಯೇ ಅತ್ಯಂತ ಸುಖಿ ಮನುಷ್ಯಅಂತಹಾ ಮಾನಸಿಕ ಸ್ಥಿತಿಯನ್ನು ಗಳಿಸುವ ಸಾಮರ್ಥ್ಯ ನಮಗೆ ದೊರಕಲು ಯತ್ನಿಸಬೇಕು.

67

ಮನದಲ್ಲಿನ ಭಯವನ್ನು ನಿವಾರಿಸಲು ಮತ್ತು ಮನದಲ್ಲಿನ ನೋವನ್ನು ಕಾಣಿಸದಿರಲು ಮುಗುಳ್ನಗೆ ಒಂದೇ ಶ್ರೇಷ್ಠ ಮಾರ್ಗ.

68

ಕ್ಷಮೆಯೊಂದೇ ಮನಸಿನ ನೋವು ನಿವಾರಕ.

69

ಬದಲಾಯಿಸಲಾಗದ ಪರಿಸ್ಥಿತಿಯನ್ನು ಒಪ್ಪಿಕೊಂಡು ಮುಂದುವರಿದರೆ ಮಾತ್ರ ಜೀವನ ಚೆಂದ ಹಾಗೂ ಹಿತ.

70

ಜೀವನ ಅಂತ್ಯದವರೆಗೂ ಕ್ಷಣಮಾತ್ರವೂ ವಿಶ್ರಾಂತಿ ಪಡೆಯದೆ ಕೆಲಸ ಮಾಡುವ ಅಂಗ ಹೃದಯಅದನ್ನು ಒಳ್ಳೆಯ ವಿಚಾರಗಳಿಂದ ಶುದ್ಧವಾಗಿಡಲು ಯತ್ನಿಸೋಣ.

71

ಸಾಕೆನಿಸುವಷ್ಟು ಕೆಲಸನಿದ್ದೆನೆಮ್ಮದಿಪ್ರೀತಿಸುವವರು ಇದ್ದು, ಆರೋಗ್ಯದಿಂದ ಕೂಡಿದವರೇ ಜಗತ್ತಿನ ಅತಿ ಶ್ರೀಮಂತರು.

72

ಜೀವನದಲ್ಲಿ ಜಂಜಾಟವಿಲ್ಲದಿದ್ದರೆ ಪ್ರಗತಿ ಅಸಾಧ್ಯ.

73

ಕೆಲವು ಬಾರಿ ನಿಮ್ಮ ಸಂತೋಷದ ಸಂಗತಿಗಳನ್ನು ಕೆಲವು ಸಮಯದವರೆಗಾದರೂ ರಹಸ್ಯವಾಗಿಯೇ ಇಟ್ಟುಕೊಳ್ಳಬೇಕುಕೇಳಿದ ಎಲ್ಲರೂ ಪ್ರಾಮಾಣಿಕವಾಗಿ ಅದನ್ನು ಸ್ವೀಕರಿಸುವುದಿಲ್ಲಅಸೂಯೆ ದ್ವೇಷ ಹೆಚ್ಚಿನವರಲ್ಲಿ ಸಹಜ.

74

ಆಯ್ಕೆ ಇದ್ದರೆ ಅತ್ಯುತ್ತಮವಾದ್ದನ್ನು ಆರಿಸಿಕೊಳ್ಳೋಣಇಲ್ಲದಿದ್ದರೆ ಅತ್ಯುತ್ತಮವಾದ್ದನ್ನೇ ಮಾಡೋಣ.

75

ಎಲ್ಲಾ ವಯಸ್ಸಿನವರಿಗೂ ಮೈಗಳ್ಳತನವೇ ಶತ್ರುಉದ್ಯೋಗವಾಗಲಿ ವ್ಯಾಯಾಮವಾಗಲೀ ಶೃದ್ಧೆ ಇದ್ದರೆ ಮಾತ್ರ ಆರೋಗ್ಯ ಹಾಗೂ ಭಾಗ್ಯಶ್ರಮವಿಲ್ಲದ ಉದ್ಯೋಗ ಹಾಗೂ ವ್ಯಾಯಾಮಗಳಿಲ್ಲ.

76

ಹಾಗೆ ಮಾಡಿಹೀಗೆ ಮಾಡಿ ಎಂದು ಹೇಳುವುದು ಅತಿ ಸುಲಭಕಠಿಣವೆನಿಸಿದರೂ ಸರಿಯಾದುದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.

77

ಬದುಕಿನ ಪ್ರತಿಯೊಂದು ಘಟನೆಗಳೂ ಮೌಲ್ಯಯುತವಾದದ್ದೇಆದರೆ ಅದು ತಿಳಿಯುವುದು ಅದನ್ನು ಅರಿಯಲು ಯತ್ನಿಸಿದಾಗ ಮಾತ್ರ.

78

ಎಲ್ಲಿಯವರೆಗೂ ಇರುವ ಸ್ಥಿತಿಗೆ ನಾವೇ ಹೊಣೆ ಎಂದು ಅರಿಯದೇ ಇತರರನ್ನು ಅಥವಾ ಸಂದರ್ಭಗಳನ್ನು ದೂಷಿಸುತ್ತಿರುವೆವೋ ಅಲ್ಲಿಯವರೆಗೂ ನಾವು ದುರ್ಬಲರೇ ಹೌದು.

79

ಕಷ್ಟದಲ್ಲಿದ್ದಾಗ ಸಹಾಯ ಮಾಡಿದವರ ನೆನಪು ಸುಖದಲ್ಲಿದ್ದಾಗ ಸ್ಮರಣೆಗೆ ಬರುವುದು ಅಪರೂಪ.

80

ನಮಗೆ ನಾವೇ ನಿಜವಾದ ಮಿತ್ರರು ಹಾಗೂ ಶತ್ರುವೂ ಹೌದು.

81

ಮರೆತು ಕ್ಷಮಿಸುವುದಾದರೆ ಕೊಡುವುದಾಗಲಿ ಪಡೆಯುವುದಾಗಲಿ ಹಿತಕರವೇ.

82

ತಪ್ಪುಗಳಿಗೆ ಶಿಕ್ಷೆಗಿಂತ, ತಪ್ಪನ್ನು ತಿದ್ದಿಕೊಳ್ಳುವುದೇ ಸರಿಯಾದ ಪರಿಹಾರಇಲ್ಲಿ ಕೊಡುವವರಿಗಿಂತ ಪಡೆಯುವರ ಹೊಣೆ ಹೆಚ್ಚು.

83

ಮೌನ ಎಂಬುವುದು ಭಾಷೆಯೂ ಹೌದು ಮತ್ತು ಶಕ್ತಿಯುತ ಮಾತೂ ಹೌದು.

84

ಭಯವನ್ನು ಎದುರಿಸಿ ಅದರ ಮೇಲೆ ಜಯ ಸಾಧಿಸುವುದೇ ಧೈರ್ಯ.

85

ಮನಸ್ಸಿನಲ್ಲಿ ಮಾಡೋಣ ಎಂದು ಕೊಂಡ ಮಾತ್ರಕ್ಕೆ ಅಂದುಕೊಂಡಿದ್ದನ್ನು ಸಾಧಿಸಲಾಗುವುದಿಲ್ಲ.              ಸೂಕ್ತ ಪ್ರಯತ್ನ ತುಂಬಾ ಅನಿವಾರ್ಯ.

86

ನಮಗಿಂತ ಹೆಚ್ಚು ಸಾಧನೆ ಮಾಡಿದವರು ಎಂದೂ ನಮ್ಮನ್ನು ಟೀಕಿಸುವುದಿಲ್ಲನಮಗಿಂತ ಕಡಿಮೆ ಸಾಧನೆ ಮಾಡಿದವರೇ ನಮ್ಮನ್ನು ಟೀಕಿಸುವುದು ಎಂಬುದು ಗಮನಾರ್ಹ.

87

ನಮಗೆ ನಮ್ಮಲ್ಲಿರುವ ಹಣ ಎಷ್ಟು ಎಂದು ನಿಖರವಾಗಿ ಗೊತ್ತಿರುತ್ತದೆಆದರೆ ನಮಗಿರುವ ಸಮಯ ಎಷ್ಟು ಎಂದು ತಿಳಿದಿರುವುದಿಲ್ಲ.

88

ಸ್ವಾವಲಂಬಿಗಳಾಗಿದ್ದಲ್ಲಿ ಮಾತ್ರ ನಾವು ಶಾಂತಿ ನೆಮ್ಮದಿಯಿಂದ ಜೀವನ ಮಾಡಲು ಸಾಧ್ಯ ಎಂಬ ನಂಬಿಕೆಯೇ ಹೆಚ್ಚುಆದರೆ ಪ್ರಕೃತಿ ಅಥವಾ ಸಂಬಂಧಗಳ ಮೇಲೆ ಅವಲಂಬನೆ ಇಲ್ಲದೆ ಸಾಮಾನ್ಯ ಜೀವನ ಅಸಾಧ್ಯ.

89

ತಪ್ಪು ಯಾರದು ಎಂಬುದಕ್ಕಿಂತ ಆಗಿರುವ ತಪ್ಪು ಏನು ಮತ್ತು ಏಕೆಹಾಗೂ ಇದನ್ನು ಸರಿಪಡಿಸುವ ಬಗೆ ಹೇಗೆ ಎಂಬ ವಿಶ್ಲೇಷಣೆ ಮುಖ್ಯ.

90

ಕೈತುಂಬಾ ಕೆಲಸಸಾಕಷ್ಟು ನಿದ್ದೆನೆಮ್ಮದಿ ಇರುವ ಮನಸುಆರೋಗ್ಯ ಹಾಗೂ ಎಲ್ಲರೊಂದಿಗೆ ವಿಶ್ವಾಸ ಮತ್ತು ಪ್ರೀತಿಇವು ಸುಖದ ಬದುಕಿನ ಅನಿವಾರ್ಯತೆಗಳು.

91

ನಾವಿರುವ ಸ್ಥಿತಿಗೆ ನಾವೇ ಹೊಣೆಗಾರರುಅದಕ್ಕೆ ಸದಾ ಸಂದರ್ಭಗಳನ್ನಾಗಲಿಇತರರನ್ನಾಗಲೀ ದೂಷಿಸುವುದು ತಪ್ಪು.

92

ಹೋಗುತ್ತಿರುವ ದಾರಿ ‌ಬೇಕಾದ ಸ್ಥಳವನ್ನು ತಲುಪುವುದಿಲ್ಲ ಎಂದಾಗ ಅದೆಷ್ಟು ದೂರ ಕ್ರಮಿಸಿದ್ದರೂ ಬದಲಾಯಿಕೊಳ್ಳಲೇಬೇಕುತಿದ್ದಿಕೊಳ್ಳಲು ಕಾಲವನ್ನು ನಿಗದಿಸಲಾಗದು.

93

ಯಾರಿಗೆ ಯಾರೂ ಇಲ್ಲಗುರಿಯೆಡೆಗೆ ಸಾಗಬೇಕೆಂದರೆ ನಮ್ಮನ್ನು ನಾವೇ ತಳ್ಳಿಕೊಳ್ಳಬೇಕುಯಾರಾದರೂ ಸಹಾಯ ಮಾಡುತ್ತಾರೆ ಎಂಬುದು ಹುಸಿ ನಂಬಿಕೆ.

94

ನಮ್ಮ ಜೀವನದಲ್ಲಿ ಸಂಪರ್ಕಕ್ಕೆ ಬರುವ ಪ್ರತಿಯೊಬ್ಬರೂ ನಮಗೆ ಒಂದಲ್ಲ ಒಂದು ಪಾಠವನ್ನು ಕಲಿಸಿಯೇ ಹೋಗುತ್ತಾರೆ.

95

ಜೀವನವೆಂದರೆ ನಗುಕಣ್ಣೀರು ಹಾಗೂ ನೆನಪುಗಳ ಸಮ್ಮಿಲನಆದರೆ ನಗು ಮಂದವಾಗಿ, ಕಣ್ಣೀರು ಒಣಗಿ ಹೋದರೂ ನೆನಪುಗಳು ಮಾತ್ರ ಸದಾ ಇರುತ್ತದೆ.

96

ನಡೆಯುತ್ತಿರುವ ಘಟನೆ ಈಗೇನೋ ಚಿಕ್ಕದಾಗಿ ಕಾಣಬಹುದುಮುಂದೊಂದು ದಿನ ಕಳೆದ ದಿನಗಳತ್ತ ನೋಡಿದಾಗ ಅದು ರಸನಿಮಿಷವಾಗಿ ಕಾಣುತ್ತದೆಆದ್ದರಿಂದ ಇಂದಿನ ಬಗ್ಗೆ ಗೌರವವಿರಬೇಕುಸಂತೋಷ ವಿರಬೇಕು.

97

ನಮ್ಮ ನಮ್ಮ ನೋವಿಗಾಗಲೀ ನಲಿವಿಗಾಗಲೀ ನಾವೇ ಕಾರಣರುಬೇರೆಯವರಿಂದ ಅದು ಎಂದೂ ದೊರೆಯದು.

98

ಕಾಲಿನ ಉಳುಕು ಮತ್ತು ಕ್ಷುಲ್ಲಕ ಚಿಂತನೆಗಳು ನಮ್ಮನ್ನು ಮುಂದೆ ಹೋಗಲು ಬಿಡುವುದಿಲ್ಲ.

99

ಉತ್ತಮ ಬಾಂಧವ್ಯವನ್ನು ಕಾಪಾಡಿಕೊಳ್ಳಲು ಗೊತ್ತಿಲ್ಲದಿದ್ದಲ್ಲಿ ಕೇಳಬೇಕುಒಪ್ಪಿಗೆಯಾಗದಿದ್ದಲ್ಲಿ ಚರ್ಚಿಸಬೇಕುಇಷ್ಟವಾಗದಿದ್ದಲ್ಲಿ ಸಮಾಧಾನದಿಂದ ಹೇಳಬೇಕುಆದರೆ ಮೌನದಿಂದ ನಿರ್ಣಯಿಸುವುದು ತಪ್ಪಾಗುತ್ತದೆ.

100

ತಿಳುವಳಿಕೆಗಿಂತ ನಡುವಳಿಕೆ ಬಲು ಮುಖ್ಯಅನಾರೋಗ್ಯಾದಿ ಕಾರಣಗಳಿಂದ ತಿಳುವಳಿಕೆಗೆ ಧಕ್ಕೆಯಾಗಬಹುದುಆದರೆ ನಡುವಳಿಕೆ ಬದಲಾಗದು.

101

ತಮಗೆ ಅನ್ಯಾಯವಾದಾಗ ಮಾತ್ರ ಹೌದು ಎನಿಸುತ್ತದೆ.

102

ಬುದ್ಧಿವಂತರ ಮಾತಿಗಿಂತಲೂ ಅನುಭವಸ್ಥರ ಮಾತು ಪರಿಣಾಮಕಾರಿ

103

ಜಗತ್ತಿನಲ್ಲಿ ಎಲ್ಲವೂ ಸಿಗುತ್ತದೆ ಆದರೆ ಎಂದಿಗೂ ನಮ್ಮ ತಪ್ಪು ಮಾತ್ರ ನಮಗೆ ಸಿಗುವುದಿಲ್ಲ.

104

ಜೀವನವೇ ಹಾಗೆಬುದ್ಧಿ ಬರುವ ವೇಳೆಗೆ ತಿದ್ದಿಕೊಳ್ಳಲು ಸಮಯ ಉಳಿದಿರುವುದಿಲ್ಲ.

105

ಸದ್ಗುಣಗಳಿಂದ ಕುರೂಪವನ್ನೂ ಮುಚ್ಙಬಹುದುಆದರೆ ಎಂತಹಾ ರೂಪದಿಂದಲೂ ಕೆಟ್ಟ ನಡತೆಯನ್ನು ರಕ್ಷಿಸಲಾಗದು.

106

ಸಮಸ್ಯೆಗಳನ್ನು ಪ್ರೀತಿಸಿದಷ್ಟು ಅವು ನಮ್ಮಿಂದ ದೂರ ಓಡುತ್ತವೆ.

107

ದುರಾಸೆ ಹಾಗೂ ಸೋಮಾರಿತನ ಇವೇ ಉದ್ಧಾರವಾಗದಿರಲು ಪ್ರಧಾನ ಕಾರಣ.

108

ಎಲ್ಲಾ ಬಲ್ಲವರು ಇಲ್ಲಆದರೆ ಒಬ್ಬೊಬ್ಬರೂ ಒಂದಲ್ಲಾ ಒಂದು ವಿಷಯವನ್ನು ಬಲ್ಲರುಆದ್ದರಿಂದ ಪ್ರತಿಯೊಬ್ಬರಿಂದಲೂ ಕಲಿಯಬೇಕಾದದ್ದು ಇದ್ದೇ ಇದೆಪ್ರತಿಯೊಬ್ಬರ ಮಾತನ್ನು ಸಮಾಧಾನದಿಂದ ಕೇಳಬೇಕಾಗುತ್ತದೆಇದು ಅನಿವಾರ್ಯವೂ ಹೌದು.

109

ಸಾಕು ಎಂಬ ತೃಪ್ತಿಯ ಭಾವನೆಯುಳ್ಳವನೇ ಶ್ರೀಮಂತ.

110

ಹೊರಗೆ ನಡೆಯುವುದು ಒಳ್ಳೆಯದುಅದರಲ್ಲೂ ಅನಗತ್ಯ ಮಾತಿನಿಂದ ಹೊರ ನಡೆಯುವುದು ಇನ್ನೂ ಒಳ್ಳೆಯದು.

111

ನಮ್ಮ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವ ಅಥವಾ ಅದಕ್ಕೆ ಬೆಲೆ ಕೊಡುವ ವ್ಯಕ್ತಿಗಳೊಂದಿಗೆ ಮಾತ್ರ ನಮ್ಮ ಭಾವನೆಗಳನ್ನು ಹಂಚಿಕೊಳ್ಳಬೇಕು.

112

ಸಮಸ್ಯೆ ಸಾಯಬೇಕೆಂದರೆ ಅದನ್ನು ಸೃಷ್ಟಿಸುವವರು ಇಲ್ಲವಾಗಬೇಕು

113

ಯಾರಿಂದಲೂ ಏನನ್ನೂ ಬಯಸದೆ ಇರುವುದೇ ಸೌಖ್ಯ.

114

ತನ್ನ ಬಗ್ಗೆ ತಾನು ಹೆಚ್ಚು ಹೆಚ್ಚು ತಿಳಿಯುವುದೇ ಬ್ರಹ್ಮ ವಿದ್ಯೆಅದಕ್ಕೂ ಮೀರಿದ ವಿದ್ಯೆಯಿಲ್ಲ.

115

ಜನಸಮೂಹವೇನೋ ಬೆಳೆಯುತ್ತಿದೆಆದರೆಜನರು ಮಾತ್ರ ಇನ್ನೂ ಒಬ್ಬಂಟಿಯೇವಿಶ್ವಾಸ ಸಂವಹನದ ಕೊರತೆಯೇ ಇದಕ್ಕೆ ಕಾರಣ.

116

ಅರ್ಥವಿಲ್ಲದ ನೂರು ಆಡುವವರ ಎದುರು ಮೌನವಾಗಿರುವುದೇ ಲೇಸು.

117

ಸೋಮಾರಿತನವೆಂಬುದು ಅತಿ ದೊಡ್ಡ ಶತ್ರುಆದಾಯಕ್ಕಾಗಲಿ ಆರೋಗ್ಯಕ್ಕಾಗಲೀ ಚಟುವಟಿಕೆ ಅನಿವಾರ್ಯಇದಕ್ಕಾಗಿ ಹುರುಪಿನ ಜೀವನ ನಮ್ಮದಾಗಬೇಕು.

118

ಬದುಕು ಎಂಬುದು ಕಲಿಯಲೇ ಬೇಕಾದ ಪಾಠಜೀವನದ ವಾಸ್ತವವನ್ನು ತಿಳಿದು ಎಚ್ಚರಿಕೆಯ ಹೆಜ್ಜೆಗಳನ್ನು ಇಡಲು ಇದಕ್ಕಿಂತ ದೊಡ್ಡ ಗುರು ಇಲ್ಲ.

119

ಪಡೆಯುವ ಮುನ್ನ ಹಾಗೂ ಕಳೆದುಕೊಂಡ ನಂತರ ವಸ್ತುವಿನ ಬೆಲೆ ‌ಹೆಚ್ಚು.

120

ಜನರೊಂದಿಗೆ ಇದ್ದಾಗ ನಾವು ಆಡುವ ಮಾತಿನ ಮೇಲೆ ನಿಗಾ ಇರಿಸಬೇಕುನಾವು ಒಬ್ಬರೇ ಇದ್ದಾಗ ನಮ್ಮ ಯೋಚನೆಗಳ ಮೇಲೆ ನಿಯಂತ್ರಣವಿರಬೇಕು.

121

ಪ್ರತಿ ಸಮಸ್ಯೆಗೂ ಒಂದು ಪರಿಹಾರವಿದೆ ಎಂಬ ವಿಶ್ವಾಸವನ್ನು ಕೊಡುವುದೇ ಗಣಿತ.

122

ಸಂತೋಷವಿಲ್ಲದೆ ಮಾಡಿದ ಕೆಲಸದಿಂದ ಮಾಡಿದವರ ಸಮಯವೂ ವ್ಯರ್ಥಉಳಿದವರಿಗೂ  ಕೆಲಸದಿಂದ ಪ್ರಯೋಜನವಿಲ್ಲ.

123

ನಿರೀಕ್ಷಿತ ಫಲ ದೊರೆಯಲೆಂದು ಮಾಡುವ ಪ್ರಯತ್ನ ಯಶಸ್ವಿಯಾಗಬೇಕಾದರೆ ಅದನ್ನು ಅನುಸರಿಸುವ ವಿಧಾನವೂ ಪ್ರಧಾನವಾಗಿರುತ್ತದೆ.

124

ಪ್ರತಿಯೊಂದಕ್ಕೂ ನಾವು ಪ್ರತಿಕ್ರಿಯಿಸಲೇ ಬೇಕೆಂದಿಲ್ಲಸುಮ್ಮನಿದ್ದು ನಡೆಯುವುದನ್ನು ಗಮನಿಸಿದರೆ ಪರಿಸ್ಥಿತಿಯೂ ಸರಿಯಾಗುತ್ತದೆಜೊತೆಗೆ ಹೆಚ್ಚೂ ಕಲಿಯಬಹುದು.

125

ಯಶಸ್ಸನ್ನಾಗಲಿಸೋಲನ್ನಾಗಲೀ ಇದು ಕೊನೆಯದು ಎನ್ನಲಾಗದುಇವರೆಡನ್ನೂ ಸರಿದೂಗಿಸಿಕೊಂಡು ಹೋದಾಗ ಮಾತ್ರ ಅರ್ಥಪೂರ್ಣ ಜೀವನವಾಗುತ್ತದೆ.

126

ಕೆಟ್ಟ ಮೇಲೆ ಬುದ್ಧಿ ಬಂತು ಎನ್ನುತ್ತಾರೆಆದರೆ ಬುದ್ಧಿ ಬಂದಮೇಲೆ ಕೆಟ್ಟಿರುವವರೇ ಹೆಚ್ಚು ಕಾಣ ಸಿಗುತ್ತಾರೆ.

127

ಸೋಲಿನ ರುಚಿ ನೋಡದೆ ಅದನ್ನು ಗೆದ್ದ ಮಹಾಶೂರರು ಯಾರೂ ಇಲ್ಲಸೋಲದೆ ಗೆಲ್ಲಲು ಸಾಧ್ಯವಿಲ್ಲ.

128

ನಮ್ಮ ಜೀವನ ಸಂಗಾತಿ ಮಾತ್ರ ನಮ್ಮ ಭಾವನೆಗಳಿಗೆ ಬೆಲೆ ಕೊಡುತ್ತಾಳೆನಮ್ಮ ಏಳಿಗೆಯೇ ಅವರ ಏಳಿಗೆಯೂ ಆಗಿರುವುದರಿಂದ ಅದನ್ನು ಬಯಸುವ ಏಕೈಕ ವ್ಯಕ್ತಿಯೆಂದರೆ ಜೀವನ ಸಂಗಾತಿ ಮಾತ್ರ.

129

ವಿಶ್ವಾಸವಿದ್ದಾಗ ಮೌನದಿಂದಿದ್ದರೂ ಅರ್ಥವಾಗುತ್ತದೆನಂಬಿಕೆ ಇಲ್ಲದಿದ್ದಾಗ ಆಡಿದ ಮಾತೂ ಅಪಾರ್ಥವಾಗುತ್ತದೆ.

130

ಒಮ್ಮೆ ಆವಶ್ಯಕತೆ ಮುಗಿಯಿತೆಂದರೆ ಇರುವ ಮನೆ, ತಂದೆತಾಯಿಗಂಡಹೆಂಡತಿಸಂಸಾರಉದ್ಯೋಗಕಡೆಯಲ್ಲಿ ದೇಹ ಹೀಗೆ ಏನೇ ಇರಲಿ ಅದು ಭಾರವಾಗುತ್ತದೆ.

131

ಯಾವುದೇ ಬದಲಾವಣೆಯೂ ಶಾಶ್ವತವಲ್ಲಅಂತೆಯೇ ಇಂದಿನ ವಾತಾವರಣ ಕೂಡಾ.

132

ಯಾರು ಇನ್ನೊಬ್ಬರ ಸಂತೋಷ ಅಥವಾ ಸಮಾಧಾನಕ್ಕಾಗಿ ಸೋಲಲೂ ತಯಾರಿದ್ದಾರೆಯೋ ಅವರನ್ನು ಗೆಲ್ಲಲು ಯಾರಿಂದಲೂ ಸಾಧ್ಯವಿಲ್ಲ.

133

ಒಬ್ಬರ ಬಗ್ಗೆ ಕೇಳಿದ ವಿಷಯವನ್ನು ನಂಬುವುದರ ಬದಲು ಅವರ ಬಗ್ಗೆ ನಮಗೆ ತಿಳಿದ ವಿಷಯವನ್ನು ನಂಬಿದಾಗ ಮಾತ್ರ ಅವರೊಂದಿಗೆ ಹೆಚ್ಚು ಕಾಲ ಪ್ರಾಮಾಣಿಕ ಸಂಬಂಧವಿರುತ್ತದೆ.

134

ಕೆಲವು ಜನರುವಸ್ತುಗಳುವ್ಯವಸ್ಥೆಗಳು ಬದಲಾಗುವುದೇ ಇಲ್ಲಆದರೆ ಕೆಲವು ಕಾರಣಗಳಿಂದ ಅವು ಅನಿವಾರ್ಯಅಂತಹಾ ಸ್ಥಿತಿಯಲ್ಲಿ ಬದಲಾಯಿಸಲಾಗದಿರುವುದನ್ನು ಸುಮ್ಮನೆ ಒಪ್ಪಿಕೊಳ್ಳಬೇಕು.

135

ಯಾರೇ ಆಗಲಿ ಮತ್ತು ಯಾವುದೇ ಆಗಲಿ ಕಡೆಯವರೆಗೂ ಶಾಶ್ವತವಲ್ಲ.

136

ಒಬ್ಬರು ನಮ್ಮೊಂದಿಗೆ ಒಪ್ಪುತ್ತಿಲ್ಲ ಎಂದಾಕ್ಷಣ ಅವರು ನಮ್ಮನ್ನು ದ್ವೇಷಿಸುತ್ತಾರೆ ಎಂದು ತಿಳಿಯಲಾಗದು.

137

ಏನೇ ಪ್ರಯತ್ನ ಮಾಡಿದರೂ ಎಲ್ಲರಿಗೂ ಒಳ್ಳೆಯವರಾಗಲು ಅಸಾಧ್ಯಎಲ್ಲರಿಗೂ ಒಳ್ಳೆಯದಾಗಲೆಂಬ ಮಾರ್ಗದಲ್ಲಿ ನಡೆಯುವಾಗಲೇ ಹೊಸಶತ್ರುಗಳು ಹುಟ್ಟಿಕೊಳ್ಳುತ್ತಾರೆ.

138

ಕೆಲವೊಮ್ಮೆ ಕಣ್ಣೀರು ಸಂತಸದ ಸಂಕೇತವಾದರೆ, ಒಳಗಿನ ನೋವನ್ನು ತೋರಿಸಲು ಮುಗುಳ್ನಗೆ ಸಮರ್ಥವಾಗಿರುತ್ತವೆ.

139

ಹೆಚ್ಚು ಮಾತನಾಡುವುದು ಮತ್ತು ಬೇಗನೆ ಭಾವುಕರಾಗಿಬಿಡುವುದು ಯಾವಾಗಲೂ ಸಂಕಟವನ್ನು ತರುತ್ತದೆ.

140

ನಾನು ಯಾವಾಗಲೂ ಸರಿ ಎಂದು ಭಾವಿಸುವುದಾದರೆ ನಾವು ಜೀವನದಲ್ಲಿ ಏನನ್ನೂ ಕಲಿಯಲಾರೆವು.

141

ಒಂದು ಕ್ಷಣದಲ್ಲಿ ಜೀವನವನ್ನು ಬದಲಾಯಿಸಲು ಅಸಾಧ್ಯವಿರಬಹುದುಆದರೆ ಒಂದು ಕ್ಷಣದಲ್ಲಿ ತೆಗೆದುಕೊಂಡ ತೀರ್ಮಾನ ಇಡೀ ಜೀವನವನ್ನೇ ಬದಲಾಯಿಸುತ್ತದೆ.

142

ಜಗತ್ತಿನಲ್ಲಿ ಕಾಣುವ ಬಹುತೇಕ ಜನರು ಮುಖವಾಡಗಳನ್ನು ಹಾಕಿಕೊಂಡೇ ಇದ್ದಾರೆ.

143

ಸಾಮಾನ್ಯವಾಗಿ ಒಬ್ಬರ ಬಗ್ಗೆ ಮಾತನಾಡುವಾಗ ಅವರೆಷ್ಟು ಒಳ್ಳೆಯವರು ಅಥವಾ ಕೆಟ್ಟವರು ಎಂದು ಅವರ ನಡತೆಯ ಬಗ್ಗೆ ಮಾತನಾಡುತ್ತೇವೆವಿನಾಕಾರಣ ಯಾರ ರೂಪದ ಬಗ್ಗೆಯೂ ಮಾತನಾಡುವುದಿಲ್ಲಆದ್ದರಿಂದ ನಡೆಯೇ ಮುಖ್ಯವಾಗುತ್ತವೆ.

144

ನಾವು ಹೆಚ್ಚಾಗಿ ಯಾರನ್ನು ಹಚ್ಚಿಕೊಂಡು ಪ್ರೀತಿಸುತ್ತೇವೆಯೋ ಅವರೇ ನಮಗೆ ನೋವು ಮಾಡುತ್ತಾರೆ.

145

ಎಲ್ಲರನ್ನೂ ಎಲ್ಲ ಸಂದರ್ಭಗಳಲ್ಲಿ ಮೆಚ್ಚಿಸಲು ಸಾಧ್ಯವಿಲ್ಲ.

146

ಎಲ್ಲರೂ ಅವರವರ ಜೀವ ಮತ್ತು ಜೀವನಕ್ಕೆ ಪ್ರಥಮ ಪ್ರಾಶಸ್ತ್ಯ ಕೊಡುತ್ತಾರೆಬಹುತೇಕ ಎಲ್ಲರೂ ಸ್ವಾರ್ಥೀಗಳೇಬೇರೆಯವರ ಹಿತದ ಬಗ್ಗೆ ಯಾರೂ ಯೋಚಿಸುವುದಿಲ್ಲ.

147

ನಾವು ಇಷ್ಟಪಟ್ಟಿದ್ದನ್ನು ಒಂದಲ್ಲ ಒಂದಿನ ಕಳೆದುಕೊಳ್ಳುತ್ತೇವೆ

148

ಪ್ರತಿಯೊಬ್ಬರ ಆಸೆಆಕಾಂಕ್ಷೆಆಲೋಚನೆಗಳು ಸದಾ ಬೇರೆಬೇರೆಯಾಗಿರುತ್ತವೆಎಲ್ಲರೂ ಬೇರೆ ಬೇರೆಯವರೇಅವರಿಗೆ ಹೋಲಿಸಿಕೊಂಡು ಕೊರಗಬಾರದು.

149

ನಾವು ಹೋಗುವ ದಾರಿಯಲ್ಲಿ ಕಷ್ಟಗಳೇ ಬರದಿದ್ದರೆ ನಾವು ದಾರಿ ತಪ್ಪಿದ್ದೇವೆ ಎಂದು ಕೊಳ್ಳಬೇಕು.

150

ನಮ್ಮ ಜೀವನ ಬಹಳ ಕಠಿಣ ಎನಿಸುತ್ತದೆಆದರೆ ನಮ್ಮಲ್ಲಿ ಸಾಕಷ್ಟು ತಾಳ್ಮೆಯ ಜೊತೆಗೆ ಧೈರ್ಯವೂ ಇದ್ದರೆ ಬದುಕು ನಡೆಸುವುದು ಸುಲಭ ಸಾಧ್ಯ.

151

ಕಷ್ಟದ ಸಮಯದಲ್ಲಿಯೂ ಸಮಾಧಾನವಾಗಿರುವವರೇ ಶೂರರು.

152

ಸದ್ಗುಣಗಳಿಂದ ಕುರೂಪವನ್ನೂ ಮುಚ್ಙಬಹುದುಆದರೆ ಎಂತಹಾ ಸ್ಪುರದ್ರೂಪದಿಂದಲೂ ಕೆಟ್ಟ ನಡತೆಯನ್ನು ರಕ್ಷಿಸಲಾಗದು.

153

ವಿಶ್ವಾಸಾರ್ಹತೆಯೊಂದೇ ನಮ್ಮನ್ನು ಎಲ್ಲರಿಗೂ ಆಕರ್ಷಿಸುತ್ತದೆ.

154

ಬೇರೆಯವರು ನಮ್ಮನ್ನು ನೋಡಲಿ ಎಂದು ಏರುವುದಕ್ಕಿಂತ ನಾವು ಎಲ್ಲವನ್ನೂ ಕಾಣಲು ಮೇಲೇರುವುದು ಸೂಕ್ತ.

155

ಅನುಮಾನ ಮತ್ತು ಅಹಂಕಾರ ಎರಡೂ ಮಾನವನ ಶತೃಗಳುಒಮ್ಮೆ ಬಂದಿತೆಂದರೆ ಅವರಿಗೂ ಸುಖ ನೆಮ್ಮದಿ ಇರದುಇವರಿಂದ ಬೇರೆಯವರೂ ನೆಮ್ಮದಿಯಿಂದ ಇರಲಾಗದು.

156

ಜೀವ ನಮ್ಮ ಮಾತನ್ನು ಕೇಳುವುದಿಲ್ಲಯಾವಾಗ ಬೇಕಾದರೂ ಹೋಗಬಹುದುಆದರೆ ಜೀವನ ನಮ್ಮ ಮಾತನ್ನು ಕೇಳುತ್ತದೆಅದನ್ನು ಹೇಗೆ ಬೇಕಾದರೂ ರೂಪಿಸಿಕೊಳ್ಳಬಹುದು

157

ಅನುಮಾನ ಎನ್ನುವುದು ಒಂದು ದೊಡ್ಡ ರೋಗಅನುಮಾನದಿಂದ ನೋಡಿದರೆಪ್ರತಿಯೊಂದು ಒಳ್ಳೆಯದರಲ್ಲಿ ಕೆಟ್ಟದ್ದೇ ಕಾಣುತ್ತದೆ.

158

ವೃತ್ತಿಯಲ್ಲಿರುವವರಿಗೆ ಅವರ ಮೊದಲ ಶತ್ರು ಎಂದರೆ ಅವರ ತಕ್ಷಣದ ಅಧಿಕಾರಿಯೇ ಆಗಿರುತ್ತಾರೆ.

159

ಒಟ್ಟಿನಲ್ಲಿ ನಂಬಿಕೆಆತ್ಮವಿಶ್ವಾಸಧೈರ್ಯ ಹಾಗೂ ಪರಿಶ್ರಮ ಇವುಗಳೇ ಯಶಸ್ಸಿನ ರಹಸ್ಯ

160

ಸಹನೆಯಿಂದ ಸಕಲವನ್ನೂ ಗೆಲ್ಲಬಹುದುವಿನಯದಿಂದ ವಿಜಯವನ್ನು ಸಾಧಿಸಬಹುದು.

161

ಜಗತ್ತಿನಲ್ಲಿ ನಡೆದಷ್ಟೂ ದಾರಿ ಇದೆ, ಪಡೆಯುವಷ್ಟು ಭಾಗ್ಯವೂ ಇದೆಜೊತೆಗೆ ಅದಕ್ಕೆ ಬೇಕಾದ ಮನಸು, ಆರೋಗ್ಯ, ಪ್ರಯತ್ನ ಅವುಗಳೂ ನಮ್ಮಲ್ಲಿವೆಆದರೆ ಅವುಗಳ ಹೊಂದಾಣಿಕೆಯ ಅಜ್ಞಾನವೇ ಪ್ರಧಾನವಾಗಿದೆ

162

ಸಾಧಿಸುವ ಮೊದಲು ಕಿವುಡನಾಗಬೇಕುಸಾಧಿಸಿದ ನಂತರ ಮೂಗನಾಗಬೇಕು.

163

ಪ್ರತಿಯೊಬ್ಬರಲ್ಲೂ ಅವರಿಗೆ ಗೊತ್ತಿಲ್ಲದ ಶಕ್ತಿಯೊಂದು ನಿಶ್ಚಯವಾಗಿ ಅಡಗಿರುತ್ತದೆಆ ಆತ್ಮಬಲವನ್ನು ಒಮ್ಮೆ ಹೊರ ಹಾಕಬೇಕುಅದರಿಂದ ಇತಿಹಾಸ ಸೃಷ್ಟಿ ಮಾಡದಿರಬಹುದುಆದರೆ ಇತಿಹಾಸದ ಪುಟದಲ್ಲಿ ಅವರ ಹೆಸರು ದಾಖಲಾಗುವುದು ದಿಟ.

164

ನಾವು ಯಾವ ವಸ್ತುವಿನ ಮೇಲೂ ಆಸಕ್ತಿ ಹೊಂದಿರದಿದ್ದರೆ ಈ ಜೀವನವೇ ನೀರಸನಾವು ಎಷ್ಟು ಆಸಕ್ತಿ ಹೊಂದಿರುತ್ತೇವೆಯೋ ಜೀವನ ಅಷ್ಟು ಸುಂದರ.

165

ಏನನ್ನಾದರೂ ಸಾಧಿಸಬೇಕು ಎಂದು ಮನಸ್ಸಿಗೆ ಬಂದ ಮೇಲೆ ಒಂದು ನಿಮಿಷವೂ ತಡಮಾಡಬಾರದುತಕ್ಷಣವೇ ಆ ಬಗ್ಗೆ ಕಾರ್ಯಪ್ರವೃತ್ತರಾಗಬೇಕು ‌‌.

166

ಗೊತ್ತಿಲ್ಲದಿರುವ ಯಾವುದನ್ನೇ ತಿಳಿಯಲು ನಮಗೆ ಗೊತ್ತಿರುವುದರ ಮೂಲಕವೇ ಪ್ರಯತ್ನಿಸಬೇಕು.

167

ಎಲ್ಲಕ್ಕಿಂತ ಹೆಚ್ಚಿನದು ಎಂದರೆ ನೆಮ್ಮದಿಎಷ್ಟೇ ಹಣವನ್ನು ಕೊಟ್ಟರೂ ಅದು ಸಿಗಲಾರದುಆದರೂ ಎಷ್ಟು ಕೊಟ್ಟಾದರೂ ಅದನ್ನು ಪಡೆಯಲು ಪ್ರಯತ್ನಿಸುತ್ತೇವೆ.

168

ಆರಂಭದಲ್ಲಿ ಆರೋಗ್ಯ ಕೆಡಿಸಿಕೊಂಡು ದುಡಿಯುತ್ತೇವೆಕಡೆಯ ದಿನಗಳಲ್ಲಿ ದುಡಿದಿದ್ದ ಎಲ್ಲವನ್ನೂ ಆರೋಗ್ಯಕ್ಕಾಗಿ ಕೊಡಲು ಸಿದ್ದವಿರುತ್ತೇವೆ.

169

ರೂಪವಾಗಲೀ ಕುರೂಪವಾಗಲೀ ಅವು ಪ್ರತ್ಯೇಕವಾಗಿರುವುದಿಲ್ಲಅದು ನೋಡುವ ದೃಷ್ಟಿಯಲ್ಲಿರುತ್ತದೆ

170

ಅಭಿಮಾನ ಎಲ್ಲವನ್ನೂ ಕುರುಡು ಮಾಡುತ್ತದೆ.

171

ಸಾರ್ವಜನಿಕವಾಗಿ ನಮಗೆ ನಾವು ಬೈದುಕೊಳ್ಳುವುದು ಹಾಗೂ ಬೇರೆಯವರು ನಮ್ಮನ್ನು ಹೊಗಳುವುದು ಹೆಮ್ಮೆಯ ಸಂಗತಿಇದು ಹಿಂದು ಮುಂದಾದರೆ ಅದು ನೋವಿನ ಸಂಗತಿ.

172

ನಮಗೆ ಯಾವುದೇ ರೀತಿ ಸಂಬಂಧವಿಲ್ಲದಿರುವ ವ್ಯಕ್ತಿವಸ್ತು ಅಥವಾ ವಿಷಯಗಳನ್ನು ವೈಯಕ್ತಿಕವಾಗಿ ತೆಗೆದುಕೊಳ್ಳಬಾರದು.

173

ಆಯ್ಕೆಗಳಿದ್ದಾಗ ಯಾರೂ ಬದಲಾಗರುಬೇರೆ ಆಯ್ಕೆಯೇ ಇಲ್ಲ ಎಂದರಿತಾಗ ನಿಶ್ಚಯವಾಗಿಯೂ ಬದಲಾಗುವರು.

174

ಮಹತ್ವ ಹಾಗೂ ಸಡಗರವಿಲ್ಲದಿದ್ದರೆ ಹಬ್ಬವಾಗಲೀ, ಉತ್ಸವವಾಗಲೀ ಕಳೆಯಲು ಇನ್ನೊಂದು ದಿನ ಅಷ್ಟೇ.

175

ಇಷ್ಟವಾದ ಕೆಲಸವನ್ನು ಗಳಿಸಬೇಕುಇಲ್ಲವೇ ನಮಗೆ ಸಿಕ್ಕ ಕೆಲಸದಲ್ಲಿ ಸಂತೋಷವನ್ನು ಹುಡುಕಬೇಕುಇದೇ ಸಂತೃಪ್ತಿಯ ಹಾದಿ.

176

ಇನ್ನೊಬ್ಬರ ಬಗ್ಗೆ ಕಾಳಜಿ ಮಾಡುವುದು ಸುಲಭಆದರೆ ಬೇರೆಯವರು ನಮ್ಮ ಬಗ್ಗೆ ಕಾಳಜಿ ಮಾಡುವಂತೆ ಮಾಡುವುದು ಅತಿ ಕಷ್ಟಯಾವ ಕಾರಣಕ್ಕೂ ಆ ಸಂಬಂಧವನ್ನು ಮಾತ್ರ ಕಳೆದುಕೊಳ್ಳಬಾರದು.

177

ನಂಬಿಕೆ ಒಂದು ಕಾಣದ ನಾಣ್ಯಗಳಿಸಲು ಕಷ್ಟಕಳೆಯುವುದು ಸುಲಭ.

178

ತಪ್ಪುಗಳು ಸಹಜವಾಗಿ ಘಟಿಸುತ್ತವೆಆದರೆ ಅದು ತಪ್ಪು ಎಂದು ಗೊತ್ತಿದ್ದರೂ ತಿದ್ದಿಕೊಳ್ಳದಿರುವುದು ನಿಜವಾಗಿಯೂ ತಪ್ಪಾಗುತ್ತದೆ.

179

ಯಶಸ್ಸು ಎಂಬುವುದು ಬೇರೆಯವರ ದೃಷ್ಟಿತೃಪ್ತಿ ಎಂಬುವುದು ನಮ್ಮ ದೃಷ್ಟಿಅದು ಬದುಕಿನ ಗುರಿಯೂ ಆಗಿರುತ್ತದೆ.

180

ಬೇರೆಯವರಂತೆ ನಾನಿಲ್ಲ ಎಂದು ಕೊರಗುವ ಬದಲು, ಬೇರೆಯವರು ನಮ್ಮನ್ನು ಅನುಕರಿಸುವಂತೆ ನಾವು ಬದುಕುವುದೇ ಸರಿಯಾದುದು.

181

ನಾವಿರುವ ಸ್ಥಿತಿಗೆ ನಾವೇ ಹೊಣೆಗಾರರುಅದಕ್ಕಾಗಿ ಬೇರೆಯವರನ್ನು ಅಥವಾ  ಸಮಯವನ್ನು ಜವಾಬ್ದಾರಿಯಾಗಿ ಮಾಡಬಾರದು

182

ಕಷ್ಟಕ್ಕೆ ದುಡ್ಡಿದ್ದವರು ಅಥವಾ ಇಲ್ಲದವರು ಎಂಬ ತಾರತಮ್ಯವಿಲ್ಲಎಲ್ಲರಿಗೂ ಅದು ಇದ್ದದ್ದೇ.

183

ಜೀವನವು ಪಾಠಗಳನ್ನು ಕಡ್ಡಾಯವಾಗಿ ಕಲಿಸುತ್ತದೆಅದರಿಂದ ತಪ್ಪಿಸಿಕೊಳ್ಳಲು ಅಸಾಧ್ಯಇದರಿಂದ ಜೀವನದ ಸತ್ಯ ಸರಿಯಾಗಿ ಅರಿವಾಗುತ್ತದೆ.

184

ವಿದ್ಯೆದುಡಿಮೆ ಹಾಗೂ ತಾಳ್ಮೆ ಇವುಗಳಲ್ಲಿ ಎಲ್ಲವೂ ಅಥವಾ ಯಾವುದಾದರೂ ಇದ್ದವರೇ ಯಶಸ್ವಿಯಾಗುವುದು.

185

ಸಂತೋಷವಿಲ್ಲದೆ ಮಾಡಿದ ಕೆಲಸದಿಂದ ಮಾಡಿದವರ ಸಮಯವೂ ವ್ಯರ್ಥ ಉಳಿದವರಿಗೂ  ಕೆಲಸದಿಂದ ಪ್ರಯೋಜನವಿಲ್ಲ.

186

ನೆಮ್ಮದಿ ಎಂಬುದು ಅತ್ಯಂತ ದುಬಾರಿಸಾಲದೆಂಬಂತೆ ಇದನ್ನು ನಾವೇ ಗಳಿಸಬೇಕಾದದ್ದು.

187

ನಗುವವರೆಲ್ಲರೂ ಸುಖಿಗಳಲ್ಲಹೆಚ್ಚಿನ ಹಲವರ ನಗುವಿನ ಹಿಂದೆ ನೋವಿನ ನೆರಳಿದೆನೋವಲ್ಲಿಯೂ ನಗುವವರನ್ನು ನೋಡಿ ನಾವು ನಮ್ಮ ಅಳುವನ್ನು ಮರೆಯಬೇಕು.

188

ನಮಗೆ ಬೇಡದಿರುವುದನ್ನು ನಾವು ಸಂತೋಷದಿಂದ ಪರರಿಗೆ ಬಿಟ್ಟು ಕೊಡಬೇಕುಹಾಗೂ ನಮ್ಮದಲ್ಲದ ವಸ್ತುಗಳನ್ನು ಬಯಸಬಾರದುಇಲ್ಲದಿದ್ದರೆ ಅನಾವಶ್ಯಕವಾಗಿ ಘರ್ಷಣೆಗಳಾಗುವ ಸಂಭವ ಹೆಚ್ಚು.

189

ಕೆಟ್ಟ ಮೇಲೆ ಬುದ್ಧಿ ಬಂತು ಎಂಬ ಮಾತಿದೆವಾಸ್ತವವಾಗಿ ಜನರಿಗೆ ಬುದ್ಧಿ ಬಂದ ಮೇಲೆ ಕೆಡುವವರೇ ಹೆಚ್ಚು.

190

ಮನುಷ್ಯನಿಗೆ ಅರವತ್ತು ವಯಸ್ಸಿನವರೆಗೂ ತಾನು ಎಷ್ಟು ಬೇಗ ಸಾಯುವೆನೋ ಎಂಬ ಚಿಂತೆನಂತರದ ವರ್ಷಗಳಲ್ಲಿ ಎಷ್ಟು ಹೆಚ್ಚು ಬದುಕುವೆನೋ ಎಂಬ ಚಿಂತೆಪರಾವಲಂಬನೆಯ ಭಯವೇ ಇದಕ್ಕೆ ಕಾರಣ.

191

ಐವತ್ತರ ವಯಸ್ಸಿನವರೆಗೂ ನಾವು ವಯಸ್ಸು ಎಷ್ಟು ಕಡಿಮೆ ಹೇಳಿದರೂ ಸಾಲದುನಂತರದಲ್ಲಿ ಎಷ್ಟು   ಹೆಚ್ಚು ಹೇಳಿದರೂ ಸಾಲದುಎಂತಹಾ ವಿಪರ್ಯಾಸ.

192

ಗೆಲುವುಸಂತೋಷ ಸಡಗರದ ವಿಷಯಗಳನ್ನು ತಕ್ಷಣ ಹೇಳಲು ಚೆಂದಸೋಲುದುಃಖ ಹಾಗೂ       ನೋವಿನ ವಿಚಾರಗಳನ್ನು ಹಳತಾದ ಮೇಲೆ ಹೇಳಲು ಚೆಂದ.

193

ಪ್ರತಿ ಕಾಯಿಲೆಗೂ ಪಥ್ಯ ಅಥವಾ ಪರಿಹಾರ ಹೇಳದವರೇ ಇಲ್ಲ ಎನಿಸುತ್ತದೆ

194

ಹಲ್ಲು ನೋವುಕಾಲು ನೋವು ಹೀಗೆ ಯಾವುದೇ ನೋವು ಬಂದಾಗ ಅದಕ್ಕಿಂತ ಹೆಚ್ಚಿನ ನೋವು ಬೇರೆ ಯಾವುದೂ ಇಲ್ಲ ಎಂದೆನಿಸುತ್ತದೆ.

195

ನಮ್ಮದೇ ಅತೀ ಕಷ್ಟದ ಜೀವನ ಎಂಬ ಭಾವನೆ ಎಲ್ಲರಲ್ಲಿಯೂ ಇದೆ

196

ಬೇರೆಯವರಂತೆ ನಾನಿಲ್ಲ ಎಂದು ಕೊರಗುವ ಬದಲು ಬೇರೆಯವರು ನಮ್ಮನ್ನು ಅನುಕರಿಸುವಂತೆ ನಾವು ಬದುಕುವುದೇ ಸರಿಯಾದುದು.

197

ಸರ್ವಸಂಗ ಪರಿತ್ಯಾಗಿಗೂ ಕನಿಷ್ಠ ತನ್ನ ಜ್ಞಾನವನ್ನು ಇನ್ನೊಬ್ಬರಿಗೆ ಹಂಚುವ ಆಸೆಆಸೆ ಇಲ್ಲದ ಜೀವಿಯೇ ಇಲ್ಲದುರಾಸೆಯೇ ದುಃಖಕ್ಕೆ ಮೂಲ ಎಂದು ಓದಿಕೊಳ್ಳುವುದೇ ಸರಿ.

198

ಮನಃಶ್ಶಾಂತಿಯೊಂದಿಗಿನ ಸಂಪತ್ತುಆರೋಗ್ಯ ಜೊತೆಗೆ ಇರುವ ಆಯುಷ್ಯಸಂಬಂಧಗಳನ್ನು ಅರ್ಥಮಾಡಿಕೊಳ್ಳುವ ಬಂಧುಗಳು ಇರುವವರೇ ಸುಖಿಗಳು.

199

ಹೊಸದಾಗಿದ್ದಾಗ ಯಾವುದೇ ವಸ್ತು ಅಥವಾ ಬಂಧುಗಳು ತೀರಾ ಪರಮಾಪ್ತ ಹಾಗೂ ಹೆಚ್ಚು ಪ್ರಾಶಸ್ತ್ಯ ವಾಗಿರುತ್ತದೆ.

200

ತಂದೆತಾಯಿ, ಅತ್ತೆ, ಮಾವ ಹಾಗೂ ಸಂಗಾತಿ ಹೊರತು ಎಲ್ಲಾ ಬಂಧುಗಳೂ ನಮ್ಮ ಪ್ರತಿಸ್ಪರ್ಧಿಗಳೇ.‌ ಅಂತೆಯೇ ನಮ್ಮ ಅಂತರ್ಯದಲ್ಲಿ ಅವರನ್ನು ನಾವು ಅಪೇಕ್ಷಿಸುವುದಿಲ್ಲ.

ಈ ವಾಕ್ಯಗಳನ್ನು ಓದಿದ ನಂತರ ತಮ್ಮಲ್ಲಿರುವ ವಾಕ್ಯ ಸಂಗ್ರಹಗಳ ಬಗ್ಗೆಯೂ ತಿಳಿಸಿ. ನನಗೂ ಕಲಿಯಲು ಅವಕಾಶವಾಗುತ್ತದೆ. ಎಂದಿನಂತೆ ತಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಭಾಗದಲ್ಲಿ ತಿಳಿಸಿರಿ.

Comments

  1. ನಮಸ್ಕಾರ,
    ದೈನಂದಿನ ಲೌಕಿಕ ಜೀವನವನ್ನು ಸಮಾಧಾನಕರವಾಗಿ ನಡೆಸಲು ಹಾಗೂ ಸಮಾಜದಲ್ಲಿ ಅಜಾತಶತ್ರುವಾಗಿ ಬೆಳೆದು ಸೈ ಎನಿಸಿಕೊಳ್ಳಲು ತಾವು ಸಿಡಿಸಿದ ದ್ವಿಶತಕ ಅಣಿಮುತ್ತುಗಳು ಅವಿಸ್ಮರಣೀಯ ಮತ್ತು ಮನನಯೋಗ್ಯವಾಗಿದೆ. ತಾವೇ ಹೇಳಿದಂತೆ ಆತ್ಮಸಂಶೋಧನೆಗೆ ಈ ಮಹಾವಾಕ್ಯಗಳು ಏಣಿಮೆಟ್ಟಿಲುಗಳಾಗಬಹುದು. ನಾವು ಈ ದೇಹದಲ್ಲಿರುವವರೆಗೂ ಈ ಎಲ್ಲ ವಾಕ್ಯಗಳನ್ನು ಜೀವನದಲ್ಲಿ ಅಡವಳಿಸಿಕೊಳ್ಳುವುದರಿಂದ (ಮುಖ್ಯವಾಗಿ 4,5,11,16,19,20,21,27,52,55 ಹಾಗೂ 80) ಪರಕ್ಕಿಂತ ಇಹದಲ್ಲಿ ಸುಖಜೀವನ ನಡೆಸಬಹುದು. ನಮ್ಮ ಜೀವನೋದ್ಧಾರಕ್ಕೆ ನಮ್ಮ ಸ್ವಪ್ರಯತ್ನವೇ ಸತ್ಯವಾದರೂ ಒಮ್ಮೊಮ್ಮೆ 128ನೇ ವಾಕ್ಯವು ಸರಿಎಂಬ ಭ್ರಮೆಯುಂಟಾಗುತ್ತದೆ. ಮುಗಿಸುವಮುನ್ನ, ಸಮಾಜದ ಬಹಳಷ್ಟು ಮಂದಿಗೆ ಮುಖವಾಡದ ಅವಶ್ಯಕತೆ ಇರುವುದರಿಂದ(142) ಹಿರಿಯರು ಹೇಳುವುದೇನೆಂದರೆ - ಸಂಬಂಧದ ಸಂತೆಯಲ್ಲಿ ನಿಜ ಹೇಳುವವನು ಏಕಾಂಗಿ. ತಮ್ಮ ಸಮಯೋಚಿತ ವಾಕ್ಯ ಸಂದೇಶಕ್ಕಾಗಿ ಧನ್ಯವಾದಗಳು.

    ReplyDelete
  2. ಎಲ್ಲಾ ನುಡಿಮುತ್ತುಗಳೂ ಅದೆಷ್ಟು ಅಮೂಲ್ಯ.... ಸಂಗ್ರಹಕ್ಕೊಂದು‌ ಅಭಿನಂದನೆಗಳು....ಅದ್ಭುತ ಬರಹ

    ReplyDelete
  3. ಆರಿಸಿ ಸಾಂಗ್ರಹಿಸಿರುವಾ ಆಣಿಮುತ್ತುಗಳ ಸರಮಾಲೆ, ಚಿಂತನ ಮತ್ತು ಮನನ ಮಾಡಿ ಬದುಕಿನಲ್ಲಿ ಸುಖಸಂತೋಷಗಳಿಂದ ಇರಲು ಅಳವಡಿಸಿಕೊಳ್ಳ ಬಹುದಾದ ಸರಳ ಸೂತ್ರಗಳು. ಸಂಗ್ರಹಿಸಿ ಕೊಟ್ಟಿರುವ ಲೇಖಕರಿಗೆ ನಮನಗಳು

    ReplyDelete
  4. ಬಹಳ ಸ್ವಭಾವಿಕ ಹಾಗು ಅರ್ಥಪೂರ್ಣ ವಿಮರ್ಶೆ ನಮ್ಮ ದೈನಂಧಿಕ ಜೀವನ ಹೇಗಿದೆ ಹಾಗು ಹೇಗಿರಬೇಕು ಎಂಬುದರ ಅರ್ಥಪೂರ್ಣ ವಿವರಣೆ. ಇದನ್ನು ಅರ್ಥ ಮಾಡಿಕೊಂಡು ಜೀವನ ನಡೆಸಿದರೆ ಜೀವನ ಸಾರ್ಥಕ. ಧನ್ಯವಾದಗಳು 🙏🏻🙏🏻🙏🏻

    ReplyDelete
  5. ನಾಗೇಶ್ ರಾವ್February 16, 2022 at 6:44 AM

    ಒಂದೊಂದು ವಿಚಾರವು ಸತ್ವಯುತವಾದ ಬೀಜ. ಓದಿ ಮನನ ಮಾಡಿ ಜೀವನದಲ್ಲಿ ಅಳವಡಿಸಿಕೊಂಡರೆ ಮನಸ್ಸು, ಕುಟು೦ಬ ಮತ್ತು ಸಮಾಜದಲ್ಲಿ ನೆಮ್ಮದಿಯಿಂದರಲು ಅನುಕೂಲ. ಸುಲಭ, ಸರಳ ಮತ್ತು ತಿಳಿದಿದೆ ಎನಿಸಿದರೂ, ಕೆಲವೊಮ್ಮ ಕೋಪ, ದು:ಖ, ದ್ವೇಷಗಳಂತಹ ಭಾವಗಳಿಗೆ ತುತ್ತಾಗಿ ಇವುಗಳನ್ನು ಕಡೆಗಣಿಸಿಬಿಡುತ್ತೇವೆ.
    ಎಲ್ಲವನ್ನು ಒಂದೆಡೆ ಸ೦ಗ್ರಹಿಸಿ ನೆನೆಪಿಸಿದ್ದೀರಿ. ಧನ್ಯವಾದಗಳು

    ತುಂಬ ಹಿಡಿಸಿದ ಕೆಲವು ಉಕ್ತಿಗಳು
    10, 23, 27, 30, 140, 181

    ReplyDelete
  6. ಅತ್ಯುತ್ತಮ ಸಂಗ್ರಹ. ಅನೇಕ ಬಾರಿ ಓದಿದರೂ, ಮತ್ತೆ ಮತ್ತೆ ಓದಬೇಕೆನಿಸುತ್ತದೆ. "ಹೌದಲ್ಲವೇ ?" ಎಂಬ ಉದ್ಗಾರ ತಾನಾಗಿಯೇ ಹೊರಬರುತ್ತದೆ. ಒಳ್ಳೆಯ ಅಭ್ಯಾಸ ಮುಂದುವರಿಸಿಕೊಂಡು ಹೋಗು. ನನ್ನಂತೆ ಅನೇಕರಿಗೆ ಉಪಯೋಗವಾಗುತ್ತದೆ. ಕ್ರಮಾಂಕ ೭ ಮತ್ತು ೬೫ ಒಂದೇ ಪುನರುಕ್ತಿಯಾಗಿದೆ.

    ಇತಿ ನಿನ್ನಣ್ಣ ಹಿರಿಯಣ್ಣ

    ReplyDelete
  7. ಪ್ರಿಯ ರಾಮಚಂದ್ರ,
    ನೀವು ಇಲ್ಲಿ ಕಾಣಿಸಿರುವ ಅನುಭವದ ಮುತ್ತುಗಳನ್ನು ನನ್ನದೇ ಅನುಭವದ ಬೆಳಕಿನಲ್ಲಿ ನೋಡಿ ಪ್ರತಿಕ್ರಯಿಸಿದ್ದೇನೆ.

    7 repeats in 65
    71. Almost repeats in 90
    72. ಕರ್ಮವನ್ನು ನೀಗಿಕೊಳ್ಳುವ ಮಾರ್ಗವೂ ಅದೇ.
    81. ಅಭಿಪ್ರಾಯ ತಿಳಿಯಲಿಲ್ಲ
    94. ಅನಾರೋಗ್ಯದಿಂದ ಶೇಷ ಆಯುಸ್ಸು ಪೂರ್ತಿ ಹಾಸಿಗೆ ಹಿಡಿದು ಮಲಗಿ ನರಳುತ್ತಾ "ನನಗೆ ಸಾವು ಬರಬಾರದೇ" ಎಂದು ಹಂಬಲಿಸುವವರೂ (ಅವರಿಗಿವಿಲ್ಲದೆಯೇ) ಉಳಿದವರಿಗೆ (ಸಹನೆ, ಶುಷ್ರೂಷೆ, ಸೇವಾರ್ಪಣೆಯ) ಪಾಠ ಕಲಿಸುತ್ತಿರುತ್ತಾರೆ.
    124. ಅನುಭವಗಳ ಪರಿಣಾಮವಾಗಿ ಇದನ್ನು ಮನನ ಮಾಡಿಕೊಳ್ಳುತ್ತಿದ್ದೇನೆ
    139. ವಯಸ್ಸಾದಂತೆ ಮಾತು ಹೆಚ್ಚಾಗದಿದ್ದರೂ ಹೆಚ್ಚುಹೆಚ್ಚು ಭಾವುಕನಾಗುತ್ತಿದ್ದೇನೆ. ಅಸಹಾಯಕತೆಯಿಂದ ಅಳುತ್ತಿರುವ ಮಗು, ಇಂಪಾಗಿ ಹಾಡುವ ಎಳೆಯರು, ಬವಣೆಪಡುತ್ತಿರುವ ರಕ್ತಸಂಬಂಧಿಗಳು..... ಇಂತಹ ಸಂದರ್ಭಗಳಿಂದ ಬಹುಬೇಗ ಕಣ್ಣಾಲಿಗಳು ತುಂಬಿಕೊಳ್ಳುತ್ತವೆ. ಇದೇನು, ಮುದಿತನದಿಂದ ಮನಸ್ಥೈರ್ಯ ಕುಗ್ಗುತ್ತಿರುವ ಚಿಹ್ನೆಯೋ!
    148. ನಿಜ. ಜೊತೆಗೆ ಒಬ್ಬೊಬ್ಬರ ಕರ್ಮಫಲಗಳ ಹೊರೆಯೂ ಭಿನ್ನವಾಗಿರುತ್ತವೆ. ಅನ್ಯರ ಅದ್ದೂರಿ, ವೈಭವಗಳು ಕಣ್ಣಿಗೆ ರಾಚುತ್ತವೆ. ಆದರೆ, ಅವರ ಕರ್ಮಫಲಗಳ ಹೊರೆ ಏನೂ ಕಾಣದು.

    163. ಇಲ್ಲಪ್ಪಾ, ಹಾಗಲ್ಲ ಅದು!
    ಇತಿಹಾಸವನ್ನು ಸೃಷ್ಟಿ ಮಾಡಿದವರೇ ಹೇಳಹೆಸರಿಲ್ಲದಂತೆ ಮರೆಯಾಗಿದ್ದಾರೆ.

    _ಅಕ್ಕಿಯೊಳಗನ್ನವನು ಮೊದಲಾರು ಕಂಡವನು?_
    _ಅಕ್ಕರದ ಬರಹಕ್ಕೆ ಮೊದಲಿಗನದಾರು?|_
    _ಲೆಕ್ಕವಿರಿಸಿಲ್ಲ ಜಗ ತನ್ನಾದಿಬಂಧುಗಳ_
    _ದಕ್ಕುವುದೆ ನಿನಗೆ ಜಸ ಮಂಕುತಿಮ್ಮ||_

    166. ಜ್ಞಾನಬೋಧನೆಯ ಕ್ರಮವೂ ಅದೇ. From known to unknown

    180. 196_ರ ಪುನರಾವರ್ತನೆ

    183. ಶಾಲಾಕಾಲೇಜುಗಳಲ್ಲಿನ ಕಲಿಕೆಗೂ, ಜೀವನದಲ್ಲಿನ ಕಲಿಕೆಗೂ ಇರುವ ವ್ಯತ್ಯಾಸ:
    ಶಾಲಾಕಾಲೇಜುಗಳಲ್ಲಿ ಮೊದಲು ಪಾಠ ಕಲಿಸಲಾಗುತ್ತದೆ. ನಂತರ ಅದರ ಬಗ್ಗೆ ನಮ್ಮನ್ನು ಪರೀಕ್ಷಿಸಲಾಗುತ್ತದೆ.
    ಜೀವನದಲ್ಲಾದರೋ ಮೊದಲು ನಮ್ಮನ್ನು ಪರೀಕ್ಷೆಗೊಡ್ಡಲಾಗುತ್ತದೆ. ನಂತರ ಮಾತ್ರವೇ ಅದರ ಬಗ್ಗೆ ನಾವು ಪಾಠ ಕಲಿಯುವುದು.

    189. ಮೊದಲ *ಬುದ್ಧಿ* ಮತ್ತು ಎರಡನೆಯ *ಬುದ್ಧಿ* ಇವೆರಡೂ ಭಿನ್ನ ಅರ್ಥವಿರುವ ಒಂದೇ ಪದಗಳು

    196. 180ರ ಪುನರಾವರ್ತನೆ

    ReplyDelete

Post a Comment

Popular posts from this blog

ಆರೋಗ್ಯ ಕವಚ

ಮನುಷ್ಯ ತಾನು ಸುಖವಾಗಿರಲು ದುಡಿಯುತ್ತಾನೆ. ಹಣ ಕೂಡಿಡುತ್ತಾನೆ. ಆಸ್ತಿ ಗಳಿಸುತ್ತಾನೆ. ತಾನು ಮತ್ತು ತನ್ನ ಪ್ರೀತಿಯ ಕುಟುಂಬವನ್ನು ಸುಖವಾಗಿಡುವ ಕನಸುಗಳು ಸದಾ ನಡೆಯುತ್ತಲೇ ಇರುತ್ತವೆ. ಈ ಕನಸಿನ ಮಾರ್ಗದಲ್ಲಿ ಆಕಸ್ಮಿಕವಾಗಿ ಅವನ ದೇಹಕ್ಕೆ ದೊಡ್ಡ ಅನಾರೋಗ್ಯವೇನಾದರೂ ಎದುರಾದರೆ ಬಹಳ ಕಷ್ಟವಾಗುತ್ತದೆ. ಸುಧಾರಿಸಿಕೊಳ್ಳಲು ಸಾಧ್ಯವಾಗದಂತೆ ಗಳಿಸಿದ್ದೆಲ್ಲವೂ ನೀರಿನಂತೆ ಕರಗಿ ಹೋಗುತ್ತದೆ. ಇದರಿಂದ ಜೀವನದಲ್ಲಿ ಹಾಕಿಕೊಂಡ ಗುರಿಯನ್ನು ಸಾಧಿಸಲಾಗುವುದಿಲ್ಲ. ಇಂತಹ ಪರಿಸ್ಥಿತಿಯನ್ನು ಆರ್ಥಿಕವಾಗಿ ಸಮರ್ಥವಾಗಿ ಎದುರಿಸಲು ಬೇಕಾಗಿರುವುದು ಆರೋಗ್ಯ ವಿಮೆ. ಇದನ್ನು ಹೆಲ್ತ್ ಇನ್ಶುರೆನ್ಸ್ ( Heath Insurance) ಅಥವಾ ಮೆಡಿಕಲ್ ಇನ್ಸೂರೆನ್ಸ್ (Medical Insurance) ಎಂದೂ ಹೇಳಲಾಗುತ್ತದೆ. ಇದು ಆರೋಗ್ಯ ರಕ್ಷಣೆಗಾಗಿ ಎಂದೇ ಪಡೆದರೂ ಮುಂದಿನ ನಮ್ಮ ಜೀವನಕ್ಕಾಗಿ, ಪರೋಕ್ಷವಾಗಿ ಕೂಡಿಟ್ಟಿರುವ ಆಸ್ತಿಯನ್ನು ರಕ್ಷಣೆ ಮಾಡುತ್ತದೆ. ಈ ಬಗ್ಗೆ ತಿಳಿದುಕೊಳ್ಳಬೇಕಾದ ವಿಷಯಗಳು ಬಹಳ ಅನಿವಾರ್ಯ. ಇವೆಲ್ಲವನ್ನೂ ಸವಿಸ್ತಾರವಾಗಿ ತಿಳಿಸಿ ಹೇಳುವ ಪ್ರಯತ್ನವೇ ಈ ಲೇಖನ. ಆರೋಗ್ಯ ವಿಮೆ ಎಂದರೇನು? ನಾವು ಸದಾ ಆರೋಗ್ಯದಿಂದ ಇರಬೇಕೆಂದು ಬಯಸುವೆವಾದರೂ "ಮನುಷ್ಯ ಎಂದಮೇಲೆ ಏನಾದರೂ ಕಾಯಿಲೆ ಇದ್ದೇ ಇರುತ್ತದೆ" ಎಂಬಂತೆ ಹಲವು ಸಾರಿ ತಲೆನೋವು, ಜ್ವರ, ನೆಗಡಿ ಮೈ ಕೈ ನೋವು ಎಂದು ನರಳುತ್ತೇವೆ. ಚಿಕೂನ್ ಗುನ್ಯಾ, ಡೆಂಗ್ಯೂ, ಕೊರೋನಾ ಇತ್ಯಾದಿ ಕಾಯಿಲೆಗಳ...

ಮಿತ್ರನೊಬ್ಬನ ಆತ್ಮಾವಲೋಕನ

ಮಿತ್ರ ಶಂಕರ ಒಮ್ಮೆ ಹೇಳಿದ್ದ, ಕೇಳಿ ಹಳತಾದರೂ ಓದುಗರಿಗೆ ಹೊಸತಾಗಿ, ಆತ್ಮೊನ್ನತಿಗೆ ಸಹಾಯ ವೆನಿಸುವ, ಆತ್ಮಾವಲೋಕನದ ಸಾಲುಗಳು ನಿಜವಾಗಿಯೂ ಕುತೂಹಲಕಾರಿಯಾಗಿದೆ. ಅದನ್ನು ಅವನಿಂದಲೇ ಕೇಳಿ: ಕಛೇರಿಯಲ್ಲಿ ವಿಶೇಷವಾದ ಕೆಲಸವೊಂದನ್ನು ನಿರೀಕ್ಷೆಗಿಂತ ಮೊದಲೇ ಯಶಸ್ವಿಯಾಗಿ ಪೂರೈಸಿದ್ದರಿಂದ ತುಂಬಾ ಸಂತೋಷವಾಗಿತ್ತು. ಆದ್ದರಿಂದ ಮನೆಗೆ ಸ್ವಲ್ಪ ಬೇಗನೆ ಬಂದಿದ್ದೆ. ಪ್ರತಿದಿನ ಯಾಕೆ ಲೇಟು ಎಂಬ ಮುಖವನ್ನು ಮಾಡುತ್ತಿದ್ದ ಮಡದಿ ಪ್ರೇಮ ಕೊಟ್ಟ ಒಂದು ಬಿಸಿಯಾದ ಸ್ಟ್ರಾಂಗ್ ಕಾಫಿ ಕುಡಿದು ನಿಧಾನವಾಗಿ ಸೋಫಾದ ಮೇಲೆ ಕಾಲು ಚಾಚುತ್ತಿದ್ದಂತೆಯೇ ನಿದ್ರಾ ದೇವಿಗೆ ವಶನಾಗಿ ಕೆಲವು ಸಮಯವಾಗಿರಬಹುದು. ಕೆಲವೇ ನಿಮಿಷಗಳಲ್ಲಿ ನಿದ್ದೆ ಬಂದಿತ್ತಾದರೂ ತಾಳಲಾರೆನೆಂಬ ಎದೆನೋವು, ಇದ್ದಕ್ಕಿದ್ದಂತೆ ಉಸಿರುಗಟ್ಟಿಸುವಂತಹ ಅನುಭವ. ಏನು ಗೊತ್ತಾಗುತ್ತಿಲ್ಲ. ಕೆಲವೇ ನಿಮಿಷಗಳಲ್ಲಿ ಗಾಬರಿಯಿಂದ ಪ್ರೇಮಾ, ಮಗಳು - ಅಳಿಯನನ್ನು ಕರೆಯುತ್ತಿದ್ದಾಳೆ. ಕಾಲು ಕೈ ಎದೆ ಭಾಗಗಳನ್ನು ಹಿತವಾಗಿ ಯಾರೋ ತಡವುತ್ತಿದ್ದಾರೇನೋ. ಹಾಗೆಯೇ ನನ್ನನ್ನು ಎತ್ತಿದಂತಹ ಅನುಭವ. ಎಲ್ಲಿಗೋ ಕರೆದುಕೊಂಡು ಹೋಗುತ್ತಿರಬಹುದು. ಯಾವುದೋ ವಾಹನದ ಸದ್ದು. ನನ್ನ ಕೈಗಳನ್ನು ಯಾರೋ ಎತ್ತುತ್ತಿದ್ದಾರೆ, ಏನಾಗುತ್ತಿದೆ? ಹೊಸತರದ ಹಾಸಿಗೆ. ಮೂಗು ಬಾಯಿಗೆ ಏನೋ ತಡೆ. ಸಣ್ಣದಾಗಿ ಬಿಟ್ಟು ಬಿಟ್ಟು ಕೇಳುವ ಏಕತಾನದ ಸದ್ದು. ಹಠಾತ್ತಾಗಿ ನಿಶ್ಯಬ್ದ. ನೀರವ ವಾತಾವರಣ. ಈಗ ನನಗೆ ನೋವು ಇದೆಯೇ. ಟಿವಿಯಲ್ಲಿ ಯಾವುದೋ ಕ...

ಬಾಳ ರೂಪಿಸಿದ ವಿಮೆ

ನಾವು ಸಮಾಜದಲ್ಲಿ ನಮಗಾಗಿ ನಾವು ಅನೇಕ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದೇವೆ. ಅದನ್ನು ಒದಗಿಸಲು ಅದರದೇ ಆದ ಸಂಸ್ಥೆ ಹಾಗೂ ಸೇವಾ ಸಿಬ್ಬಂದಿಗಳಿದ್ದಾರೆ. ಇವು ನಮ್ಮ ಬದುಕು ಸುಗಮವಾಗಲು ಸಹಾಯಕವಾಗಿ ವೆ . ಇವಲ್ಲದೆ  ಜೀವನದಲ್ಲಿ ನಮ್ಮ ಉನ್ನತಿಗೆ ಬಂಧುಮಿತ್ರರ ಪಾತ್ರ ತೀರಾ ಸಾಮಾನ್ಯ. ಆದರೆ ಸಂಸ್ಥೆಯೊಂದು ಕೊಡುವ ಸೇವೆಯೇ ಒಬ್ಬರ ಬದುಕನ್ನು ರೂಪಿಸಿಕೊಳ್ಳಲು ಅವಕಾಶವಾದ  ಘಟನೆಯ ಸ್ಮರಣೆಯೇ ಈ ಕಥೆಯ ಜೀವಾಳ. ಈ ಬೆಳಿಗ್ಗೆ ಬೆಂಗಳೂರಿನಿಂದ ಲಂಡನ್ ವರೆಗಿನ ಆಕಾಶ ಪಯಣ. ಇದಕ್ಕಾಗಿ ನಿನ್ನೆಯಿಂದಲೇ ನಿದ್ದೆ ಇಲ್ಲ. ರಾತ್ರಿ ಪೂರ್ತಿ ವಿಮಾನ ನಿಲ್ದಾಣದಲ್ಲಿ ಸಮಯ ಕಳೆದೆವು. ಲಂಡನ್ನಿನ ಸಮಯದಂತೆ ಮಧ್ಯಾಹ್ನವೇ ಬಂದೆವು. ಅಮೇರಿಕಾಕ್ಕೆ ಹೋಗುವ ವಿಮಾನ ಸಂಜೆ ಐದು ಗಂಟೆಗೆ. ಆದ್ದರಿಂದ ಕಾಯಲೇಬೇಕು. ವಿಮಾನ ನಿಲ್ದಾಣದಲ್ಲಿ ಆಯಾಸದಿಂದ ನಿದ್ದೆ ಬರುತ್ತಿದ್ದರೂ ಎಚ್ಚರವಾಗದಷ್ಟು ನಿದ್ದೆ ಬಂದು ಮುಂದಿನ ವಿಮಾನ ತಪ್ಪಿ ಹೋದರೆ ಎಂಬ ಭಯದಿಂದ ಕಣ್ಣು ಮುಚ್ಚಲಿಲ್ಲ. ಈಗ ಅಮೇರಿಕಾದ ವಾಶಿಂಗ್ಟನ್ಗೆ ಹೋಗುವ ವಿಮಾನದಲ್ಲಿ ಕುಳಿತಿದ್ದೇನೆ. ಪಕ್ಕದಲ್ಲಿ ಕುಳಿತ ನಮ್ಮವರಿಗೆ ಗಾಢ ನಿದ್ರೆ. ವಿಮಾನ ಪ್ರಯಾಣವೇನೋ ಹೆಮ್ಮೆಯ ವಿಷಯವೇ. ಆದರೆ ಇದೇ ಮೊದಲ ಪ್ರಯಾಣವಾದ್ದರಿಂದ ಏನೋ ಆತಂಕ, ಸಂತೋಷ, ದುಗುಡ ಜೊತೆಗೆ ಸಡಗರ. ಸುತ್ತ ನೋಡುತ್ತಾ ನನ್ನ ಬಗ್ಗೆ ನಾನು ಯೋಚಿಸುತ್ತಿದ್ದೇನೆ. ನಾನು ಎಲ್ಲಿದ್ದೇನೆ. ಎಲ್ಲಿಗೆ ಬಂದೆ. ಇರುವನೊಬ್ಬ ಮಗ ಆನಂದನೇ ನಮಗೆ ಸರ್ವಸ್ವ. ಆದ್ದ...